ಸಾಂಸ್ಥಿಕ ಚೌಕಟ್ಟು ಮತ್ತು ಕಾನೂನಿನ ಚೌಕಟ್ಟು

ಪೌರಕಾರ್ಮಿಕರು ಪದದ ಅರ್ಥ ವಿವರಣೆ:

ಫೆಬ್ರವರಿ ೨೨, ೧೯೭೩ರಲ್ಲಿ ಕರ್ನಾಟಕ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದ ಬಿ. ಬಸವಲಿಂಗಪ್ಪ ಅವರು ಕಸ ಗುಡಿಸುವವರು ಮತ್ತು ಮಲ ಬಾಚುವವರನ್ನು “ಪೌರಕಾರ್ಮಿಕರು” ಎಂದು ಕರೆಯಬೇಕೆಂದು ಘೋಷಿಸಿದರು. ಕರ್ನಾಟಕ ಸರ್ಕಾರವು ಹೊರಡಿಸಿದ ಸುತ್ತೋಲೆ (ಅiಡಿಛಿuಟಚಿಡಿ ಓo. ಊಒಂ ೨೨೯, ಉಉಐ ೭೨, ಃಚಿಟಿgಚಿಟoಡಿe ಜಚಿಣeಜ ೩೦ಣh ಒಚಿಡಿಛಿh ೧೯೭೩)ಯಲ್ಲಿ “…ಗುಡಿಸುವವರು ಮತ್ತು ಮಲ ಬಾಚುವವರನ್ನು ಆ ಹೆಸರಿನಿಂದ ಕರೆಯುವುದನ್ನು ಕೈಬಿಡಲಾಗಿದೆ… ಈ ನಿಟ್ಟಿನಲ್ಲಿ ಪೌರಾಡಳಿತ ಸಚಿವರು ದೆಹಲಿಯಿಂದ ಹಿಂತಿರುಗಿದ ನಂತರ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ಗುಡಿಸುವವರ ಮತ್ತು ಮಲಬಾಚುವವರ ಹೆಸರನ್ನು “ಪೌರಕಾರ್ಮಿಕರು” ಎಂದು ಬದಲಾಯಿಸಲಾಗಿದೆ” ಎಂದು ಹೇಳಲಾಗಿದೆ. ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಆಕ್ಟ್ನ ಸೆಕ್ಷನ್ ೨(೨೭) ಪ್ರಕಾರ “ಪೌರಕಾರ್ಮಿಕರು ಎಂದರೆ ಕಸವನ್ನು ಸಂಗ್ರಹಿಸುವ ಅಥವಾ ತೆಗೆಯುವ, ಚರಂಡಿಗಳು ಅಥವಾ ಕಸಾಯಿಖಾನೆಯನ್ನು ಸ್ವಚ್ಛ ಮಾಡುವವರು ಅಥವಾ ಮಲವನ್ನು ಹೊರತುಪಡಿಸಿ ಕಸವನ್ನು ಸಾಗಿಸುವ ಗಾಡಿಗಳನ್ನು ಓಡಿಸುವವರು” ಎಂದು ವಿವರಿಸಲಾಗಿದೆ.
ಸ್ವಚ್ಛತೆಯ ಕೆಲಸವನ್ನು ಮಾಡುವವರನ್ನು ತೋಟಿಗಳು, ಜಾಡಮಾಲಿಗಳು ಇತ್ಯಾದಿ ಜಾತಿಸೂಚಕ ಮತ್ತು ಅಪಮಾನಕರ ಪದಗಳಿಂದ ಕರೆಯಲಾಗುತ್ತಿತ್ತು. “ತೋಟಿ” ಎಂಬ ಪದದ ಅರ್ಥವನ್ನು ಕಿಟ್ಟಲ್ ನಿಘಂಟಿನಲ್ಲಿ ಹೀಗೆ ವಿವರಿಸಲಾಗಿದೆ-ಹಳ್ಳಿಯ ಅತ್ಯಂತ ಕೀಳಾದ ಸೇವಕ. ವಿಶೇಷವಾಗಿ ಗುಡಿಸುವ, ಮಲಬಾಚುವಂತಹ ಕೀಳಾದ ಕೆಲಸವನ್ನು ಮಾಡುವವರು. ಕಸ, ಮಲ, ಹೊಲಸು ಬಾಚುವುದು ಅತ್ಯಂತ ಕೀಳು ಕೆಲಸವಾಗಿದೆಯಲ್ಲದೆ ಅದನ್ನು ಅಶುದ್ಧ ಮತ್ತು ಅಪವಿತ್ರವೆಂದು ಪರಿಗಣಿಸಲಾಗಿದೆ. ಆ ಕೆಲಸಗಳ ಬಗ್ಗೆ ಇರುವ ಹೇವರಿಕೆ ಮತ್ತು ಜುಗುಪ್ಸೆಯ ಭಾವನೆಗಳು ಜಾತಿವ್ಯವಸ್ಥೆಯಿಂದಾಗಿ ಬಂದಿದೆ. ಆ ಕೆಲಸ ಮಾಡುವವರನ್ನೂ ಜಿಗುಪ್ಸೆಯಿಂದ ಕಾಣಲಾಗುತ್ತದೆ. ಅಂತಹ ಕೆಲಸ ಮಾಡುವವರು ಸಹ ಜಾತಿಶ್ರೇಣೀಕರಣದ ಕೊನೆಯಲ್ಲಿರುವ ಅಸ್ಪೃಶ್ಯರೇ ಆಗಿದ್ದಾರೆ. ಜಾತಿ ಮತ್ತು ವೃತ್ತಿ ಎರಡರಿಂದಲೂ ನಿಕೃಷ್ಟವಾಗಿರುವವರನ್ನು ನಿಕೃಷ್ಟವಾದ ಹೆಸರಿನಿಂದಲೇ ಕರೆಯುವ ಪರಿಪಾಟವಿದೆ.

ಸಾಂಸ್ಥಿಕ ರಚನೆ
ಸಫಾಯಿ ಕರ್ಮಚಾರಿಗಳು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪುರಸಭೆ ಮತ್ತು ಗ್ರಾಮಪಂಚಾಯ್ತಿಯಡಿ ಸ್ವಚ್ಛತೆಯ ಕೆಲಸ ಮಾಡುತ್ತಾರೆ. ಈ ಕೆಲಸವು ಮುನಿಸಿಪಲ್ ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ (ಘನತ್ಯಾಜ್ಯ ನಿರ್ವಹಣೆ) ಅಡಿ ಬರುತ್ತದೆ. ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ಸ್ ಆಕ್ಟ್ನ ಸೆಕ್ಷನ್ ೨೬೧ರ ಅಡಿ ಮುನಿಸಿಪಲ್ ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್‌ನ ಸಾಂಸ್ಥಿಕ ಸ್ವರೂಪವನ್ನು ಹೀಗೆ ವಿವರಿಸಲಾಗಿದೆ-
ಮುಖ್ಯ ಆರೋಗ್ಯಾಧಿಕಾರಿ
ಪ್ರತಿ ವಲಯಕ್ಕೆ ಆರೋಗ್ಯಾಧಿಕಾರಿ
ಪ್ರತಿ ವಲಯಕ್ಕೆ ಇಬ್ಬರು ಉಪ-ಆರೋಗ್ಯಾಧಿಕಾರಿಗಳು
ಪ್ರತಿ ರೇಂಜಿಗೂ ಒಬ್ಬರು ಆರೋಗ್ಯ ವೈದ್ಯಾಧಿಕಾರಿ
ಒಬ್ಬರು ಹಿರಿಯ ಆರೋಗ್ಯ ವೀಕ್ಷಕರು (ಇನ್‌ಸ್ಪೆಕ್ಟರ್)
ಪ್ರತಿಯೊಂದು ಆಡಳಿತ ವಾರ್ಡಿಗೂ ಇಬ್ಬರು ಕಿರಿಯ ಆರೋಗ್ಯ ವೀಕ್ಷಕರು
ನೈರ್ಮಲ್ಯ ದಫೇದಾರ್
ಖಾಯಂ ಹಾಗೂ ಗುತ್ತಿಗೆ ಪೌರಕಾರ್ಮಿಕರು

ಕೆಲಸದ ಸ್ವರೂಪ:
ಜನಸಂಚಾರ ಆರಂಭವಾಗುವ ಮುನ್ನ ಬೆಳಗಿನ ಜಾವವೇ ಸ್ವಚ್ಛತೆಯ ಕೆಲಸವನ್ನು ಮಾಡಿಸುವುದು ರೂಢಿಯಲ್ಲಿದೆ. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವುದು ಸರ್ಕಾರದ ಜವಾಬ್ದಾರಿಯಾಗಿದ್ದು ಅದಕ್ಕಾಗಿ ಸಫಾಯಿ ಕರ್ಮಚಾರಿಗಳನ್ನು ನೇಮಿಸಿಕೊಳ್ಳಲಾಗುತ್ತಿತ್ತು. ಇದೊಂದು ಸರ್ಕಾರಿ ಕೆಲಸವಾಗಿದ್ದರೂ ಕೆಲವೇ ಜಾತಿಗಳಿಗೆ ಮೀಸಲಾಗಿದೆ. ಜನಸಂಚಾರ ಆರಂಭವಾಗುವ ಮುನ್ನವೇ ಸ್ವಚ್ಛ ಮಾಡಬೇಕಾಗಿರುವುದರಿಂದಾಗಿ ಸಫಾಯಿ ಕರ್ಮಚಾರಿಗಳು ಬೆಳಗ್ಗೆ ೬ರಿಂದ ೨.೩೦ರವರೆಗೂ ಕೆಲಸಮಾಡುತ್ತಾರೆ. ಕೆಲವು ಕಡೆ ಬೆಳಗ್ಗೆ ೬ ರಿಂದ ೧೦.೩೦ ಮತ್ತು ಮಧ್ಯಾಹ್ನ ೨.೩೦ರಿಂದ ೫.೩೦ರವರೆಗು ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಾರೆ.
ಮುಖ್ಯರಸ್ತೆಗಳು ಮತ್ತು ಅಡ್ಡರಸ್ತೆಗಳನ್ನು ಗುಡಿಸುವುದು, ಕುಪ್ಪೆ (ಕಸದ ಗುಡ್ಡೆ) ಎತ್ತುವುದು, ರಸ್ತೆ ಬದಿಯ ಚಿಕ್ಕ ಮೋರಿಗಳಲ್ಲಿ ಶೇಖರವಾಗುವ ಕಸವನ್ನು ತೆಗೆಯುವುದು, ಖಾಲಿ ಜಾಗಗಳಲ್ಲಿನ ಘನತ್ಯಾಜ್ಯಗಳನ್ನು ತೆಗೆಯುವುದು, ಕಳೆಸಸ್ಯಗಳನ್ನು ಕೀಳುವುದು, ದೊಡ್ಡ ಮೋರಿಗಳಲ್ಲಿ ಶೇಖರವಾಗುವ ಕಸವನ್ನು ತೆಗೆಯುವುದು, ಮನೆಗಳಿಂದ ಕಸವನ್ನು ಸಂಗ್ರಹಿಸುವುದು, ಕಸವನ್ನು ಲಾರಿಗಳಿಗೆ ಲೋಡ್ ಮಾಡುವುದು ಮತ್ತು ಅನ್‌ಲೋಡ್ ಮಾಡುವುದು, ಮನೆಗಳು ಮತ್ತು ಹೋಟೆಲುಗಳು, ಶಾಲಾ-ಕಾಲೇಜುಗಳು, ಆಸ್ಪತ್ರೆ ಇತ್ಯಾದಿ ಸಾರ್ವಜನಿಕ ಸಂಸ್ಥೆಗಳಿಂದ ಕಸವನ್ನು ಸಂಗ್ರಹಿಸುವುದು, ಕಟ್ಟಡ ನಿರ್ಮಾಣದ ತ್ಯಾಜ್ಯವೂ ಸೇರಿದಂತೆ ಇತರೆ ಘನತ್ಯಾಜ್ಯಗಳನ್ನು ಎತ್ತಿಹಾಕುವುದು, ಸತ್ತ ಪ್ರಾಣಿಗಳನ್ನು ಸಾಗಿಸುವುದು, ಜಾತ್ರೆ, ಹಬ್ಬ, ಸಾರ್ವಜನಿಕ ಸಮಾರಂಭಗಳು ನಡೆಯುವ ಸಂದರ್ಭದಲ್ಲಿ ಬೀಳುವ ಕಸದ ರಾಶಿಯನ್ನು ತೆಗೆಯುವುದು, ಕಸವನ್ನು ಡಂಪಿಂಗ್ ಯಾರ್ಡಿಗೆ ಒಯ್ಯುವುದು, ಕಸವನ್ನು ವಿಂಗಡಿಸುವುದು, ಇತ್ಯಾದಿ ಕೆಲಸಗಳನ್ನು ಸಫಾಯಿ ಕರ್ಮಚಾರಿಗಳು ಮಾಡುತ್ತಾರೆ.
ಕೆಲಸದ ಅವಧಿ, ಕೆಲಸದ ವಿವರ, ವೇತನ ಮತ್ತು ದಿನವೊಂದಕ್ಕೆ ಬೀಳುವ ಕಸದ ವಿವರ:
ಕ್ರ.
ಸಂ. ಜಿಲ್ಲೆಯ ಹೆಸರು
ಜನಸಂಖ್ಯೆ ಒಂದು ದಿನದಲ್ಲಿ ಬೀಳುವ ತ್ಯಾಜ್ಯ ಕೆಲಸದ
ಅವಧಿ ಕೆಲಸದ ವಿವರ ಖಾಯಂ
ನೌ ಖಾಸಗಿ
ನೌಕರರು ಗು.ಸಫಾಯಿ
ಕರ್ಮಚಾರಿಗಳ
ವೇತನ ಪ್ರತಿ ತಿಂಗಳಿಗೆ ಖಾಯಂ
ನೌಕರರ
ವೇತನ
೧ ಚಿತ್ರದುರ್ಗ ೧,೪೦,೨೦೬ ೪೫ ಟನ್
ಮುಂಜಾನೆ ೬ ಘಂಟೆಯಿಂದ ಮಧ್ಯಾಹ್ನ ೨.೩೦ ರವರೆಗೆ ರಸ್ತೆಗಳನ್ನು ಗುಡಿಸುವುದು, ಕಸ ತುಂಬುವುದು, ತೆರವು ಮಾಡುವುದು, ಚರಂಡಿಗಳ ಸ್ವಚ್ಛತೆ ೧೫೦ ೧೩,೬೫೦/-
ಅಂದಾಜು
ರೂ.೨೦,೦೦೦/-
೨ ಮಂಗಳೂರು ೪,೯೯,೪೮೭ ೨೨೦ ಟನ್
ಮುಂಜಾನೆ ೬ ಘಂಟೆಯಿಂದ ಮಧ್ಯಾಹ್ನ ೨.೩೦ ರವರೆಗೆ ರಸ್ತೆಗಳನ್ನು ಗುಡಿಸುವುದು, ಕಸ ತುಂಬುವುದು, ತೆರವು ಮಾಡುವುದು, ಚರಂಡಿಗಳ ಸ್ವಚ್ಛತೆ ೬೦೦ ೧೪,೦೪೦/- ಅಂದಾಜು
ರೂ.೨೦,೦೦೦/-
೩ ಬಳ್ಳಾರಿ ೪.೧೦,೪೦೦ ೧೬೦ ಟನ್
ಮುಂಜಾನೆ ೬ ಘಂಟೆಯಿಂದ ಮಧ್ಯಾಹ್ನ ೨.೩೦ ರವರೆಗೆ ರಸ್ತೆಗಳನ್ನು ಗುಡಿಸುವುದು, ಕಸ ತುಂಬುವುದು, ತೆರವು ಮಾಡುವುದು, ಚರಂಡಿಗಳ ಸ್ವಚ್ಛತೆ ೬೫೦ ೧೪,೦೪೦/- ಅಂದಾಜು
ರೂ.೨೦,೦೦೦/-
೪ ಕೋಲಾರ ೧,೮೩,೪೬೨ ೮೦ ಟನ್
ಮುಂಜಾನೆ ೬ ಘಂಟೆಯಿಂದ ಮಧ್ಯಾಹ್ನ ೨.೩೦ ರವರೆಗೆ ರಸ್ತೆಗಳನ್ನು ಗುಡಿಸುವುದು, ಕಸ ತುಂಬುವುದು, ತೆರವು ಮಾಡುವುದು, ಚರಂಡಿಗಳ ಸ್ವಚ್ಛತೆ ೧೫೦ ೧೩,೬೫೦/- ಅಂದಾಜು
ರೂ.೨೦,೦೦೦/-
೫ ಕೆ.ಜಿ.ಎಫ್. ೧,೬೩,೬೪೩ ೫೨ ಟನ್
ಮುಂಜಾನೆ ೬ ಘಂಟೆಯಿಂದ ಮಧ್ಯಾಹ್ನ ೨.೩೦ ರವರೆಗೆ ರಸ್ತೆಗಳನ್ನು ಗುಡಿಸುವುದು, ಕಸ ತುಂಬುವುದು, ತೆರವು ಮಾಡುವುದು, ಚರಂಡಿಗಳ ಸ್ವಚ್ಛತೆ ೧೬೮ ೧೩,೬೫೦/- ಅಂದಾಜು
ರೂ.೨೦,೦೦೦/-
೬ ಗುಲ್ಬರ್ಗಾ ೫,೪೩,೦೦೦ ೧೩೨ ಟನ್
ಮುಂಜಾನೆ ೬ ಘಂಟೆಯಿಂದ ಮಧ್ಯಾಹ್ನ ೨.೩೦ ರವರೆಗೆ ರಸ್ತೆಗಳನ್ನು ಗುಡಿಸುವುದು, ಕಸ ತುಂಬುವುದು, ತೆರವು ಮಾಡುವುದು, ಚರಂಡಿಗಳ ಸ್ವಚ್ಛತೆ ೯೮೦ ೧೪,೦೪೦/- ಅಂದಾಜು
ರೂ.೨೦,೦೦೦/-
೭ ಮೈಸೂರು ೮,೮೭,೪೪೬ ೪೦೨ ಟನ್
ಮುಂಜಾನೆ ೬ ಘಂಟೆಯಿಂದ ಮಧ್ಯಾಹ್ನ ೨.೩೦ ರವರೆಗೆ ರಸ್ತೆಗಳನ್ನು ಗುಡಿಸುವುದು, ಕಸ ತುಂಬುವುದು, ತೆರವು ಮಾಡುವುದು, ಚರಂಡಿಗಳ ಸ್ವಚ್ಛತೆ ೬೫೦ ೧೪,೦೪೦/- ಅಂದಾಜು
ರೂ.೨೦,೦೦೦/-
೮ ಬೆಂಗಳೂರು ೯೮.೭೫ ಲಕ್ಷ
(೨೦೧೬) ೩೦೦೦ ಟನ್
ಮುಂಜಾನೆ ೬ ಘಂಟೆಯಿಂದ ಮಧ್ಯಾಹ್ನ ೨.೩೦ ರವರೆಗೆ ರಸ್ತೆಗಳನ್ನು ಗುಡಿಸುವುದು, ಕಸ ತುಂಬುವುದು, ತೆರವು ಮಾಡುವುದು, ಚರಂಡಿಗಳ ಸ್ವಚ್ಛತೆ ೨೫೧೪ ೧೭,೦೦೦+ ೧೪,೦೪೦/- ಅಂದಾಜು
ರೂ.೨೨,೦೦೦/-

ಕಾನೂನಿನ ಚೌಕಟ್ಟು
ಘನತ್ಯಾಜ್ಯ ನಿರ್ವಹಣೆಯ ಅಡಿಯಲ್ಲಿ ಬರುವ ಸ್ವಚ್ಛತೆಯ ಕೆಲಸವನ್ನು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿಗಳು ನಿರ್ವಹಿಸುತ್ತವೆ. ಸ್ವಚ್ಛತೆಯ ಕೆಲಸ ಮಾಡುವ ಸಫಾಯಿ ಕರ್ಮಚಾರಿಗಳಿಗೂ ಕಾಯ್ದೆಯನ್ನು ರಚಿಸಿ ಅನುಷ್ಠಾನಗೊಳಿಸಲಾಗಿದೆ.
ಘನತ್ಯಾಜ್ಯಕ್ಕೆ ಸಂಬಂಧಪಟ್ಟ ಕಾನೂನುಗಳು
• ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಆಕ್ಟ್, ೧೯೭೬.
• ಕರ್ನಾಟಕ ಮುನಿಸಿಪಾಲಿಟೀಸ್ ಆಕ್ಟ್, ೧೯೭೬.
• ಮುನಿಸಿಪಲ್ ಸಾಲಿಡ್ ವೇಸ್ಟ್÷್ಸ (ಮ್ಯಾನೇಜ್‌ಮೆಂಟ್ ಅಂಡ್ ಹ್ಯಾಂಡ್ಲಿಂಗ್) ರೂಲ್ಸ್
ಘನತ್ಯಾಜ್ಯ ನಿರ್ವಹಣೆಗಾಗಿ ನೇಮಕ ಮಾಡಿಕೊಂಡವರ ಕೆಲಸದ ಪರಿಸ್ಥಿತಿ ಕುರಿತ ಕಾನೂನುಗಳು
• ಕಾಂಟ್ರಾö್ಯಕ್ಟ್ ಲೇಬರ್ ಆ್ಯಕ್ಟ್, ೧೯೭೦,
• ಎಂಪ್ಲಾಯೀಸ್ ಸ್ಟೇಟ್ ಇನ್‌ಷುರೆನ್ಸ್ ಆ್ಯಕ್ಟ್, ೧೯೪೮.
• ರ‍್ಕ್ಮನ್ಸ್ ಕಾಂಪೆನ್‌ಸೇಷನ್ ಆ್ಯಕ್ಟ್, ೧೯೨೩.
• ಪ್ರಾವಿಡೆಂಟ್ ಫಂಡ್ ಆ್ಯಕ್ಟ್, ೧೯೫೨.

ಪಾಲಿಕೆಗಳ ಜವಾಬ್ದಾರಿ
ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಆಕ್ಟ್ನ ಸೆಕ್ಷನ್ ೫೮ರ ಪ್ರಕಾರ ಪಾಲಿಕೆಗಳು ನಿರ್ವಹಿಸಬೇಕಾದ ಜವಾಬ್ದಾರಿಗಳೆಂದರೆ,
• ಎಲ್ಲಾ ಸಾರ್ವಜನಿಕ ರಸ್ತೆಗಳ ಸ್ವಚ್ಛತೆ
• ಗುಡಿಸಿದ ಎಲ್ಲಾ ಕಸವನ್ನು ತೆಗೆಸುವುದು
• ತ್ಯಾಜ್ಯವನ್ನು ಸಂಗ್ರಹಿಸುವುದು, ತೆಗೆಯುವುದು, ಸಂಸ್ಕರಿಸುವುದು ಮತ್ತು ವಿಲೇವಾರಿ ಮಾಡುವುದು
• ಒಳಚರಂಡಿ ಮತ್ತು ಚರಂಡಿಗಳನ್ನು ಕಟ್ಟುವುದು, ನಿರ್ವಹಣೆ ಮಾಡುವುದು ಮತ್ತು ಸ್ವಚ್ಛಗೊಳಿಸುವುದು

ಮುನಿಸಿಪಲ್ ಸಾಲಿಡ್ ವೇಸ್ಟ್ ನಿಯಮಗಳ ಪ್ರಕಾರ ಪಾಲಿಕೆಗಳು ನಿರ್ವಹಿಸಬೇಕಾದ ಕರ್ತವ್ಯಗಳು
• ರಸ್ತೆಗಳಲ್ಲಿ ಸಾರ್ವಜನಿಕ ಕಸದಬುಟ್ಟಿಗಳನ್ನು ಒದಗಿಸುವುದು
• ಸಾರ್ವಜನಿಕ ಸ್ಥಳದಲ್ಲಿ ಅಪಾರವಾಗಿ ಶೇಖರವಾಗುವ ಕಸ, ಹೊಲಸಿನ ಸಂಗ್ರಹಣೆ
• ರಸ್ತೆಗಳನ್ನು ನಿತ್ಯವೂ ಗುಡಿಸಿ ಸಂಗ್ರಹವಾಗುವ ಕಸ, ಹೊಲಸನ್ನು ಸ್ವಚ್ಛಮಾಡಿಸುವುದು
• ಘನತ್ಯಾಜ್ಯ ನಿರ್ವಹಣೆಯ ಭಾಗವಾಗಿ ಸಂಗ್ರಹಣೆ, ಶೇಖರಣೆ, ವಿಂಗಡಣೆ, ಸಾಗಣೆ, ಸಂಸ್ಕರಣೆ ಮತ್ತು ವಿಲೇವಾರಿಗಾಗಿ(ಡಿಸ್‌ಪೋಸಲ್) ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು

ಮುನಿಸಿಪಲ್ ಸಾಲಿಡ್ ವೇಸ್ಟ್÷್ಸ (ನಿರ್ವಹಣೆ ಮತ್ತು ಹ್ಯಾಂಡ್ಲಿಂಗ್) ನಿಯಮಗಳು, ೨೦೦೦ ಅನ್ವಯ
• ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಸ್ಟೇಟ್ ಪೊಲ್ಯೂಷನ್ ಕಂಟ್ರೋಲ್ ಬೋರ್ಡ್)ಯವರು ಅಂತರ್ಜಲ, ಪರಿಸರದ ವಾಯುವಿನ ಗುಣಮಟ್ಟ ಮತ್ತು ಗೊಬ್ಬರದ ಗುಣಮಟ್ಟಕ್ಕೆ ಸಂಬಂಧಪಟ್ಟಂತೆ ಅನುಸರಿಸಬೇಕಾದ ಪ್ರಮಾಣಗಳ ನಿಗಾವಹಿಸಬೇಕು.
• ಅಪಘಾತಗಳನ್ನು ವರದಿ ಮಾಡುವುದು. ಮೆಟ್ರೋಪಾಲಿಟನ್ ನಗರಗಳಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಉಳಿದ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಅಥವಾ ಉಪ-ಆಯುಕ್ತರಿಗೆ ವರದಿ ಮಾಡಬೇಕು.
ಗುತ್ತಿಗೆದಾರರು ನಿರ್ವಹಿಸಬೇಕಾದ ಕರ್ತವ್ಯಗಳು
ಪ್ರಸ್ತುತ ಅಧ್ಯಯನವು ಗುತ್ತಿಗೆ ಸಫಾಯಿ ಕರ್ಮಚಾರಿಗಳನ್ನು ಕೇಂದ್ರವಾಗಿರಿಸಿಕೊಂಡಿದೆ. ಗುತ್ತಿಗೆ ಸಫಾಯಿ ಕರ್ಮಚಾರಿಗಳಿಗೆ ಸಂಬಂಧಿಸಿದ ಬಹುಪಾಲು ವಿಷಯಗಳು ಗುತ್ತಿಗೆ ಪದ್ಧತಿ ನಿಯಂತ್ರಣ ಮತ್ತು ರದ್ದತಿ ಕಾಯ್ದೆಯಡಿ ಬರುತ್ತವೆ.
ಗುತ್ತಿಗೆ ಪದ್ಧತಿ ನಿಯಂತ್ರಣ ಮತ್ತು ರದ್ದತಿ ಕಾಯ್ದೆಯ ನಿಯಮ ೨೫ (೨) (೫) (ಎ) ಮತ್ತು ಪರವಾನಗಿ ನೀಡಲು ಇರುವ ಪರವಾನಗಿ ನಿಯಮ ೫ ರ ಪ್ರಕಾರ
• ಒಂದೇ ತರಹದ ಕೆಲಸವಾಗಿದ್ದಲ್ಲಿ ಮುಖ್ಯ ಮಾಲೀಕರು ನೇರವಾಗಿ ನೇಮಕ ಮಾಡಿಕೊಳ್ಳುವ ನೌಕರರಿಗೆ ಲಭ್ಯವಿರುವ ವೇತನ, ರಜೆಗಳು, ಕೆಲಸದ ಅವಧಿ ಮತ್ತು ಇತರೆ ಸೇವಾ ನಿಯಮಗಳನ್ನೇ ಗುತ್ತಿಗೆ ಕಾರ್ಮಿಕರಿಗೂ ನೀಡತಕ್ಕದ್ದು.
ಈ ಕೆಳಗಿನ ಸೌಕರ್ಯಗಳನ್ನು ಕಲ್ಪಿಸತಕ್ಕದ್ದು
• ಕ್ಯಾಂಟೀನ್ ಮತ್ತು ಭೋಜನಾಲಯ
• ವಿಶ್ರಾಂತಿ ಕೊಠಡಿ
• ಕುಡಿಯುವ ನೀರಿನ ಸೌಲಭ್ಯ
• ಶೌಚಾಲಯ ಮತ್ತು ಮೂತ್ರಾಲಯ
• ವಾಶಿಂಗ್ ಸೌಲಭ್ಯಗಳು
• ಪ್ರಥಮ ಚಿಕಿತ್ಸೆ
• ಶಿಶುವಿಹಾರಗಳು

ಪಾಲಿಕೆ ಮತ್ತು ಗುತ್ತಿಗೆದಾರರು ಪಾಲಿಸಬೇಕಾದ ಕಾನೂನಾತ್ಮಕ ಜವಾಬ್ದಾರಿಗಳು
ಪಾಲಿಕೆಯ ಜವಾಬ್ದಾರಿ-
• ವೇತನ ವಿತರಣೆಯ ಸಂದರ್ಭದಲ್ಲಿ ಸೂಕ್ತ ವೇತನ ನೀಡಲಾಗುತ್ತಿದೆಯೇ ಎಂದು ಪರಿಶೀಲಿಸಲು ಪ್ರತಿನಿಧಿಯೊಬ್ಬರನ್ನು ನೇಮಕ ಮಾಡಬೇಕು
• ಗುತ್ತಿಗೆದಾರರು ವೇತನ ಪಾವತಿಸದಿದ್ದ ಪಕ್ಷದಲ್ಲಿ ಪಾಲಿಕೆಯು ಪಾವತಿಸಿ ಆ ಮೊತ್ತವನ್ನು ಗುತ್ತಿಗೆದಾರರಿಂದ ಹಿಂಪಡೆದುಕೊಳ್ಳಬೇಕು
• ಮೇಲೆ ತಿಳಿಸಿರುವುದನ್ನು ಗುತ್ತಿಗೆದಾರರು ಒದಗಿಸದಿದ್ದ ಪಕ್ಷದಲ್ಲಿ ಪಾಲಿಕೆಯು ಒದಗಿಸತಕ್ಕದ್ದು
ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆಕ್ಟ್ ೧೯೫೨ ಮತ್ತು ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಸ್ಕೀಮ್ ೧೯೫೨
ಪ್ರತಿಯೊಬ್ಬ ಗುತ್ತಿಗೆದಾರರು-
• ಪ್ರತಿಯೊಬ್ಬ ಕಾರ್ಮಿಕರಿಗೂ ಪಾಸ್‌ಬುಕ್ ನೀಡಬೇಕು ಮತ್ತು ಅದನ್ನು ನಿರ್ವಹಿಸಬೇಕು
• ಪ್ರತಿ ಸದಸ್ಯರ ದೇಣಿಗೆ ಕಾರ್ಡ್ ಅನ್ನು ತನ್ನ ಸುಪರ್ದಿನಲ್ಲಿಟ್ಟುಕೊಳ್ಳಬೇಕು
• ತಾನು ನೇಮಕ ಮಾಡಿಕೊಂಡಿರುವ ನೌಕರರಿಂದ ಪಡೆದುಕೊಂಡಿರುವ ದೇಣಿಗೆಯ ವಿವರಗಳಿರುವ ಪಟ್ಟಿಯನ್ನು ಪ್ರತಿ ತಿಂಗಳು ಪಾಲಿಕೆಗೆ ಸಲ್ಲಿಸತಕ್ಕದ್ದು

ಎಂಪ್ಲಾಯೀಸ್ ಸ್ಟೇಟ್ ಇನ್‌ಷುರೆನ್ಸ್ ಆಕ್ಟ್ (ಜನರಲ್) ರೆಗ್ಯುಲೇಷನ್ಸ್, ೧೯೪೮ ಅಡಿ
ಗುತ್ತಿಗೆದಾರರ ಕರ್ತವ್ಯಗಳು-
• ಮೂರು ತಿಂಗಳೊಳಗೆ ಎಲ್ಲ ಕಾರ್ಮಿಕರಿಗೂ ಗುರುತಿನ ಚೀಟಿಯನ್ನು ವಿತರಿಸತಕ್ಕದ್ದು
• ನೌಕರರ ಕುರಿತು ಈ ಕೆಳಗಿನ ವಿವರಗಳು ಇರುವ
• ರಿಜಿಸ್ಟರ್ ಅನ್ನು ಇಡಬೇಕು-
೧. ವಿಮೆ ಮಾಡಿರುವ ವ್ಯಕ್ತಿಯ ಹೆಸರು
೨. ವಿಮೆ ನಂಬರ್
೩. ಸಂಪರ್ಕ ಕಲ್ಪಿಸಿರುವ ಆಸ್ಪತ್ರೆಯ ಹೆಸರು
೪. ವೃತ್ತಿ
೫. ನೌಕರರ ದೇಣಿಗೆಯ ಪಾಲು
ಪಾಲಿಕೆಯ ಕರ್ತವ್ಯಗಳು-
• ಎಲ್ಲ ನೌಕರರಿಗೂ ಗುರುತಿನ ಚೀಟಿಯನ್ನು ವಿತರಿಸಲಾಗಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳತಕ್ಕದ್ದು
• ರಿಜಿಸ್ಟರ್‌ಗಳ ತಪಾಸಣೆ/ಪರಿಶೀಲನೆ
ಸುರಕ್ಷಾ ನಿಯಮಗಳು:
• ಘನತ್ಯಾಜ್ಯ ವಿಲೇವಾರಿ ಕೆಲಸದಲ್ಲಿ ತೊಡಗಿರುವ ಕಾರ್ಮಿಕರ ಆರೋಗ್ಯಕ್ಕೆ ಅಪಾಯಗಳಿವೆ ಮತ್ತು ಅವರು ಉಸಿರಾಟ ಸಂಬಂಧಿ ಸೋಂಕುಗಳು ಹಾಗೂ ಕರುಳಿನ ಸೋಂಕುಗಳಿಗೆ ಪದೇ ಪದೇ ಒಳಗಾಗುತ್ತಾರೆ. ಕರುಳಿನ ತೊಂದರೆಗಳು, ಭೇದಿ, ಸೋಂಕು, ಚರ್ಮದ ಕಾಯಿಲೆಗಳು, ಜಾಂಡೀಸ್, ಟ್ರಾಕೋಮದಂತಹ ಕಾಯಿಲೆಗಳಿಗೆ ಮತ್ತು ಅಲರ್ಜಿಗೆ ಒಳಗಾಗುವ ಅಪಾಯವಿರುವುದರ ಜೊತೆಗೆ ಕೆಲಸ ಮಾಡುವಾಗ ಸೂಜಿ, ತಗಡು, ಮರದ ತುಂಡುಗಳಂತಹ ಚೂಪಾದ ವಸ್ತುಗಳಿಂದ ಹಾನಿಗೊಳಗಾಗುವ ಅಪಾಯವನ್ನೂ ಎದುರಿಸುತ್ತಾರೆ.
• ಸುರಕ್ಷಾ ಎಚ್ಚರಿಕೆಗಳ (ಒಪ್ಪಂದದ ಶೆಡ್ಯೂಲ್ ೫) ಪ್ರಕಾರ ಮಾಲೀಕರು (ಗುತ್ತಿಗೆದಾರರು ಅಥವಾ ಪಾಲಿಕೆ)
೧. ಪ್ರತಿಯೊಬ್ಬ ಪೌರಕಾರ್ಮಿಕರಿಗೂ ಸಮವಸ್ತ್ರ, ಕೈಗವುಸು, ಏಪ್ರನ್, ಸುರಕ್ಷಿತ ಪಾದರಕ್ಷೆ, ಮುಖಕ್ಕೆ ಹಾಕಿಕೊಳ್ಳುವ ಮಾಸ್ಕ್ ಮತ್ತು ಬ್ಯಾಡ್ಜ್ಗಳಂತಹ ಸುರಕ್ಷಾ ಸಲಕರಣೆಗಳನ್ನು ನೀಡಬೇಕು
೨. ಪೌರಕಾರ್ಮಿಕರಿಗೆ ನಿಯಮಿತ ಆರೋಗ್ಯ ತಪಾಸಣೆ ನಡೆಸಬೇಕು (souಡಿಛಿe: ಒಚಿiಣಡಿeಥಿi ಏಡಿishಟಿಚಿಟಿ ಚಿಟಿಜ ಅಟiಜಿಣoಟಿ ಆ’ ಖmzಚಿಡಿio: soಟiಜ ತಿಚಿsಣe mಚಿಟಿಚಿgemeಟಿಣ ಚಿಟಿಜ ಠಿoತಿಡಿಚಿಞಚಿಡಿmiಞಚಿs:೨೦೦೮)

ಘನತೆಗಾಗಿ, ಉತ್ತಮ ಕೆಲಸದ ಪರಿಸ್ಥಿತಿಗಾಗಿ, ಬದುಕುವ ವೇತನಕ್ಕಾಗಿ, ಸುರಕ್ಷಾ ಸಲಕರಣೆಗಳಿಗಾಗಿ ಹೋರಾಟ ಮುಂದುವರೆಯುತ್ತಲೇ ಇದೆ. ಜಾತಿ ಆಧಾರಿತ ಶ್ರೇಣೀಕರಣ ಹೊಂದಿರುವ ನಮ್ಮ ದೇಶದಲ್ಲಿ ಜಾತಿಗೂ ಮತ್ತು ಸ್ವಚ್ಛತೆಯ ಕೆಲಸಕ್ಕೂ ಇರುವ ನಿಕಟ ಸಂಬಂಧವನ್ನು ಮುರಿಯದೇ ಪರಿಹಾರ ಕಾಣಲು ಸಾಧ್ಯವಿಲ್ಲ. ಅಂತಿಮವಾಗಿ ಸಫಾಯಿ ಕರ್ಮಚಾರಿಗಳ ಹೋರಾಟ ಜಾತಿ ವಿನಾಶ ಹೋರಾಟವೇ ಆಗಿದೆ.