ತಮಟೆ ಟ್ರಸ್ಟ್ ಮತ್ತು ಸಫಾಯಿ ಕರ್ಮಚಾರಿ ಕಾವಲು ಸಮಿತಿ

ಸಫಾಯಿ ಕರ್ಮಚಾರಿಗಳÀ ಏಳಿಗೆಯನ್ನೇ ಪ್ರಮುಖ ಉದ್ದೇಶವಾಗಿಟ್ಟುಕೊಂಡಿರುವ ತಮಟೆ ಟ್ರಸ್ಟ್ ೨೦೦೬ರಲ್ಲಿ ಆರಂಭವಾಯಿತು. ಕರ್ನಾಟಕದ ೨೨ ಜಿಲ್ಲೆಗಳಲ್ಲಿ ಪೌರಕಾರ್ಮಿಕರ ವೇದಿಕೆಯನ್ನು ತಮಟೆ ಟ್ರಸ್ಟ್ ಆರಂಭಿಸಿದೆ. ಅವುಗಳಲ್ಲಿ ೭ ಜಿಲ್ಲೆಗಳಲ್ಲಿ ಅತ್ಯಂತ ಕ್ರಿಯಾಶಾಲಿಯಾಗಿ ಕೆಲಸ ಮಾಡುತ್ತಿದೆ. ಆ ಜಿಲ್ಲೆಗಳೆಂದರೆ ತುಮಕೂರು, ಚಿತ್ರದುರ್ಗ, ಹಾವೇರಿ, ದಾವಣಗೆರೆ, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆಗಳು. ಪೌರಕಾರ್ಮಿಕರು ಮತ್ತು ಮ್ಯಾನ್ಯುವಲ್ ಸ್ಕಾö್ಯವೆಂಜರ್‌ಗಳಿಗಾಗಿ ಶಿಕ್ಷಣ, ವಸತಿ, ಆರೋಗ್ಯ, ಪರ್ಯಾಯ ಉದ್ಯೋಗ ಕಲ್ಪಿಸುವ ಕೆಲಸವನ್ನು ತಮಟೆ ಮಾಡುತ್ತಿದೆ.
ಜುಲೈ ೨೩, ೨೦೧೦ರಲ್ಲಿ ಸವಣೂರಿನಲ್ಲಿ ದಲಿತರು ತಮ್ಮ ಮನೆ ಎತ್ತಂಗಡಿಯಾಗುವುದರ ವಿರುದ್ಧ ಮೈಮೇಲೆ ಮಲಸುರಿದುಕೊಂಡು ನಡೆಸಿದ ಪ್ರತಿಭಟಿನೆಯ ಪರಿಣಾಮವಾಗಿ ಜಾಗೃತಗೊಂಡು ಪರಿಶಿಷ್ಟ ಜಾತಿಗೆ ಸೇರಿದ ಯುವ ಗುಂಪೊಂದು ಸಫಾಯಿ ಕರ್ಮಚಾರಿ ಕಾವಲು ಸಮಿತಿಯನ್ನು ಹುಟ್ಟುಹಾಕಿತು. ಮಲಬಾಚುವ ಕೆಲಸ ಮಾಡುವ ಭಂಗಿಗಳು, ಮೆಹ್ತಾರರು ಇತ್ಯಾದಿ ಕೆಳಜಾತಿಯವರನ್ನು ಸಂಘಟಿಸುವ, ಅವರಿಗಾಗಿ ಒಂದು ವೇದಿಕೆ ಕಲ್ಪಿಸುವ, ಅವರನ್ನು ಆ ವೃತ್ತಿಯಿಂದ ಹೊರತರುವುದು ಸಮಿತಿಯ ಉದ್ದೇಶವಾಗಿದೆ. ದು.ಸರಸ್ವತಿಯವರು ಮಾಡಿರುವ ಈ ಎರಡೂ ಸಂಘಟನೆಯ ಸ್ಥಾಪಕ ಸದಸ್ಯರಾದ ಶ್ರೀಮತಿ ಪದ್ಮ ಮತ್ತು ಶ್ರೀ ಕೆ.ಬಿ.ಓಬಳೇಶ್ ಅವರ ಸಂದರ್ಶನವನ್ನು ಇಲ್ಲಿ ನೀಡಲಾಗಿದೆ.