ಹಲವಾರು ರೀತಿಯಲ್ಲಿ ನಮಗೆ ಬೆಂಬಲ, ಸ್ಪೂರ್ತಿ, ಅರಿವು, ಸಹಾಯ ನೀಡಿ ನಮ್ಮೊಂದಿಗೆ ಇದ್ದ
ಆಲ್ಟರ್ನೇಟಿವ್ ಲಾ ಫೋರಂ-ವಿಶೇಷವಾಗಿ ಅರವಿಂದ್ ನಾರಾಯಣ್ ಮತ್ತು ವಿನಯ್ ಶ್ರೀನಿವಾಸ ಎಐಸಿಸಿಟಿಯು ಕಾರ್ಮಿಕ ಸಂಘಟನೆ – ವಿಶೇಷವಾಗಿ ಮೈತ್ರೇಯಿ ಕೃಷ್ಣನ್ ಮತ್ತು ಕ್ಲಿಫ್ಟನ್ ಡಿ’ರೋಜಾರಿಯೋ ಪಿಯುಸಿಎಲ್ ಕರ್ನಾಟಕ – ವಿಶೇಷವಾಗಿ ಪ್ರೊ.ರಾಮ್ದಾಸ್ ರಾವ್, ಸಫಾಯಿ ಕರ್ಮಚಾರಿ ಕಾವಲು ಸಮಿತಿ-ವಿಶೇಷವಾಗಿ ಡಾ.ಓಬಳೇಶ್, ಕೊನೆಯದಾಗಿ ಮತ್ತು ಬಹಳ ಮುಖ್ಯವಾಗಿ ಈ ನೀರದಾರಿಯ ಜೀವಸೆಲೆಯಾದ ಸಫಾಯಿ ಕರ್ಮಚಾರಿಗಳು ಮಹಿಳಾ, ದಲಿತ ಮತ್ತು ಅಸಂಘಟಿತ ಕಾರ್ಮಿಕ ಚಳುವಳಿಯ ಸಂಗಾತಿ, ರಂಗಭೂಮಿ ಕಲಾವಿದೆ, ಸಾಹಿತಿ, ಚಿಂತಕಿ ಡಾ.ದು.ಸರಸ್ವತಿಯವರು ಕರ್ನಾಟಕದ ರಾಜಕೀಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಸಕ್ರಿಯರಾಗಿದ್ದಾರೆ. ದಮನಿತರ ಹಾಗೂ ಶೋಷಿತರ ಹಕ್ಕು ಮತ್ತು ಘನತೆಗಾಗಿನ ರಾಜಕೀಯ ಹೋರಾಟದಲ್ಲಿ ಕಲೆ ಮತ್ತು ಸಂಸ್ಕೃತಿಯ ಮಹತ್ವವನ್ನು ಮನಗಾಣುವ ದಾರಿಯಲ್ಲಿ ಗಂಭೀರ ಹುಡುಕಾಟವನ್ನು ದು.ಸರಸ್ವತಿಯವರು ನಡೆಸಿದ್ದಾರೆ. ಹುಡುಕಾಟದ ಫಲವಾಗಿ ಬಂದಿರುವ ಅವರ ಪಿಹೆಚ್.ಡಿ ಪ್ರಬಂಧವು ನೀರದಾರಿಯ ಮುಖ್ಯ ಆಕರವಾಗಿದೆ.
ನೀರದಾರಿಗೆ ಕೊಡುಗೆ
ಡಾ.ದು.ಸರಸ್ವತಿ-ಪರಿಕಲ್ಪನೆ, ವಿಷಯ ಮತ್ತು ಸೃಜನಶೀಲ ಬರವಣಿಗೆ
ಡಾ.ಕೆ.ವಿ.ನೇತ್ರಾವತಿ-ಕನ್ನಡ ಉಪನ್ಯಾಸಕರು, ಚಿಂತಕಿ, ಕಲಾವಿದೆ, ಸೃಜನಶೀಲ ಬರವಣಿಗೆ, ಕಥಾ ವಾಚನ
ಡಾ.ಶ್ರೇಯಸ್ ಶ್ರೀನಾಥ್-ಉಪನ್ಯಾಸಕರು, ಬೋಡೋವಿನ್ ಕಾಲೇಜ್,ಯುಎಸ್ಎ, ವಿಷಯ ಮತ್ತು ವಿನ್ಯಾಸಕ್ಕೆ ಕೊಡುಗೆ ನೀಡುವುದರ ಜೊತೆಗೆ ಇಡೀ ಯೋಜನೆಯನ್ನು ಪ್ರಾಯೋಜಿಸಿದ್ದಾರೆ.
ದೀಪಕ್ ಶ್ರೀನಿವಾಸನ್-ಸಮುದಾಯ ಮಾಧ್ಯಮ ಪರಿಣಿತರು. ಈ ಯೋಜನೆಯ ವಿನ್ಯಾಸ ಮಾಡಿರುವರಲ್ಲದೆ ಈ ಯೋಜನೆಗೆ ಇಂಗ್ಲಿಷ್ ಅನುವಾದವನ್ನು ಮಾಡಿದ್ದಾರೆ.
ವಿನೋದ್ ರಾವ್-ಮಾಧ್ಯಮ ಮತ್ತು ವಿನ್ಯಾಸಕಾರರು. ವಿನ್ಯಾಸ, ಲೇಔಟ್ ಮತ್ತು ವೆಬ್ ಹೋಸ್ಟಿಂಗ್ ಮಾಡಿದ್ದಾರೆ.
