ಸಾಂಸ್ಥಿಕ ಚೌಕಟ್ಟು ಮತ್ತು ಕಾನೂನಿನ ಚೌಕಟ್ಟು

ಪೌರಕಾರ್ಮಿಕರು ಪದದ ಅರ್ಥ ವಿವರಣೆ:

ಫೆಬ್ರವರಿ ೨೨, ೧೯೭೩ರಲ್ಲಿ ಕರ್ನಾಟಕ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದ ಬಿ. ಬಸವಲಿಂಗಪ್ಪ ಅವರು ಕಸ ಗುಡಿಸುವವರು ಮತ್ತು ಮಲ ಬಾಚುವವರನ್ನು “ಪೌರಕಾರ್ಮಿಕರು” ಎಂದು ಕರೆಯಬೇಕೆಂದು ಘೋಷಿಸಿದರು. ಕರ್ನಾಟಕ ಸರ್ಕಾರವು ಹೊರಡಿಸಿದ ಸುತ್ತೋಲೆ (ಅiಡಿಛಿuಟಚಿಡಿ ಓo. ಊಒಂ ೨೨೯, ಉಉಐ ೭೨, ಃಚಿಟಿgಚಿಟoಡಿe ಜಚಿಣeಜ ೩೦ಣh ಒಚಿಡಿಛಿh ೧೯೭೩)ಯಲ್ಲಿ “…ಗುಡಿಸುವವರು ಮತ್ತು ಮಲ ಬಾಚುವವರನ್ನು ಆ ಹೆಸರಿನಿಂದ ಕರೆಯುವುದನ್ನು ಕೈಬಿಡಲಾಗಿದೆ… ಈ ನಿಟ್ಟಿನಲ್ಲಿ ಪೌರಾಡಳಿತ ಸಚಿವರು ದೆಹಲಿಯಿಂದ ಹಿಂತಿರುಗಿದ ನಂತರ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ಗುಡಿಸುವವರ ಮತ್ತು ಮಲಬಾಚುವವರ ಹೆಸರನ್ನು “ಪೌರಕಾರ್ಮಿಕರು” ಎಂದು ಬದಲಾಯಿಸಲಾಗಿದೆ” ಎಂದು ಹೇಳಲಾಗಿದೆ. ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಆಕ್ಟ್ನ ಸೆಕ್ಷನ್ ೨(೨೭) ಪ್ರಕಾರ “ಪೌರಕಾರ್ಮಿಕರು ಎಂದರೆ ಕಸವನ್ನು ಸಂಗ್ರಹಿಸುವ ಅಥವಾ ತೆಗೆಯುವ, ಚರಂಡಿಗಳು ಅಥವಾ ಕಸಾಯಿಖಾನೆಯನ್ನು ಸ್ವಚ್ಛ ಮಾಡುವವರು ಅಥವಾ ಮಲವನ್ನು ಹೊರತುಪಡಿಸಿ ಕಸವನ್ನು ಸಾಗಿಸುವ ಗಾಡಿಗಳನ್ನು ಓಡಿಸುವವರು” ಎಂದು ವಿವರಿಸಲಾಗಿದೆ.
ಸ್ವಚ್ಛತೆಯ ಕೆಲಸವನ್ನು ಮಾಡುವವರನ್ನು ತೋಟಿಗಳು, ಜಾಡಮಾಲಿಗಳು ಇತ್ಯಾದಿ ಜಾತಿಸೂಚಕ ಮತ್ತು ಅಪಮಾನಕರ ಪದಗಳಿಂದ ಕರೆಯಲಾಗುತ್ತಿತ್ತು. “ತೋಟಿ” ಎಂಬ ಪದದ ಅರ್ಥವನ್ನು ಕಿಟ್ಟಲ್ ನಿಘಂಟಿನಲ್ಲಿ ಹೀಗೆ ವಿವರಿಸಲಾಗಿದೆ-ಹಳ್ಳಿಯ ಅತ್ಯಂತ ಕೀಳಾದ ಸೇವಕ. ವಿಶೇಷವಾಗಿ ಗುಡಿಸುವ, ಮಲಬಾಚುವಂತಹ ಕೀಳಾದ ಕೆಲಸವನ್ನು ಮಾಡುವವರು. ಕಸ, ಮಲ, ಹೊಲಸು ಬಾಚುವುದು ಅತ್ಯಂತ ಕೀಳು ಕೆಲಸವಾಗಿದೆಯಲ್ಲದೆ ಅದನ್ನು ಅಶುದ್ಧ ಮತ್ತು ಅಪವಿತ್ರವೆಂದು ಪರಿಗಣಿಸಲಾಗಿದೆ. ಆ ಕೆಲಸಗಳ ಬಗ್ಗೆ ಇರುವ ಹೇವರಿಕೆ ಮತ್ತು ಜುಗುಪ್ಸೆಯ ಭಾವನೆಗಳು ಜಾತಿವ್ಯವಸ್ಥೆಯಿಂದಾಗಿ ಬಂದಿದೆ. ಆ ಕೆಲಸ ಮಾಡುವವರನ್ನೂ ಜಿಗುಪ್ಸೆಯಿಂದ ಕಾಣಲಾಗುತ್ತದೆ. ಅಂತಹ ಕೆಲಸ ಮಾಡುವವರು ಸಹ ಜಾತಿಶ್ರೇಣೀಕರಣದ ಕೊನೆಯಲ್ಲಿರುವ ಅಸ್ಪೃಶ್ಯರೇ ಆಗಿದ್ದಾರೆ. ಜಾತಿ ಮತ್ತು ವೃತ್ತಿ ಎರಡರಿಂದಲೂ ನಿಕೃಷ್ಟವಾಗಿರುವವರನ್ನು ನಿಕೃಷ್ಟವಾದ ಹೆಸರಿನಿಂದಲೇ ಕರೆಯುವ ಪರಿಪಾಟವಿದೆ.

ಸಾಂಸ್ಥಿಕ ರಚನೆ
ಸಫಾಯಿ ಕರ್ಮಚಾರಿಗಳು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪುರಸಭೆ ಮತ್ತು ಗ್ರಾಮಪಂಚಾಯ್ತಿಯಡಿ ಸ್ವಚ್ಛತೆಯ ಕೆಲಸ ಮಾಡುತ್ತಾರೆ. ಈ ಕೆಲಸವು ಮುನಿಸಿಪಲ್ ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ (ಘನತ್ಯಾಜ್ಯ ನಿರ್ವಹಣೆ) ಅಡಿ ಬರುತ್ತದೆ. ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ಸ್ ಆಕ್ಟ್ನ ಸೆಕ್ಷನ್ ೨೬೧ರ ಅಡಿ ಮುನಿಸಿಪಲ್ ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್‌ನ ಸಾಂಸ್ಥಿಕ ಸ್ವರೂಪವನ್ನು ಹೀಗೆ ವಿವರಿಸಲಾಗಿದೆ-
ಮುಖ್ಯ ಆರೋಗ್ಯಾಧಿಕಾರಿ
ಪ್ರತಿ ವಲಯಕ್ಕೆ ಆರೋಗ್ಯಾಧಿಕಾರಿ
ಪ್ರತಿ ವಲಯಕ್ಕೆ ಇಬ್ಬರು ಉಪ-ಆರೋಗ್ಯಾಧಿಕಾರಿಗಳು
ಪ್ರತಿ ರೇಂಜಿಗೂ ಒಬ್ಬರು ಆರೋಗ್ಯ ವೈದ್ಯಾಧಿಕಾರಿ
ಒಬ್ಬರು ಹಿರಿಯ ಆರೋಗ್ಯ ವೀಕ್ಷಕರು (ಇನ್‌ಸ್ಪೆಕ್ಟರ್)
ಪ್ರತಿಯೊಂದು ಆಡಳಿತ ವಾರ್ಡಿಗೂ ಇಬ್ಬರು ಕಿರಿಯ ಆರೋಗ್ಯ ವೀಕ್ಷಕರು
ನೈರ್ಮಲ್ಯ ದಫೇದಾರ್
ಖಾಯಂ ಹಾಗೂ ಗುತ್ತಿಗೆ ಪೌರಕಾರ್ಮಿಕರು

ಕೆಲಸದ ಸ್ವರೂಪ:
ಜನಸಂಚಾರ ಆರಂಭವಾಗುವ ಮುನ್ನ ಬೆಳಗಿನ ಜಾವವೇ ಸ್ವಚ್ಛತೆಯ ಕೆಲಸವನ್ನು ಮಾಡಿಸುವುದು ರೂಢಿಯಲ್ಲಿದೆ. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವುದು ಸರ್ಕಾರದ ಜವಾಬ್ದಾರಿಯಾಗಿದ್ದು ಅದಕ್ಕಾಗಿ ಸಫಾಯಿ ಕರ್ಮಚಾರಿಗಳನ್ನು ನೇಮಿಸಿಕೊಳ್ಳಲಾಗುತ್ತಿತ್ತು. ಇದೊಂದು ಸರ್ಕಾರಿ ಕೆಲಸವಾಗಿದ್ದರೂ ಕೆಲವೇ ಜಾತಿಗಳಿಗೆ ಮೀಸಲಾಗಿದೆ. ಜನಸಂಚಾರ ಆರಂಭವಾಗುವ ಮುನ್ನವೇ ಸ್ವಚ್ಛ ಮಾಡಬೇಕಾಗಿರುವುದರಿಂದಾಗಿ ಸಫಾಯಿ ಕರ್ಮಚಾರಿಗಳು ಬೆಳಗ್ಗೆ ೬ರಿಂದ ೨.೩೦ರವರೆಗೂ ಕೆಲಸಮಾಡುತ್ತಾರೆ. ಕೆಲವು ಕಡೆ ಬೆಳಗ್ಗೆ ೬ ರಿಂದ ೧೦.೩೦ ಮತ್ತು ಮಧ್ಯಾಹ್ನ ೨.೩೦ರಿಂದ ೫.೩೦ರವರೆಗು ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಾರೆ.
ಮುಖ್ಯರಸ್ತೆಗಳು ಮತ್ತು ಅಡ್ಡರಸ್ತೆಗಳನ್ನು ಗುಡಿಸುವುದು, ಕುಪ್ಪೆ (ಕಸದ ಗುಡ್ಡೆ) ಎತ್ತುವುದು, ರಸ್ತೆ ಬದಿಯ ಚಿಕ್ಕ ಮೋರಿಗಳಲ್ಲಿ ಶೇಖರವಾಗುವ ಕಸವನ್ನು ತೆಗೆಯುವುದು, ಖಾಲಿ ಜಾಗಗಳಲ್ಲಿನ ಘನತ್ಯಾಜ್ಯಗಳನ್ನು ತೆಗೆಯುವುದು, ಕಳೆಸಸ್ಯಗಳನ್ನು ಕೀಳುವುದು, ದೊಡ್ಡ ಮೋರಿಗಳಲ್ಲಿ ಶೇಖರವಾಗುವ ಕಸವನ್ನು ತೆಗೆಯುವುದು, ಮನೆಗಳಿಂದ ಕಸವನ್ನು ಸಂಗ್ರಹಿಸುವುದು, ಕಸವನ್ನು ಲಾರಿಗಳಿಗೆ ಲೋಡ್ ಮಾಡುವುದು ಮತ್ತು ಅನ್‌ಲೋಡ್ ಮಾಡುವುದು, ಮನೆಗಳು ಮತ್ತು ಹೋಟೆಲುಗಳು, ಶಾಲಾ-ಕಾಲೇಜುಗಳು, ಆಸ್ಪತ್ರೆ ಇತ್ಯಾದಿ ಸಾರ್ವಜನಿಕ ಸಂಸ್ಥೆಗಳಿಂದ ಕಸವನ್ನು ಸಂಗ್ರಹಿಸುವುದು, ಕಟ್ಟಡ ನಿರ್ಮಾಣದ ತ್ಯಾಜ್ಯವೂ ಸೇರಿದಂತೆ ಇತರೆ ಘನತ್ಯಾಜ್ಯಗಳನ್ನು ಎತ್ತಿಹಾಕುವುದು, ಸತ್ತ ಪ್ರಾಣಿಗಳನ್ನು ಸಾಗಿಸುವುದು, ಜಾತ್ರೆ, ಹಬ್ಬ, ಸಾರ್ವಜನಿಕ ಸಮಾರಂಭಗಳು ನಡೆಯುವ ಸಂದರ್ಭದಲ್ಲಿ ಬೀಳುವ ಕಸದ ರಾಶಿಯನ್ನು ತೆಗೆಯುವುದು, ಕಸವನ್ನು ಡಂಪಿಂಗ್ ಯಾರ್ಡಿಗೆ ಒಯ್ಯುವುದು, ಕಸವನ್ನು ವಿಂಗಡಿಸುವುದು, ಇತ್ಯಾದಿ ಕೆಲಸಗಳನ್ನು ಸಫಾಯಿ ಕರ್ಮಚಾರಿಗಳು ಮಾಡುತ್ತಾರೆ.
ಕೆಲಸದ ಅವಧಿ, ಕೆಲಸದ ವಿವರ, ವೇತನ ಮತ್ತು ದಿನವೊಂದಕ್ಕೆ ಬೀಳುವ ಕಸದ ವಿವರ:
ಕ್ರ.
ಸಂ. ಜಿಲ್ಲೆಯ ಹೆಸರು
ಜನಸಂಖ್ಯೆ ಒಂದು ದಿನದಲ್ಲಿ ಬೀಳುವ ತ್ಯಾಜ್ಯ ಕೆಲಸದ
ಅವಧಿ ಕೆಲಸದ ವಿವರ ಖಾಯಂ
ನೌ ಖಾಸಗಿ
ನೌಕರರು ಗು.ಸಫಾಯಿ
ಕರ್ಮಚಾರಿಗಳ
ವೇತನ ಪ್ರತಿ ತಿಂಗಳಿಗೆ ಖಾಯಂ
ನೌಕರರ
ವೇತನ
೧ ಚಿತ್ರದುರ್ಗ ೧,೪೦,೨೦೬ ೪೫ ಟನ್
ಮುಂಜಾನೆ ೬ ಘಂಟೆಯಿಂದ ಮಧ್ಯಾಹ್ನ ೨.೩೦ ರವರೆಗೆ ರಸ್ತೆಗಳನ್ನು ಗುಡಿಸುವುದು, ಕಸ ತುಂಬುವುದು, ತೆರವು ಮಾಡುವುದು, ಚರಂಡಿಗಳ ಸ್ವಚ್ಛತೆ ೧೫೦ ೧೩,೬೫೦/-
ಅಂದಾಜು
ರೂ.೨೦,೦೦೦/-
೨ ಮಂಗಳೂರು ೪,೯೯,೪೮೭ ೨೨೦ ಟನ್
ಮುಂಜಾನೆ ೬ ಘಂಟೆಯಿಂದ ಮಧ್ಯಾಹ್ನ ೨.೩೦ ರವರೆಗೆ ರಸ್ತೆಗಳನ್ನು ಗುಡಿಸುವುದು, ಕಸ ತುಂಬುವುದು, ತೆರವು ಮಾಡುವುದು, ಚರಂಡಿಗಳ ಸ್ವಚ್ಛತೆ ೬೦೦ ೧೪,೦೪೦/- ಅಂದಾಜು
ರೂ.೨೦,೦೦೦/-
೩ ಬಳ್ಳಾರಿ ೪.೧೦,೪೦೦ ೧೬೦ ಟನ್
ಮುಂಜಾನೆ ೬ ಘಂಟೆಯಿಂದ ಮಧ್ಯಾಹ್ನ ೨.೩೦ ರವರೆಗೆ ರಸ್ತೆಗಳನ್ನು ಗುಡಿಸುವುದು, ಕಸ ತುಂಬುವುದು, ತೆರವು ಮಾಡುವುದು, ಚರಂಡಿಗಳ ಸ್ವಚ್ಛತೆ ೬೫೦ ೧೪,೦೪೦/- ಅಂದಾಜು
ರೂ.೨೦,೦೦೦/-
೪ ಕೋಲಾರ ೧,೮೩,೪೬೨ ೮೦ ಟನ್
ಮುಂಜಾನೆ ೬ ಘಂಟೆಯಿಂದ ಮಧ್ಯಾಹ್ನ ೨.೩೦ ರವರೆಗೆ ರಸ್ತೆಗಳನ್ನು ಗುಡಿಸುವುದು, ಕಸ ತುಂಬುವುದು, ತೆರವು ಮಾಡುವುದು, ಚರಂಡಿಗಳ ಸ್ವಚ್ಛತೆ ೧೫೦ ೧೩,೬೫೦/- ಅಂದಾಜು
ರೂ.೨೦,೦೦೦/-
೫ ಕೆ.ಜಿ.ಎಫ್. ೧,೬೩,೬೪೩ ೫೨ ಟನ್
ಮುಂಜಾನೆ ೬ ಘಂಟೆಯಿಂದ ಮಧ್ಯಾಹ್ನ ೨.೩೦ ರವರೆಗೆ ರಸ್ತೆಗಳನ್ನು ಗುಡಿಸುವುದು, ಕಸ ತುಂಬುವುದು, ತೆರವು ಮಾಡುವುದು, ಚರಂಡಿಗಳ ಸ್ವಚ್ಛತೆ ೧೬೮ ೧೩,೬೫೦/- ಅಂದಾಜು
ರೂ.೨೦,೦೦೦/-
೬ ಗುಲ್ಬರ್ಗಾ ೫,೪೩,೦೦೦ ೧೩೨ ಟನ್
ಮುಂಜಾನೆ ೬ ಘಂಟೆಯಿಂದ ಮಧ್ಯಾಹ್ನ ೨.೩೦ ರವರೆಗೆ ರಸ್ತೆಗಳನ್ನು ಗುಡಿಸುವುದು, ಕಸ ತುಂಬುವುದು, ತೆರವು ಮಾಡುವುದು, ಚರಂಡಿಗಳ ಸ್ವಚ್ಛತೆ ೯೮೦ ೧೪,೦೪೦/- ಅಂದಾಜು
ರೂ.೨೦,೦೦೦/-
೭ ಮೈಸೂರು ೮,೮೭,೪೪೬ ೪೦೨ ಟನ್
ಮುಂಜಾನೆ ೬ ಘಂಟೆಯಿಂದ ಮಧ್ಯಾಹ್ನ ೨.೩೦ ರವರೆಗೆ ರಸ್ತೆಗಳನ್ನು ಗುಡಿಸುವುದು, ಕಸ ತುಂಬುವುದು, ತೆರವು ಮಾಡುವುದು, ಚರಂಡಿಗಳ ಸ್ವಚ್ಛತೆ ೬೫೦ ೧೪,೦೪೦/- ಅಂದಾಜು
ರೂ.೨೦,೦೦೦/-
೮ ಬೆಂಗಳೂರು ೯೮.೭೫ ಲಕ್ಷ
(೨೦೧೬) ೩೦೦೦ ಟನ್
ಮುಂಜಾನೆ ೬ ಘಂಟೆಯಿಂದ ಮಧ್ಯಾಹ್ನ ೨.೩೦ ರವರೆಗೆ ರಸ್ತೆಗಳನ್ನು ಗುಡಿಸುವುದು, ಕಸ ತುಂಬುವುದು, ತೆರವು ಮಾಡುವುದು, ಚರಂಡಿಗಳ ಸ್ವಚ್ಛತೆ ೨೫೧೪ ೧೭,೦೦೦+ ೧೪,೦೪೦/- ಅಂದಾಜು
ರೂ.೨೨,೦೦೦/-

ಕಾನೂನಿನ ಚೌಕಟ್ಟು
ಘನತ್ಯಾಜ್ಯ ನಿರ್ವಹಣೆಯ ಅಡಿಯಲ್ಲಿ ಬರುವ ಸ್ವಚ್ಛತೆಯ ಕೆಲಸವನ್ನು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿಗಳು ನಿರ್ವಹಿಸುತ್ತವೆ. ಸ್ವಚ್ಛತೆಯ ಕೆಲಸ ಮಾಡುವ ಸಫಾಯಿ ಕರ್ಮಚಾರಿಗಳಿಗೂ ಕಾಯ್ದೆಯನ್ನು ರಚಿಸಿ ಅನುಷ್ಠಾನಗೊಳಿಸಲಾಗಿದೆ.
ಘನತ್ಯಾಜ್ಯಕ್ಕೆ ಸಂಬಂಧಪಟ್ಟ ಕಾನೂನುಗಳು
• ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಆಕ್ಟ್, ೧೯೭೬.
• ಕರ್ನಾಟಕ ಮುನಿಸಿಪಾಲಿಟೀಸ್ ಆಕ್ಟ್, ೧೯೭೬.
• ಮುನಿಸಿಪಲ್ ಸಾಲಿಡ್ ವೇಸ್ಟ್÷್ಸ (ಮ್ಯಾನೇಜ್‌ಮೆಂಟ್ ಅಂಡ್ ಹ್ಯಾಂಡ್ಲಿಂಗ್) ರೂಲ್ಸ್
ಘನತ್ಯಾಜ್ಯ ನಿರ್ವಹಣೆಗಾಗಿ ನೇಮಕ ಮಾಡಿಕೊಂಡವರ ಕೆಲಸದ ಪರಿಸ್ಥಿತಿ ಕುರಿತ ಕಾನೂನುಗಳು
• ಕಾಂಟ್ರಾö್ಯಕ್ಟ್ ಲೇಬರ್ ಆ್ಯಕ್ಟ್, ೧೯೭೦,
• ಎಂಪ್ಲಾಯೀಸ್ ಸ್ಟೇಟ್ ಇನ್‌ಷುರೆನ್ಸ್ ಆ್ಯಕ್ಟ್, ೧೯೪೮.
• ರ‍್ಕ್ಮನ್ಸ್ ಕಾಂಪೆನ್‌ಸೇಷನ್ ಆ್ಯಕ್ಟ್, ೧೯೨೩.
• ಪ್ರಾವಿಡೆಂಟ್ ಫಂಡ್ ಆ್ಯಕ್ಟ್, ೧೯೫೨.

ಪಾಲಿಕೆಗಳ ಜವಾಬ್ದಾರಿ
ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಆಕ್ಟ್ನ ಸೆಕ್ಷನ್ ೫೮ರ ಪ್ರಕಾರ ಪಾಲಿಕೆಗಳು ನಿರ್ವಹಿಸಬೇಕಾದ ಜವಾಬ್ದಾರಿಗಳೆಂದರೆ,
• ಎಲ್ಲಾ ಸಾರ್ವಜನಿಕ ರಸ್ತೆಗಳ ಸ್ವಚ್ಛತೆ
• ಗುಡಿಸಿದ ಎಲ್ಲಾ ಕಸವನ್ನು ತೆಗೆಸುವುದು
• ತ್ಯಾಜ್ಯವನ್ನು ಸಂಗ್ರಹಿಸುವುದು, ತೆಗೆಯುವುದು, ಸಂಸ್ಕರಿಸುವುದು ಮತ್ತು ವಿಲೇವಾರಿ ಮಾಡುವುದು
• ಒಳಚರಂಡಿ ಮತ್ತು ಚರಂಡಿಗಳನ್ನು ಕಟ್ಟುವುದು, ನಿರ್ವಹಣೆ ಮಾಡುವುದು ಮತ್ತು ಸ್ವಚ್ಛಗೊಳಿಸುವುದು

ಮುನಿಸಿಪಲ್ ಸಾಲಿಡ್ ವೇಸ್ಟ್ ನಿಯಮಗಳ ಪ್ರಕಾರ ಪಾಲಿಕೆಗಳು ನಿರ್ವಹಿಸಬೇಕಾದ ಕರ್ತವ್ಯಗಳು
• ರಸ್ತೆಗಳಲ್ಲಿ ಸಾರ್ವಜನಿಕ ಕಸದಬುಟ್ಟಿಗಳನ್ನು ಒದಗಿಸುವುದು
• ಸಾರ್ವಜನಿಕ ಸ್ಥಳದಲ್ಲಿ ಅಪಾರವಾಗಿ ಶೇಖರವಾಗುವ ಕಸ, ಹೊಲಸಿನ ಸಂಗ್ರಹಣೆ
• ರಸ್ತೆಗಳನ್ನು ನಿತ್ಯವೂ ಗುಡಿಸಿ ಸಂಗ್ರಹವಾಗುವ ಕಸ, ಹೊಲಸನ್ನು ಸ್ವಚ್ಛಮಾಡಿಸುವುದು
• ಘನತ್ಯಾಜ್ಯ ನಿರ್ವಹಣೆಯ ಭಾಗವಾಗಿ ಸಂಗ್ರಹಣೆ, ಶೇಖರಣೆ, ವಿಂಗಡಣೆ, ಸಾಗಣೆ, ಸಂಸ್ಕರಣೆ ಮತ್ತು ವಿಲೇವಾರಿಗಾಗಿ(ಡಿಸ್‌ಪೋಸಲ್) ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು

ಮುನಿಸಿಪಲ್ ಸಾಲಿಡ್ ವೇಸ್ಟ್÷್ಸ (ನಿರ್ವಹಣೆ ಮತ್ತು ಹ್ಯಾಂಡ್ಲಿಂಗ್) ನಿಯಮಗಳು, ೨೦೦೦ ಅನ್ವಯ
• ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಸ್ಟೇಟ್ ಪೊಲ್ಯೂಷನ್ ಕಂಟ್ರೋಲ್ ಬೋರ್ಡ್)ಯವರು ಅಂತರ್ಜಲ, ಪರಿಸರದ ವಾಯುವಿನ ಗುಣಮಟ್ಟ ಮತ್ತು ಗೊಬ್ಬರದ ಗುಣಮಟ್ಟಕ್ಕೆ ಸಂಬಂಧಪಟ್ಟಂತೆ ಅನುಸರಿಸಬೇಕಾದ ಪ್ರಮಾಣಗಳ ನಿಗಾವಹಿಸಬೇಕು.
• ಅಪಘಾತಗಳನ್ನು ವರದಿ ಮಾಡುವುದು. ಮೆಟ್ರೋಪಾಲಿಟನ್ ನಗರಗಳಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಉಳಿದ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಅಥವಾ ಉಪ-ಆಯುಕ್ತರಿಗೆ ವರದಿ ಮಾಡಬೇಕು.
ಗುತ್ತಿಗೆದಾರರು ನಿರ್ವಹಿಸಬೇಕಾದ ಕರ್ತವ್ಯಗಳು
ಪ್ರಸ್ತುತ ಅಧ್ಯಯನವು ಗುತ್ತಿಗೆ ಸಫಾಯಿ ಕರ್ಮಚಾರಿಗಳನ್ನು ಕೇಂದ್ರವಾಗಿರಿಸಿಕೊಂಡಿದೆ. ಗುತ್ತಿಗೆ ಸಫಾಯಿ ಕರ್ಮಚಾರಿಗಳಿಗೆ ಸಂಬಂಧಿಸಿದ ಬಹುಪಾಲು ವಿಷಯಗಳು ಗುತ್ತಿಗೆ ಪದ್ಧತಿ ನಿಯಂತ್ರಣ ಮತ್ತು ರದ್ದತಿ ಕಾಯ್ದೆಯಡಿ ಬರುತ್ತವೆ.
ಗುತ್ತಿಗೆ ಪದ್ಧತಿ ನಿಯಂತ್ರಣ ಮತ್ತು ರದ್ದತಿ ಕಾಯ್ದೆಯ ನಿಯಮ ೨೫ (೨) (೫) (ಎ) ಮತ್ತು ಪರವಾನಗಿ ನೀಡಲು ಇರುವ ಪರವಾನಗಿ ನಿಯಮ ೫ ರ ಪ್ರಕಾರ
• ಒಂದೇ ತರಹದ ಕೆಲಸವಾಗಿದ್ದಲ್ಲಿ ಮುಖ್ಯ ಮಾಲೀಕರು ನೇರವಾಗಿ ನೇಮಕ ಮಾಡಿಕೊಳ್ಳುವ ನೌಕರರಿಗೆ ಲಭ್ಯವಿರುವ ವೇತನ, ರಜೆಗಳು, ಕೆಲಸದ ಅವಧಿ ಮತ್ತು ಇತರೆ ಸೇವಾ ನಿಯಮಗಳನ್ನೇ ಗುತ್ತಿಗೆ ಕಾರ್ಮಿಕರಿಗೂ ನೀಡತಕ್ಕದ್ದು.
ಈ ಕೆಳಗಿನ ಸೌಕರ್ಯಗಳನ್ನು ಕಲ್ಪಿಸತಕ್ಕದ್ದು
• ಕ್ಯಾಂಟೀನ್ ಮತ್ತು ಭೋಜನಾಲಯ
• ವಿಶ್ರಾಂತಿ ಕೊಠಡಿ
• ಕುಡಿಯುವ ನೀರಿನ ಸೌಲಭ್ಯ
• ಶೌಚಾಲಯ ಮತ್ತು ಮೂತ್ರಾಲಯ
• ವಾಶಿಂಗ್ ಸೌಲಭ್ಯಗಳು
• ಪ್ರಥಮ ಚಿಕಿತ್ಸೆ
• ಶಿಶುವಿಹಾರಗಳು

ಪಾಲಿಕೆ ಮತ್ತು ಗುತ್ತಿಗೆದಾರರು ಪಾಲಿಸಬೇಕಾದ ಕಾನೂನಾತ್ಮಕ ಜವಾಬ್ದಾರಿಗಳು
ಪಾಲಿಕೆಯ ಜವಾಬ್ದಾರಿ-
• ವೇತನ ವಿತರಣೆಯ ಸಂದರ್ಭದಲ್ಲಿ ಸೂಕ್ತ ವೇತನ ನೀಡಲಾಗುತ್ತಿದೆಯೇ ಎಂದು ಪರಿಶೀಲಿಸಲು ಪ್ರತಿನಿಧಿಯೊಬ್ಬರನ್ನು ನೇಮಕ ಮಾಡಬೇಕು
• ಗುತ್ತಿಗೆದಾರರು ವೇತನ ಪಾವತಿಸದಿದ್ದ ಪಕ್ಷದಲ್ಲಿ ಪಾಲಿಕೆಯು ಪಾವತಿಸಿ ಆ ಮೊತ್ತವನ್ನು ಗುತ್ತಿಗೆದಾರರಿಂದ ಹಿಂಪಡೆದುಕೊಳ್ಳಬೇಕು
• ಮೇಲೆ ತಿಳಿಸಿರುವುದನ್ನು ಗುತ್ತಿಗೆದಾರರು ಒದಗಿಸದಿದ್ದ ಪಕ್ಷದಲ್ಲಿ ಪಾಲಿಕೆಯು ಒದಗಿಸತಕ್ಕದ್ದು
ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆಕ್ಟ್ ೧೯೫೨ ಮತ್ತು ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಸ್ಕೀಮ್ ೧೯೫೨
ಪ್ರತಿಯೊಬ್ಬ ಗುತ್ತಿಗೆದಾರರು-
• ಪ್ರತಿಯೊಬ್ಬ ಕಾರ್ಮಿಕರಿಗೂ ಪಾಸ್‌ಬುಕ್ ನೀಡಬೇಕು ಮತ್ತು ಅದನ್ನು ನಿರ್ವಹಿಸಬೇಕು
• ಪ್ರತಿ ಸದಸ್ಯರ ದೇಣಿಗೆ ಕಾರ್ಡ್ ಅನ್ನು ತನ್ನ ಸುಪರ್ದಿನಲ್ಲಿಟ್ಟುಕೊಳ್ಳಬೇಕು
• ತಾನು ನೇಮಕ ಮಾಡಿಕೊಂಡಿರುವ ನೌಕರರಿಂದ ಪಡೆದುಕೊಂಡಿರುವ ದೇಣಿಗೆಯ ವಿವರಗಳಿರುವ ಪಟ್ಟಿಯನ್ನು ಪ್ರತಿ ತಿಂಗಳು ಪಾಲಿಕೆಗೆ ಸಲ್ಲಿಸತಕ್ಕದ್ದು

ಎಂಪ್ಲಾಯೀಸ್ ಸ್ಟೇಟ್ ಇನ್‌ಷುರೆನ್ಸ್ ಆಕ್ಟ್ (ಜನರಲ್) ರೆಗ್ಯುಲೇಷನ್ಸ್, ೧೯೪೮ ಅಡಿ
ಗುತ್ತಿಗೆದಾರರ ಕರ್ತವ್ಯಗಳು-
• ಮೂರು ತಿಂಗಳೊಳಗೆ ಎಲ್ಲ ಕಾರ್ಮಿಕರಿಗೂ ಗುರುತಿನ ಚೀಟಿಯನ್ನು ವಿತರಿಸತಕ್ಕದ್ದು
• ನೌಕರರ ಕುರಿತು ಈ ಕೆಳಗಿನ ವಿವರಗಳು ಇರುವ
• ರಿಜಿಸ್ಟರ್ ಅನ್ನು ಇಡಬೇಕು-
೧. ವಿಮೆ ಮಾಡಿರುವ ವ್ಯಕ್ತಿಯ ಹೆಸರು
೨. ವಿಮೆ ನಂಬರ್
೩. ಸಂಪರ್ಕ ಕಲ್ಪಿಸಿರುವ ಆಸ್ಪತ್ರೆಯ ಹೆಸರು
೪. ವೃತ್ತಿ
೫. ನೌಕರರ ದೇಣಿಗೆಯ ಪಾಲು
ಪಾಲಿಕೆಯ ಕರ್ತವ್ಯಗಳು-
• ಎಲ್ಲ ನೌಕರರಿಗೂ ಗುರುತಿನ ಚೀಟಿಯನ್ನು ವಿತರಿಸಲಾಗಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳತಕ್ಕದ್ದು
• ರಿಜಿಸ್ಟರ್‌ಗಳ ತಪಾಸಣೆ/ಪರಿಶೀಲನೆ
ಸುರಕ್ಷಾ ನಿಯಮಗಳು:
• ಘನತ್ಯಾಜ್ಯ ವಿಲೇವಾರಿ ಕೆಲಸದಲ್ಲಿ ತೊಡಗಿರುವ ಕಾರ್ಮಿಕರ ಆರೋಗ್ಯಕ್ಕೆ ಅಪಾಯಗಳಿವೆ ಮತ್ತು ಅವರು ಉಸಿರಾಟ ಸಂಬಂಧಿ ಸೋಂಕುಗಳು ಹಾಗೂ ಕರುಳಿನ ಸೋಂಕುಗಳಿಗೆ ಪದೇ ಪದೇ ಒಳಗಾಗುತ್ತಾರೆ. ಕರುಳಿನ ತೊಂದರೆಗಳು, ಭೇದಿ, ಸೋಂಕು, ಚರ್ಮದ ಕಾಯಿಲೆಗಳು, ಜಾಂಡೀಸ್, ಟ್ರಾಕೋಮದಂತಹ ಕಾಯಿಲೆಗಳಿಗೆ ಮತ್ತು ಅಲರ್ಜಿಗೆ ಒಳಗಾಗುವ ಅಪಾಯವಿರುವುದರ ಜೊತೆಗೆ ಕೆಲಸ ಮಾಡುವಾಗ ಸೂಜಿ, ತಗಡು, ಮರದ ತುಂಡುಗಳಂತಹ ಚೂಪಾದ ವಸ್ತುಗಳಿಂದ ಹಾನಿಗೊಳಗಾಗುವ ಅಪಾಯವನ್ನೂ ಎದುರಿಸುತ್ತಾರೆ.
• ಸುರಕ್ಷಾ ಎಚ್ಚರಿಕೆಗಳ (ಒಪ್ಪಂದದ ಶೆಡ್ಯೂಲ್ ೫) ಪ್ರಕಾರ ಮಾಲೀಕರು (ಗುತ್ತಿಗೆದಾರರು ಅಥವಾ ಪಾಲಿಕೆ)
೧. ಪ್ರತಿಯೊಬ್ಬ ಪೌರಕಾರ್ಮಿಕರಿಗೂ ಸಮವಸ್ತ್ರ, ಕೈಗವುಸು, ಏಪ್ರನ್, ಸುರಕ್ಷಿತ ಪಾದರಕ್ಷೆ, ಮುಖಕ್ಕೆ ಹಾಕಿಕೊಳ್ಳುವ ಮಾಸ್ಕ್ ಮತ್ತು ಬ್ಯಾಡ್ಜ್ಗಳಂತಹ ಸುರಕ್ಷಾ ಸಲಕರಣೆಗಳನ್ನು ನೀಡಬೇಕು
೨. ಪೌರಕಾರ್ಮಿಕರಿಗೆ ನಿಯಮಿತ ಆರೋಗ್ಯ ತಪಾಸಣೆ ನಡೆಸಬೇಕು (souಡಿಛಿe: ಒಚಿiಣಡಿeಥಿi ಏಡಿishಟಿಚಿಟಿ ಚಿಟಿಜ ಅಟiಜಿಣoಟಿ ಆ’ ಖmzಚಿಡಿio: soಟiಜ ತಿಚಿsಣe mಚಿಟಿಚಿgemeಟಿಣ ಚಿಟಿಜ ಠಿoತಿಡಿಚಿಞಚಿಡಿmiಞಚಿs:೨೦೦೮)

ಘನತೆಗಾಗಿ, ಉತ್ತಮ ಕೆಲಸದ ಪರಿಸ್ಥಿತಿಗಾಗಿ, ಬದುಕುವ ವೇತನಕ್ಕಾಗಿ, ಸುರಕ್ಷಾ ಸಲಕರಣೆಗಳಿಗಾಗಿ ಹೋರಾಟ ಮುಂದುವರೆಯುತ್ತಲೇ ಇದೆ. ಜಾತಿ ಆಧಾರಿತ ಶ್ರೇಣೀಕರಣ ಹೊಂದಿರುವ ನಮ್ಮ ದೇಶದಲ್ಲಿ ಜಾತಿಗೂ ಮತ್ತು ಸ್ವಚ್ಛತೆಯ ಕೆಲಸಕ್ಕೂ ಇರುವ ನಿಕಟ ಸಂಬಂಧವನ್ನು ಮುರಿಯದೇ ಪರಿಹಾರ ಕಾಣಲು ಸಾಧ್ಯವಿಲ್ಲ. ಅಂತಿಮವಾಗಿ ಸಫಾಯಿ ಕರ್ಮಚಾರಿಗಳ ಹೋರಾಟ ಜಾತಿ ವಿನಾಶ ಹೋರಾಟವೇ ಆಗಿದೆ.

ಬಡಾವಣೆಯ ನಿವಾಸಿಗಳಿಗೆ ಅರಿವು ಮೂಡಿಸುವ ಸಂವಾದ

ನಿತ್ಯವೂ ತಾವು ಸ್ವಚ್ಛ ಮಾಡುವ ಬಡಾವಣೆಗಳ ನಿವಾಸಿಗಳಿಗೆ ತಮ್ಮ ಕೆಲಸದ ಪರಿಸ್ಥಿತಿಯನ್ನು ಮನವರಿಕೆ ಮಾಡುವ ಸಲುವಾಗಿ ಕೆಲವೆಡೆ ನಿವಾಸಿಗಳೊಂದಿಗೆ ಸಭೆಗಳನ್ನು ನಡೆಸುವ ಪ್ರಯತ್ನವನ್ನು ಮಾಡಲಾಗಿತ್ತು. ಅಂತಹ ಒಂದು ಸಭೆಯ ವರದಿಗೆ ಸ್ವಲ್ಪ ನಾಟಕೀಯ ಸ್ವರೂಪ ಕೊಟ್ಟು ಇಲ್ಲಿ ನೀಡಲಾಗಿದೆ.
ಮತ್ತಿಕೆರೆ ವಾರ್ಡಿನಲ್ಲಿ ಕೆಲಸ ಮಾಡುವ ಪೌರಕಾರ್ಮಿಕರೆಲ್ಲ ಕೆಲಸ ಮಾಡಿ ಮುಗಿಸಿ ಪಾರ್ಕಿನಲ್ಲಿ ಸೇರಿದ್ದರು. ಎಲ್ಲರಲ್ಲೂ ಏನೋ ಸಡಗರ, ಆತಂಕ. ಅವರೆಲ್ಲರೂ ಗುತ್ತಿಗೆ ಪೌರಕಾರ್ಮಿಕರ ಸಂಘದ ಸದಸ್ಯರಾಗಿದ್ದರು. ಸಂಘಕ್ಕೆ ಸೇರಿದಾಗಿನಿಂದಲೂ ಹೋರಾಟ ನಡೆಸಿದ್ದಕ್ಕೆ ಕನಿಷ್ಠ ವೇತನ ಪಡೆದುಕೊಂಡಿದ್ದರು. ಇನ್ನು ಹತ್ತು ಹಲವಾರು ಹಕ್ಕುಗಳಿಗಾಗಿ ಹೋರಾಡಿಕೊಂಡೇ ಬಂದಿದ್ದರು. ಸಂಘವೆಂದರೆ ಹೋರಾಟ ಎನ್ನುವಂತಾಗಿದ್ದರೂ ಸಂಘಕ್ಕೆ ಸೇರಿದ ಮೇಲೆ ನಾವೂ ಎಲ್ಲರಂತೆ ಮನುಷ್ಯರು, ನಮ್ಮನ್ನು ಮನುಷ್ಯರಂತೆ ಘನತೆಯಿಂದ ನಡೆಸಿಕೊಳ್ಳಬೇಕು, ಗೌರವದಿಂದ ನಡೆಸಿಕೊಳ್ಳಬೇಕು ಎಂದವರಿಗೆ ಬಲವಾಗಿ ಅನ್ನಿಸಿತ್ತು. ಹಾಗಾಗಿ ಸಂಘವೆಂದರೆ ಅವರಿಗೆ ಹೆಮ್ಮೆ, ಸಂಘದ ಕೆಲಸವೆಂದರೆ ಕರ್ತವ್ಯವೆಂದು ಭಾವಿಸಿದ್ದರು. ಅವರ ಸಂಘವನ್ನು ಬೆಂಬಲಿಸಲು ಮಾಧ್ಯಮದವರು, ಬೇರೆ ಹೋರಾಟಗಳಲ್ಲಿ ತೊಡಗಿಕೊಂಡಿರುವವರು, ಕಲಾವಿದರು, ಹಾಡುಗಾರರು, ಸಾಹಿತಿಗಳು ಇತರರು ಇದ್ದ ಬೆಂಬಲ ಗುಂಪೊಂದು ಇತ್ತು.
ಕಳೆದ ಸಲದ ಸಂಘದ ಸಭೆಯಲ್ಲಿ ನಾಗರಿಕರಿಗೆ ನಮ್ಮ ವಿಷಯ ಕುರಿತು ಮನವರಿಕೆ ಮಾಡಿಕೊಡಲು ವಾರ್ಡ್ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಲಾಗಿತ್ತು. ಭಾನುವಾರದಂದು ಕಾರ್ಮಿಕರಿಗೆ ಅರ್ಧ ದಿವಸ ಕೆಲಸ. ಅಲ್ಲದೆ ಬಡಾವಣೆಯ ಜನರು ರಜೆಯೆಂದು ಮನೆಯಲ್ಲಿ ಇರುವುದರಿಂದ ಹತ್ತಿರದ ಪಾರ್ಕಿನಲ್ಲಿ ಕಾರ್ಯಕ್ರಮ ಮಾಡುವುದೆಂದು ತೀರ್ಮಾನಿಸಲಾಗಿತ್ತು. ಸಂಘದ ಪದಾಧಿಕಾರಿಯಾಗಿದ್ದ ವೆಂಕಟಮ್ಮ ಮತ್ತಿಕೆರೆಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಆಕೆ ಒಳ್ಳೆ ಹೆಸರು ಗಳಿಸಿದ್ದಳು. ಅಲ್ಲಿನ ಪಾರ್ಕಿನಲ್ಲಿ ಕಾರ್ಯಕ್ರಮ ಮಾಡುವ ಉಸ್ತುವಾರಿಯನ್ನು ವೆಂಕಟಮ್ಮ ತೆಗೆದುಕೊಂಡಿದ್ದಳು. ನಾಗರಿಕರೊಂದಿಗಿನ ಸಂವಾದ ಸಭೆಯ ಉದ್ದೇಶ ಕುರಿತು ಒಂದು ಕರಪತ್ರ ಪ್ರಿಂಟ್ ಹಾಕಿಸಿ ಅದನ್ನು ಕಾರ್ಮಿಕರು ಬಡಾವಣೆಯ ನಾಗರಿಕರಿಗೆ ಹಂಚಿದ್ದರು. ಸಂಘದ ಮುಖಂಡರುಗಳು ಮನೆಮನೆಗೆ ಹೋಗಿ ಹೇಳಿದ್ದರು. ಅಲ್ಲದೆ ಅದೇ ಬಡಾವಣೆಯಲ್ಲಿ ವಾಸವಾಗಿದ್ದ, ಕಾರ್ಮಿಕರ ಹೋರಾಟವನ್ನು ಬೆಂಬಲಿಸುತ್ತಿದ್ದ ಸ್ವಾತಂತ್ರö್ಯ ಹೋರಾಟಗಾರರು ಮತ್ತು ಗಾಂಧಿವಾದಿಗಳು ಆಗಿದ್ದ ಸ್ವಾಮಿಯವರು ಪ್ರಚಾರದ ಭಾಗವಾಗಿ ನಡೆಸಿದ್ದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರಿಂದ ನಾಗರಿಕರು ಸಹ ಕುತೂಹಲಗೊಂಡಿದ್ದರು.
ಅಂದು ೧೧.೩೦ರ ಹೊತ್ತಿಗೆ ಸಭೆ ಆರಂಭವಾಗಲಿತ್ತು. ಎಲ್ಲರೂ ೧೧ಕ್ಕೆ ಸೇರಿದ್ದರು. ಜನ ಬರುವರೊ ಇಲ್ಲವೋ ಎಂದುಕೊಳ್ಳುತ್ತಿರುವಾಗಲೇ ಬಡಾವಣೆಯ ಜನರು ಒಬ್ಬೊಬ್ಬೊರೆ ಪಾರ್ಕಿಗೆ ಬರತೊಡಗಿದರು. ಮುಂಚಿತವಾಗಿಯೇ ಬಂದಿದ್ದ ಸ್ವಾಮಿಯವರೇ ಎಲ್ಲರೂ ಬಂದು ಕುಳಿತುಕೊಂಡ ಮೇಲೆ ಮಾತು ಆರಂಭಿಸಿದರು. ‘ಸ್ವಚ್ಛತೆಗೆ ಆದ್ಯತೆ ನೀಡಿದಾಗಲೇ ಎಲ್ಲರೂ ಆರೋಗ್ಯವಾಗಿರಲು ಸಾಧ್ಯ. ಗಾಂಧೀಜಿಯವರು ಸ್ವಚ್ಛತೆಗಷ್ಟೇ ಅಲ್ಲದೆ ಸ್ವಚ್ಛತೆಯ ಕೆಲಸ ಮಾಡುವವರಿಗೆ ಆದ್ಯತೆ ನೀಡುತ್ತಿದ್ದರು. ಇಂದು ಈ ಸಭೆಯನ್ನು ಕಾರ್ಮಿಕ ಸಂಘದವರು ಕರೆದಿರುವುದು ವಿಶೇಷ. ನಾಗರಿಕರು ಮತ್ತು ಕಾರ್ಮಿಕರು ಪರಸ್ಪರ ಸಂವಾದ ಮಾಡಿಕೊಳ್ಳುವುದು ಎಲ್ಲರ ದೃಷ್ಟಿಯಿಂದ ಉತ್ತಮವಾದ, ಆರೋಗ್ಯಪೂರ್ಣವಾದ ಪರಿಸರವನ್ನು ನಿರ್ಮಿಸಲು ಸಾಧ್ಯ. ನೀವೆಲ್ಲರೂ ಬಂದಿರುವುದು ನಿಮ್ಮ ಆಸಕ್ತಿಯನ್ನು ತೋರಿಸುತ್ತದೆ. ಸಭೆ ಮುಂದುವರೆಯಲಿ; ಉತ್ತಮವಾದ ಫಲ ದೊರೆಯಲಿ’ ಎಂದು ಹೇಳಿದರು.
ಸಂಘದ ಕಾರ್ಯದರ್ಶಿಯಾಗಿದ್ದ ಜಯಮ್ಮ ನಾಗರಿಕರನ್ನು ಉದ್ದೇಶಿಸಿ ಸಭೆಯ ಉದ್ದೇಶವನ್ನು ಹೇಳಿದರು. ‘ನಾವ್ ಸಂಗ್ದವ್ರು ಈ ಸಭೆ ರ‍್ದಿದಿವಿ. ನಾವು ಕಾರ್ಪೇಸನಲ್ಲಿ ಗುಡ್ಸೊ ಕೆಲ್ಸ ಮಾಡ್ತಿವಿ. ನಿಮ್ ರೋಡು, ಮೋರಿ, ಏರಿಯಾ ಕ್ಲೀನ್ ಮಾಡ್ತಿವಿ. ನಮ್ನ ಪೋರಕರ‍್ಮಿಕ್ರು ಅಂತ ಕರಿತರೆ. ಹಿಂದೆ ಬಸ್ಲಿಂಗಪ್ಪ ಅಂತ ನಮ್ಮೋರು ಮಿನಿಟ್ರಾಗಿದ್ದಾಗ ತೋಟಿ, ಜಾಡ್ಮಾಲಿ ಅಂತ ಕರಿಬರ‍್ದು ಅಂತ ಈ ಎಸ್ರಿಕ್ಕಿರು. ನಾವ್ ಒಬ್ರಿಗೊಬ್ರು ರ‍್ಚಯ್‌ವೇ ಮಾಡ್ಕಂಡಿಲ್ಲ. ರ‍್ಚಯ ಮಾಡ್ಕಳಕೆ ಇಲ್ಲಿ ಸರ‍್ಕಂಡಿದಿವಿ. ಮದ್ಲಿಗೆ ಕಸ್ದ್ ಬಗ್ಗೆ ಏನ್ ತೊಂದರೆ ಅದೆ ಏಳಿ. ನಾವ್ ಮಾಡ ಕೆಲ್ಸದ್ ಬಗ್ಗೆ ನಿಮ್ಗೆ ಏಳ್ತಿವಿ’ ಎಂದು ಕೇಳಿಕೊಂಡಳು.
ಅಷ್ಟರಲ್ಲಿ ಶಾರದಮ್ಮ ಮತ್ತು ಪೆಂಚಾಲಮ್ಮ ಎಲ್ಲರಿಗೂ ಟೀ ನೀಡಿದರು. ನಾಗರಿಕರು ಸ್ವಲ್ಪ ಗಲಿಬಿಲಿಗೊಂಡಿದ್ದರು. ಬೀದಿ ಗುಡಿಸಿ, ಮನೆ ಮನೆಯಿಂದ ಕಸತೆಗೆದುಕೊಂಡು ಹೋಗುತ್ತಿದ್ದ, ಆಗೀಗ ಏನಾದರೂ ಉಳಿದಿದ್ದ ಊಟ-ತಿಂಡಿಯನ್ನು ಒಯ್ಯುತ್ತಿದ್ದ, ಹಳೆ ಬಟ್ಟೆ ಬರೆಯನ್ನು ಒಮ್ಮೊಮ್ಮೆ ತೆಗೆದುಕೊಂಡು ಹೋಗುತ್ತಿದ್ದ, ಮೋರಿ ಕಟ್ಟಿಕೊಂಡಾಗ ಸ್ವಚ್ಛಮಾಡಿಕೊಡುತ್ತಿದ್ದ ಕಾರ್ಮಿಕರು ಇಂದು ಸಭೆ ಕರೆದಿದ್ದಾರೆ. ಅಲ್ಲದೆ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲೋ ತಮ್ಮ ಗೋಳುಗಳನ್ನು ಹೇಳಿಕೊಂಡು ಏನೋ ಸಹಾಯ ಮಾಡಿ ಎಂದು ಕೇಳಬಹುದೇನೋ ಎಂದುಕೊಂಡರೆ ನಿಮಗೆ ಅನುಮಾನಗಳಿದ್ದರೆ ಬಗೆಹರಿಸಿಕೊಳ್ಳಿ ಎಂದು ಕೇಳುತ್ತಿದ್ದಾರೆ. ಎಲ್ಲವನ್ನೂ ಜೀರ್ಣಿಸಿಕೊಳ್ಳುವುದಕ್ಕೆ ನಾಗರಿಕರಿಗೆ ಕೊಂಚ ಸಮಯ ಹಿಡಿಯಿತು.
‘ನೀವ್ ಏನ್‌ಬೇಕಾರೂ ಕೇಳ್ಬೋದು, ನಮ್ ತಪ್ಗುಳಿದ್ರೂ ಏಳ್ಬೋದು, ನಿಮ್ಮನ್ನ ಬಂದುಗಳಂತ ಬಾವ್ಸ್ತಿವಿ’ ಎಂದು ಜಯಮ್ಮ ಮತ್ತೊಮ್ಮೆ ಹೇಳಿದಾಗ ಒಬ್ಬರು ಎದ್ದುನಿಂತು ಮಾತನಾಡತೊಡಗಿದರು.
‘ನೀವು ಸರಿಯಾಗಿ ಕಸವನ್ನು ಗುಡಿಸುವುದಿಲ್ಲ.’
‘ಕಟ್ಟಿಕೊಂಡ ಮೋರಿಗಳನ್ನು ಸರಿಯಾಗಿ ತೆರವು ಮಾಡುವುದಿಲ್ಲ.’
‘ಇತ್ತೀಚೆಗಂತು ಆಫೀಸಿನಲ್ಲಿ ಕೆಲಸ ಮಾಡುವವರಂತೆ ಬರುತ್ತೀರಾ, ಒಂದು ಗಳಿಗೆ ತಡವಾದರೂ ಕಸ ತೆಗೆದುಕೊಳ್ಳದೆ ಹಾಗೇ ಹೋಗಿಬಿಡುತ್ತೀರಾ.’
‘ಮಹಡಿ ಮೇಲಿರುವವರು ಅಲ್ಲಿಂದಲೇ ಕಸ ಎಸೆದರೆ ತೆಗೆದುಕೊಳ್ಳುವುದಿಲ್ಲ. ಕೆಳಗೆ ತಂದುಕೊಡಿ ಎಂದು ಹೇಳುತ್ತೀರಾ.’
‘ನಾಯಿ ಸಾಕಿರುವವರು ವಾಕಿಂಗ್ ಕರೆದುಕೊಂಡು ಹೋದಾಗ ಕಕ್ಕಸ್ಸು ಮಾಡಿದರೆ ಅದನ್ನು ಎತ್ತುವುದಿಲ್ಲ. ಮೊನ್ನೆ ೧೦ನೇ ಕ್ರಾಸಿನಲ್ಲಿ ಮನೆಯವರ ಜೊತೆ ಜಗಳವಾಡಿ ಕಸವನ್ನು ತಂದು ಅವರ ಮನೆ ಮುಂದೆ ಸುರಿದಿದ್ದೀರಾ.’
‘ಇತ್ತೀಚೆಗೆ ನಿಮಗೂ ಉತ್ತಮವಾದ ಸಂಬಳ ಸಿಗುತ್ತಿದೆ. ಆದರೂ ಅಸಡ್ಡೆಯಿಂದ ಕೆಲಸಮಾಡುತ್ತೀರಾ’
ಎಲ್ಲರೂ ಹೇಳುತ್ತಿದ್ದುದನ್ನು ಹತ್ತನೆ ತರಗತಿಯಲ್ಲಿ ಪಾಸಾಗಿದ್ದ, ಸಂಘದ ಖಜಾಂಚಿ ಕಸ್ತೂರಿ ಬರೆದುಕೊಳ್ಳುತ್ತಿದ್ದಳು. ಸಂಘದ ಅಕೌಂಟ್ ಇದ್ದ ಬ್ಯಾಂಕಿಗೆ ಹೋಗಿ ಹಣ ಹಾಕುವುದು, ತೆಗೆದುಕೊಂಡು ಬರುವ ಕೆಲಸವನ್ನೂ ಅವಳು ಮಾಡುತ್ತಿದ್ದಳು.
ಕೇಳಿದ ಪ್ರಶ್ನೆಗಳಿಗೆ ಉತ್ತರ ಹೇಳಲು ಸಂಘದ ಅಧ್ಯಕ್ಷನಾಗಿದ್ದ ಆಂಜನೇಯಲು ಎದ್ದು ನಿಂತ. ಕಾರ್ಮಿಕರನ್ನು ಸಂಘಟಿಸುವುದರಲ್ಲಿ ಅವನು ಎತ್ತಿದ ಕೈ. ಸಂಘ ಕೆಲಸ ಮಾಡುತ್ತಿದ್ದ ವಾರ್ಡಿನಲ್ಲಿರುವ ಎಲ್ಲ ಕೆಲಸಗಾರರನ್ನು ಹೆಸರು ಸಮೇತ ಅವನು ಬಲ್ಲವನಾಗಿದ್ದ. ಏನೇ ಕೆಲಸವಿರಲಿ, ಯಾವ ಕಾರ್ಮಿಕರಿಗೆ ಅನ್ಯಾಯವಾಗಲಿ ಎದೆಕೊಟ್ಟು ನಿಲ್ಲುತ್ತಿದ್ದ. ಅವನನ್ನು ಎಲ್ಲರೂ ಅಣ್ಣಾ ಎಂದೇ ಕರೆಯುತ್ತಿದ್ದರು. ಓದು ಬರಹ ಬರುತ್ತಿರಲಿಲ್ಲವಾದರೂ ವಿಷಯವನ್ನು ಪಕ್ಕಾ ತಿಳಿದುಕೊಂಡಿದ್ದ. ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದ. ಗುಡಿಸುವುದರಿಂದ ಹಿಡಿದು, ಲೋಡ್ ಮಾಡಿ ನಗರದ ಹೊರವಲಯದವರೆಗೂ ಕಸದ ಲಾರಿಯೊಂದಿಗೆ ಸುರಿದು ಬರುವ ಎಲ್ಲ ಕೆಲಸಗಳನ್ನು ಅವನು ಬಲ್ಲ. ಕಾರ್ಮಿಕರ ಸಮಸ್ಯೆಗಳನ್ನು ಅರಿತುಕೊಂಡು ಸಮಾಧಾನ ಮಾಡಿ ಪರಿಹಾರ ಹುಡುಕುವವರೆಗೂ ಬಿಡುತ್ತಿರಲಿಲ್ಲ.
‘ನಮ್ಮ ಸಂಗ್ದ ಕಾರ್ಮಿಕ್ರೆಲ್ಲ ಇಲ್ಲಿದಿವಿ. ನಂಗೆ ಗೊತ್ತಿರದ್ನ ನಾನ್ ಏಳ್ತಿನಿ. ಬೇರೆ ಕರ‍್ಮಿಕ್ರು ಇಲ್ಲವ್ರೆ; ನಿಮ್ಮ ರ‍್ಯಾ ಗುಡ್ಸೋರು. ಅವ್ರು ಉತ್ರ ಏಳ್ತರೆ. ಅದ್ರಾಗೆ ನಾವ್ ಮಾಡ ಕೆಲ್ಸ, ನಮ್ಗಿರ ತೊಂದ್ರೆ, ಅನ್ಬೋಗ್ಸ ಕಷ್ಟ ಎಲ್ಲ ಗೊತ್ತಾಗುತ್ತೆ. ನಾವು ಒಬ್ರಿಗೊಬ್ರು ಅರ್ತಮಾಡ್ಕಂಡ್ರೆ ನಮ್ ನಮ್ ತೊಂದರೆಗಳ್ನ ನಿವರ‍್ಸ್ಕಬೋದು. ಒಬ್ರಿಗೊಬ್ರು ಬೆಂಬ್ಲ ಕೊಡದ್ರಿಂದ ಒಳ್ಳೆದಾಗುತ್ತೆ ರ‍್ತು ನಷ್ಟ ಆಗಲ್ಲ. ಒಬ್ರಿಲ್ಲಿ ಆಪೀಸ್ ಕೆಲ್ಸ ಮಾಡೊರಂಗೆ ಅಂತ ಏಳಿದ್ರು. ನಮ್ದೂನೂ ಆಪಿಸ್ ಕೆಲ್ಸ್ವೆ. ನಾವು ಬೃತ್ ಬೆಂಗ್ಳೂರು ಮಾನಗ್ರ ಪಾಲ್ಕೆ ಪೋರಕರ‍್ಮಿಕ್ರು. ಕಮಿಸನ್ರಿಂದ ಇಡ್ದು ಗುಡ್ಸೋರರ‍್ಗೂ ಅಲ್ಲಿ ಕೆಲ್ಸ ಮಾಡ್ತರೆ. ಇಡೀ ಸಿಟಿನ ಕಿಲಿನಾಗ್ ಇಟ್ಟು ಎಲ್ರ ಆರೋಗ್ಯ ನೋಡ್ಕಳದು ಪಾಲ್ಕೆ ಜಬಾಬ್ದಾರಿ.
ಕಸ ಮ್ಯಾಲಿಂದ ಎಸ್ದ್ರೆ ಕಸ ತುಂಬಿದ್ ಪಿಲಾಸ್ಟಿಕ್ ಚೀಲ ವಡ್ಕಂಡು ಕಸ ಚೆಲ್ತದೆ, ನಮ್ಮ್ ಮ್ಯಾಲು ಬೀಳುತ್ತೆ, ಅದ್ಕೆ ಕಸಾನ ಬಕೇಟಾಗೆ ಆಕಿ ಕೆಳ್ಗಿಡಿ.
ಕಸ್ದಾಗೆ ಪ್ಯಾಡು, ಮಕ್ಳ ಏಲು-ಉಚ್ಚೆ ಬಟ್ಟೆ ಸರ‍್ಸಿ ಆಕ್ತ್ತಾರೆ. ತಿಂದ್ ಮಿಕ್ಕಿದ್ದು ಅದ್ರಾಗೆ ಆಕ್ತಾರೆ. ಎಲ್ಲ ಸರ‍್ಸಿ ಪಿಲಾಸ್ಟಿಕ್‌ನಾಗೆ ಆಕಿರೆ ಅದ್ನ ಬ್ಯಾರೆ ಮಾಡಾಕೆ ಕೈ ಒಳಿಗಾಕಿ ತಗಿಬೇಕು, ಅದೆಷ್ಟ್ ಕಷ್ಟ, ಅಸಯ ಅಂತ ನೀವೇ ಹೇಳಿ.
ನಾಯ್ಗಳನ್ನು ವಾಕಿಂಗ್ ಇಡ್ಕೊಂಡ್ ವೋಗ್ತಿರ, ಅವು ಕಕ್ಕಸ್ ಮಾಡಿದ್ರೆ ನೀವೇ ತಗ್ದು ಪಿಲಾಸ್ಟಿಕ್‌ನಾಗೆ ಆಕ್ಬೆಕು ಅನ್ನೋದು ಎಷ್ಟೊ ಜನ್ಕೆ ಗೊತ್ತೇ ಇಲ್ಲ.
ಕರ‍್ಮಿಕ್ರು ಕೆಟ್ದಾಗಿ ನಡ್ಕತರೆ ಅಂದ್ರಿ. ನಮ್ನು ಯಾರು ಗೋರವ್‌ದಿಂದ ನಡ್ಸ್ಕಳಲ್ಲ. ಯರ‍್ನಾದ್ರು ಎಸ್ರಿಟ್ಟು ಕೂಗಿ, ಒಂದ್ ಗಳಾಸ್ ನೀರ್ ಕೊಟ್ಟಿಲ್ಲ ಇಲ್ಲಿಗಂಟ. ಅಸ್ಪೃಶ್ಯತೆ ಮಾಡದು ಅಪ್ರಾದ, ರ‍್ಯಾ ಜನ ನಮ್ನ ನೋಡಿ ಮೂಗ್ ಮುಚ್ಕಂಡ್ ಪಕ್ಕಕ್ಕೋಯ್ತರೆ. ನೀರ್ ಕೊಟ್ರೂ ಬಚ್ಲು ಚೊಂಬಾಗೆ ತಂದು ಕೈಗೆ ಸುರಿತಾರೆ. ಕಸ್ದಂಗೆ ನಮ್ನು ನೋಡ್ತರೆ. ಇದು ಬದ್ಲಾಗ್ಬೇಕು. ನಾವು ಒಬ್ರುನೊಬ್ರು ಗೊರವ್‌ದಿಂದ ಕಾಣ್ಬೇಕು. ಮನ್ನೆ ಇಂದ್ರಾನರ‍್ದಾಗೆ ಜಾತಿ ಇಡ್ದು ಅವ್ಮಾನ ಮಾಡವ್ರೆ. ಅದ್ಕೆ ಅವ್ರ ಮನೆ ಕಸ ಎತ್ತಲ್ಲ ಅಂತ ತಗೊಂಡೋಗಿ ಸರ‍್ದ್ವಿ. ಆಮೇಲೆ ಎಲ್ತ್ ಆಪಿಸರ್ ಬಂದು ಜಗ್ಳ ಬಗೆ ರ‍್ಸಿ, ನಾವು ಕಂಪ್ಲೆಂಟು ವಾಪ್ಸ್ ತಗಂಡ್ವಿ. ಜಾತಿ ಎಸ್ರಲ್ಲಿ ಬೇದಬಾವ ಮಾಡ್ಬರ‍್ದು ಅಂತ ಸಮ್ಮಿದಾನ್ದಾಗೆ ಏಳೈತೆ. ನೀವೆಲ್ಲ ಓದಿರೋರು, ತಿಳಿದಿರೋರು ನೀವೇ ನಮ್ಗೆ ಕಾನೂನು ತಿಳಿಸ್ಬೆಕಲ್ವಾ? ಮುಂದೆ ಇಂತದಾಗ್ದಂಗೆ ನೋಡ್ಕಂಡು ಕೆಲ್ಸ ಮಾಡಕೆ ನೀವು ಸಾಕಾರ ಕೊಡ್ಬೇಕು ಅಂತ ಕೇಳ್ಕತಿನಿ’ ಎಂದು ಆಂಜನೇಯಲು ಹೇಳಿದ.
ಸಂಘದ ಗೌರವಾಧ್ಯಕ್ಷರಾಗಿದ್ದ ಪದ್ಮ ಮಾತನಾಡಿ ‘ನಾವು ಈ ದೇಶದ ಪ್ರಜೆಗಳು ಅಂತ ನಮ್ಗೂ ನಮ್ ಸಂವಿಧಾನ ಹಕ್ಕು ಕೊಟ್ಟಿದೆ. ಕರ‍್ಮಿಕ್ರಾಗಿ ನಮ್ಗೂ ಕಾನೂನ್ ಅವೆ. ಬದ್ಕಕೆ ಬೇಕಾದ ಸಂಬ್ಳ ಕೊಡ್ಬೇಕು; ದಿನಾ ಮಾಡ್ಲೇಬಾಕಾಗಿರ ಕೆಲ್ಸನ ಗುತ್ಗೆಗೆ ಕೊಡಂಗಿಲ್ಲ. ಅಂದ್ರೂ ಪಾಲ್ಕೆ ನಮ್ ಕೆಲ್ಸ ಗುತ್ಗೆಗೆ ಕೊಟ್ಟದೆ. ರ‍್ಮೆಟ್ ಕೆಲ್ಸ್ದೊರು ಮಾಡೋ ಎಲ್ಲ ಕೆಲ್ಸಾನೂ ನಾವ್ ಮಾಡ್ತಿವಿ; ಅದ್ಕೆ ಅವ್ರಿಗೆ ಕೊಡೋ ಸಂಬ್ಳನೆ ಕೊಡ್ಬೆಕು. ಆದ್ರೆ ಕೊಡಲ್ಲ. ಗ್ಲೋಸು, ಗಂಬೂಟು, ಮಾಸ್ಕು ಕೊಡ್ಬೆಕು. ಬಾಲ್ವಾಡಿ, ಶೌಚಾಲಯ, ರಜೆಗಳು ಎಲ್ಲ ಕೊಡ್ಬೇಕು. ಇಎಸೈ, ಪಿಎಪ್ ಕೊಡ್ಬೇಕು. ಆದ್ರೆ ನಮ್ಗೆ ಯಾವ್ದೂ ಸಿಕ್ಕರ‍್ಲಿಲ್ಲ. ಈಗ ಹತ್ ವರ್ಷ ವೋರಾಟ ಮಾಡಿದ್ಕೆ ಕನಿಷ್ಟ ಸಂಬ್ಳ ಸಿಕ್ಕೈತೆ. ನಮ್ದು ಕಷ್ಟದ್ ಕೆಲ್ಸ; ಮೋರಿ ಕಸ ಕೈಲೇ ಬಳಿಬೇಕು; ಕಳೆ ಕೀಳ್ಬೇಕು, ರಸ್ತೆ ಕಸ ಗುಡಿಸ್ಬೇಕು, ಮನೆ ಮನೆ ಕಸ ತಗಬೇಕು; ರಟ್ಟೆ, ಸೊಂಟ, ಬೆನ್ನು ನೋವು ತಪ್ಪಿದ್ದಲ್ಲ. ಗಲೀಜು, ಧೂಳಲ್ಲಿ ಯಾವ ಸುರಕ್ಷಾ ಸಲಕರಣೆಯು ಇಲ್ದೆ ಕೆಲ್ಸ ಮಾಡ್ತಿವಿ; ಅದಕ್ಕೆ ಕಾಯ್ಲೆಗಳು ತಪ್ಪಿದ್ದಲ್ಲ.’
ವಕೀಲರು ಮತ್ತು ಬೆಂಬಲ ಗುಂಪಿನ ಸದಸ್ಯರಾಗಿದ್ದ ಮೈತ್ರಾ ಅವರು ಕಾರ್ಮಿಕರು ಮಾಡುವ ಅಪಾಯಕಾರಿಯಾದ, ಕಠಿಣ ದುಡಿಮೆ, ಸಂಬಳದಲ್ಲಿ ಇರುವ ತಾರತಮ್ಯ ಮತ್ತು ಕಾರ್ಮಿಕರಿಗಾಗಿ ಇರುವ ಕಾನೂನುಗಳನ್ನು ಹಾಗೂ ಪಾಲಿಕೆಗಳು ಮತ್ತು ಗುತ್ತಿಗೆದಾರರು ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ವಿವರಿಸಿದರು. ಪೌರಕಾರ್ಮಿಕರ ಹೋರಾಟವನ್ನು ಕುರಿತ ಕಿರುಪುಸ್ತಿಕೆಯನ್ನು ಎಲ್ಲರಿಗೂ ಹಂಚಲಾಯಿತು.
ಒಟ್ಟಾರೆ ಈ ಸಭೆಯು ಪರಿಣಾಮದಿಂದಾಗಿ ಬಡಾವಣೆಯ ಜನರು ಪೌರಕಾರ್ಮಿಕರನ್ನು ನಡೆಸಿಕೊಳ್ಳುವ ರೀತಿಯಲ್ಲಿ ಬದಲಾವಣೆಗಳಾಗತೊಡಗಿದವು. ಇಂತಹ ಸಭೆಗಳನ್ನು ಬೇರೆ ಕಡೆಗಳಲ್ಲೂ ಮಾಡಲು ಸಂಘವು ಪ್ರಯತ್ನಿಸಿತು.

ಮೃತ್ಯು ಕೂಪಗಳಾಗಿರುವ ಒಳಚರಂಡಿಗಳ ಸ್ವಚ್ಛ ಮಾಡುವ ಕಾರ್ಮಿಕರು

‘ಸ್ಲಂಜಾಯಿಂಟ್ ಆಕ್ಷನ್ ಕಮಿಟಿ’ಯು ಮಲಬಾಚುವ ವಿಷಯವನ್ನು ಹೋರಾಟದ ಆದ್ಯತೆಯಾಗಿ ಪರಿಗಣಿಸಿದ್ದ ಸಂದರ್ಭದಲ್ಲಿಯೇ ಸವಣೂರು ಘಟನೆ ನಡೆದು ವಿಷಯದ ತುರ್ತನ್ನು ಮನವರಿಕೆ ಮಾಡಿಸಿತು. ೨೦೧೦ರಲ್ಲಿ ತಮ್ಮ ಮನೆ ಎತ್ತಂಗಡಿಯಾಗಲಿರುವುದರಿಂದ ಹತಾಶರಾದ ದಲಿತ ಕುಟುಂಬಗಳು ಸರ್ಕಾರ ಮತ್ತು ಮಾಧ್ಯಮದವರ ಗಮನ ಸೆಳೆಯಲು ಮಲದ ನೀರನ್ನು ಮೈಮೇಲೆ ಸುರಿದುಕೊಂಡು ಪ್ರತಿಭಟಿಸಿದರು. ಈ ಘಟನೆ ಪಿಯುಸಿಎಲ್-ಕ ಮಧ್ಯಂತರ ಸತ್ಯಶೋಧನ ವರದಿ ತಯಾರಿಸಲು ಕಾರಣವಾಯಿತಲ್ಲದೆ ಮ್ಯಾನ್ಯುವಲ್ ಸ್ಕಾö್ಯವೆಂಜಿಂಗ್ ಕುರಿತ ಕೆಲಸವನ್ನು ತುರ್ತಾಗಿ ಮುಂದುವರೆಸುವಂತೆ ಮಾಡಿತು.
ಪೌರಕಾರ್ಮಿಕ ಚಳುವಳಿಯಲ್ಲಿ ಮ್ಯಾನ್‌ಹೋಲ್ ಕಾರ್ಮಿಕರ ಸಾವುಗಳ ಕುರಿತು ನಿರ್ದಿಷ್ಟ ಕ್ರಮಗಳನ್ನು ಕೈಗೊಂಡಿರÀಲಿಲ್ಲ. ಪಿಯುಸಿಎಲ್ ೨೦೦೯ರಲ್ಲಿ ಕರ್ನಾಟಕ ಹೈಕೋರ್ಟಿನಲ್ಲಿ ಮ್ಯಾನ್ ಹೋಲ್ ಕಾರ್ಮಿಕರ ಸಾವುಗಳು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿವೆ ಎಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಿದಾಗ ಈ ವಿಷಯವು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು. ಈ ಮೊಕದ್ದಮೆಯಲ್ಲಿ ಪರ್ಯಾಯ ಕಾನೂನು ವೇದಿಕೆ ಸಂಸ್ಥೆಯ ವಕೀಲರುಗಳಾದ ಕ್ಲಿಫ್ಟನ್ ರೊe಼Áರಿಯೊ, ಮೈತ್ರೇಯಿ ಕೃಷ್ಣನ್ ಹಾಗೂ ರಘುಪತಿಯವರು ಪ್ರಮುಖ ಪಾತ್ರವಹಿಸಿದರು. ಹಿರಿಯ ವಕೀಲರಾದ ರವಿವರ್ಮಕುಮಾರ್ ಅವರು ಕೇಸಿನ ಪರವಾಗಿ ವಾದಿಸಿದರು. ಫೀರ್ಯಾದುದಾರರಾಗಿದ್ದವರು ಪಿಯುಸಿಎಲ್-ಕ ನ ಉಪಾಧ್ಯಕ್ಷ್ಯರಾಗಿದ್ದ ಪ್ರೊ. ವೈ.ಜೆ. ರಾಜೇಂದ್ರ ಅವರು.
ಮೊಕದ್ದಮೆ ಹೂಡುವ ಮುನ್ನ ಪಿಯುಸಿಎಲ್-ಕ ಮತ್ತು ಎಎಲ್‌ಎಫ್ ಸಂಸ್ಥೆಗಳು, ಹನ್ನೊಂದು ಮ್ಯಾನ್‌ಹೋಲ್ ಸಾವುಗಳ ಸತ್ಯಶೋಧನಾ ವರದಿಗಳನ್ನು ತಯಾರಿಸಿತ್ತು. ನಾಲ್ಕು ವರದಿಗಳನ್ನು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಸಲಾಗಿತ್ತು. ಘಟನೆ ಸಂಭವಿಸಿದ ಸಂದರ್ಭದಲ್ಲಿ ನಾಗರಿಕ ಸಮಾಜದ ಗುಂಪುಗಳು ಉಪಸ್ಥಿತಿ ಇದ್ದು ಸಂತ್ರಸ್ತರ ಕುಂಟುಂಬಗಳಿಗೆ ಪರಿಹಾರ ಸಿಗುವಂತೆ ಮಾಡಿದ್ದವು. ವರದಿಗಳ ತಯಾರಿಸಲು ಒಂದು ವರ್ಷಕಾಲ ಹಿಡಿದಿತ್ತು. ಆ ಅವಧಿಯಲ್ಲಿ ಮ್ಯಾನ್‌ಹೋಲ್ ಸಾವುಗಳ ಕುರಿತ ದಾಖಲಾತಿಯನ್ನು ವ್ಯವಸ್ಥಿತವಾಗಿ ಮಾಡಲಾಗಿತ್ತು. ಈ ದಾಖಲಾತಿಯನ್ನು ಅಧಿಕಾರಶಾಹಿಯ ಅತ್ಯುನ್ನತ ಸ್ಥಾನದಲ್ಲಿರುವ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮುಂದೆ ಮಂಡಿಸಲಾಯಿತು. ಕೆಲಸ ಮಾಡುವಾಗ ಕಾರ್ಮಿಕರು ಸಾಯದಂತೆ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಯಿತು. ತಳಮಟ್ಟದಲ್ಲಿ ನಡೆಸಿದ ತನಿಖೆಗಳು ಸರ್ಕಾರ ನೀಡಲಾಗಿದೆ ಎಂದು ಹೇಳುವ ಸುರಕ್ಷಾ ಸಲಕರಣೆಗಳು ವಿಫಲಗೊಂಡಿರುವುದನ್ನು ಸಾಬೀತುಪಡಿಸಿದವು. ಸರ್ಕಾರದ ನೀತಿ ಮತ್ತು ಸರ್ಕಾರದ ಏಜೆನ್ಸಿಗಳು ತಮ್ಮದೇ ಸುರಕ್ಷಾ ಕ್ರಮಗಳನ್ನು ಕೈಗೊಳ್ಳದೆ ಮ್ಯಾನ್‌ಹೋಲ್ ಕಾರ್ಮಿಕರ ಕೆಲಸದ ಪರಿಸ್ಥಿತಿಯನ್ನು ಅಲಕ್ಷ್ಯಮಾಡಿದ್ದರು. ಒಂದು ವರ್ಷಕಾಲ ನಡೆಸಿದ ಸತ್ಯಶೋಧನಾ ವರದಿ ಆಧರಿಸಿ ಸರ್ಕಾರವು ತನ್ನ ಸಂವಿಧಾನಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಲು ಒತ್ತಾಯಿಸಿ ಕರ್ನಾಟಕ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಲಾಗಿತ್ತು.
ಮೊಕದ್ದಮೆ ಹೂಡಿದ್ದು ಕೊಂಚ ಮಟ್ಟಿಗಿನ ಯಶಸ್ಸನ್ನು ತಂದಿತು. ಕೋರ್ಟ್ ಹಲವಾರು ಮಧ್ಯಂತರ ಆದೇಶಗಳನ್ನು ಜಾರಿಗೊಳಿಸಿದ್ದು ಪರಿಸ್ಥಿತಿಯಲ್ಲಿ ಕೆಲವು ಬದಲಾವಣೆಗಳನ್ನು ತಂದಿತು. ಹೈಕೋರ್ಟ್ ಪರಿಣತರ ಸಮಿತಿಯನ್ನು ನೇಮಿಸಿ ಮೊಕದ್ದಮೆಯು ಎತ್ತಿರುವ ಹಲವಾರು ವಿಷಯಗಳನ್ನು ಅಧ್ಯಯನ ಮಾಡಲು ಹೇಳಿತು. ಫಿರ್ಯಾದುದಾರರು ನಾಮನಿರ್ದೇಶನ ಮಾಡಿದ ಪ್ರತಿನಿಧಿಗಳನ್ನು ಒಳಗೊಂಡು ಸಮಿತಿಯನ್ನು ರಚಿಸಲಾಯಿತು. ಮತ್ತು ಈ ಪದ್ಧತಿಯನ್ನು ನಿವಾರಿಸುವ ಸಲಹೆಗಳನ್ನು ಸೂಚಿಸಲು ಕೋರಿತು. ಎಸ್.ಕೆ.ಕಾಂತಾ (ಮಾಜಿ ಕಾರ್ಮಿಕ ಸಚಿವರು), ಪ್ರೊ. ಜೋಗನ್ ಶಂಕರ್ (ಸಮಾಜಶಾಸ್ತ್ರ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ) ಅಳಕಟ್ಟಿ(ಕಾರ್ಮಿಕ ಸಂಘಟನೆ ಮುಖಂಡರು) ಅಂಬಣ್ಣ ಅರೋಲ್‌ಕರ್ (ದಲಿತ ಕಾರ್ಯಕರ್ತ ಮತ್ತು ಹಾಡುಗಾರ), ದು.ಸರಸ್ವತಿ (ಬರಹಗಾರರು ಮತ್ತು ಸಾಮಜಿಕ ಕಾರ್ಯಕರ್ತೆ)ವರು ಸಮಿತಿಯಲ್ಲಿದ್ದರು.
ಸಮಿತಿಯು ಹೈಕೋರ್ಟಿಗೆ ವರದಿಯನ್ನು ಸಲ್ಲಿಸಿದ ನಂತರ ಹೈಕೊರ್ಟು ಆದೇಶ ನೀಡಿ ಆರು ತಿಂಗಳೊಳಗಾಗಿ ಬೆಂಗಳೂರು ಜಲಮಂಡಳಿಯು ಯಂತ್ರಗಳನ್ನು ಒದಗಿಸಬೇಕು ಮತ್ತು ಕಾರ್ಮಿಕರನ್ನು ಮ್ಯಾನ್‌ಹೋಲ್‌ನೊಳಗೆ ಇಳಿಸಬಾರದು ಎಂದು ಹೇಳಿತು. ಮುಂದುವರೆದು, ಈ ಮೊಕದ್ದಮೆ ನಡೆಯುತ್ತಿರುವ ಸಂದರ್ಭದಲ್ಲಿ ಫೀರ್ಯಾದುದಾರರು ಗಮನಕ್ಕೆ ತಂದ ಸಾವಿನ ಪ್ರಕರಣಗಳಿಗೆ ಪರಿಹಾರ ನೀಡಲು ಆದೇಶಿಸಿತು.
ಪಿಯುಸಿಎಲ್-ಕ ಹೂಡಿದ್ದ ಸಾ.ಹಿ.ಮೊ.ಯ ಪರಿಣಾಮವಾಗಿ, ಅದೃಶ್ಯವಾಗಿ ಉಳಿದಿದ್ದ ಮ್ಯಾನ್‌ಹೋಲ್ ಕೆಲಸಗಾರರ ವಿಷಯವು ಬೆಳಕಿಗೆ ಬರಲು ಕೋರ್ಟು ವೇದಿಕೆಯಾಯಿತು. ಮೊದಲು ಸುದ್ದಿ ಪತ್ರಿಕೆಯಲ್ಲಿ ಮೂರು ಸಾಲಿನ ವರದಿಯಾಗಿ ಸಮಾಪ್ತಿಯಾಗುತ್ತಿದ್ದ ವಿಷಯವು ಸರ್ಕಾರದ ನೇರ ಗಮನಕ್ಕೆ ಬಂದಿತು. ಸರಣಿ ಮಧ್ಯಂತರ ಆದೇಶಗಳ ಮೂಲಕ ಕೋರ್ಟು ಸಮಸ್ಯೆ ಇರುವುದನ್ನು ಒಪ್ಪಿಕೊಳ್ಳಲು ಸರ್ಕಾರವನ್ನು ಒತ್ತಾಯಿಸಿತು. ರಾಜ್ಯ ಸರ್ಕಾರವು ಕ್ರಮಕೈಗೊಳ್ಳಲು ಆರಂಭಿಸಿತು. ಈ ಪ್ರಕ್ರಿಯೆ ಅದೆಷ್ಟು ನಿಧಾನವಾದದ್ದು ಎಂದರೆ ೨೦೦೯-೨೦೧೪ರವರೆಗೆ ವಿಷಯವನ್ನು ಕೋರ್ಟು ಅಂತಿಮ ವಾದಕ್ಕೆ ತರಲಿಲ್ಲ. ಸಫಾಯಿ ಕರ್ಮಚಾರಿ ಆಂದೋಲನ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ತೀರ್ಪಿನ ನಂತರ ಪಿಯುಸಿಲ್-ಕದ ದಾವೆಯನ್ನು ಹೈಕೋರ್ಟು ಡಿಸ್‌ಪೋಸ್ ಮಾಡಿತು. ಡಿಸ್‌ಪೋಸ್ ಮಾಡಲು ತೂರಿದ ಪ್ರಶ್ನೆ ಎಂದರೆ, ಇಂತಹ ಪ್ರಕರಣಗಳಲ್ಲಿ ಕೋರ್ಟಿನಿಂದ ನಿರೀಕ್ಷಿಸುವ ಪಾತ್ರವೇನು? ಎಂಬುದು. ಮ್ಯಾನ್‌ಹೋಲ್ ಕಾರ್ಮಿಕರ ಕುರಿತ ಪಿಯುಸಿಎಲ್-ಕ ಅವರ ಪ್ರಕರಣವು, ಸರಣಿ ಮಧ್ಯಂತರ ಆದೇಶಗಳ ಮೂಲಕ ಸರ್ಕಾರಕ್ಕೆ ತನ್ನ ಜವಾಬ್ದಾರಿ ಮನವರಿಕೆ ಮಾಡಿಕೊಳ್ಳಲು ಸಾಧ್ಯವಾಯಿತು.
ಕೆಲವು ಸ್ಥಳಗಳಲ್ಲಿ ಕಾರ್ಮಿಕ ಸಂಘಟನೆಗಳು ನಡೆಸಿದ ಹೋರಾಟದಿಂದಾಗಿ ಸಫಾಯಿ ಕರ್ಮಚಾರಿಗಳು ತಾರತಮ್ಯದ ವಿರುದ್ಧ ಹೋರಾಡಲು ಸಾಧ್ಯವಾಗಿದೆ. ವೇತನವನ್ನು ಪಡೆಯಲು ಹಾಗೂ ಸಂಘಟಿತರಾಗುವ ಹಕ್ಕನ್ನು ಚಲಾಯಿಸಲು ಸಾಧ್ಯವಾಗಿದೆ. ಕಾರ್ಮಿಕರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಿದ್ದಾರೆ; ಆತ್ಮಗೌರವವನ್ನು ಬೆಳಸಿಕೊಂಡಿದ್ದಾರೆ. ಸಂಘಟನೆ ಬಲವಾಗಿರುವ ಕಡೆ ಕಾರ್ಮಿಕರಿಗೆ ಪೂರ್ತಿ ವೇತನ ಸಿಗುತ್ತಿದೆ. ಕೆಲಸದಿಂದ ವಜಾಮಾಡಿದಾಗ ಮತ್ತೆ ಬಾಕಿ ವೇತನದೊಂದಿಗೆ ಕೆಲಸಕ್ಕೆ ಸೇರಿಸಲು ಸಾಧ್ಯವಾಗಿದೆ. ಮಾಲೀಕರು ಮತ್ತು ಮೇಸ್ತ್ರಿಗಳು ಅಸಭ್ಯವಾಗಿ ವರ್ತಿಸಿದಾಗ ಕಾರ್ಮಿಕರು ಪ್ರತಿಭಟಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತಮ್ಮ ಹಕ್ಕುಗಳಿಗಾಗಿ ಕೋರ್ಟಿನಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸಫಾಯಿ ಕರ್ಮಚಾರಿಗಳ ಹೋರಾಟದಲ್ಲಿ ನಾಗರಿಕ ಸಂಘಟನೆಗಳ ಪಾತ್ರ: ಪಿಯುಸಿಎಲ್ (ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿರ‍್ಟೀಸ್) ಕರ್ನಾಟಕ

ಪೌರಕಾರ್ಮಿಕರು ಉತ್ತಮ ಕೆಲಸದ ವಾತಾವರಣಕ್ಕಾಗಿ ನಡೆಸುತ್ತಿದ್ದ ಹೋರಾಟವು ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿರ‍್ಟೀಸ್-ಕರ್ನಾಟಕವು ಪೌರಕಾರ್ಮಿಕರ ವಿಷಯ ಕುರಿತು ಕೆಲಸ ಮಾಡಲಾರಂಭಿಸಿತು. ಪ್ರೊ. ಹಸನ್ ಮನ್ಸುರ್ ಮತ್ತು ಪ್ರೊ. ರಾಜೇಂದ್ರ ಅವರ ನೇತೃತ್ವದಲ್ಲಿ ಬೆಂಗಳೂರಿನ ಸ್ಲಂ ನಿವಾಸಿಗಳ ಹಕ್ಕುಗಳಿಗಾಗಿ ಸ್ಲಂ ಜಾಯಿಂಟ್ ಆಕ್ಷನ್ ಕಮಿಟಿಯನ್ನು ಆರಂಭಿಸಲಾಯಿತು. ಈ ವೇದಿಕೆಯ ಭಾಗವಾಗಿ ಮಲಬಾಚುವ ಕಾರ್ಮಿಕರ ವಿಷಯವನ್ನು ಕೈಗೆತ್ತಿಕೊಳ್ಳಲು ಪಿಯುಸಿಎಲ್‌ನಲ್ಲಿ ತೀರ್ಮಾನಿಸಲಾಯಿತು. ಈ ಸಮಿತಿಯು ಪೌರಕಾರ್ಮಿಕರ ಮೇಲಾಗುತ್ತಿದ್ದ ಅನ್ಯಾಯಗಳನ್ನು ತಡೆಯಲು ವಿಫಲವಾದ ಬಿಬಿಎಂಪಿ ವಿರುದ್ಧ ಫೆಬ್ರವರಿ ೨೦೦೨ರಲ್ಲಿ ಬೃಹತ್ ರ‍್ಯಾಲಿಯನ್ನು ಆಯೋಜಿಸಿತು. ಪಿಯುಸಿಎಲ್, ಸ್ಲಂ ಫೆಡರೇಷನ್ ಹಾಗೂ ಪ್ರೊ.ಬಾಬು ಮ್ಯಾಥ್ಯೂಸ್, ಡಾ.ಜಿ.ರಾಮಕೃಷ್ಣರಂತಹ ಹಲವಾರು ಗಣ್ಯರು ರ‍್ಯಾಲಿಯನ್ನು ಬೆಂಬಲಿಸಿದರು. ಪೌರಕಾರ್ಮಿಕರ ನ್ಯಾಯಕ್ಕಾಗಿ ಹುಟ್ಟಿಕೊಂಡ ಈ ಹೋರಾಟದ ಭಾಗವಾಗಿ ಕೆ.ಬಿ.ಓಬಳೇಶ್, ಪದ್ಮಾ ಮತ್ತು ರಾಮಚಂದ್ರ ಅವರ ನೇತೃತ್ವದಲ್ಲಿ ‘ಸಫಾಯಿ ಕರ್ಮಚಾರಿ ಕಾವಲು ಸಮಿತಿ’ ಎಂಬ ಮತ್ತೊಂದು ಗುಂಪು ಹುಟ್ಟಿತು. ಅವರು ಪಿಯುಸಿಎಲ್-ಕ ಹಾಗೂ ಇತರ ಸಂಘಟನೆಗಳ ಬೆಂಬಲದೊಂದಿಗೆ ‘ಜಾಗೃತಿ ಜಾಥ’ವನ್ನು ಸಂಘಟಿಸಿದರು. ರಾಜ್ಯದಲ್ಲಿ ಪೌರಕಾರ್ಮಿಕರು ಮತ್ತು ಮ್ಯಾನ್ಯುವಲ್ ಸ್ಕಾö್ಯವೆಂಜಿಂಗ್ ಕೆಲಸ ಮಾಡುತ್ತಿರುವವರ ಮಾನವಹಕ್ಕುಗಳ ಉಲ್ಲಂಘನೆ ಕುರಿತು ವಿಸ್ತಾರವಾದ ಅರಿವು ಮೂಡಿಸುವುದು ಜಾಥಾದ ಉದ್ದೇಶವಾಗಿತ್ತು. ಕಾವಲು ಸಮಿತಿಯು ಮುಂದಿಟ್ಟ ಎರಡು ಮುಖ್ಯ ಬೇಡಿಕೆಗಳೆಂದರೆ ಗುತ್ತಿಗೆ ಪದ್ಧತಿಯ ನಿಷೇಧ ಮತ್ತು ಪೌರಕಾರ್ಮಿಕರ ಖಾಯಮಾತಿ.
ಜಾಥಾ ಬೆಂಗಳೂರಿನಿಂದ ಆರಂಭವಾಗಿ ಇಪ್ಪತ್ತು ರಾಜ್ಯಗಳಲ್ಲಿ ಸಂಚರಿಸಿ ದಿನಾಂಕ:೩೧-೦೩-೨೦೧೬ರಂದು ಬೆಂಗಳೂರಿನಲ್ಲಿ ಸಮಾರೋಪಗೊಂಡಿತು. ರಾಜ್ಯದೆಲ್ಲೆಡೆಯಿಂದ ಜನರು ಭಾಗವಹಿಸಿದರು. ಕೆ.ಬಿ.ಓಬಳೇಶ್, ಪದ್ಮ, ರಾಮಚಂದ್ರ ಮತ್ತು ಇತರರನ್ನು ಒಳಗೊಂಡ ನಿಯೋಗವನ್ನು ಮಾತುಕತೆಗಾಗಿ ಮುಖ್ಯಮಂತ್ರಿಗಳು ಆಹ್ವಾನಿಸಿದರು. ಆ ಸಭೆಯಲ್ಲಿ ಮುಖ್ಯಮಂತ್ರಿಗಳು ಗುತ್ತಿಗೆ ವ್ಯವಸ್ಥೆಯನ್ನು ನಿಷೇಧಿಸುವುದಾಗಿ ಭರವಸೆ ನೀಡಿದರು.
ಪೌರಕಾರ್ಮಿಕರು ಸಂಘಟಿತರಾಗಿ ತಮ್ಮ ಸಮಸ್ಯೆಗಳನ್ನು ಅಭಿವ್ಯಕ್ತಿಸುವುದಲ್ಲದೆ ತಮ್ಮದೇ ಹೋರಾಟವನ್ನು ಮುಂದೆತೆಗೆದುಕೊಂಡು ಹೋಗಲು ಸಹಕರಿಸುವುದೇ ಪಿಯುಸಿಎಲ್-ಕ ದ ತಂತ್ರವಾಗಿದೆ. ಪಿಯುಸಿಎಲ್ ಸಹಾಕಾರದೊಂದಿಗೆ ಕಾವಲು ಸಮಿತಿಯು ಸತ್ಯಶೋಧನಾ ವರದಿ ಇತ್ಯಾದಿ ಕೆಲಸವನ್ನು ಆರಂಭಿಸಿತಲ್ಲದೆ ಪೌರಕಾರ್ಮಿಕರ ಹೋರಾಟದ ಮುಂಚೂಣಿಯಲ್ಲಿದೆ.

ಸಫಾಯಿ ಕರ್ಮಚಾರಿಗಳ ಹೋರಾಟದಲ್ಲಿ ನಾಗರಿಕ ಸಂಘಟನೆಗಳ ಪಾತ್ರ:ಗುತ್ತಿಗೆ ಪೌರಕಾರ್ಮಿಕರ ಬೆಂಬಲ ಗುಂಪು

ಇದೇ ಸಂದರ್ಭದಲ್ಲಿ ಪೌರಕಾರ್ಮಿಕರ ಹೋರಾಟವನ್ನು ಬೆಂಬಲಿಸುವ ಉದ್ದೇಶದೊಂದಿಗೆ ‘ಗುತ್ತಿಗೆ ಪೌರಕಾರ್ಮಿಕರ ಬೆಂಬಲ ಗುಂಪು’ ಆರಂಭವಾಯಿತು. ‘ಮಾನಸ ಸ್ವಾಯತ್ತ ಮಹಿಳಾ ಸಂಘಟನೆ’, ‘ಪೀಪಲ್ಸ್ ಯೂನಿಟಿ ಫಾರ್ ಸಿವಿಲ್ ಲಿರ‍್ಟೀಸ್’ (ಪಿಯುಸಿಎಲ್), ‘ಆಲ್ಟರ್‌ನೆಟಿವ್ ಲಾ ಫೋರಂ’ (ಎಎಲ್‌ಎಫ್), ‘ವಿಮೋಚನಾ ಮಹಿಳಾ ಹಕ್ಕುಗಳ ವೇದಿಕೆ’ ಮತ್ತು ಲಿಂಗತ್ವ ಅಲ್ಪಸಖ್ಯಾಂತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ‘ಸಂಗಮ’ ಸಂಸ್ಥೆಗಳು ಒಗ್ಗೂಡಿ ಬೆಂಬಲ ಗುಂಪನ್ನು ಆರಂಭಿಸಿದವು. ಡಾ.ವಿಜಯಾ, ಹೆಚ್.ಎಸ್.ದೊರೆಸ್ವಾಮಿಯವರಂತಹ ಗಣ್ಯರು ಬೆಂಬಲ ನೀಡಿದರು. ಬೆಂಬಲ, ಲಾಬಿ ಮತ್ತು ಪ್ರಚಾರದ ಮೂಲಕ ಬೆಂಬಲ ಗುಂಪು ಗುತ್ತಿಗೆ ಕಾರ್ಮಿಕರ ಕನಿಷ್ಠ ವೇತನದ ಹೋರಾಟದಲ್ಲಿ ನಿರ್ಣಾಯಕ ಪಾತ್ರವಹಿಸಿತು.
-ಪೌರಕಾರ್ಮಿಕರ ಹಕ್ಕುಗಳನ್ನು ಗುರುತಿಸಿ ಜಾರಿಗೊಳಿಸಲು ಸರ್ಕಾರದೊಂದಿಗೆ ಲಾಬಿ ಮಾಡುವುದು
-ಪೌರಕಾರ್ಮಿಕರ ಕೆಲಸದ ಪರಿಸ್ಥಿತಿ ಕುರಿತು ಪ್ರಚಾರ ಮಾಡುವುದು
-ಪೌರಕಾರ್ಮಿಕರನ್ನು ಕಾರ್ಮಿಕ ಸಂಘಟನೆಯ ಸದಸ್ಯರನ್ನಾಗಿಸುವುದು ಮತ್ತು ಅವರ ನಾಯಕತ್ವ ಕಟ್ಟುವ ಮೂಲಕ ಅವರ ಸಂಘಟನೆಯನ್ನು ಬಲಪಡಿಸುವುದು
ಗುತ್ತಿಗೆ ಪೌರಕಾರ್ಮಿಕರಿಗೆ ಕನಿಷ್ಠ ವೇತನವನ್ನು ಜಾರಿಗೊಳಿಸುವ ಹೋರಾಟದಲ್ಲಿ ಬೆಂಬಲ ಗುಂಪು ಸಕ್ರಿಯ ಪಾತ್ರವಹಿಸಿತು. ಮಾಧ್ಯಮಗಳಲ್ಲಿ ನಿರಂತರ ಪ್ರಚಾರ ಸಿಗಲು ಕೆಲಸಮಾಡಿತು. ಶಾಸಕರು, ಮಂತ್ರಿಗಳು ಮತ್ತು ಅಧಿಕಾರಿಗಳಿಗೆ ನಿರಂತರ ಮನವಿಗಳನ್ನು ನೀಡುವುದರ ಜೊತೆಗೆ ಧರಣಿ ಸತ್ಯಾಗ್ರಹ, ಪ್ರತಿಭಟನೆಗಳನ್ನು ನಡೆಸಲು ಸಹಕಾರ ನೀಡಿತು. ಕಾರ್ಮಿಕರ ಕೆಲಸದ ಪರಿಸ್ಥಿತಿ, ಅವರಿಗಿರುವ ಹಕ್ಕುಗಳು, ಸರ್ಕಾರದ ಪಾತ್ರವನ್ನು ಒಳಗೊಂಡÀ ‘ಬಡವರ ಬೆವರಿನಲ್ಲಿ ಸ್ವಚ್ಛವಾಗುವ ಬೆಂಗಳೂರು’ ಎಂಬ ಸತ್ಯಶೋಧನಾ ವರದಿಯನ್ನು ಪ್ರಕಟಿಸಿತು. ಪೌರಕಾರ್ಮಿಕರ ಪರಿಸ್ಥಿತಿಯನ್ನು ತಿಳಿಸಿಕೊಡುವ ಸಲುವಾಗಿ ವಿವಿಧ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ಸಾರ್ವಜನಿಕ ನ್ಯಾಯಾಲಯವನ್ನು ಏರ್ಪಡಿಸಿತು. ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಿತು. ಬೆಂಬಲ ಗುಂಪಿನಲ್ಲಿ ಸಕ್ರಿಯವಾಗಿದ್ದ ‘ಮಾನಸ ಸ್ವಾಯತ್ತ ಮಹಿಳಾ ಗುಂಪು’ ತಾನು ಪ್ರಕಟಿಸುತ್ತಿದ್ದ ‘ಮಾನಸ’ ತಿಂಗಳ ಪತ್ರಿಕೆಯ ಮೂಲಕ ಪೌರಕಾರ್ಮಿಕರ ಪರಿಸ್ಥಿತಿ ಮತ್ತು ಹೋರಾಟಗಳನ್ನು ನಿರಂತರವಾಗಿ ದಾಖಲಿಸಿತು. ಪೌರಕಾರ್ಮಿಕ ಮಹಿಳೆಯರನ್ನು ಸಂಘಟಿಸಲು, ಅವರ ನಾಯಕತ್ವ ಕಟ್ಟಲು ಮತ್ತು ಸ್ವಸಹಾಯ ಸಂಘ ಕಟ್ಟಲು ಕೆಲಸ ಮಾಡಿತು. ಸಂಘವು ಸ್ವಾಯತ್ತವಾಗಿ ಕೆಲಸ ಮಾಡಲು ಅಪಾರವಾಗಿ ಶ್ರಮಿಸಿತು. ಕಾರ್ಮಿಕ ಚಳುವಳಿ, ಮಾನವ ಹಕ್ಕುಗಳ ಚಳುವಳಿ, ಮಹಿಳಾ ಹಕ್ಕುಗಳ ಚಳುವಳಿ, ದಲಿತ ಚಳುವಳಿಗಳಲ್ಲದೆ ಹಲವಾರು ಕ್ಷೇತ್ರದ ಗಣ್ಯರ ಬೆಂಬಲವನ್ನು ಪಡೆಯುವ ನಿಟ್ಟಿನಲ್ಲಿ ಸಕ್ರಿಯವಾಗಿ ಕೆಲಸ ಮಾಡಿತು.

ಸೋಲದ ಚೈತನ್ಯ: ಮಹಿಳಾ ನಾಯಕತ್ವ

ಜಾತಿ, ವರ್ಗ ಮತ್ತು ಲಿಂಗ ಮೂರೂ ತಾರತಮ್ಯಗಳನ್ನು ಅನುಭವಿಸುತ್ತ, ದಮನಕ್ಕೆ ಒಳಗಾಗಿ ಕಷ್ಟದ ಬದುಕನ್ನು ನಡೆಸುತ್ತಿರುವ ಈ ಮಹಿಳೆಯರು ಸುಲಭವಾಗಿ ಧೈರ್ಯಗೆಡದೆ ಬದುಕಿನ ಸಂಕಷ್ಟಗಳಿಗೆ ಎದೆಯೊಡ್ಡಿ ನಿಲ್ಲುತ್ತಾರೆ. ಮನೆಯಲ್ಲಿ ಆಚರಿಸುವ ಹಬ್ಬ, ಮದುವೆ ಆಚರಣೆಗಳಿರಲಿ, ಖಾಯಿಲೆ, ಸಾವು, ನೋವುಗಳಿರಲಿ, ದುಡಿವ ಗಂಡಸರು ಮೂಲೆ ಹಿಡಿದಿರಲಿ, ಕುಡಿದು ಗಲಾಟೆ ಮಾಡುವವರಿರಲಿ, ಬಿಟ್ಟು ಹೋಗಿರಲಿ, ತೀರಿಹೋಗಿರಲಿ ಯಾವುದಕ್ಕೂ ಅಂಜದೆ ಮನೆ ಮತ್ತು ಮಕ್ಕಳನ್ನು ನಿಭಾಯಿಸಿಕೊಂಡು ಹೋಗುವ ಈ ಮಹಿಳೆಯರ ಸ್ಥೆöÊರ್ಯ ಮತ್ತು ಚೈತನ್ಯ ದೊಡ್ಡದು. ಕೇವಲ ತಮ್ಮ ಖಾಸಗಿ ಬದುಕಿನ ಆಗುಹೋಗುಗಳಿಗಷ್ಟೇ ಸೀಮಿತವಾಗದೆ ಕಾರ್ಮಿಕರಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ಸಲುವಾಗಿ ಹೋರಾಡಲು ಈ ಮಹಿಳೆಯರು ಹಿಂದೆ ಬಿದ್ದಿಲ್ಲ. ಅಂತಹ ಕೆಲವು ಹೋರಾಟಗಳನ್ನು ಇಲ್ಲಿ ದಾಖಲಿಸಲಾಗಿದೆ.
ಕಾರ್ಮಿಕ ಸಂಘಟನೆಯ ಹುಟ್ಟಿಗೆ ಕಾರಣವಾದ ಬಳ್ಳಾರಿ ಸಫಾಯಿ ಕರ್ಮಚಾರಿ ಮಹಿಳೆಯರ ಹೋರಾಟ
ಬಳ್ಳಾರಿಯಲ್ಲಿ ಗುತ್ತಿಗೆ ಪೌರಕಾರ್ಮಿಕರ ಸಂಘವನ್ನು ಕಟ್ಟುವುದಕ್ಕೆ ನಾಂದಿ ಹಾಡಿದವರು ಅಲ್ಲಿನ ಮಹಿಳಾ ಕಾರ್ಮಿಕರು. ಖಾಸಗಿ ಅನುಭವದ ಆಧಾರದ ಮೇಲೆ ರಾಜಕಾರಣವನ್ನು ಕಟ್ಟಬೇಕೆಂಬ ಮಹಿಳಾ ಚಳವಳಿಯ ಧ್ಯೇಯವನ್ನು ಅವರು ಸಾಬೀತುಪಡಿಸಿದ್ದಾರೆ ಎಂದರೆ ತಪ್ಪಾಗಲಾರದು. ಬಳ್ಳಾರಿಯ ಮೊದಲನೇ ಡಿವಿಷನ್‌ನ ವಾರ್ಡ್ ೩೨ರಲ್ಲಿ ಕನಿಷ್ಠ ವೇತನವನ್ನು ಎಲ್ಲರಿಗೂ ಕೊಡಬೇಕೆಂಬ ಕಾರಣಕ್ಕೆ ಅಲ್ಲಿನ ಗುತ್ತಿಗೆದಾರರು ಸುಮಾರು ೨೩ ಜನರನ್ನು ಕೆಲಸದಿಂದ ತೆಗೆದು ಹಾಕಿದರು. ಕೆಲಸದಿಂದ ತೆಗೆದುಹಾಕಿದವರಲ್ಲಿ ಎಂಟು ಜನ ಮಹಿಳೆಯರು ಪಾಲಿಕೆಯ ಕಚೇರಿಯ ಮುಂದೆ ಹೋಗಿ ಸೀಮೆಎಣ್ಣೆ ಸುರಿದುಕೊಂಡು ಕೆಲಸಕ್ಕೆ ತೆಗೆದುಕೊಳ್ಳದಿದ್ದರೆ ಬೆಂಕಿ ಹಚ್ಚಿಕೊಂಡು ಸಾಯುವುದಾಗಿ ಹೇಳಿದರು. ವಿಷಯ ತಿಳಿದ ಕೆಲವು ಕಾರ್ಯಕರ್ತರು ಬಂದು ಆ ಮಹಿಳೆಯರನ್ನು ಆಸ್ಪತ್ರೆಗೆ ಸೇರಿಸಿದರು. ಆ ನಂತರ ಕಾರ್ಮಿಕರೆಲ್ಲರೂ ಒಗ್ಗೂಡಿ ಕೆಲಸ ಮತ್ತೆ ಕೊಡುವವರೆಗೂ ಏಳುವುದಿಲ್ಲವೆಂದು ಧರಣಿ ಸತ್ಯಾಗ್ರಹ ಮಾಡಿ ಮತ್ತೆ ಕೆಲಸ ಪಡೆದುಕೊಂಡರು. ಹೋರಾಟವೇನೂ ಸುಲಭವಾಗಿರಲಿಲ್ಲ. ರಸ್ತೆಯಲ್ಲಿಯೇ ಧರಣಿ ಕೂತರು. ಯಾವ ಬೆದರಿಕೆಗೂ ಅಂಜಲಿಲ್ಲ, ಆಮಿಷಕ್ಕೆ ಒಳಗಾಗಲಿಲ್ಲ. ಉದ್ದೇಶ ಈಡೇರುವವರೆಗೂ ವಿಚಲಿತರಾಗದೆ ಹೋರಾಟ ಮಾಡಿದರು. ಈ ಹೋರಾಟದ ಮೂಲಕವೇ ಅಲ್ಲಿ ಯೂನಿಯನ್ ಹುಟ್ಟಿಕೊಂಡಿತು. ಆ ಯೂನಿಯನ್‌ಗೆ ಅವರು ಇಟ್ಟಿರುವ ಹೆಸರು ‘ಸಮಾನತಾ ಯೂನಿಯನ್’. ಈಗ ಈ ಯೂನಿಯನ್ ಅವರಿಗೆ ಆತ್ಮವಿಶ್ವಾಸವನ್ನು ತುಂಬಿದೆ. ತೊಂದರೆ ಆದರೆ ಹೆದರದೆ ಹೋರಾಡುವುದನ್ನು ಕಲಿಯುತ್ತಿದ್ದಾರೆ. ಇನ್ನಿತರ ಸಂಘಟನೆಗಳೊಂದಿಗೆ ಸಂಪರ್ಕವಿಟ್ಟುಕೊಂಡಿದ್ದಾರೆ. ಹೆಮ್ಮೆಯಿಂದ ಅಂಬೇಡ್ಕರ್ ದಿನಾಚರಣೆಯನ್ನು, ಸಾವಿತ್ರಿ ಬಾಯಿ ಫುಲೆ ದಿನಾಚರಣೆಯನ್ನು ಆಚರಿಸುತ್ತಾರೆ. ಮಹಿಳೆಯರಿಗಾಗಿ ಹಗ್ಗ ಜಗ್ಗಾಟ ಸ್ಪರ್ಧೆ, ಮ್ಯೂಸಿಕಲ್ ಚೇರ್, ರಂಗೋಲಿ ಇತ್ಯಾದಿ ಸ್ಪರ್ಧೆಗಳನ್ನು ಒಳಗೊಂಡ ಕ್ರೀಡಾ ದಿನಾಚರಣೆಯನ್ನು ಆಚರಿಸುತ್ತಾರೆ. ಬಹುಮಾನ ವಿತರಿಸುತ್ತಾರೆ. ತಮ್ಮ ಹೋರಾಟವನ್ನು ಬೆಂಗಳೂರಿನ ವಿಧಾನಸೌಧದವರೆಗೂ ಒಯ್ದಿದ್ದಾರೆ.

ಕಲ್ಬುರ್ಗಿ ಸಫಾಯಿ ಕರ್ಮಚಾರಿ ಮಹಿಳೆಯರ ಸುದೀರ್ಘ ಹೋರಾಟ
ಕಲ್ಬುರ್ಗಿಯಲ್ಲಿ ನಗರ ಪಾಲಿಕೆಯಲ್ಲಿ ೧೦ ರಿಂದ ೨೦ ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪರಿಶಿಷ್ಟ ಜಾತಿಯ ಸಫಾಯಿ ಕರ್ಮಚಾರಿ ಮಹಿಳೆಯರು ಕೆಲಸದಿಂದ ತೆಗೆದುಹಾಕಿದ್ದರ ವಿರುದ್ಧ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಸುದೀರ್ಘ ಹೋರಾಟ ಮಾಡಿ ಯಶಸ್ವಿಯಾದದ್ದು ಸಫಾಯಿ ಕರ್ಮಚಾರಿಗಳ ಹೋರಾಟದಲ್ಲಿ ಒಂದು ಮೈಲಿಗಲ್ಲಾಗಿದೆ.
ಧರ್ಮ್ಸಿಂಗ್ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ೪೭೦ ಜನರನ್ನು ಗುತ್ತಿಗೆ ಪೌರಕಾರ್ಮಿಕರಾಗಿ ತೆಗೆದುಕೊಳ್ಳಲಾಗಿತ್ತು. ಗುತ್ತಿಗೆ ಅವಧಿ ಮುಗಿದ ಮೇಲೆ ಅಷ್ಟು ಜನ ಕಾರ್ಮಿಕರನ್ನು ತೆಗೆದು ಹಾಕಲಾಯಿತು. ಬಹಳ ವರ್ಷಗಳ ಹಿಂದಿನಿಂದಲೂ ಇದೇ ಕೆಲಸ ಮಾಡಿಕೊಂಡು ಬಂದಿದ್ದ ಇವರಿಗೆ ಇದೊಂದೇ ಜೀವನೋಪಾಯವಾಗಿತ್ತು. ಹಾಗಾಗಿ ಎಲ್ಲಾ ಕಾರ್ಮಿಕರೂ ಒಟ್ಟಾಗಿ ಕಾರ್ಮಿಕ ಮುಖಂಡರು ಹಾಗೂ ಮಾಜಿ ಕಾರ್ಮಿಕ ಸಚಿವರಾದ ಶ್ರೀ ಎಸ್.ಕೆ.ಕಾಂತಾ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದರಿಂದ ಎರಡು ತಿಂಗಳ ಕಾಲ ನಗರವೇ ಕಸದ ತಿಪ್ಪೆಯಾಯಿತು. ಮತ್ತೆ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಯಿತು. ವಾಪಸ್ಸು ಹೋದ ನಂತರ ಕಾರ್ಮಿಕರು ೨೪೦ ದಿನಗಳ ಕಾಲ ವೇತನವೇ ಇಲ್ಲದೆ ಕೆಲಸ ಮಾಡಿದರು. ವೇತನಕ್ಕಾಗಿ ಕಾರ್ಮಿಕ ನ್ಯಾಯಲಯಕ್ಕೆ ಹೋದರು. ಕಾರ್ಮಿಕ ನ್ಯಾಯಾಲಯವು ೨೪೦ ದಿನಗಳ ಕಾಲ ಕೆಲಸ ಮಾಡಿದ್ದರಿಂದ ಅವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಆದೇಶ ನೀಡಿತು. ಈ ಆದೇಶವನ್ನು ಪ್ರಶ್ನಿಸಿ ಪಾಲಿಕೆಯು ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ ಹೈಕೋರ್ಟಿನವರೆಗೂ ಹೋಯಿತು. ವೇತನವು ಬ್ಯಾಂಕಿಗೆ ಜಮಾ ಆಗಿದ್ದ ದಾಖಲೆಯ ಮೂಲಕ ಅವರೆಲ್ಲರೂ ಪಾಲಿಕೆಯ ಕಾರ್ಮಿಕರು ಎಂಬುದು ಸಾಬೀತಾದ ಮೇಲೆ ಕೋರ್ಟು ಕಾರ್ಮಿಕರ ಪರವಾಗಿ ತೀರ್ಪು ನೀಡಿತು. ಇದೇ ಸಂದರ್ಭದಲ್ಲಿ ನಿರ್ಮಲ್ ನಗರ ಯೋಜನೆಯನ್ನು ಜಾರಿಗೊಳಿಸಿ ೭೩೦ ಜನರನ್ನು ಹೊಸದಾಗಿ ಗುತ್ತಿಗೆ ಕೆಲಸಗಾರರನ್ನಾಗಿ ನೇಮಕ ಮಾಡಿಕೊಳ್ಳಲಾಯಿತು. ೪೭೦ ಜನರಲ್ಲಿ ೪೩ ಜನ ಕಾರ್ಮಿಕರಿಗೆ ಆಮೀಷ ತೋರಿಸಿ ಅವರ ಕೈಲಿ ಸ್ವಸಹಾಯ ಸಂಘ ಮಾಡಿಸಿ ಗುತ್ತಿಗೆ ತೆಗೆದುಕೊಳ್ಳುವಂತೆ ಮಾಡುವ ಮೂಲಕ ಕಾರ್ಮಿಕರ ಒಗ್ಗಟ್ಟನ್ನು ಒಡೆಯುವ ಪ್ರಯತ್ನ ಮಾಡಲಾಯಿತು. ಧರಣಿ ಕುಳಿತ ಕಾರ್ಮಿಕರನ್ನು ಹತ್ತಿಕ್ಕುವ ಪ್ರಯತ್ನಗಳನ್ನೂ ಮಾಡಲಾಯಿತು.
ಈ ಕೆಲಸವನ್ನು ಬಿಟ್ಟರೆ ಇನ್ಯಾವ ಜೀವನಾಧಾರವೂ ಇಲ್ಲದ ಈ ಕಾರ್ಮಿಕರು ಹಗಲು-ರಾತ್ರಿ ಎನ್ನದೆ ಪಾಲಿಕೆಯ ಕಚೇರಿ ಮುಂದೆ ಸತತ ನಾಲ್ಕು ವರ್ಷಗಳ ಕಾಲ ಧರಣಿ ಮಾಡಿದ್ದಾರೆ. ಈ ನಾಲ್ಕು ವರ್ಷದ ಅವಧಿಯಲ್ಲಿ ೨೯ ಕಾರ್ಮಿಕರು ತೀರಿಹೋಗಿದ್ದಾರೆ. ನಾಲ್ಕು ಜನ ಕಾರ್ಮಿಕರು ಧರಣಿ ಕುಳಿತ ಟೆಂಟಿನಲ್ಲಿಯೇ ತೀರಿಹೋಗಿದ್ದಾರೆ. ನೀರಿಲ್ಲದೆ, ಶೌಚಾಲಯದ ವ್ಯವಸ್ಥೆ ಇಲ್ಲದೆ, ಸೊಳ್ಳೆಗಳ ಕಡಿತವನ್ನು ಸಹಿಸಿಕೊಂಡು, ಮಳೆ, ಗಾಳಿ, ಬಿಸಿಲು, ಧೂಳು ಎನ್ನದೆ ಕಾರ್ಮಿಕರು ಹೋರಾಡಿದ್ದಾರೆ. ಈ ಹೋರಾಟದ ಯಶಸ್ಸಿನ ಹಿಂದೆ ಕೆಲಸ ಮಾಡಿರುವುದು ಯಾವ ಬೆದರಿಕೆಗೂ, ಆಮಿಷಕ್ಕೂ ಮಣಿಯದ ಮಹಿಳಾ ಚೈತನ್ಯ. ಮಳೆ, ಗಾಳಿ, ಬಿಸಿಲು, ಪೊಲೀಸರ ಲಾಠಿಗೂ ಅಂಜದ ಈ ಮಹಿಳೆಯರ ಉತ್ಸಾಹಕ್ಕೆ ಎಣೆಯಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಜನಪದ ಶೈಲಿಯ ಲಾವಣಿಗಳನ್ನು, ಹೋರಾಟದ ಹಾಡುಗಳನ್ನು ಹಾಡುವ ಇವರ ಉತ್ಸಾಹ ಯಾರಿಗಾದರೂ ಸ್ಪೂರ್ತಿಯಾಗಬಲ್ಲದು. ಆ ಮಹಿಳೆಯರ ಬದ್ಧತೆ, ಕಷ್ಟವನ್ನು ಸಹಿಸಿ ನಿಲ್ಲುವ ಛಲದಿಂದಾಗಿ ಅವರ ಹೋರಾಟ ಯಶಸ್ವಿಯಾಗಿದೆ. ಅವರ ನಿರಂತರ ಹೋರಾಟದ ಫಲವಾಗಿ ೨೦೧೭ರಲ್ಲಿ ಮತ್ತೆ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ.

ಸಮಾನ ಕೆಲಸಕ್ಕೆ ಸಮಾನ ವೇತನ ಬೇಕೆಂದು ಧರಣಿ ಮಾಡಿದ್ದಕ್ಕೆ ಹಲವಾರು ಮಹಿಳೆಯರನ್ನು ಜೈಲಿಗೆ ಹಾಕಲಾಯಿತು. ಬಳ್ಳಾರಿ, ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಬೆಳಗಾವಿ, ಬಿಜಾಪುರ ಹೀಗೆ ದೂರದ ಜೈಲುಗಳಿಗೆ ಹಾಕಲಾಯಿತು. ಕೆಲವರನ್ನು ಎಂಟು ತಿಂಗಳ ಕಾಲ, ಕೆಲವರನ್ನು ಐದು ತಿಂಗಳ ಕಾಲ, ಕೆಲವರನ್ನು ಒಂದೂವರೆ ತಿಂಗಳ ಕಾಲ ಜೈಲಿನಲ್ಲಿಟ್ಟಿದ್ದರು. ಈಗಲೂ ಕೇಸುಗಳು ಆಯಾ ಊರಿನಲ್ಲಿಯೇ ನಡೆಯುತ್ತವೆ. ಕೇಸು ಬಂದಾಗಲೆಲ್ಲ ತಮ್ಮದೇ ಚಾರ್ಜಿನಲ್ಲಿ ಆ ಊರುಗಳಿಗೆ ಕಾರ್ಮಿಕರು ಹೋಗಬೇಕಾಗಿದೆ.
‘ನಾವು ಧರಣಿ ಕೂತಾಗ ನಾವಿಟ್ಟಿದ್ದ ಅಂಬೇಡ್ಕರ್ ಮತ್ತು ಗಾಂಧಿ ಫೋಟೋ ಗಟರ‍್ದಾಗೆ ಹಾಕಿರು. ಟೆಂಟು ಸುಟ್ರು, ಲಾಠಿ ಚಾರ್ಜ್ ಮಾಡಿದ್ರು, ನಮ್ ಚೀಲಗಳಿಗೆ ಬೆಂಕಿ ಹಾಕಿದ್ರು, ನಮ್ ಜತೆ ಕುಂತಿದ್ದ ತಿಪ್ಪಮ್ಮ ಚಳಿ ಉರಿಗೆ (ಜ್ವರ) ೨೦೧೪ರ ಸಂಕ್ರಾತಿ ದಿನ ಸತ್ಲು. ಎಣ ಎತ್ತುದಿಲ್ಲ ಅಂತ ಕುಂತ್ವಿ, ನಮ್‌ನೆಲ್ಲ ಯೂನಿವರ್ಸಿಟಿಗೆ ಹಾಕಿ ಜೆಸಿಬಿ ರ‍್ಸಿ ಎಣ ಮಣ್ ಮಾಡಿದ್ರು. ಆಮ್ಯಾಲೆ ಇಲ್ಲಿಗ್ ತಂದ್ ಹಾಕಿದ್ರು. ಸಾಬ್ರು (ಎಸ್.ಕೆ.ಕಾಂತ ಅವರು) ಇರೊದ್ಕೆ ನಮ್ನ ಜಿಂದಾ ಬಿಟ್ಟಾರೆ’ ಎಂದು ಧರಣಿ ಮಾಡುತ್ತಿದ್ದ ಮಹಿಳೆ ಹೇಳಿದಳು.

ಬೆಂಗಳೂರಿನ ಗುತ್ತಿಗೆ ಸಫಾಯಿ ಕರ್ಮಚಾರಿಗಳ ಹೋರಾಟ
ಬೃ.ಬೆಂ.ಮ.ನ.ಪಾ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಗುತ್ತಿಗೆ ಪೌರಕಾರ್ಮಿಕರ ಸಂಘವು ಶೋಷಣೆಗೆ ಕಾರಣವಾಗಿರುವ ಗುತ್ತಿಗೆ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುತ್ತ ಬಂದಿದೆ.ಏಐಸಿಸಿಟಿಯು (ಆಲ್ ಇಂಡಿಯಾ ಸೆಂಟರ್ ಫಾರ್ ಟ್ರೇಡ್ ಯೂನಿಯನ್ಸ್)ಗೆ ಅಫಿಲಿಯೇಟ್ ಆಗಿರುವ ಈ ಸಂಘವು ೪೦೦೦ ಸದಸ್ಯತ್ವ ಹೊಂದಿದ್ದು ೨೦೦೭-೨೦೦೮ರಿಂದ ಗುತ್ತಿಗೆ ಪೌರಕಾರ್ಮಿಕರನ್ನು ಸಂಘಟಿಸುತ್ತಿದೆ. ಈ ಸಂಘಕ್ಕೆ ರತ್ನಮ್ಮ ಅವರು ಮಹಾಕಾರ್ಯದರ್ಶಿಯಾಗಿ, ನಿರ್ಮಲ ಅವರು ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಂಘವು ಶೋಷಣೆಗೆ ಕಾರಣವಾಗಿರುವ ಗುತ್ತಿಗೆ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುತ್ತ ಬಂದಿದೆ. ಹಾಗೂ ಲೈಂಗಿಕ ಕಿರುಕುಳದ ವಿರುದ್ಧ ನಡೆದ ಆಂದೋಲನದ ನೇತೃತ್ವವಹಿಸಿದೆ. ರಾಜ್ಯಾದ್ಯಂತ ಪೌರಕಾರ್ಮಿಕರ ನಿರಂತರ ಹೋರಾಟದ ಫಲವಾಗಿ ಕರ್ನಾಟಕ ಸರ್ಕಾರವು ಜೂನ್ ೨೦೧೭ರಲ್ಲಿ ಗುತ್ತಿಗೆ ಪದ್ಧತಿಯನ್ನು ನಿಷೇಧಿಸಿ, ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಮಾಡುವ ನಿರ್ಧಾರವನ್ನು ತೆಗೆದುಕೊಂಡಿತು. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಸರ್ಕಾರದ ನಿರ್ಧಾರವನ್ನು ಜಾರಿಗೊಳಿಸಲು ವಿಳಂಬ ಮಾಡುತ್ತಿರುವುದರ ಪರಿಣಾಮವಾಗಿ ಪೌರಕಾರ್ಮಿಕರು ನಿತ್ಯವೂ ಗುತ್ತಿಗೆದಾರರಿಂದ ಹಿಂಸೆಯನ್ನು ಅನುಭವಿಸುವಂತಾಯಿತು. ಅಕ್ಟೋಬರ್ ೧೨ರಂದು ಕೆ.ಆರ್.ಪುರಂನ ವಾರ್ಡ್ ನಂ. ೫೫ರಲ್ಲಿ ಮೂರು ತಿಂಗಳಿನಿಂದ ಸಂಬಳ ದೊರೆಯದ ಕಾರ್ಮಿಕರು ಸಂಬಳಬೇಕೆಂದು ಕೇಳಿದಾಗ ಗುತ್ತಿಗೆದಾರ ಅಶ್ಲೀಲವಾಗಿ ವರ್ತಿಸಿ, ಅತ್ಯಾಚಾರ ಮಾಡುವುದಾಗಿ ಬೆದರಿಸಿದ್ದಾನೆ. ಈ ಬಗ್ಗೆ ಬೃ.ಬೆಂ.ಮ.ನ.ಪಾಲಿಕೆಯ ಲೈಂಗಿಕ ಕಿರುಕುಳ ಸಮಿತಿಯಲ್ಲಿ ದೂರು ದಾಖಲಿಸಿದರೂ ಸಮಿತಿಯು ಯಾವ ಕ್ರಮವನ್ನೂ ಜರುಗಿಸಲಿಲ್ಲ.ದೂರು ಕೊಟ್ಟಿದ್ದಕ್ಕೆ ಸಿಟ್ಟಿಗೆದ್ದು ಗುತ್ತಿಗೆದಾರನು ಅಕ್ಟೋಬರ್ ೧೯ರಂದು ೩೭ಜನ ಮಹಿಳಾ ಪೌರಕಾರ್ಮಿಕರನ್ನು ಸುತ್ತುವರೆದು, ಇಬ್ಬರ ಮೇಲೆ ಕಬ್ಬಿಣದ ರಾಡಿನಿಂದ ಥಳಿಸಿ ಗಾಯಗೊಳಿಸಿದ್ದಲ್ಲದೆ ಅಶ್ಲೀಲ ಮಾತುಗಳನ್ನಾಡಿ ಜಾತಿನಿಂದನೆ ಮಾಡಿ, ಸಾರ್ವಜನಿಕವಾಗಿ ಬಟ್ಟೆ ಹರಿದುಹಾಕಿದ್ದಾನೆ. ಕಾರ್ಮಿಕರಿಗೆ ಅರ್ಧ ಸಂಬಳವನ್ನಷ್ಟೇ ನೀಡುತ್ತಿದ್ದ ಈತ ಕಾರ್ಮಿಕರ ಪಾಸ್‌ಬುಕ್ ಮತ್ತು ಎಟಿಎಂ ಕಾರ್ಡುಗಳನ್ನು ಕಿತ್ತಿಟ್ಟುಕೊಂಡಿದ್ದಾನೆ. ಕಾರ್ಮಿಕರು ತಮ್ಮ ಸಂಘಟನೆಯ ಮೂಲಕ ನಿರಂತರ ಒತ್ತಡ ಹಾಕಿದ್ದರಿಂದ ಕೆ.ಆರ್.ಪುರಂ ಪೊಲೀಸರು ಗುತ್ತಿಗೆದಾರನ ವಿರುದ್ಧ ಲೈಂಗಿಕ ಹಲ್ಲೆ ಮತ್ತು ಪರಿಶಿಷ್ಟ ಜಾತಿ/ಪಂಗಡ (ದೌರ್ಜನ್ಯ ತಡೆ) ಕಾಯ್ದೆ ೧೯೮೯ರ ಉಲ್ಲಂಘನೆ ಮತ್ತು ಮಲಬಾಚಲು ನೇಮಿಸಿಕೊಳ್ಳುವುದರ ನಿಷೇಧ ಮತ್ತು ಪುನರ್ವಸತಿ ಕಾಯ್ದೆ ೨೦೧೩ರ ಅನ್ವಯ ಹಾಗೂ ಕಾರ್ಮಿಕರ ಎಟಿಎಂ ಕಿತ್ತಿಟ್ಟುಕೊಂಡು ವಂಚನೆಮಾಡಿರುವುದರ ಬಗ್ಗೆ ದೂರು ದಾಖಲಿಸಿಕೊಂಡಿದ್ದಾರೆ. ಆದರೂ ಗುತ್ತಿಗೆದಾರನನ್ನು ಬಂಧಿಸಲಿಲ್ಲ; ಆತ ತಲೆಮರೆಸಿಕೊಂಡಿದ್ದಾನೆ.
ಏಪ್ರಿಲ್ ೨೦೧೭ರಲ್ಲಿ ವೇತನ ಕೇಳಿದರೆಂಬ ಕಾರಣಕ್ಕೆ ಪೀಣ್ಯದಲ್ಲಿ ಇಬ್ಬರು ಕಾರ್ಮಿಕರ ಮೇಲೆ ಗುತ್ತಿಗೆದಾರನು ಥಳಿಸಿದ್ದನು. ಥಳಿಸಿದ್ದರಿಂದ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದರು. ಬೃ.ಬೆಂ.ಮ.ನ.ಪಾಲಿಕೆ ಗುತ್ತಿಗೆ ಕಾರ್ಮಿಕರ ಸಂಘದವತಿಯಿಂದ ದೂರು ನೀಡಿದಾಗ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಆದರೆ ಇಲ್ಲಿಯವರೆಗೂ ಆರೋಪ ಪಟ್ಟಿಯನ್ನು ಸಲ್ಲಿಸಿಲ್ಲ. ಪಾಲಿಕೆಯೂ ಸಹ ಗುತ್ತಿಗೆದಾರನ ಮೇಲೆ ಯಾವ ಕ್ರಮವನ್ನೂ ಕೈಗೊಂಡಿಲ್ಲ.
ಸಂಘವು ಶೋಷಣೆಗೆ ಕಾರಣವಾಗಿರುವ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಎಲ್ಲ ಪೌರಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಬೇಕು. ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ (ತಡೆ, ರದ್ದತಿ, ಪರಿಹಾರ) ಕಾಯ್ದೆ, ೨೦೧೩ನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಹೋರಾಟವನ್ನು ಮುಂದುವರೆಸಿದೆ.

ಮೂರು ದಶಕಗಳ ಹೋರಾಟದ ಪರಿಣಾಮವಾಗಿ…

ಪದೇ ಪದೇ ಹಿನ್ನಡೆಯುಂಟಾದರೂ ಕನಿಷ್ಠ ವೇತನಕ್ಕಾಗಿ ಪೌರಕಾರ್ಮಿಕರು ನಡೆಸಿದ ಹೋರಾಟ ಕಳೆದ ದಶಕದಲ್ಲಿ ತೀವ್ರತೆಯನ್ನು ಪಡೆದುಕೊಂಡು ಬೆಂಗಳೂರಿನಲ್ಲಿ ಮಹತ್ವ ಬೆಳವಣಿಗೆಯನ್ನು ಕಂಡಿದೆ. ಈ ಹಂತದ ಹೋರಾಟದಲ್ಲಿ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ ಪುರಸಭೆಗಳ ಪೌರಕಾರ್ಮಿಕರ ಮಹಾಸಂಘ ಹಾಗೂ ಏಐಸಿಸಿಟಿಯು (ಆಲ್ ಇಂಡಿಯಾ ಸೆಂಟರ್ ಫಾರ್ ಟ್ರೇಡ್ ಯೂನಿಯನ್ಸ್)ಗೆ ಅಫಿಲಿಯೇಟ್ ಆಗಿರುವ ಬಿಬಿಎಂಪಿ ಪೌರಕಾರ್ಮಿಕರ ಸಂಘವು ಪ್ರಮುಖ ಪಾತ್ರವಹಿಸಿದವು. ಬೆಂಗಳೂರು ಜಲಮಂಡಳಿಯಲ್ಲಿ ಮ್ಯಾನ್ಯುವಲ್ ಸ್ಕಾö್ಯವೆಂಜಿಂಗ್ ಕೆಲಸ ಮಾಡುತ್ತಿರುವ ಕಾರ್ಮಿಕರು, ಹೆಚ್.ಎ.ಎಲ್, ಬಿ.ಹೆಚ್.ಇ.ಎಲ್, ಬಿ.ಇ.ಎಂಎಲ್, ಬಿ.ಬಿ.ಎಂ.ಪಿ ಲೈಬ್ರರಿಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ನಿಮ್ಹಾನ್ಸ್ ಹಾಗೂ ಇತರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಶಾಪಿಂಗ್ ಮಾಲ್‌ಗಳು, ಹೋಟೆಲುಗಳು, ಬಸ್‌ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಸಹ ಹೋರಾಟ ಒಳಗೊಳ್ಳುತ್ತಿದೆ. ಇವರೆಲ್ಲರೂ ಗುತ್ತಿಗೆ ಕಾರ್ಮಿಕರೇ ಅಗಿದ್ದು ಬದುಕುವ ವೇತನವಾಗಲಿ, ಉತ್ತಮ ಕೆಲಸದ ವಾತಾವರಣವಾಗಲಿ ಇಲ್ಲದೆ ದುಡಿಯುತ್ತಿದ್ದಾರೆ. ಬಹುಪಾಲು ಕಾರ್ಮಿಕರು ದಲಿತ ಸಮುದಾಯಕ್ಕೆ ಸೇರಿದವರು.
ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಹೋರಾಟದ ಜೊತೆಗೆ ಜೂನ್ ೧೨-೧೩, ೨೦೧೭ರಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಮಣಿದ ಸರ್ಕಾರವು ಜುಲೈ ೧೨, ೨೦೧೭ರಂದು ಭ್ರಷ್ಟ ಮತ್ತು ಶೋಷಣಾತ್ಮಕ ಗುತ್ತಿಗೆ ಪದ್ಧತಿಯನ್ನು ಕೂಡಲೇ ನಿಷೇಧಿಸಲು, ಎಲ್ಲಾ ಗುತ್ತಿಗೆಗಳನ್ನು ವಜಾ ಮಾಡಲು, ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಮಾಡಲು ಮತ್ತು ಎಲ್ಲ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಕ್ಯಾಬಿನೆಟ್ ನಿರ್ಧಾರವನ್ನು ತೆಗೆದುಕೊಂಡಿತು. ನಂತರ ಕರ್ನಾಟಕ ಸರ್ಕಾರ ಆದೇಶ ಓಚಿಂಚಿ ೧೨೬ ಖಿಒS೨೦೧೬, ಜಚಿಣeಜ ೦೭.೦೮.೨೦೧೭ ನೀಡಿ ಕೂಡಲೇ ಗುತ್ತಿಗೆ ವ್ಯವಸ್ಥೆಯನ್ನು ರದ್ದುಪಡಿಸಿ,ಸ್ಥಳೀಯ ಸಂಸ್ಥೆಗಳೇ ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಮಾಡಬೇಕೆಂದು ಹೇಳಿತು. ಬಿ.ಬಿ.ಎಂ.ಪಿಯು ಸಹ ಆದೇಶ ಓo. ಂ.ಂ.Shಚಿ/PSಖ/೨೨೫೦/೨೦೧೭-೧೮, ಜಚಿಣeಜ ೨೬.೧೦.೨೦೧೭ ಚಿಟಿಜ ೨೨.೧೨.೨೦೧೭ ನೀಡಿತು.
ಗುತ್ತಿಗೆ ವ್ಯವಸ್ಥೆಯನ್ನು ರದ್ದುಪಡಿಸುವ ಸರ್ಕಾರದ ನಿರ್ಧಾರವು ಪೌರಕಾರ್ಮಿಕರಿಗೆ ಸಂದ ಬಹುದೊಡ್ಡ ವಿಜಯವಾಗಿದೆ. ಸರ್ಕಾರವು ೧೧೦೦೦ ಪೌರಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ಆದೇಶಿಸಿದೆ. ಖಾಯಮಾತಿಗಾಗಿ ಕಾರ್ಮಿಕರನ್ನು ಗುರುತಿಸುವ ಯಾವ ಪ್ರಕ್ರಿಯೆಯೂ ಆರಂಭವಾಗಿಲ್ಲ. ಬೆಂಗಳೂರು ನಗರ ಒಂದರಲ್ಲೇ ೧೮೦೦೦ದಷ್ಟು ಪೌರಕಾರ್ಮಿಕರು ಕೆಲಸಮಾಡುತ್ತಿದ್ದಾರೆ. ಅವರಲ್ಲಿ ೪೦೦೦ ಪೌರಕಾರ್ಮಿಕರನ್ನು ಮಾತ್ರ ಖಾಯಂ ಮಾಡುವುದಾಗಿ ಹೇಳಿದೆ. ಗುಡಿಸುವ ಕೆಲಸ ಮಾಡುವವರಿಗೆ ಮಾತ್ರ ಬಿ.ಬಿ.ಎಂ.ಪಿ.ಯಿಂದ ನೇರ ಪಾವತಿ ಸಿಗುತ್ತಿದೆ. ಕಸ ಸಾಗಿಸುವ ಆಟೋರಿಕ್ಷಾ, ಲಾರಿ ಚಾಲಕರು, ಸಹಾಯಕರು, ಕಸ ತುಂಬುವ, ತೆರವು ಮಾಡುವ ಕೆಲಸಗಾರರು ಗುತ್ತಿಗೆ ವ್ಯವಸ್ಥೆಯಲ್ಲಿ ಕೆಲಸಮಾಡುತ್ತಿದ್ದು ಅವರ ಬಗ್ಗೆ ಏನೂ ಹೇಳಿಲ್ಲ. ಎಲ್ಲ ಕಾರ್ಮಿಕರನ್ನು ನೇರಪಾವತಿಯಲ್ಲಿ ಒಳಗೊಳ್ಳುವುದಕ್ಕಾಗಿ ಹಾಗೂ ಸುರಕ್ಷಾ ಸಲಕರಣೆಗಳಿರುವ ಉತ್ತಮ ಕೆಲಸದ ವಾತಾವರಣಕ್ಕಾಗಿ, ಘನತೆಯ ಬದುಕಿಗಾಗಿ ಪೌರಕಾರ್ಮಿಕರ ಹೋರಾಟ ಮುಂದುವರೆದಿದೆ.
ಗುತ್ತಿಗೆ ಪದ್ಧತಿಯನ್ನು ನಿಷೇಧಿಸುವ ಆದೇಶದೊಂದಿಗೆ ನೇರಪಾವತಿಗಾಗಿ ‘ನಿಜವಾದ’ ಪೌರಕಾರ್ಮಿಕರನ್ನು ಗುರುತಿಸಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೊಳಿಸಿರುವುದು ಕಾರ್ಮಿಕರಿಗೆ ಹಾನಿಕರವಾಗಿ ಪರಿಣಮಿಸಿದೆ. ಕಾರಣ ಹಲವಾರು ವರ್ಷಗಳಿಂದ ಗುತ್ತಿಗೆದಾರರಿಂದ ನೇಮಕಗೊಂಡು ಕೆಲಸ ಮಾಡುತ್ತ, ನಗದಿನಲ್ಲಿ ವೇತನ ಪಡೆಯುತ್ತಿದ್ದ ಹಲವಾರು ಕಾರ್ಮಿಕರು ಸೂಕ್ತ ದಾಖಲೆಗಳಿಲ್ಲವೆಂಬ ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದಾರೆ. ಈ ಬಯೋಮೆಟ್ರಿಕ್ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲವಾದ್ದರಿಂದ ಪಾಲಿಕೆಯಿಂದಲೇ ವೇತನ ಪಾವತಿಯಾಗುತ್ತಿದ್ದರೂ ಮೊದಲಿಗಿಂತ ಕಡಿಮೆ ವೇತನ ಸಿಗುತ್ತಿದೆ. ಇಲ್ಲಿಯೂ ಸಹ ಹೊಸ ವ್ಯವಸ್ಥೆಯನ್ನು ವಿಫಲಗೊಳಿಸಿ ಮತ್ತೆ ಗುತ್ತಿಗೆ ವ್ಯವಸ್ಥೆ ತರುವ ಗುತ್ತಿಗೆದಾರರ ಹುನ್ನಾರವಿದೆ.
ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘವು ಲೈಂಗಿಕ ಕಿರುಕುಳದ ವಿರುದ್ಧವೂ ಹೋರಾಟ ನಡೆಸಿದ್ದರ ಫಲವಾಗಿ ಮೊತ್ತಮೊದಲ ಬಾರಿಗೆ ಬಿಬಿಎಂಪಿಯು ಆಂತರಿಕ ದೂರು ಸಮಿತಿಯನ್ನು ನೇಮಿಸಿದ್ದು ಐತಿಹಾಸಿಕ ಹೆಜ್ಜೆಯಾಗಿದೆ. ಈಗದೂರು ಸಮಿತಿಯು ಕಿರುಕುಳ ಅನುಭವಿಸುತ್ತಿರುವ ಕಾರ್ಮಿಕರಿಂದ ದೂರುಗಳನ್ನು ಸ್ವೀಕರಿಸುತ್ತಿದೆ.

ತೊಂಬತ್ತರ ದಶಕದಲ್ಲಿ ಸಫಾಯಿ ಕರ್ಮಚಾರಿ ಚಳುವಳಿಯ ಮೈಲಿಗಲ್ಲುಗಳು

ಕರ್ನಾಟಕದಲ್ಲಿ ೧೯೯೦ರ ದಶಕದ ಅವಧಿಯು ನವ-ಉದಾರವಾದಿ ಕಾರ್ಮಿಕ ಸುಧಾರಣೆಗಳು ಮತ್ತು ಮುನಿಸಿಪಲ್ ಸೇವಾ ಕ್ಷೇತ್ರಕ್ಕೆ ಗುತ್ತಿಗೆ ವ್ಯವಸ್ಥೆಯು ಜಾರಿಗೊಂಡ ಸಂದರ್ಭವಾಗಿತ್ತು. ಈ ಹಿಂದೆ ಬೆಂಗಳೂರು ಮಹಾನಗರ ಪಾಲಿಕೆಯು ಘನ ತ್ಯಾಜ್ಯ ನಿರ್ವಹಣೆಯ ಕೆಲಸಕ್ಕೆ ಖಾಯಂ ನೌಕರರನ್ನು ನೇಮಕಮಾಡಿಕೊಳ್ಳುತ್ತಿತ್ತು. ಸ್ವಚ್ಛತೆಯ ಕೆಲಸಕ್ಕೆ ಮುನಿಸಿಪಲ್ ಬಜೆಟ್‌ನ ಶೇ.೪೦-೫೦ರಷ್ಟು ವ್ಯಯವಾಗುತ್ತಿರುವುದು ದುಬಾರಿ ಎಂಬ ಕಾರಣಕ್ಕೆ ಸರ್ಕಾರವು ತ್ಯಾಜ್ಯನಿರ್ವಹಣೆಯ ಕೆಲಸವನ್ನು ೧೯೯೫ರಲ್ಲಿ ಖಾಸಗಿಗೊಳಿಸಿ ಗುತ್ತಿಗೆಗೆ ನೀಡಿತು. ಬೆಂಗಳೂರಿನ ಬಹುಪಾಲು ವಾರ್ಡುಗಳ ಗುತ್ತಿಗೆ ಹಿಡಿದವರು ರೆಡ್ಡಿ ಸಮುದಾಯಕ್ಕೆ ಸೇರಿದವರಾಗಿದ್ದರೆ, ಕೆಲಸಗಾರರು ಶೇ.೮೦ಕ್ಕಿಂತ ಹೆಚ್ಚಿನವರು ದಲಿತ ಮಹಿಳೆಯರು. ಅತ್ಯಂತ ಕೆಟ್ಟ ಕೆಲಸದ ಪರಿಸ್ಥಿತಿಯಲ್ಲಿ ಈ ಮಹಿಳೆಯರು ಕೆಲಸ ಮಾಡುತ್ತಿದ್ದರು. ೧೯೯೨ರಲ್ಲಿ ಅವರಿಗೆ ಸಿಗುತ್ತಿದ್ದ ವೇತನ ರೂ.೫೦೦-೬೦೦. ೨೦೦೩ರವರೆಗೂ ಅವರಿಗೆ ಸಿಗುತ್ತಿದ್ದ ವೇತನ ೯೦೦-೧೦೦೦ರೂ. ಮಾತ್ರ.

ಗುತ್ತಿಗೆ ವ್ಯವಸ್ಥೆಯಡಿ ಅವಶ್ಯಕ ಸೇವೆ
ತ್ಯಾಜ್ಯ ನಿರ್ವಹಣೆಯ ಕೆಲಸವನ್ನು ಗುತ್ತಿಗೆಗೆ ನೀಡುವುದು ಗುತ್ತಿಗೆ ಕಾರ್ಮಿಕ ಕಾಯ್ದೆ, ೧೯೭೦ರ ಉಲ್ಲಂಘನೆಯಾಗಿದೆ. ಕಾಯ್ದೆ ಪ್ರಕಾರ ಯಾವ ಕೆಲಸವು ನಿರಂತರವಾಗಿ ನಡೆಯಬೇಕಾಗಿದೆಯೊ ಮತ್ತು ಅವಶ್ಯಕ ಕೆಲಸವಾಗಿದೆಯೊ ಆ ಕೆಲಸವನ್ನು ಮಾಲೀಕರು ಗುತ್ತಿಗೆಗೆ ನಿಡುವಂತಿಲ್ಲ. ನಗರ ಸ್ವಚ್ಛತೆಯು ಮುನಿಸಿಪಾಲಿಟಿಯು ನಿರ್ವಹಿಸಬೇಕಾದ ನಿರಂತರವಾದ ಮುಖ್ಯ ಕೆಲಸವೂ ಆಗಿದೆ. “ಎಸೆನ್ಶಿಯಲ್ ಸರ್ವಿಸಸ್ ಮೇನ್‌ಟೆನೆನ್ಸ್ ಆಕ್ಟ್ ೨೦೧೩”(ಅಗತ್ಯ ಸೇವಾ ನಿರ್ವಹಣಾ ಕಾಯ್ದೆ)ಜಾರಿಗೊಳಿಸಿದಾಗಿನಿಂದ ಒಳಚರಂಡಿ ಮತ್ತು ತ್ಯಾಜ್ಯ ನಿರ್ವಹಣೆಯನ್ನು “ಅಗತ್ಯ ಸೇವೆ” ಎಂದು ಪರಿಗಣಿಸಲಾಗಿದೆಯಲ್ಲದೆ ನೈರ್ಮಲ್ಯ ಕೆಲಸಗಾರರು ಮುಷ್ಕರ ಹೂಡುವುದನ್ನು ನಿಷೇಧಿಸಲಾಗಿದೆ. ಆದರೆ ನೈರ್ಮಲ್ಯ ಕೆಲಸವನ್ನು “ಅಗತ್ಯ”ವೆಂದು ಪರಿಗಣಿಸುವ ಸರ್ಕಾರ ಆ ಕೆಲಸವನ್ನು ಗುತ್ತಿಗೆಗೆ ನೀಡಿದೆ.
ಗುತ್ತಿಗೆ ಕಾಯ್ದೆ ವ್ಯಾಪ್ತಿಯೊಳಗಡೆಯೂ ಪದೇ ಪದೇ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ. ಗುತ್ತಿಗೆ ಕಾಯ್ದೆಯು, ಮಾಡುವ ಕೆಲಸವು ಒಂದೇ ರೀತಿಯದಾಗಿದ್ದರೆ ವೇತನವು ಒಂದೇ ಆಗಿರಬೇಕೆಂದು ಹೇಳುತ್ತದೆ. ಆದರೆ ಈ ಅವಧಿಯಲ್ಲಿ ಕೆಲಸ ಮಾಡುತ್ತಿದ್ದ ೫೦೦೦ಖಾಯಂ ಕಾರ್ಮಿಕರಿಗೆ ಆರೋಗ್ಯ ಸೇವೆ, ರಜೆ ಮತ್ತು ನಿವೃತ್ತಿ ಸೌಲಭ್ಯದೊಂದಿಗೆ ೫೦೦೦-೬೦೦೦ರೂ. ವೇತನ ಸಿಗುತ್ತಿದ್ದರೆ, ೮೦೦೦ ಗುತ್ತಿಗೆ ಕಾರ್ಮಿಕರಿಗೆ ರಜೆಯೂ ಸೇರಿದಂತೆ ಯಾವ ಸೌಲಭ್ಯವೂ ಇಲ್ಲದೆ ಸಿಗುತ್ತಿದ್ದ ವೇತನ ೫೦೦-೬೦೦ರೂ. ಮಾತ್ರ. ಅಂದಿನಿಂದಲೂ ಈ ತಾರತಮ್ಯ ಹೆಚ್ಚುತ್ತಲೇ ಇದೆ. ಇಂತಹ ತಾರತಮ್ಯದ ವಿರುದ್ಧ ಸಫಾಯಿ ಕರ್ಮಚಾರಿಗಳ ಹಕ್ಕು ಮತ್ತು ಘನತೆಗಾಗಿ ತೊಂಬತ್ತರ ದಶಕದಿಂದಲೂ ಹೋರಾಟ ಮಾಡುತ್ತಿರುವ ಸಂಘಟನೆಗಳ ಪರಿಚಯವನ್ನು ಇಲ್ಲಿ ನೀಡಲಾಗಿದೆ.

ಗುತ್ತಿಗೆ ಕೊನೆಗೊಳಿಸಲು ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘವು ನಡೆಸಿದ ಹೋರಾಟ
ಗುತ್ತಿಗೆ ವ್ಯವಸ್ಥೆಯ ಅನ್ಯಾಯವನ್ನು ವಿರೋಧಿಸಲು ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಗುತ್ತಿಗೆ ಪೌರಕಾರ್ಮಿಕರ ಸಂಘವು ೨೦೦೧ರಲ್ಲಿ ಆರಂಭವಾಯಿತು. ಎನ್.ಆಂಜನೇಯಲು, ಕಾಮ್ರೇಡ್ ಬಾಲಕೃಷ್ಣನ್ ಮತ್ತು ಬಿ.ಎ. ಕೇಶವಮೂರ್ತಿಯವರು ಪದಾಧಿಕಾರಿಗಳಾಗಿದ್ದರು. ಜಯಮ್ಮ, ವೆಂಕಟಮ್ಮ, ಕಸ್ತೂರಿ, ಶಾರದಮ್ಮ, ರವಿ, ಕೃಷ್ಣ, ಪೆದ್ದಣ್ಣ ಹಾಗೂ ಇನ್ನು ಹಲವಾರು ಕಾರ್ಮಿಕರು ಸಕ್ರಿಯರಾಗಿ ತೊಡಗಿಕೊಂಡರು. ಕಾರ್ಮಿಕ ಹಕ್ಕುಗಳ ಹೋರಾಟಗಾರರಾದ ಬಾಬು ಮ್ಯಾಥ್ಯೂಸ್, ಮೋಹನ ಮಾಣಿಯವರು ಪ್ರಮುಖ ಪಾತ್ರವಹಿಸಿದರು. ಕಾರ್ಮಿಕರನ್ನು ಸಂಘಟಿಸುತ್ತಿದ್ದಾರೆಂಬ ಕಾರಣಕ್ಕಾಗಿ ಜುಲೈ ೨೦೦೧ರಲ್ಲಿ ಶಿವನಹಳ್ಳಿ ವಾರ್ಡಿನಲ್ಲಿ ೫೮ಕಾರ್ಮಿಕರನ್ನು ವಜಾಮಾಡಲಾಯಿತು. ಸಂಘವು ಪಾಲಿಕೆ ಅಧಿಕಾರಿಗಳೊಂದಿಗೆ, ಕಾರ್ಮಿಕ ಆಯುಕ್ತರೊಂದಿಗೆ, ಕಾರ್ಮಿಕ ಇಲಾಖೆಯೊಂದಿಗೆ ಚರ್ಚೆ ನಡೆಸಿತು. ಹಲವಾರು ಪ್ರತಿಭಟನಾ ಧರಣಿಗಳನ್ನು, ಸಾರ್ವಜನಿಕ ಸಭೆಗಳನ್ನು, ಪತ್ರಿಕಾ ಗೋಷ್ಟಿಗಳನ್ನು ಹಾಗೂ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಮಿಕರ ಸಮಸ್ಯೆಗಳತ್ತ ಗಮನ ಸೆಳೆಯಿತು. ಕನಿಷ್ಠ ವೇತನ ಕುರಿತು ಚರ್ಚೆನಡೆಸಲು ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ ಸಂಘದ ಸದಸ್ಯರು ಮತ್ತು ಗುತ್ತಿಗೆದಾರರ ಸಂಘದವರೊಂದಿಗೆ ಸಂಧಾನ ಸಭೆ ನಡೆಸಲಾಯಿತು. “ನಾವು ನಿಮ್ಮ ನಗರವನ್ನು ಸ್ವಚ್ಛಮಾಡುತ್ತೇವೆ ನೀವು ನಿಮ್ಮ ಆಡಳಿತವನ್ನು ಸ್ವಚ್ಛಗೊಳಿಸಿ” ಎಂಬ ಘೋಷವಾಕ್ಯವನ್ನಿಟ್ಟುಕೊಂಡು ಪ್ರತಿಭಟನಾ ಆಂದೋಲನವನ್ನು ನಡೆಸಲಾಯಿತು. ಆಂದೋಲನವು ಈ ಕೆಳಗಿನ ಬೇಡಿಕೆಗಳನ್ನಿಟ್ಟುಕೊಂಡು ಹೋರಾಟ ನಡೆಸಿತು:
೧. ೧೪.೦೮.೨೦೦೧ರ ಕಾರ್ಮಿಕ ಆಯುಕ್ತರ ಆದೇಶವನ್ನು ಜಾರಿಗೊಳಿಸಿ ಕನಿಷ್ಠ ವೇತನ ರೂ.೨೧೪೬ನ್ನು
ನಿಗದಿಮಾಡಬೇಕು.
೨. ಮಹಿಳೆ ಮತ್ತು ಪುರುಷರಿಬ್ಬರಿಗೂ ಸಮಾನ ವೇತನ ನೀಡಬೇಕು
೩. ಗುತ್ತಿಗೆ ಕಾರ್ಮಿಕ ಕಾಯ್ದೆ ಉಲ್ಲಂಘಿಸುವ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕು.
೪. ಯೂನಿಫಾರಂ, ಗಂಬೂಟ್ಸ್, ಗ್ಲೋವ್ಸ್ ಮತ್ತು ಬ್ಯಾಡ್ಜುಗಳನ್ನು ಕಾರ್ಮಿಕರಿಗೆ ನೀಡಬೇಕು.
೫.ಕಾರ್ಮಿಕ ಸಂಘಟನೆಯಲ್ಲಿ ಸಕ್ರಿಯರಾಗಿರುವ ಕಾರಣಕ್ಕೆ ವಜಾ ಮಾಡಿರುವ ಕಾರ್ಮಿಕರನ್ನು ಹಿಂತೆಗೆದುಕೊಳ್ಳಬೇಕು.
ವಜಾ ಮಾಡಿರುವ ಕೆಲಸಗಾರರನ್ನು ಹಿಂದೆ ತೆಗೆದುಕೊಳ್ಳದಿದ್ದರೆ ಕಾರ್ಪೊರೇಷನ್ ಕಚೇರಿ ಮುಂದೆ ಮುಷ್ಕರ ಹೂಡುವುದಾಗಿ ಸಂಘ ಹೇಳಿತು.
ವಜಾಮಾಡಲಾಗಿದ್ದ ೫೮ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವುದರೊಂದಿಗೆ ಆಂದೋಲನವು ಯಶಸ್ವಿಯಾಗಿ ಕೊನೆಗೊಂಡಿತು. ಆದರೆ ಪಾಲಿಕೆಯು ಗುತ್ತಿಗೆದಾರರಿಗೆ ಹಣ ನೀಡುತ್ತಿದ್ದರೂ ಅವರು ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಹಾಗೂ ಉಳಿದ ಸೌಲಭ್ಯಗಳನ್ನು ನೀಡದಿದ್ದುರಿಂದಾಗಿ ಹೋರಾಟ ಮುಂದುವರೆಯಿತು. ಅಂತಿಮವಾಗಿ ಹೋರಾಟಕ್ಕೆ ಫಲ ದೊರೆಯಿತು. ಆಗಸ್ಟ್ ೨೦೦೨ರಲ್ಲಿ ಕರ್ನಾಟಕ ಸರ್ಕಾರವು ಕನಿಷ್ಠ ವೇತನವನ್ನು ಘೋಷಿಸಿ ಗೆಜೆಟ್ ನೋಟಿಫಿಕೇಷನ್ ನೀಡಿತು. ಗುತ್ತಿಗೆದಾರರು ಗೆಜೆಟ್ ನೊಟಿಫಿಕೇಶನ್ ಪ್ರಶ್ನಿಸಿ ಕೋರ್ಟಿಗೆ ಹೋದಾಗ, ಕೋರ್ಟು ನೋಟಿಫಿಕೇಶನನ್ನು ಎತ್ತಿ ಹಿಡಿಯಿತು. ಆ ಪ್ರಕಾರ ಕನಿಷ್ಠ ವೇತನ ಕಾಯ್ದೆ ೧೯೪೮ರ ಅನ್ವಯ ಸರ್ಕಾರ ಕನಿಷ್ಠ ವೇತನ ನಿಗದಿ ಮಾಡುವವರೆಗೂ ರೂ.೧೮೦೦ರನ್ನು ಕನಿಷ್ಠ ವೇತನವಾಗಿ ನೀಡಬೇಕೆಂದು ಆದೇಶಿಸಲಾಯಿತು.
ನೋಟಿಫಿಕೇಷನ್‌ಗೆ ಅನುಗುಣವಾಗಿ ಬೃಹತ್ ಬೆಂಗಳೂರು ನಗರ ಪಾಲಿಕೆಯು ಜಾರಿಯಲ್ಲಿದ್ದ ಗುತ್ತಿಗೆಯನ್ನು ತೆಗೆದು ಹೊಸ ಟೆಂಡರ್‌ಗಳಿಗೆ ಆಹ್ವಾನ ನೀಡಿತು. ಜೂನ್ ೨೦೦೩ರಲ್ಲಿ ಟೆಂಡರ್‌ಗಳು ಜಾರಿಗೊಂಡವು. ಹೊಸ ಟೆಂಡರ್‌ನಲ್ಲಿ ನೀಡಲಾದ ಸೌಲಭ್ಯಗಳೆಂದರೆ: ಕೆಲಸದ ಒಳಗೆ ಮತ್ತು ಹೊರಗೆ ದೈಹಿಕ ಅಪಘಾತಗಳಾದರೆ ವರ್ಕ್ಮೆನ್ ಕಾಂಪೆನ್‌ಸೇಷನ್ ಆಕ್ಟ್ ಪ್ರಕಾರ ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕು; ಗ್ಲೋವ್ಸ್, ಗಂಬೂಟ್ಸ್, ಮಾಸ್ಕ್ ಇತ್ಯಾದಿ ಸುರಕ್ಷಾ ಸಲಕರಣೆಗಳನ್ನು ನೀಡಬೇಕು;ಶೌಚಾಲಯ, ಕಚೇರಿ ಮತ್ತು ಸಮವಸ್ತ್ರದ ಸೌಲಭ್ಯಗಳನ್ನು ನೀಡಬೇಕು.
ನೋಟಿಫಿಕೇಷನ್‌ಗೆ ಗುತ್ತಿಗೆದಾರರ ಪ್ರತಿಕ್ರಿಯೆ ವ್ಯತಿರಿಕ್ತವಾಗಿತ್ತು. ೧೦೦೦೦ ಕಾರ್ಮಿಕರಿಗೆ ವೇತನವನ್ನು ಪಡೆದುಕೊಂಡು ೭೦೦೦ ಕಾರ್ಮಿಕರನ್ನು ನೇಮಕಮಾಡಿಕೊಂಡು ೧೭೫ಲಕ್ಷ ರೂಪಾಯಿಗಳ ಲಾಭವನ್ನು ಗುತ್ತಿಗೆದಾರರು ದೋಚಿದ್ದರು. ಇದು, ಸಂಘಟಿತರಾಗಿದ್ದ ಕಾರ್ಮಿಕರನ್ನು ತೆಗೆದುಹಾಕಿ ಕಾರ್ಮಿಕರ ಕಾಯ್ದೆ ಮತ್ತು ಹಕ್ಕುಗಳ ಅರಿವಿಲ್ಲದ ಹೊಸ ಕಾರ್ಮಿಕರನ್ನು ನೇಮಿಸಿಕೊಳ್ಳುವ ಪ್ರಯತ್ನವಾಗಿತ್ತು. ಬಹಳಷ್ಟು ಪೌರಕಾರ್ಮಿಕರಿಗೆ ೧೮೦೦ ರೂ.ಕ್ಕಿಂತಲೂ ಕಡಿಮೆ ವೇತನ ದೊರಕುತ್ತಿತ್ತು. ಹಾಗೂ ಯಾವ ಸೌಲಭ್ಯಗಳೂ ದೊರೆತಿರಲಿಲ್ಲ. ಎಲ್ಲಿ ಕಾರ್ಮಿಕ ಸಂಘಟನೆ ಬಲವಾಗಿತ್ತೊ ಅಂತಹ ಸ್ಥಳಗಳಲ್ಲಿ ಸುಮಾರು ೧೦೦೦ಜನ ಪೌರಕಾರ್ಮಿಕರನ್ನು ಕೆಲಸದಿಂದ ವಜಾಮಾಡಲಾಗಿತ್ತು. ಇಷ್ಟೆಲ್ಲ ಸಾಧ್ಯವಾದದ್ದು ಗುತ್ತಿಗೆದಾರರ, ಕಾರ್ಪೊರೇಟರುಗಳ ಮತ್ತು ಅಧಿಕಾರಶಾಹಿ ಕೂಟದಿಂದಾಗಿ.
ಸಂಘವು ಜನತಾ ನ್ಯಾಯಾಲಯವನ್ನು ಆಯೋಜಿಸಿತು. ಅದರ ಪರಿಣಾಮವಾಗಿ ಸರ್ಕಾರ ಕೂಡಲೇ ಕನಿಷ್ಠ ವೇತನ ಕೊಡುವುದಾಗಿ ಘೋಷಿಸಿತು. ಇದು ಬಹುದೊಡ್ಡ ವಿಜಯವೇ ಆದರೂ ಗುತ್ತಿಗೆದಾರರು ವೇತನ ನೀಡಿದ ಮರುದಿನ ರೂ.೨೦೦-೪೦೦ನ್ನು ಹಿಂತಿರುಗಿಸಬೇಕು. ಇಲ್ಲವಾದರೆ ಕೆಲಸದಿಂದ ತೆಗೆದುಹಾಕುವುದಾಗಿ ಕಾರ್ಮಿಕರನ್ನು ಬೆದರಿಸಿದ್ದರು. ಬೆಂಗಳೂರಿನಿಂದ ಹೊರಗಡೆ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಅಲ್ಲಿ ಮಹಿಳೆಯರಿಗೆ ೧೦೦೦ರೂ. ವೇತನ ದೊರೆತರೆ ಪುರುಷರಿಗೆ ೧೦೦೦-೧೨೦೦ರೂ. ವೇತನ ಸಿಗುತ್ತಿದೆ.
ಪೌರಕಾರ್ಮಿಕರ ದಶಕದ ಹೋರಾಟದ ಫಲವಾಗಿ ಆಗಸ್ಟ್ ೨೦೧೬ರಲ್ಲಿ ಸರ್ಕಾರವು ರೂ.೧೪,೪೦೦ಕನಿಷ್ಠ ವೇತನವನ್ನು ಪಾಲಿಕೆಯಿಂದಲೇ ನೇರವಾಗಿ ಪಾವತಿಸುವಂತೆ ನಿಗದಿಪಡಿಸಿತಲ್ಲದೆ ಇಎಸ್‌ಐ, ಪಿಎಫ್, ಕುಡಿಯುವ ನೀರು, ಶೌಚಾಲಯ, ಉಪಾಹಾರ ಮತ್ತು ಸುರಕ್ಷಾ ಸಲಕರಣೆಗಳ ಸೌಲಭ್ಯಗಳನ್ನು ನೀಡಲು ಆದೇಶಿಸಿತು. ಇದಿನ್ನೂ ಸಂಪೂರ್ಣವಾಗಿ ಜಾರಿಯಾಗಬೇಕಾಗಿದೆ.

ಹೋರಾಟದ ಇತಿಹಾಸ: ಐ.ಪಿ.ಡಿ ಸಾಲಪ್ಪ ವರದಿ

ಕರ್ನಾಟಕದಲ್ಲಿ ಘನತೆಗಾಗಿ ಮತ್ತು ಕಾರ್ಮಿಕರಾಗಿ ತಮ್ಮ ಹಕ್ಕುಗಳಿಗಾಗಿ ನಡೆಸಿರುವ ಹೋರಾಟದ ಮೂಲವಿರುವುದು ಸ್ವಾತಂತ್ರö್ಯ ಬಂದ ಮೂರನೇ ದಶಕದಲ್ಲಿ ಬಂದ ಮಹತ್ವದ ವರದಿಯಲ್ಲಿ.

ಕರ್ನಾಟಕದ ಪೌರಕಾರ್ಮಿಕರ ಹೋರಾಟ ಇತಿಹಾಸದಲ್ಲಿನ ಹೆಗ್ಗುರುತು ಐ.ಪಿ.ಡಿ ಸಾಲಪ್ಪ ವರದಿ
ಕರ್ನಾಟಕ ಸರ್ಕಾರವು ಸೆಪ್ಟಂಬರ್ ೨೩, ೧೯೭೨ರಲ್ಲಿ ಗುಡಿಸುವ ಹಾಗೂ ಮಲಬಾಚುವವರ ಬದುಕುವ ಮತ್ತು ಕೆಲಸದ ಪರಿಸ್ಥಿತಿ ಕುರಿತು ಅಧ್ಯಯನ ಮಾಡಲು ನೇಮಿಸಿದ ಸಮಿತಿಗೆ ಶ್ರೀ ಐ.ಪಿ.ಡಿ.ಸಾಲಪ್ಪ ಅವರನ್ನು ಅಧ್ಯಕ್ಷ್ಯರನ್ನಾಗಿ ನೇಮಿಸಿತು. ಮಾರ್ಚ್ ೩, ೧೯೭೩ರಲ್ಲಿ ಸಾಲಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ಮೊದಲ ಸಭೆಗೆ ಮುಖ್ಯಮಂತ್ರಿಗಳಾಗಿದ್ದ ಶ್ರೀ ದೇವರಾಜ ಅರಸು ಮತ್ತು ಪೌರಾಡಳಿತ ಸಚಿವರಾಗಿದ್ದ ಶ್ರೀ ಬಿ.ಬಸವಲಿಂಗಪ್ಪನವರು ಭಾಗವಹಿಸಿದ್ದರು.

ಹೋರಾಟವೇ ಆದ ಸಮಿತಿಯ ಕೆಲಸ
ಸಮಿತಿ ರಚನೆ ೧೯೭೨ರಲ್ಲೇ ಆದರೂ ಸಮಿತಿಯ ಕೆಲಸ ಆರಂಭವಾದದ್ದು ಜನವರಿ, ೧೯೭೪ರಲ್ಲಿ. ಹಲವಾರು ತೊಡಕುಗಳು ಸಮಿತಿಗೆ ಎದುರಾದವು. ಯಾವ ಅಧಿಕಾರಿಯೂ ಬರಲು ಸಿದ್ಧವಿರದ ಕಾರಣಕ್ಕೆ ಕಾರ್ಯದರ್ಶಿಯ ಹುದ್ದೆ ಖಾಲಿ ಉಳಿದಿತ್ತು. ನಿವೃತ್ತ ಅಧಿಕಾರಿಯೊಬ್ಬರು ಒಪ್ಪಿಕೊಂಡರಾದರೂ ಐದು ತಿಂಗಳ ನಂತರ ರಾಜೀನಾಮೆ ನೀಡಿದರು. ನಂತರ ನವೆಂಬರ್‌ನಲ್ಲಿ ನೇಮಕವಾದ ಅಧಿಕಾರಿಯನ್ನು ವರ್ಗಮಾಡಲಾಯಿತು. ಕಚೇರಿ, ಸಿಬ್ಬಂದಿಯಂತಹ ಸೌಲಭ್ಯಗಳು ಸಹ ಸಿಗಲಿಲ್ಲ. ಅಗತ್ಯವಾದ ಹಣಕಾಸನ್ನು ಮಂಜೂರು ಮಾಡಲಿಲ್ಲ. ಸಿಬ್ಬಂದಿಯನ್ನು ನೇಮಕ ಮಾಡಲು ಸಮಿತಿಗೇ ಸೂಚಿಸಿದ್ದರಿಂದ ಆರು ಜನ ಸಿಬ್ಬಂದಿಗಳನ್ನು ನೇಮಕಮಾಡಲಾಯಿತು. ಆದರೆ ಹಣಕಾಸು ಮಂಜೂರಾಗದ ಕಾರಣ ಅವರೆಲ್ಲ ಐದು ತಿಂಗಳಕಾಲ ಸಂಬಳವಿಲ್ಲದೆ ದುಡಿದರು. ಕಚೇರಿಗೆ ಸ್ಥಳವಿಲ್ಲದೆೆ, ಯಾವುದೋ ಕಚೇರಿಯ ಒಂದು ಮೂಲೆಯಲ್ಲಿ ಮೇಜು, ಕುರ್ಚಿಗಳನ್ನು ಬಾಡಿಗೆಗೆ ಪಡೆದುಕೊಂಡು ಸಮಿತಿಯು ತನ್ನ ಮಹತ್ವದ ಕೆಲಸವನ್ನು ಆರಂಭಿಸಿತು.
ಪ್ರಯಾಣ ಭತ್ಯೆ ಮಂಜೂರಾಗದೆ ಜನವರಿ ೧೯೭೪ರವರೆಗೂ ಸದಸ್ಯರು ಪ್ರಯಾಣ ಮಾಡಲಾಗಲಿಲ್ಲ. ಮುಂದೆ ಸಮಿತಿ ಸದಸ್ಯರು ರಾಜ್ಯದ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿದರು. ತುಲನಾತ್ಮಕ ಅಧ್ಯಯನದ ದೃಷ್ಟಿಯಿಂದ ಬಾಂಬೆ, ಡೆಲ್ಲಿ, ಕಲ್ಕತ್ತ ಮತ್ತು ಭುವನೇಶ್ವರಗಳಿಗೆ ಭೇಟಿ ನೀಡಲಾಯಿತು.
ವಿವರವಾದ ಪ್ರಶ್ನಾವಳಿಯನ್ನು ಜುಲೈ ೨೫, ೧೯೭೩ರಲ್ಲಿ ಸಿದ್ಧಪಡಿಸಿ ಎಲ್ಲಾ ಸ್ಥಳೀಯ ಸಂಸ್ಥೆಗಳು, ಸಾರ್ವಜನಿಕ ಸಂಸ್ಥೆಗಳು, ಸಮಾಜೋ-ಆರ್ಥಿಕ ಸಂಸ್ಥೆಗಳಿಗೆ, ಶಾಸಕರುಗಳಿಗೆ ಕಳುಹಿಸಲಾಯಿತು. ಡಿಸೆಂಬರ್‌ನಲ್ಲಿ ಪ್ರಶ್ನಾವಳಿಗಳು ಬಂದವಾದರೂ ಒಂದೇ ಒಂದನ್ನು ಸಹ ಪೂರ್ತಿವಾಗಿ ಭರ್ತಿಮಾಡಿರಲಿಲ್ಲ. ಜೊತೆಗೆ ಹಲವಾರು ತಪ್ಪುಗಳಿದ್ದವು. ಪಿ. ಕೋದಂಡರಾಮ್ ಅವರು ಮಾತ್ರ ನಿಗದಿತ ಸಮಯದೊಳಗೆ ಮತ್ತು ಉತ್ತಮ ಸಲಹೆಗಳೊಂದಿಗೆ ಕಳುಹಿಸಿದ್ದರು.
ಸಮಿತಿಯು ಬಹಳ ಪ್ರಯತ್ನಪಟ್ಟು ಮೊದಲ ಬಾರಿಗೆ ಪೌರಕಾರ್ಮಿಕರ ಜನಗಣತಿಯನ್ನು ಮಾಡಿತು. ರಾಜ್ಯದ ವಿವಿಧ ಮುನಿಸಿಪಾಲಿಟಿಗಳು ಮತ್ತು ಕಾರ್ಪೊರೇಷನ್‌ಗಳಲ್ಲಿ ಒಟ್ಟು ೧೨೩೫೧ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರಲ್ಲಿ ೭೦೮೮ ಪುರುಷರು ಮತ್ತು ೫೨೬೩ ಮಹಿಳೆಯರು. ಫ್ಯಾಕ್ಟರಿಗಳಲ್ಲಿ, ರೈಲ್ವೆಯಲ್ಲಿ, ಪೊಲೀಸ್ ಇಲಾಖೆಯಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಕೆಲಸಮಾಡುವ ಕಾರ್ಮಿಕರನ್ನು ಒಳಗೊಂಡಿರಲಿಲ್ಲ. ಹಣಕಾಸಿನ ತೊಂದರೆಯ ನಡುವೆಯೂ ಸಾಮಾಜಿಕ, ಆರ್ಥಿಕ ಅಂಶಗಳ ಕುರಿತು ಮೌಲ್ಯಯುತ ಮಾಹಿತಿಯನ್ನು ಸಮಿತಿ ಕಲೆಹಾಕಿತು. ಮೇಲ್ವಿಚಾರಣೆ ಸಿಬ್ಬಂದಿಗಳು ಮಾಡುವ ಮೌಖಿಕ ನಿಂದನೆ, ಅವಮಾನ, ಸಾರ್ವಜನಿಕರು ಮಾಡುವ ಅವಮಾನ, ವಸತಿಗೆ ಸಂಬಂಧಿಸಿದ ನಿರ್ಬಂಧಗಳು ಹಾಗೂ ಇನ್ನಿತರ ತಾರತಮ್ಯಗಳನ್ನು ವಿವರವಾಗಿ ದಾಖಲಿಸಲಾಯಿತು. ಮಂಡ್ಯದ ಬೆಳ್ಳೂರಿನಲ್ಲಿ ಪೌರಕಾರ್ಮಿಕರ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡಿರಲಿಲ್ಲ. ಸ್ಮಶಾನದಲ್ಲಿ ಹೆಣ ಹೂಳಲು ಅಥವಾ ಹೆಣ ಸಾಗಿಸಲು ವಾಹನ ನೀಡುವುದಕ್ಕೂ ನಿರ್ಬಂಧ ಹೇರÀಲಾಗಿತ್ತು. ಸರ್ಕಾರದ ವೈಫಲ್ಯಗಳನ್ನು ಸಹ ಗುರುತಿಸಲಾಗಿತ್ತು. ಒಟ್ಟು ೩೨ ಸಭೆಗಳನ್ನು ನಡೆಸಲಾಗಿತ್ತು.
ಸರ್ಕಾರವೇ ನೇಮಿಸಿದ ಸಮಿತಿಯಾಗಿದ್ದರೂ ಸಹ ಸರ್ಕಾರದ ವರದಿಯ ಪರಿಧಿಯನ್ನು ದಾಟಿ, ಸಾಮಾಜಿಕ-ಆರ್ಥಿಕ ಶ್ರೇಣಿಯ ಕಟ್ಟಕಡೆಯಲ್ಲಿರುವವರ ಮೂಲಭೂತ ಹಕ್ಕುಗಳನ್ನು ಖಾತ್ರಿ ಮಾಡುವಲ್ಲಿ ಸರ್ಕಾರ ವಿಫಲವಾಗಿರುವುದನ್ನು ವರದಿಯು ಟೀಕಿಸುತ್ತದೆಯಲ್ಲದೆ ಆಳುವ ವರ್ಗದ ಹಿತಾಸಕ್ತಿಗಿಂತ ಭಿನ್ನವಾದ ದನಿಯನ್ನು ದಾಖಲಿಸುತ್ತದೆ. ಮಾರ್ಕ್ಸ್ವಾದಿ ಚಿಂತಕ ಗ್ರಾಮ್ಶಿಯವರ ಮಾತಿನಲ್ಲಿ ಹೇಳುವುದಾದರೆ ಅಂತಹ ಟೀಕೆಗಳು ‘ಪ್ರತಿ-ಯಾಜಮಾನ್ಯ ಶಕ್ತಿಯನ್ನು ಮತ್ತು ಸಮಾಜದ ಪ್ರಜಾಸತ್ತಾತ್ಮಕ ಪರಿವರ್ತನೆಯ ಬೀಜಗಳನ್ನು ಹೊಂದಿರುತ್ತವೆ’.

ಭಾರತ ಸ್ವಾತಂತ್ರ್ಯದ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಕರೆ

ಜವರಹರಲಾಲ್ ನೆಹರು ಅವರಿಗೆ ಅಂಬೇಡ್ಕರ್ ಅವರು ೧೮ ಡಿಸೆಂಬರ್ ೧೯೪೭ರಲ್ಲಿ ಬರೆದ ಪತ್ರದಲ್ಲಿ, ಪಾಕಿಸ್ತಾನವು ನರ‍್ಮಲ್ಯ ಕೆಲಸದಲ್ಲಿ ತೊಡಗಿರುವವರನ್ನು ಭಾರತಕ್ಕೆ ಹೋಗಲು ಬಿಡುತ್ತಿಲ್ಲ ಎಂಬ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆ ಕುರಿತು ಅಂಬೇಡ್ಕರ್ ಹೀಗೆ ಉಲ್ಲೇಖಿಸಿದ್ದಾರೆ:

“ಪಾಕಿಸ್ತಾನ ರ‍್ಕಾರವು ತಮ್ಮ ಪ್ರದೇಶದಿಂದ ಪರಿಶಿಷ್ಟ ಜಾತಿಗಳ ಒಕ್ಕುಲೆಬ್ಬಿಸುವುದನ್ನು ತಡೆಯಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ನನಗನಿಸುವ ಪ್ರಕಾರ ಇದರ ಹಿಂದಿರುವ ಕಾರಣ, ಭೂಒಡೆತನ ಹೊಂದಿರುವ ಜನರಿಗೆ ಕೀಳು ಕೆಲಸ ಮಾಡಿಕೊಂಡು ಭೂಹೀನ ಕೂಲಿಗಳಾಗಿ ಸೇವೆ ಸಲ್ಲಿಸುವ ಸಲುವಾಗಿ ಪರಿಶಿಷ್ಟ ಜಾತಿಗಳು ಪಾಕಿಸ್ತಾನದಲ್ಲಿ ಉಳಿದುಕೊಳ್ಳಬೇಕು ಎಂಬುದಾಗಿದೆ. ಗುಡಿಸುವವರನ್ನು ಅಗತ್ಯ ಸೇವೆಗಳಿಗೆ ಸೇರಿದವರೆಂದು ಮತ್ತು ಒಂದು ತಿಂಗಳ ನೋಟೀಸ್ ನೀಡದೆ ಬಿಡುಗಡೆ ಮಾಡಲಾಗದೆಂದು ಘೋಷಿಸುವ ಮೂಲಕ ಅವರನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವ ಬಗ್ಗೆ ರ‍್ಕಾರ ಚಿಂತಿಸುತ್ತದೆ.”