ನೀನು ನಂಗೊದ್ ರೊಟ್ಟಿ ಕೊಟ್ರೆ
ಒಂದು ದಿವ್ಸದ ಹಸಿವನ್ನ ತೀರಿಸ್ದಂಗೆ
ರೊಟ್ಟಿ ಗಳಿಸೋದು ಹೆಂಗೇಂತ ಕಲಿಸಿದ್ರೆ
ಗಳಿಸೋ ಅವಕಾಶ ಕಿತ್ಕೊಳೋ ತಂಕ
ಉಳೋ ನೆಲ ಮಾರೋ ತಂಕ
ನನ್ ಹಸಿವನ್ನ ತೀರಿಸ್ದಂಗೆ…
ಅದೇ ನೀನೇನಾದ್ರು ವಿದ್ಯೆ ಕಲ್ಸಿ
ಒಗ್ಗಟ್ಟಾಗಿ ಹೋರಾಡೋದು ಕಲ್ಸಿದ್ಯಾ
ಏನ್ಬೇಕಾದ್ರೂ ಆಗ್ಲಿ, ಯಾವ ಕಷ್ಟನಾದ್ರೂ ಬರಲಿ
ನಮ್ ದಾರಿ ನಾವು ಹುಡುಕೋದ
ಹೇಳಿಕೊಟ್ಟಂಗೆ…
-ಅರಿವಿನ ಅವ್ವ ಸಾವಿತ್ರಿ ಬಾಯಿ ಫುಲೆ

