ಸಂಸ್ಕೃತಿ, ಉಪಸಂಸ್ಕೃತಿ, ಪ್ರತಿಸಂಸ್ಕೃತಿ
ಮೂತ್ರಸೋಂಕು ತಗುಲಿ ಅದು ಔಷಧಿಗೆ ಸ್ಪಂದಿಸದೇ ಹೋದಾಗ ‘ಯೂರಿನ್ ಕಲ್ಚರ್’ ಎಂದು ಮಾಡುತ್ತಾರೆ. ಯೂರಿನ್ ಕಲ್ಚರ್ ಎಂದರೆ ಮೂತ್ರದಲ್ಲಿನ ಸೂಕ್ಷ್ಮಾ ಣುಗಳನ್ನು ಬೆಳೆಸಿ ಅವು ಯಾವ ನಿರ್ದಿಷ್ಟ ಔಷಧಿಗೆ ಸಾಯುತ್ತವೆ ಎಂದು ಕಂಡುಕೊಳ್ಳುವುದು. ಯಾವುದೇ ವೈರಾಣುವಿನಿಂದ ಬರುವ ತೀವ್ರ ತೆರನಾದ ಸೋಂಕಿಗೂ ಕಲ್ಚರ್ ಟೆಸ್ಟ್ ಮಾಡುತ್ತಾರೆ. ಸೂಕ್ಷ್ಮಾ ಣುಗಳ ವಿಚಾರದೊಂದಿಗೆ ವಿಷಯವನ್ನು ಯಾಕೆ ಪ್ರಾರಂಭಿಸಲಾಯಿತೆಂದರೆ ನಮ್ಮ …
ಮುತ್ಯಾಲಮ್ಮ : ಆಚರಣೆ-ಪುರಾಣ
ಮುತ್ಯಾಲಮ್ಮನಿಗೆ ಸಫಾಯಿ ಕರ್ಮಚಾರಿಗಳು ವಿಶೇಷವಾಗಿ ಆಂಧ್ರದಿಂದ ವಲಸೆ ಬಂದಿರುವ ಮಾದಿಗ ಸಮುದಾಯದವರು ಬಹಳ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ. ಮುತ್ಯಾಲು, ಮುತ್ಯಾಲಮ್ಮ ಎಂದು ಗಂಡು ಮತ್ತು ಹೆಣ್ಣುಮಕ್ಕಳಿಗೆ ಹೆಸರನ್ನು ಇಡುವುದು ಅವರಲ್ಲಿ ಜಾರಿಯಲ್ಲಿದೆ. ಹರಕೆ ಹೊತ್ತವರು, ಪೂಜೆ ಮಾಡಿಸಬೇಕೆಂದುಕೊಂಡವರು ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ದೇವಸ್ಥಾನಕ್ಕೆ ಹೋಗುತ್ತಾರೆ. ದೇವಸ್ಥಾನವು ತೆಲಂಗಾಣ ರಾಜ್ಯದ ಅನಂತಪುರ ಜಿಲ್ಲೆಯಲ್ಲಿದೆ. ಕುರಿ, ಮೇಕೆ ಅಥವಾ …
ನುಡಿದಂತೆ ನಡೆದ ಸಂತಪರಂಪರೆ
ನಾಯಕನಹಟ್ಟಿ ತಿಪ್ಪೆಸ್ವಾಮಿ ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ನೆಲೆಸಿದ್ದ ಶರಣ ತಿಪ್ಪೇರುದ್ರಸ್ವಾಮಿಯವರ ಹೆಸರಿನಲ್ಲಿ ನಡೆಯುವ ಜಾತ್ರೆಯು ಹದಿನೈದು ದಿನಗಳವರೆಗೂ ನಡೆಯುತ್ತದೆ. ಇಲ್ಲಿನ ಮೂಲ ದೇವರು ಮಾರಮ್ಮ ಎಂಬ ನಂಬಿಕೆಯೂ ಇದೆ. ಆ ಮೂಲದೇವರು ಈಗಿರುವುದು ಚಿತ್ರದುರ್ಗದ ಪಾಪೇನಹಳ್ಳಿ (ವಡ್ಡನಹಳ್ಳಿ)ಯಲ್ಲಿದೆ. ಹಿಂದೆ ದೇವಸ್ಥಾನದ ಕಾಂಪೌಂಡ್ನಲ್ಲಿಯೇ ಜಾತ್ರೆಯ ದಿನ ದನವನ್ನು ಬಲಿಕೊಟ್ಟು ಅಡುಗೆ ಮಾಡಿ ನೈವೇದ್ಯ ಮಾಡುತ್ತಿದ್ದುದು. ಈಗಲೂ ದನವನ್ನು ಹೊರಗೆ …
ಮಂಟೇಸ್ವಾಮಿ
ತಳಸಮುದಾಯಗಳ ಸಾಂಸ್ಕೃತಿಕ-ಆಧ್ಯಾತ್ಮಿಕ ನಾಯಕನಾದ ಮಂಟೇಸ್ವಾಮಿ ಧಾರ್ಮಿಕ ಕ್ರಾಂತಿಯನ್ನು ಮಾಡಿದವ. ಬಸವಣ್ಣನವರ ಸಮಕಾಲೀನನೆಂದು ನಂಬಲಾಗುವ ಈತ ತನ್ನದೇ ಒಂದು ಆಧ್ಯಾತ್ಮಿಕ ಪರಂಪರೆಯನ್ನು ನಿರ್ಮಿಸಿದ. ಚಿಕ್ಕಲ್ಲೂರು, ಕಪ್ಪಡಿ, ಬೊಪ್ಪಗೌಡನಪುರಗಳು ಮಂಟೇಸ್ವಾಮಿ ಪರಂಪರೆಯ ಮುಖ್ಯ ಯಾತ್ರಾಸ್ಥಳಗಳು. ಇಲ್ಲಿ ದೊಡ್ಡ ಜಾತ್ರೆಗಳು ನಡೆಯುತ್ತವೆ. ಈತ ಕರ್ನಾಟಕದ ನೀಲಗಾರ ಸಮುದಾಯದ ಆರಾಧ್ಯ ದೈವ. ಈತ ಸಾಕ್ಷಾತ್ ಶಿವನ ಸ್ವರೂಪವೆಂದೇ ಅವರು ಭಾವಿಸುತ್ತಾರಲ್ಲದೆ ಅವರನ್ನು …
ಸೃಷ್ಟಿಪುರಾಣಗಳು
ಗಂಗ ಭಾರತ: ಭಾರತ ಗಂಗೆಯ ಭಾರತವೆನ್ನುವ ಪುರಾಣ ಹುಟ್ಟಿರುವುದು ನೀರೇ ಎಲ್ಲದರ ಮೂಲವೆಂಬ ನಂಬಿಕೆಯಲ್ಲಿ. ಮಾದಿಗರ ಮೂಲ ದೇವತೆ ಗಂಗಮ್ಮ. ಮಾದಿಗರ ಉಪಪಂಗಡವಾದ ಮಾಸ್ಟೀಕರು ಗಂಗಭಾರತವನ್ನು ಹೆಚ್ಚಾಗಿ ಹಾಡುತ್ತಾರೆ. ಈ ಪುರಾಣದ ಪ್ರಕಾರ ಜೀವಸಂಕುಲದ ಆದಿಶಕ್ತಿ ಗಂಗಮ್ಮ ಬ್ರಹ್ಮ ವಿಷ್ಣು ಮಹೇಶ್ವರರನ್ನು ಸೃಷ್ಟಿಸಿ ಈ ಭೂಮಿಯನ್ನು ನೋಡಿಕೊಳ್ಳುವಂತೆ ಆದೇಶಿಸುತ್ತಾಳೆ. ಈ ಮೂವರೂ ಗಂಗೆಯನ್ನು ಮೂರು ಭಾಗ …
ಜ್ಞಾನ ಪುರಾಣಗಳು
ಈ ಪುರಾಣಗಳು ಸೃಷ್ಟಿ ಕುರಿತು ಕಟ್ಟಿಕೊಂಡ ಸಮುದಾಯದ ನಂಬಿಕೆ ಮತ್ತು ಕಲ್ಪನೆಯ ಬಗ್ಗೆ ಹೇಳುತ್ತವೆ. ನೀರಿನಿಂದ ಆರಂಭವಾಗಿ ಜಲಚರಗಳು, ಸಸ್ಯಲೋಕ, ಪ್ರಾಣಿಲೋಕ, ಕೀಟಲೋಕ ಮನುಷ್ಯ ಕುಲದವರೆಗಿನ ವಿಕಾಸದ ಅರಿವನ್ನೂ ಹೇಳುತ್ತವೆ. ಈ ಪುರಾಣಗಳಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾಗಿರುವುದು ಸೃಷ್ಟಿಸುವ ಸಲುವಾಗಿ ತನ್ನನ್ನೇ ತೆತ್ತುಕೊಳ್ಳುವುದು ಮತ್ತು ಬದುಕುಳಿಯಲು ಬೇಕಾದ ದುಡಿಮೆಗೆ ಅಗತ್ಯವಾದ ಉಪಕರಣಗಳಿಗೆ ತಾನು ಕಚ್ಚಾವಸ್ತುವಾಗುವುದರ ಶ್ರದ್ಧೆಯನ್ನು, …
ಅಲಿಖಿತ ಜ್ಞಾನ ಪುರಾಣಗಳು
ಸಫಾಯಿ ಕರ್ಮಚಾರಿಗಳಿಗೆ ಮಾಂಸದಡುಗೆ ಇಷ್ಟದ ಅಡುಗೆ. ಈ ಇಷ್ಟವು ಮಾಡಿ ಉಣ್ಣುವುದಕ್ಕಷ್ಟೇ ಸೀಮಿತವಾಗಿಲ್ಲ. ಅದರ ಜಾಡು ಹಿಡಿದು ನೋಡಿದಾಗ ಅವರೊಳಗೆ ಜೀವಂತವಾಗಿ ಹರಿದಾಡುತ್ತಿರುವ ಜ್ಞಾನಪರಂಪರೆಯ ಪರಿಚಯವಾಗುತ್ತದೆ.ಯಾವ ಪ್ರಾಣಿಯನ್ನೂ ಗಬ್ಬಾದಾಗ, ಎಳೆಯದಿರುವಾಗ ಕೊಲ್ಲುವುದಿಲ್ಲ. ಏಡಿ, ಮೀನುಗಳನ್ನು ಸಹಿತ ಅವು ಸಂತತಿ ವೃದ್ಧಿಸಿಕೊಳ್ಳುವ ಸಂದರ್ಭದಲ್ಲಿ ಹಿಡಿಯುವುದಿಲ್ಲ. ಪಶು, ಪಕ್ಷಿಗಳ ಜೀವನ ಚಕ್ರವನ್ನು ಇವರು ಚೆನ್ನಾಗಿ ಬಲ್ಲರು. ಹಕ್ಕಿ ಗೂಡುಗಳು, …
ಬಾಡುಚೀಟಿ ಕಟ್ಟುವಾ ಬಾರಾ…
ಹಬ್ಬದ ಸಂಭ್ರಮಕ್ಕೆ ಬಡತನವು ಅಡ್ಡಿಯಾಗುವುದಿಲ್ಲ. ತಮ್ಮ ಕಷ್ಟಗಳು ಮತ್ತು ಜಂಜಾಟಗಳ ನಡುವಿನಲ್ಲೇ ತಮ್ಮದೇ ದಾರಿ ಹುಡುಕಿಕೊಂಡು ಹಬ್ಬದ ಆಚರಣೆಗೆ ನಡೆಸುವ ತಯಾರಿಯನ್ನು ಈ ನಿಜಾಧಾರಿತ ಕಾಲ್ಪನಿಕ ಕಥೆ ನಿರೂಪಿಸುತ್ತದೆ. ಬಾಡುಚೀಟಿ ಕಟ್ಟುವಾ ಬಾರಾ… ಎಂಟಮ್ಮನ ದೊಡ್ಡಮಗ ಅಮರಪ್ಪ ಐದಾರು ವರುಷದ ಹಿಂದೆ ಕೆಲಸ ಹುಡುಕಿಕೊಂಡು ಹೋಗಿ ಬೆಂಗಳೂರಿನ ಬಿ.ಬಿ.ಎಂ.ಪಿಯಲ್ಲಿ ಕಸ ಗುಡಿಸುವ ಕೆಲಸಕ್ಕೆ ಸೇರಿಕೊಂಡಿದ್ದ. ತನ್ನ …
ಸಾಂಸ್ಕೃತಿಕ ಆಚರಣೆಗಳು – ಮದುವೆ
ಮಾದಿಗ ಜಾತಿಗಳಲ್ಲಿ ಜಾರಿಯಲ್ಲಿರುವ ಜೀವನಾವರ್ತನಕ್ಕೆ ಸಂಬಂಧಪಟ್ಟ ಸಾಂಸ್ಕೃತಿಕ ಆಚರಣೆಗಳಲ್ಲಿಯೂ ಪರಿಸರ ಪ್ರಜ್ಞೆ, ಸಮಷ್ಟಿ ಪ್ರಜ್ಞೆ ಮತ್ತು ಜೀವಪರ ಪ್ರಜ್ಞೆಯನ್ನು ಕಾಣಬಹುದು.ಋತುಮತಿ ಆಚರಣೆ:ಹೆಣ್ಣುಮಕ್ಕಳು ಮೊದಲಸಲ ಮುಟ್ಟಾಗುವ ಸಂದರ್ಭದಲ್ಲಿ ಮಾಡುವ ಆ ಆಚರಣೆಯನ್ನು ಉತ್ಸಾಹ, ಸಂಭ್ರಮಗಳಿಂದ ಮಾಡಲಾಗುತ್ತದೆ. ಹುಡುಗಿ ಋತುಮತಿಯಾದ ಗಳಿಗೆ ಶುಭವೋ ಅಶುಭವೋ ಎಂದು ತಿಳಿದುಕೊಳ್ಳುತ್ತಾರೆ. ಮೂರು, ಐದು, ಒಂಭತ್ತು ಅಥವಾ ಹದಿನಾರು ದಿನಗಳವರೆಗೆ ಋತುಮತಿಯಾದ ಹುಡುಗಿಯನ್ನು …
ಬಾಣಂತನದ ಆಚರಣೆಗಳು
ಗರ್ಭಿಣಿ ಮಗು ಹೆತ್ತು ಮೂರು/ಐದು/ಒಂಬತ್ತು/ಹದಿನಾರನೇ/ಹತ್ತೊಂಬತ್ತನೇ ದಿನ ಈ ಆಚರಣೆಯನ್ನು ಮಾಡುತ್ತಾರೆ. ತಾಯಿ ಮತ್ತು ಮಗುವಿಗೆ ನೀಲಗಿರಿ, ಬೇವು ಇತ್ಯಾದಿ ಒಂಬತ್ತು ತರಹದ ಸೊಪ್ಪನ್ನು ಹಾಕಿದ ನೀರಿನಲ್ಲಿ ಸ್ನಾನ ಮಾಡಿಸುತ್ತಾರೆ. ಬೇವಿನ ಸೊಪ್ಪಿಗೆ ಅರಿಶಿಣ ಸೇರಿಸಿ ರುಬ್ಬಿ ಮೈಯಿಗೆ ಹಚ್ಚಿ ನಂತರ ಸ್ನಾನ ಮಾಡಿಸುತ್ತಾರೆ.ಇದನ್ನು ಬಳ್ಳಾರಿಯಲ್ಲಿ ‘ನರ್ಲಾ ಕಾರ್ಯ’ ಎನ್ನುತ್ತಾರೆ. ದಾಸಪ್ಪನನ್ನು ಕರೆಸಿ ಗಂಜಲ ಹಾಕಿಸಿ ಸೂತಕ …
ಮಡಿಲು ತುಂಬುವ ಶಾಸ್ತ್ರ:
ಗರ್ಭಿಣಿ ಹೆಣ್ಣುಮಗಳಿಗೆ ಐದನೇ ತಿಂಗಳಿನಲ್ಲಿಮಾಡುವ ಆಚರಣೆಯನ್ನು ‘ಮಡಿಲು ತುಂಬುವ ಶಾಸ್ತ್ರ’ ಅಥವಾ ‘ಕುಬಸ’ ಎಂದು ಕರೆಯುತ್ತಾರೆ.ಇದು ಫಲವತ್ತತೆಯನ್ನು ಪೂಜಿಸುವ ಸಂಕೇತವಾಗಿದೆ. ಹೆಣ್ಣುಮಗಳು ಐದು ತಿಂಗಳ ಗರ್ಭಿಣಿಯಿರುವಾಗ ತಾಯಿಯ ಮನೆಯವರು ಮಗಳ ಮನೆಗೆ ಬಂದು ಬಸುರಿಗೆ ಅರಿಶಿಣ ಹಚ್ಚಿ ಸ್ನಾನ ಮಾಡಿಸುತ್ತಾರೆ. ಒಸಗೆ ಹಾಕಿ ಬಸುರಿಯನ್ನು ಕೂಡಿಸಿ ಹಸಿರುಬಳೆ ತೊಡಿಸಿ, ಬೆಲ್ಲ, ಬಾಳೆಹಣ್ಣು, ಎಲೆ ಅಡಿಕೆಯ ಮಡಿಲಕ್ಕಿ …
ಹಬ್ಬಗಳು – ಜಾತ್ರೆಗಳು
ಆಚರಿಸುವ ಹಬ್ಬಗಳುಸಂಕ್ರಾಂತಿ, ದಸರಾ, ಅಮವಾಸ್ಯೆ, ಶಿವರಾತ್ರಿ, ಯುಗಾದಿ, ದೀಪಾವಳಿ,ನಾಗರಪಂಚಮಿ, ಎಳ್ಳಮವಾಸ್ಯೆ, ಕಾರಹುಣ್ಣಿಮೆ, ಮಣ್ಣೆತ್ತಿನ ಅಮವಾಸ್ಯೆ, ಗುಡ್ ಫ್ರೆöÊಡೆ, ಕ್ರಿಸ್ಮಸ್, ಹೊಸವರ್ಷವನ್ನು, ಮುಸ್ಲಿಮರ ಪರ್ಲ ಹಬ್ಬ ಮತ್ತು ಮೊಹರಂ ಹಬ್ಬ ಆಚರಿಸುತ್ತಾರೆ. ಮೊಹರಂನಂದು ಗೂಗುಡುಗೆ ಹೋಗಿ ಅಲ್ಲಿನ ದೇವರು ಕುಳ್ಳಾಯಿಸ್ವಾಮಿಯನ್ನು ಹೊತ್ತುಕೊಂಡು ಬೆಂಕಿ ತುಳಿಯುತ್ತಾರೆ.ತೀರಿಹೋಗಿರುವ ಹಿರಿಯರಿಗೆ ಮತ್ತು ಪೂರ್ವಿಕರಿಗೆ ಇಷ್ಟವಾದ ಅಡುಗೆ ಮಾಡಿ ಎಡೆ ಹಾಕಿ ಪೂಜಿಸುವುದನ್ನು …
ಸಾವು ಮತ್ತು ತಿಥಿಗೆ ಸಂಬಂಧಿಸಿದ ಆಚರಣೆಗಳು
ಮೃತರಾದವರಿಗೆ ಗೌರವಪೂರ್ವಕವಾಗಿ ವಿದಾಯ ಹೇಳುವುದರ ಜೊತೆಗೆ ಮರಣಾನಂತರವೂ ಅವರಿಗೆ ಒಳ್ಳೆಯದಾಗಲಿ ಎಂಬ ನಂಬಿಕೆಯಿಂದ ಹಲವಾರು ಆಚರಣೆಗಳನ್ನು ತೀರಿಕೊಂಡಾಗ ಮತ್ತು ತೀರಿಕೊಂಡ ನಂತರದ ದಿನಗಳಲ್ಲಿ ಆಚರಿಸಲಾಗುತ್ತದೆ. ಮಾದಿಗರಲ್ಲಿ ಹೆಣವನ್ನು ಸುಡುವುದಿಲ್ಲ; ಮಣ್ಣುಮಾಡುವ ಸಂಪ್ರದಾಯವಿದೆ. ಯಾರಾದರೂ ತೀರಿಕೊಂಡಾಗ ಗಳಿಗೆ ನೋಡುತ್ತಾರೆ. ಹೆಣದ ಹಿಂದೆ ಸೇರಿನ ಮೇಲೆ ದೀಪವಿಡುತ್ತಾರೆ. ಮನೆಯ ಮುಂದೆ ಸೌದೆಯ ಸಣ್ಣದ ಚೂರುಗಳನ್ನಿಟ್ಟು ಬೆಂಕಿ ಹಾಕುತ್ತಾರೆ. ಮನೆಯ …
ಒಂದು ಅವಲೋಕನ
ಹಿಮಾಲಯ ಪರ್ವತ ಪ್ರದೇಶವು ಅತ್ಯಂತ ಸೂಕ್ಷö್ಮಭೂವಿಜ್ಞಾನ ಮತ್ತು ಪರಿಸರ ಪ್ರದೇಶವಾಗಿರುವ ಕಾರಣಕ್ಕಾಗಿಯೇ ಅದನ್ನು ಭೂಮಿಯ ನಾಭಿ ಎನ್ನುತ್ತಾರೆ. ಅಂತಹ ಪ್ರದೇಶದಲ್ಲಿ ಅಭಿವೃದ್ದಿ ಹೆಸರಿನಲ್ಲಿ ರಸ್ತೆ, ಅಣೆಕಟ್ಟು ನಿರ್ಮಾಣ ಮಾಡಲಾಗುತ್ತಿದೆ.೨೦೨೨-೨೦೨೩ರಲ್ಲಿ ಜಗದ ದೊಡ್ಡಣ್ಣನೆನಿಸಿಕೊಂಡಿರುವ ಅಮೆರಿಕಾದ ಒಂದು ಭಾಗ ಕಾಳ್ಗಿಚ್ಚಿನಲ್ಲಿ ಬೆಂದರೆ, ಮತ್ತೊಂದು ಭಾಗ ಪ್ರವಾಹದಲ್ಲಿ ಮುಳುಗಿತು. ಇಂತಹ ಪ್ರಕೃತಿಯ ಪಾಠಗಳಿಂದ ನಾವು ಪಾಠ ಕಲಿಯದಿದ್ದರೆ ನಮ್ಮ ಮುಂದಿನ …

















