ಪದೇ ಪದೇ ಹಿನ್ನಡೆಯುಂಟಾದರೂ ಕನಿಷ್ಠ ವೇತನಕ್ಕಾಗಿ ಪೌರಕಾರ್ಮಿಕರು ನಡೆಸಿದ ಹೋರಾಟ ಕಳೆದ ದಶಕದಲ್ಲಿ ತೀವ್ರತೆಯನ್ನು ಪಡೆದುಕೊಂಡು ಬೆಂಗಳೂರಿನಲ್ಲಿ ಮಹತ್ವ ಬೆಳವಣಿಗೆಯನ್ನು ಕಂಡಿದೆ. ಈ ಹಂತದ ಹೋರಾಟದಲ್ಲಿ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ ಪುರಸಭೆಗಳ ಪೌರಕಾರ್ಮಿಕರ ಮಹಾಸಂಘ ಹಾಗೂ ಏಐಸಿಸಿಟಿಯು (ಆಲ್ ಇಂಡಿಯಾ ಸೆಂಟರ್ ಫಾರ್ ಟ್ರೇಡ್ ಯೂನಿಯನ್ಸ್)ಗೆ ಅಫಿಲಿಯೇಟ್ ಆಗಿರುವ ಬಿಬಿಎಂಪಿ ಪೌರಕಾರ್ಮಿಕರ ಸಂಘವು ಪ್ರಮುಖ ಪಾತ್ರವಹಿಸಿದವು. ಬೆಂಗಳೂರು ಜಲಮಂಡಳಿಯಲ್ಲಿ ಮ್ಯಾನ್ಯುವಲ್ ಸ್ಕಾö್ಯವೆಂಜಿಂಗ್ ಕೆಲಸ ಮಾಡುತ್ತಿರುವ ಕಾರ್ಮಿಕರು, ಹೆಚ್.ಎ.ಎಲ್, ಬಿ.ಹೆಚ್.ಇ.ಎಲ್, ಬಿ.ಇ.ಎಂಎಲ್, ಬಿ.ಬಿ.ಎಂ.ಪಿ ಲೈಬ್ರರಿಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ನಿಮ್ಹಾನ್ಸ್ ಹಾಗೂ ಇತರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಶಾಪಿಂಗ್ ಮಾಲ್ಗಳು, ಹೋಟೆಲುಗಳು, ಬಸ್ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಸಹ ಹೋರಾಟ ಒಳಗೊಳ್ಳುತ್ತಿದೆ. ಇವರೆಲ್ಲರೂ ಗುತ್ತಿಗೆ ಕಾರ್ಮಿಕರೇ ಅಗಿದ್ದು ಬದುಕುವ ವೇತನವಾಗಲಿ, ಉತ್ತಮ ಕೆಲಸದ ವಾತಾವರಣವಾಗಲಿ ಇಲ್ಲದೆ ದುಡಿಯುತ್ತಿದ್ದಾರೆ. ಬಹುಪಾಲು ಕಾರ್ಮಿಕರು ದಲಿತ ಸಮುದಾಯಕ್ಕೆ ಸೇರಿದವರು.
ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಹೋರಾಟದ ಜೊತೆಗೆ ಜೂನ್ ೧೨-೧೩, ೨೦೧೭ರಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಮಣಿದ ಸರ್ಕಾರವು ಜುಲೈ ೧೨, ೨೦೧೭ರಂದು ಭ್ರಷ್ಟ ಮತ್ತು ಶೋಷಣಾತ್ಮಕ ಗುತ್ತಿಗೆ ಪದ್ಧತಿಯನ್ನು ಕೂಡಲೇ ನಿಷೇಧಿಸಲು, ಎಲ್ಲಾ ಗುತ್ತಿಗೆಗಳನ್ನು ವಜಾ ಮಾಡಲು, ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಮಾಡಲು ಮತ್ತು ಎಲ್ಲ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಕ್ಯಾಬಿನೆಟ್ ನಿರ್ಧಾರವನ್ನು ತೆಗೆದುಕೊಂಡಿತು. ನಂತರ ಕರ್ನಾಟಕ ಸರ್ಕಾರ ಆದೇಶ ಓಚಿಂಚಿ ೧೨೬ ಖಿಒS೨೦೧೬, ಜಚಿಣeಜ ೦೭.೦೮.೨೦೧೭ ನೀಡಿ ಕೂಡಲೇ ಗುತ್ತಿಗೆ ವ್ಯವಸ್ಥೆಯನ್ನು ರದ್ದುಪಡಿಸಿ,ಸ್ಥಳೀಯ ಸಂಸ್ಥೆಗಳೇ ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಮಾಡಬೇಕೆಂದು ಹೇಳಿತು. ಬಿ.ಬಿ.ಎಂ.ಪಿಯು ಸಹ ಆದೇಶ ಓo. ಂ.ಂ.Shಚಿ/PSಖ/೨೨೫೦/೨೦೧೭-೧೮, ಜಚಿಣeಜ ೨೬.೧೦.೨೦೧೭ ಚಿಟಿಜ ೨೨.೧೨.೨೦೧೭ ನೀಡಿತು.
ಗುತ್ತಿಗೆ ವ್ಯವಸ್ಥೆಯನ್ನು ರದ್ದುಪಡಿಸುವ ಸರ್ಕಾರದ ನಿರ್ಧಾರವು ಪೌರಕಾರ್ಮಿಕರಿಗೆ ಸಂದ ಬಹುದೊಡ್ಡ ವಿಜಯವಾಗಿದೆ. ಸರ್ಕಾರವು ೧೧೦೦೦ ಪೌರಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ಆದೇಶಿಸಿದೆ. ಖಾಯಮಾತಿಗಾಗಿ ಕಾರ್ಮಿಕರನ್ನು ಗುರುತಿಸುವ ಯಾವ ಪ್ರಕ್ರಿಯೆಯೂ ಆರಂಭವಾಗಿಲ್ಲ. ಬೆಂಗಳೂರು ನಗರ ಒಂದರಲ್ಲೇ ೧೮೦೦೦ದಷ್ಟು ಪೌರಕಾರ್ಮಿಕರು ಕೆಲಸಮಾಡುತ್ತಿದ್ದಾರೆ. ಅವರಲ್ಲಿ ೪೦೦೦ ಪೌರಕಾರ್ಮಿಕರನ್ನು ಮಾತ್ರ ಖಾಯಂ ಮಾಡುವುದಾಗಿ ಹೇಳಿದೆ. ಗುಡಿಸುವ ಕೆಲಸ ಮಾಡುವವರಿಗೆ ಮಾತ್ರ ಬಿ.ಬಿ.ಎಂ.ಪಿ.ಯಿಂದ ನೇರ ಪಾವತಿ ಸಿಗುತ್ತಿದೆ. ಕಸ ಸಾಗಿಸುವ ಆಟೋರಿಕ್ಷಾ, ಲಾರಿ ಚಾಲಕರು, ಸಹಾಯಕರು, ಕಸ ತುಂಬುವ, ತೆರವು ಮಾಡುವ ಕೆಲಸಗಾರರು ಗುತ್ತಿಗೆ ವ್ಯವಸ್ಥೆಯಲ್ಲಿ ಕೆಲಸಮಾಡುತ್ತಿದ್ದು ಅವರ ಬಗ್ಗೆ ಏನೂ ಹೇಳಿಲ್ಲ. ಎಲ್ಲ ಕಾರ್ಮಿಕರನ್ನು ನೇರಪಾವತಿಯಲ್ಲಿ ಒಳಗೊಳ್ಳುವುದಕ್ಕಾಗಿ ಹಾಗೂ ಸುರಕ್ಷಾ ಸಲಕರಣೆಗಳಿರುವ ಉತ್ತಮ ಕೆಲಸದ ವಾತಾವರಣಕ್ಕಾಗಿ, ಘನತೆಯ ಬದುಕಿಗಾಗಿ ಪೌರಕಾರ್ಮಿಕರ ಹೋರಾಟ ಮುಂದುವರೆದಿದೆ.
ಗುತ್ತಿಗೆ ಪದ್ಧತಿಯನ್ನು ನಿಷೇಧಿಸುವ ಆದೇಶದೊಂದಿಗೆ ನೇರಪಾವತಿಗಾಗಿ ‘ನಿಜವಾದ’ ಪೌರಕಾರ್ಮಿಕರನ್ನು ಗುರುತಿಸಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೊಳಿಸಿರುವುದು ಕಾರ್ಮಿಕರಿಗೆ ಹಾನಿಕರವಾಗಿ ಪರಿಣಮಿಸಿದೆ. ಕಾರಣ ಹಲವಾರು ವರ್ಷಗಳಿಂದ ಗುತ್ತಿಗೆದಾರರಿಂದ ನೇಮಕಗೊಂಡು ಕೆಲಸ ಮಾಡುತ್ತ, ನಗದಿನಲ್ಲಿ ವೇತನ ಪಡೆಯುತ್ತಿದ್ದ ಹಲವಾರು ಕಾರ್ಮಿಕರು ಸೂಕ್ತ ದಾಖಲೆಗಳಿಲ್ಲವೆಂಬ ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದಾರೆ. ಈ ಬಯೋಮೆಟ್ರಿಕ್ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲವಾದ್ದರಿಂದ ಪಾಲಿಕೆಯಿಂದಲೇ ವೇತನ ಪಾವತಿಯಾಗುತ್ತಿದ್ದರೂ ಮೊದಲಿಗಿಂತ ಕಡಿಮೆ ವೇತನ ಸಿಗುತ್ತಿದೆ. ಇಲ್ಲಿಯೂ ಸಹ ಹೊಸ ವ್ಯವಸ್ಥೆಯನ್ನು ವಿಫಲಗೊಳಿಸಿ ಮತ್ತೆ ಗುತ್ತಿಗೆ ವ್ಯವಸ್ಥೆ ತರುವ ಗುತ್ತಿಗೆದಾರರ ಹುನ್ನಾರವಿದೆ.
ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘವು ಲೈಂಗಿಕ ಕಿರುಕುಳದ ವಿರುದ್ಧವೂ ಹೋರಾಟ ನಡೆಸಿದ್ದರ ಫಲವಾಗಿ ಮೊತ್ತಮೊದಲ ಬಾರಿಗೆ ಬಿಬಿಎಂಪಿಯು ಆಂತರಿಕ ದೂರು ಸಮಿತಿಯನ್ನು ನೇಮಿಸಿದ್ದು ಐತಿಹಾಸಿಕ ಹೆಜ್ಜೆಯಾಗಿದೆ. ಈಗದೂರು ಸಮಿತಿಯು ಕಿರುಕುಳ ಅನುಭವಿಸುತ್ತಿರುವ ಕಾರ್ಮಿಕರಿಂದ ದೂರುಗಳನ್ನು ಸ್ವೀಕರಿಸುತ್ತಿದೆ.

