ಮಹಿಳಾ ನಾಯಕತ್ವ: ಸೋಲದ ಚೈತನ್ಯ

ಜಾತಿ, ವರ್ಗ ಮತ್ತು ಲಿಂಗ ಮೂರೂ ತಾರತಮ್ಯ ಅನುಭವಿಸಿಕೊಂಡು ಬದುಕಿನ ಸಂಕಷ್ಟಗಳಿಗೆ ಎದೆಯೊಡ್ಡಿ ನಿಲ್ಲುವ ಸಫಾಯಿ ಕರ್ಮಚಾರಿ ಮಹಿಳೆಯರ ಬದುಕು ಮತ್ತು ಅನುಭವ ಸ್ತ್ರೀವಾದಿ ಚಿಂತನೆಯ ಆಳ-ಅಗಲಗಳನ್ನು ವಿಸ್ತರಿಸುವುದರಲ್ಲಿ ಸಂಶಯವಿಲ್ಲ. ಮನೆಯಲ್ಲಿ ಆಚರಿಸುವ ಹಬ್ಬ, ಮದುವೆ ಆಚರಣೆಗಳಿರಲಿ, ಖಾಯಿಲೆ, ಸಾವು, ನೋವುಗಳಿರಲಿ, ದುಡಿವ ಗಂಡಸರು ಮೂಲೆ ಹಿಡಿದಿರಲಿ, ಕುಡಿದು ಗಲಾಟೆ ಮಾಡುವವರಿರಲಿ, ಬಿಟ್ಟು ಹೋಗಿರಲಿ, ತೀರಿಹೋಗಿರಲಿ ಯಾವುದಕ್ಕೂ ಅಂಜದೆ ಮನೆ ಮತ್ತು ಮಕ್ಕಳನ್ನು ನಿಭಾಯಿಸಿಕೊಂಡು ಹೋಗುವುದರ ಜೊತೆಗೆ ಕೆಲಸ ಮಾಡುವ ಸ್ಥಳಗಳಲ್ಲಿ ಅಪಾಯ ಮತ್ತು ಸವಾಲುಗಳನ್ನು ಎದುರಿಸುವ ಈ ಮಹಿಳೆಯರ ಸ್ಥೆöÊರ್ಯ ಮತ್ತು ಚೈತನ್ಯ ದೊಡ್ಡದು.
ಕಾರ್ಮಿಕರಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ಸಲುವಾಗಿ ಮಹಿಳೆಯರು ನಡೆಸಿರುವ ಹೋರಾಟಗಳು ಸಫಾಯಿ ಕರ್ಮಚಾರಿ ಚಳುವಳಿಗೆ ಭದ್ರ ಬುನಾದಿ ಹಾಕಿವೆ.

ಕಾರ್ಮಿಕ ಸಂಘಟನೆಯ ಹುಟ್ಟಿಗೆ ಕಾರಣವಾದ ಬಳ್ಳಾರಿ ಸಫಾಯಿ ಕರ್ಮಚಾರಿ ಮಹಿಳೆಯರ ಹೋರಾಟ
ಬಳ್ಳಾರಿಯಲ್ಲಿ ಗುತ್ತಿಗೆ ಪೌರಕಾರ್ಮಿಕರ ಸಂಘವನ್ನು ಕಟ್ಟುವುದಕ್ಕೆ ನಾಂದಿ ಹಾಡಿದವರು ಅಲ್ಲಿನ ಮಹಿಳಾ ಕಾರ್ಮಿಕರು. ಬಳ್ಳಾರಿಯ ಮೊದಲನೇ ಡಿವಿಷನ್‌ನ ವಾರ್ಡ್ ೩೨ರಲ್ಲಿ ಅನ್ಯಾಯದಿಂದ ಕೆಲಸದಿಂದ ತೆಗೆದುಹಾಕಲಾದ ಎಂಟು ಜನ ಮಹಿಳೆಯರು ಪಾಲಿಕೆಯ ಕಚೇರಿಯ ಮುಂದೆ ಹೋಗಿ ಕೆಲಸಕ್ಕೆ ತೆಗೆದುಕೊಳ್ಳದಿದ್ದರೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಾಯುವುದಾಗಿ ಪ್ರತಿಭಟಿಸಿದ ಘಟನೆಯು ಮುಂದೆ ಬಹು ದೊಡ್ಡ ಹೋರಾಟದ ಸ್ವರೂಪ ಪಡೆದುಕೊಂಡು ‘ಸಮಾನತಾ ಕಾರ್ಮಿಕ ಸಂಘಟನೆ’ ಹುಟ್ಟಿಗೆ ಕಾರಣವಾಯಿತು. ಈ ಯೂನಿಯನ್ ಅವರಿಗೆ ಆತ್ಮವಿಶ್ವಾಸವನ್ನು ತುಂಬಿದೆ. ಹೆಮ್ಮೆಯಿಂದ ಅಂಬೇಡ್ಕರ್ ದಿನಾಚರಣೆಯನ್ನು, ಸಾವಿತ್ರಿ ಬಾಯಿ ಫುಲೆ ದಿನಾಚರಣೆಯನ್ನು ಆಚರಿಸುತ್ತಾರೆ. ಮಹಿಳೆಯರಿಗಾಗಿ ಹಗ್ಗ ಜಗ್ಗಾಟ ಸ್ಪರ್ಧೆ, ಮ್ಯೂಸಿಕಲ್ ಚೇರ್, ರಂಗೋಲಿ ಇತ್ಯಾದಿ ಸ್ಪರ್ಧೆಗಳನ್ನು ಒಳಗೊಂಡ ಕ್ರೀಡಾ ದಿನಾಚರಣೆಯನ್ನು ಆಚರಿಸುತ್ತಾರೆ; ಬಹುಮಾನ ವಿತರಿಸುತ್ತಾರೆ. ತಮ್ಮ ಹೋರಾಟವನ್ನು ಬೆಂಗಳೂರಿನ ವಿಧಾನಸೌಧದವರೆಗೂ ಒಯ್ದಿದ್ದಾರೆ.
ತಿಪ್ಪಮ್ಮ, ಬಿ.ಜಯಲಕ್ಷ್ಮಿ, ಕುಳ್ಳಾಯಮ್ಮ, ರತ್ನಮ್ಮ, ಲಕ್ಷ್ಮಿದೇವಿ, ಓಬಳಮ್ಮ, ಮರೆಕ್ಕ, ಯಶೋದಮ್ಮ, ಲಕ್ಷ್ಮಿದೇವಿ, ಸಾಲಮ್ಮ, ¯ಕ್ಷö್ಮಮ್ಮ, ಲಕ್ಷ್ಮಿ, ಅನಸೂಯಮ್ಮ, ಪುಳ್ಳಮ್ಮ, ಶಿವಮ್ಮ, ಲಕ್ಷ್ಮಿದೇವಿ, ನಾಗಮ್ಮ, ಲಕ್ಷö್ಮಮ್ಮ, ಎಸ್.ನಾರಾಯಣಮ್ಮ, ದುರ್ಗಮ್ಮ, ಚಿಕ್ಕೋಬಳಮ್ಮ, ಕಾಮಾಕ್ಷಮ್ಮ, ಭಾರತಿ, ಮಾರಕ್ಕ, ಆದಿಲಕ್ಷ್ಮಿ, ರತಿ, ನಾಗರತ್ನಮ್ಮ, ಪದ್ಮಾವತಿ, ಕೆ.ನಾಗಲಕ್ಷ್ಮಿ, ನಾಗಲಕ್ಷ್ಮಿ, ಲಕ್ಷ್ಮಿ, ಓಬಳಮ್ಮ.ಪಿ, ಓಬಳಮ್ಮ, ಲಕ್ಷ್ಮಿ, ರೇಣುಕ, ಚಿನ್ನು, ವೆಂಕಟಲಕ್ಷ್ಮಿ, ದುರ್ಗಮ್ಮ, ನಾಗಮ್ಮ, ಲಕ್ಷ್ಮಿದೇವಿ. (ಇದಕ್ಕೆ ವಿವರಣೆ ಬೇಕು ಅನ್ಸುತ್ತೆ )


ಕಲ್ಬುರ್ಗಿ ಸಫಾಯಿ ಕರ್ಮಚಾರಿ ಮಹಿಳೆಯರ ಸೋಲದ ಚೈತನ್ಯ
ಕಲ್ಬುರ್ಗಿಯಲ್ಲಿ ನಗರ ಪಾಲಿಕೆಯಲ್ಲಿ ೧೦ ರಿಂದ ೨೦ ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪರಿಶಿಷ್ಟ ಜಾತಿಯ ಸಫಾಯಿ ಕರ್ಮಚಾರಿ ಮಹಿಳೆಯರು ಕೆಲಸದಿಂದ ತೆಗೆದುಹಾಕಿದ್ದರ ವಿರುದ್ಧ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಸುದೀರ್ಘ ಹೋರಾಟ ಮಾಡಿ ಯಶಸ್ವಿಯಾದದ್ದು ಸಫಾಯಿ ಕರ್ಮಚಾರಿಗಳ ಹೋರಾಟದಲ್ಲಿ ಒಂದು ಮೈಲಿಗಲ್ಲಾಗಿದೆ.
೪೭೦ ಗುತ್ತಿಗೆ ಪೌರಕಾರ್ಮಿಕರನ್ನು ತೆಗೆÀದು ಹಾಕಿದಾಗ ಎಲ್ಲಾ ಕಾರ್ಮಿಕರೂ ಒಟ್ಟಾಗಿ ಕಾರ್ಮಿಕ ಮುಖಂಡರು ಹಾಗೂ ಮಾಜಿ ಕಾರ್ಮಿಕ ಸಚಿವರಾದ ಶ್ರೀ ಎಸ್.ಕೆ.ಕಾಂತಾ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದರಿಂದ ಎರಡು ತಿಂಗಳ ಕಾಲ ನಗರವೇ ಕಸದ ತಿಪ್ಪೆಯಾಯಿತು. ಮತ್ತೆ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಯಿತು. ಮುಂದೆ ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಕಾನೂನು ಹೋರಾಟ ನಡೆಸಿದರು. ಈ ಕಾರ್ಮಿಕರು ಹಗಲು-ರಾತ್ರಿ ಎನ್ನದೆ ಪಾಲಿಕೆಯ ಕಚೇರಿ ಮುಂದೆ ಸತತ ನಾಲ್ಕು ವರ್ಷಗಳ ಕಾಲ ಧರಣಿ ಮಾಡಿದ್ದಾರೆ. ಜೈಲುವಾಸ ಅನುಭವಿಸಿದ್ದಾರೆ. ಈ ಹೋರಾಟದ ಯಶಸ್ಸಿನ ಹಿಂದೆ ಕೆಲಸ ಮಾಡಿರುವುದು ಯಾವ ಬೆದರಿಕೆಗೂ, ಆಮಿಷಕ್ಕೂ ಮಣಿಯದ ಮಹಿಳಾ ಚೈತನ್ಯ. ಮಳೆ, ಗಾಳಿ, ಬಿಸಿಲು, ಪೊಲೀಸರ ಲಾಠಿಗೂ ಅಂಜದ ಈ ಮಹಿಳೆಯರ ಉತ್ಸಾಹಕ್ಕೆ ಎಣೆಯಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಜನಪದ ಶೈಲಿಯ ಲಾವಣಿಗಳನ್ನು, ಹೋರಾಟದ ಹಾಡುಗಳನ್ನು ಹಾಡುವ ಇವರ ಉತ್ಸಾಹ ಯಾರಿಗಾದರೂ ಸ್ಪೂರ್ತಿಯಾಗಬಲ್ಲದು.
ನಾಗಮ್ಮ, ರಣಮ್ಮ, ಸುಲೋಚನಾ, ಶರಣಮ್ಮ, ಲಲಿತಾ, ಸುಶೀಲಾಬಾಯಿ, ಮಲ್ಲಮ್ಮ, ರುಕ್ಮಿಣಿ, ಸಂಗೀತಾ, ಸಾವಿತ್ರಿಬಾಯಿ, ಶಾಂತಾಬಾಯಿ, ವಿದ್ಯಾವತಿ, ನಾಗಮ್ಮ, ಕೊಂಡಾಬಾಯಿ, ಚಂದ್ರಬಾಗ, ದಯಾಲ್‌ಬಾಯಿ, ದೀಪಿಕಾ, ಸುನೀತಾ, ಸರಸ್ವತಿ, ಮೂನಾಬಾಯಿ, ಕಮಲಾಬಾಯಿ, ಹೇಮಾ, ದುರ್ಗಾಬಾಯಿ, ಪಾರ್ವತಿ, ಶೋಭಾ, ಸಂಪತ್ ಬಾಯಿ, ಲಲಿತಾ, ಭಾರತಿಬಾಯಿ, ಸಂಗಮ್ಮ, ಲಲಿತಾಬಾಯಿ, ಕಾಟೆಮ್ಮ, ಸುಖಾದೇವಿ, ಸಿದ್ದಮ್ಮ, ಸೀತಾಬಾಯಿ, ಶಾಂಭವಿ ಇನ್ನೂ ಹಲವರು ಆ ಹೋರಾಟದ ಹಿಂದಿನ ಶಕ್ತಿ ಚೈತನ್ಯವಾಗಿ ದುಡಿದಿದ್ದಾರೆ.

ಬೆಂಗಳೂರಿನ ಗುತ್ತಿಗೆ ಸಫಾಯಿ ಕರ್ಮಚಾರಿಗಳ ಹೋರಾಟ
ಬೆಂಗಳೂರಿನ ಪೌರಕಾರ್ಮಿಕರ ಹೋರಾಟ ಬೃ.ಬೆಂ.ಮ.ನ.ಪಾ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಗುತ್ತಿಗೆ ಪೌರಕಾರ್ಮಿಕರ ಸಂಘವು ಶೋಷಣೆಗೆ ಕಾರಣವಾಗಿರುವ ಗುತ್ತಿಗೆ ವ್ಯವಸ್ಥೆಯ ವಿರುದ್ಧ ನಡೆಸಿದ ಹೋರಾಟದ ಫಲವಾಗಿ ಕರ್ನಾಟಕ ಸರ್ಕಾರವು ಜೂನ್ ೨೦೧೭ರಲ್ಲಿ ಗುತ್ತಿಗೆ ಪದ್ಧತಿಯನ್ನು ನಿಷೇಧಿಸಿ ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಮಾಡುವ ನಿರ್ಧಾರವನ್ನು ತೆಗೆದುಕೊಂಡಿತು. ಲೈಂಗಿಕ ಕಿರುಕುಳ ನೀಡುವುದರ ವಿರುದ್ಧ, ಜಾತಿ ನಿಂದನೆಯ ವಿರುದ್ಧ ಸತತವಾಗಿ ಸಂಘವು ಹೋರಾಡುತ್ತ ಬಂದಿದೆ.
ಕಾರ್ಮಿಕರ ಪಾಸ್‌ಬುಕ್ ಮತ್ತು ಎಟಿಎಂ ಕಾರ್ಡುಗಳನ್ನು ಕಿತ್ತಿಟ್ಟುಕೊಳ್ಳುವ ಹಾಗೂ ಲೈಂಗಿಕ ಹಲ್ಲೆ ಮಾಡುವ ಮಾಲೀಕರ ವಿರುದ್ಧ ದೂರು ದಾಖಲಿಸಿ ಕಾನೂನು ಹೋರಾಟ ಮಾಡುವುದನ್ನು ವ್ಯವಸ್ಥಿತವಾಗಿ ಸಂಘವು ಮಾಡುತ್ತಿರುವುದು ಕಾರ್ಮಿಕರಲ್ಲಿ ಅಪಾರ ವಿಶ್ವಾಸವನ್ನು, ಧೈರ್ಯವನ್ನು ತುಂಬಿಸಿದೆ. ಶೋಷಣೆಗೆ ಕಾರಣವಾಗಿರುವ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಎಲ್ಲ ಪೌರಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಬೇಕು ಹಾಗೂ ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ (ತಡೆ, ರದ್ದತಿ, ಪರಿಹಾರ) ಕಾಯ್ದೆ, ೨೦೧೩ನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಯಶಸ್ವಿಯಾಗಿದ್ದಾರೆ. ಬಿಬಿಎಂಪಿ ಸಂಘದ ರತ್ನಾ, ನಾಗಲಕ್ಷ್ಮಿ, ರಮಾಲಕ್ಷö್ಮಮ್ಮ ಹಾಗೂ ಇತರರಿಗೆ ಈ ಯಶಸ್ಸು ಸಲ್ಲುತ್ತದೆ.