ಹೋರಾಟ

ಹೋರಾಟದ ಬದುಕು
ಪೌರಕಾರ್ಮಿಕರ ಬದುಕಿನ ಮೂಲ ಸತ್ವದಂತಿರುವ ಅವರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬದುಕಿನೊಳಗೊಂದು ಕಣ್ಣಾಡಿಸಿ ಬಂದೆವು. ಈ ಸತ್ವವೇ ಅಮಾನವೀಯವಾದ, ಅನಾರೋಗ್ಯಕರವಾದ ಅವರ ಕೆಲಸದ ಪರಿಸ್ಥಿತಿಯ ವಿರುದ್ಧ ಹೋರಾಡಲು ಅವರಿಗೆ ಶಕ್ತಿ ನೀಡಿದೆ. ಈ ಭಾಗದಲ್ಲಿ ಅವರು ನಡೆಸಿರುವ ಹೋರಾಟದ ಬದುಕಿನೊಳಗೆ ಹೆಜ್ಜೆ ಹಾಕೋಣ ಬನ್ನಿ. ಅಸಮಾನತೆ ತಾರತಮ್ಯ ಯಾವ ರೀತಿಯಲ್ಲೇ ಇರಲಿ, ಯಾರೇ ಅದಕ್ಕೆ ಒಳಗಾಗಿರಲಿ ಅದೊಂದು ಒಟ್ಟು ಸಮಾಜದ ಸಮಸ್ಯೆಯೇ ಹೌದು. ಒಟ್ಟು ಸಮಾಜದ ಸ್ಪಂದನೆಯೊಂದಿಗೆ ತುಳಿತಕ್ಕೆ ಒಳಗಾದ ಸಮುದಾಯ ಎಚ್ಚೆತ್ತಾಗಲೇ ಸಮಾನತೆಯ ಸಮಾಜದತ್ತ ಹೆಜ್ಜೆ ಹಾಕಲು ಸಾಧ್ಯ. ಸಫಾಯಿ ಕರ್ಮಚಾರಿಗಳನ್ನು ಮತ್ತು ಅವರು ಮಾಡುವ ಸ್ವಚ್ಛತೆಯ ಕೆಲಸವನ್ನು ಕಾನೂನಿನ ಚೌಕಟ್ಟಿನಲ್ಲಿ ಗುರುತಿಸಲಾಗಿದೆ ಮತ್ತು ಈ ದೇಶದ ಪ್ರಜೆಗಳಾಗಿ ಅವರಿಗಿರುವ ಹಕ್ಕುಗಳನ್ನು ಮಾನ್ಯಮಾಡಲಾಗಿದೆಯಾದರೂ ಅದ್ಯಾವುದೂ …
ಭಾರತ ಸ್ವಾತಂತ್ರ್ಯದ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಕರೆ
ಜವರಹರಲಾಲ್ ನೆಹರು ಅವರಿಗೆ ಅಂಬೇಡ್ಕರ್ ಅವರು ೧೮ ಡಿಸೆಂಬರ್ ೧೯೪೭ರಲ್ಲಿ ಬರೆದ ಪತ್ರದಲ್ಲಿ, ಪಾಕಿಸ್ತಾನವು ನರ‍್ಮಲ್ಯ ಕೆಲಸದಲ್ಲಿ ತೊಡಗಿರುವವರನ್ನು ಭಾರತಕ್ಕೆ ಹೋಗಲು ಬಿಡುತ್ತಿಲ್ಲ ಎಂಬ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆ ಕುರಿತು ಅಂಬೇಡ್ಕರ್ ಹೀಗೆ ಉಲ್ಲೇಖಿಸಿದ್ದಾರೆ: "ಪಾಕಿಸ್ತಾನ ರ‍್ಕಾರವು ತಮ್ಮ ಪ್ರದೇಶದಿಂದ ಪರಿಶಿಷ್ಟ ಜಾತಿಗಳ ಒಕ್ಕುಲೆಬ್ಬಿಸುವುದನ್ನು ತಡೆಯಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ನನಗನಿಸುವ ಪ್ರಕಾರ ಇದರ ಹಿಂದಿರುವ ಕಾರಣ, ಭೂಒಡೆತನ ಹೊಂದಿರುವ ಜನರಿಗೆ ಕೀಳು ಕೆಲಸ ಮಾಡಿಕೊಂಡು ಭೂಹೀನ ಕೂಲಿಗಳಾಗಿ ಸೇವೆ ಸಲ್ಲಿಸುವ ಸಲುವಾಗಿ ಪರಿಶಿಷ್ಟ ಜಾತಿಗಳು ಪಾಕಿಸ್ತಾನದಲ್ಲಿ ಉಳಿದುಕೊಳ್ಳಬೇಕು ಎಂಬುದಾಗಿದೆ. ಗುಡಿಸುವವರನ್ನು ಅಗತ್ಯ ಸೇವೆಗಳಿಗೆ ಸೇರಿದವರೆಂದು ಮತ್ತು ಒಂದು ತಿಂಗಳ ನೋಟೀಸ್ ನೀಡದೆ ಬಿಡುಗಡೆ ಮಾಡಲಾಗದೆಂದು ಘೋಷಿಸುವ ಮೂಲಕ ಅವರನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವ ಬಗ್ಗೆ ರ‍್ಕಾರ …
ಹೋರಾಟದ ಇತಿಹಾಸ: ಐ.ಪಿ.ಡಿ ಸಾಲಪ್ಪ ವರದಿ
ಕರ್ನಾಟಕದಲ್ಲಿ ಘನತೆಗಾಗಿ ಮತ್ತು ಕಾರ್ಮಿಕರಾಗಿ ತಮ್ಮ ಹಕ್ಕುಗಳಿಗಾಗಿ ನಡೆಸಿರುವ ಹೋರಾಟದ ಮೂಲವಿರುವುದು ಸ್ವಾತಂತ್ರö್ಯ ಬಂದ ಮೂರನೇ ದಶಕದಲ್ಲಿ ಬಂದ ಮಹತ್ವದ ವರದಿಯಲ್ಲಿ. ಕರ್ನಾಟಕದ ಪೌರಕಾರ್ಮಿಕರ ಹೋರಾಟ ಇತಿಹಾಸದಲ್ಲಿನ ಹೆಗ್ಗುರುತು ಐ.ಪಿ.ಡಿ ಸಾಲಪ್ಪ ವರದಿಕರ್ನಾಟಕ ಸರ್ಕಾರವು ಸೆಪ್ಟಂಬರ್ ೨೩, ೧೯೭೨ರಲ್ಲಿ ಗುಡಿಸುವ ಹಾಗೂ ಮಲಬಾಚುವವರ ಬದುಕುವ ಮತ್ತು ಕೆಲಸದ ಪರಿಸ್ಥಿತಿ ಕುರಿತು ಅಧ್ಯಯನ ಮಾಡಲು ನೇಮಿಸಿದ ಸಮಿತಿಗೆ ಶ್ರೀ ಐ.ಪಿ.ಡಿ.ಸಾಲಪ್ಪ ಅವರನ್ನು ಅಧ್ಯಕ್ಷ್ಯರನ್ನಾಗಿ ನೇಮಿಸಿತು. ಮಾರ್ಚ್ ೩, ೧೯೭೩ರಲ್ಲಿ ಸಾಲಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ಮೊದಲ ಸಭೆಗೆ ಮುಖ್ಯಮಂತ್ರಿಗಳಾಗಿದ್ದ ಶ್ರೀ ದೇವರಾಜ ಅರಸು ಮತ್ತು ಪೌರಾಡಳಿತ ಸಚಿವರಾಗಿದ್ದ ಶ್ರೀ ಬಿ.ಬಸವಲಿಂಗಪ್ಪನವರು ಭಾಗವಹಿಸಿದ್ದರು. ಹೋರಾಟವೇ ಆದ ಸಮಿತಿಯ ಕೆಲಸಸಮಿತಿ ರಚನೆ ೧೯೭೨ರಲ್ಲೇ ಆದರೂ ಸಮಿತಿಯ ಕೆಲಸ ಆರಂಭವಾದದ್ದು ಜನವರಿ, …
ತೊಂಬತ್ತರ ದಶಕದಲ್ಲಿ ಸಫಾಯಿ ಕರ್ಮಚಾರಿ ಚಳುವಳಿಯ ಮೈಲಿಗಲ್ಲುಗಳು
ಕರ್ನಾಟಕದಲ್ಲಿ ೧೯೯೦ರ ದಶಕದ ಅವಧಿಯು ನವ-ಉದಾರವಾದಿ ಕಾರ್ಮಿಕ ಸುಧಾರಣೆಗಳು ಮತ್ತು ಮುನಿಸಿಪಲ್ ಸೇವಾ ಕ್ಷೇತ್ರಕ್ಕೆ ಗುತ್ತಿಗೆ ವ್ಯವಸ್ಥೆಯು ಜಾರಿಗೊಂಡ ಸಂದರ್ಭವಾಗಿತ್ತು. ಈ ಹಿಂದೆ ಬೆಂಗಳೂರು ಮಹಾನಗರ ಪಾಲಿಕೆಯು ಘನ ತ್ಯಾಜ್ಯ ನಿರ್ವಹಣೆಯ ಕೆಲಸಕ್ಕೆ ಖಾಯಂ ನೌಕರರನ್ನು ನೇಮಕಮಾಡಿಕೊಳ್ಳುತ್ತಿತ್ತು. ಸ್ವಚ್ಛತೆಯ ಕೆಲಸಕ್ಕೆ ಮುನಿಸಿಪಲ್ ಬಜೆಟ್‌ನ ಶೇ.೪೦-೫೦ರಷ್ಟು ವ್ಯಯವಾಗುತ್ತಿರುವುದು ದುಬಾರಿ ಎಂಬ ಕಾರಣಕ್ಕೆ ಸರ್ಕಾರವು ತ್ಯಾಜ್ಯನಿರ್ವಹಣೆಯ ಕೆಲಸವನ್ನು ೧೯೯೫ರಲ್ಲಿ ಖಾಸಗಿಗೊಳಿಸಿ ಗುತ್ತಿಗೆಗೆ ನೀಡಿತು. ಬೆಂಗಳೂರಿನ ಬಹುಪಾಲು ವಾರ್ಡುಗಳ ಗುತ್ತಿಗೆ ಹಿಡಿದವರು ರೆಡ್ಡಿ ಸಮುದಾಯಕ್ಕೆ ಸೇರಿದವರಾಗಿದ್ದರೆ, ಕೆಲಸಗಾರರು ಶೇ.೮೦ಕ್ಕಿಂತ ಹೆಚ್ಚಿನವರು ದಲಿತ ಮಹಿಳೆಯರು. ಅತ್ಯಂತ ಕೆಟ್ಟ ಕೆಲಸದ ಪರಿಸ್ಥಿತಿಯಲ್ಲಿ ಈ ಮಹಿಳೆಯರು ಕೆಲಸ ಮಾಡುತ್ತಿದ್ದರು. ೧೯೯೨ರಲ್ಲಿ ಅವರಿಗೆ ಸಿಗುತ್ತಿದ್ದ ವೇತನ ರೂ.೫೦೦-೬೦೦. ೨೦೦೩ರವರೆಗೂ ಅವರಿಗೆ ಸಿಗುತ್ತಿದ್ದ ವೇತನ ೯೦೦-೧೦೦೦ರೂ. ಮಾತ್ರ. …
ಮೂರು ದಶಕಗಳ ಹೋರಾಟದ ಪರಿಣಾಮವಾಗಿ…
ಪದೇ ಪದೇ ಹಿನ್ನಡೆಯುಂಟಾದರೂ ಕನಿಷ್ಠ ವೇತನಕ್ಕಾಗಿ ಪೌರಕಾರ್ಮಿಕರು ನಡೆಸಿದ ಹೋರಾಟ ಕಳೆದ ದಶಕದಲ್ಲಿ ತೀವ್ರತೆಯನ್ನು ಪಡೆದುಕೊಂಡು ಬೆಂಗಳೂರಿನಲ್ಲಿ ಮಹತ್ವ ಬೆಳವಣಿಗೆಯನ್ನು ಕಂಡಿದೆ. ಈ ಹಂತದ ಹೋರಾಟದಲ್ಲಿ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ ಪುರಸಭೆಗಳ ಪೌರಕಾರ್ಮಿಕರ ಮಹಾಸಂಘ ಹಾಗೂ ಏಐಸಿಸಿಟಿಯು (ಆಲ್ ಇಂಡಿಯಾ ಸೆಂಟರ್ ಫಾರ್ ಟ್ರೇಡ್ ಯೂನಿಯನ್ಸ್)ಗೆ ಅಫಿಲಿಯೇಟ್ ಆಗಿರುವ ಬಿಬಿಎಂಪಿ ಪೌರಕಾರ್ಮಿಕರ ಸಂಘವು ಪ್ರಮುಖ ಪಾತ್ರವಹಿಸಿದವು. ಬೆಂಗಳೂರು ಜಲಮಂಡಳಿಯಲ್ಲಿ ಮ್ಯಾನ್ಯುವಲ್ ಸ್ಕಾö್ಯವೆಂಜಿಂಗ್ ಕೆಲಸ ಮಾಡುತ್ತಿರುವ ಕಾರ್ಮಿಕರು, ಹೆಚ್.ಎ.ಎಲ್, ಬಿ.ಹೆಚ್.ಇ.ಎಲ್, ಬಿ.ಇ.ಎಂಎಲ್, ಬಿ.ಬಿ.ಎಂ.ಪಿ ಲೈಬ್ರರಿಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ನಿಮ್ಹಾನ್ಸ್ ಹಾಗೂ ಇತರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಶಾಪಿಂಗ್ ಮಾಲ್‌ಗಳು, ಹೋಟೆಲುಗಳು, ಬಸ್‌ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಸಹ …
ಸೋಲದ ಚೈತನ್ಯ: ಮಹಿಳಾ ನಾಯಕತ್ವ
ಜಾತಿ, ವರ್ಗ ಮತ್ತು ಲಿಂಗ ಮೂರೂ ತಾರತಮ್ಯಗಳನ್ನು ಅನುಭವಿಸುತ್ತ, ದಮನಕ್ಕೆ ಒಳಗಾಗಿ ಕಷ್ಟದ ಬದುಕನ್ನು ನಡೆಸುತ್ತಿರುವ ಈ ಮಹಿಳೆಯರು ಸುಲಭವಾಗಿ ಧೈರ್ಯಗೆಡದೆ ಬದುಕಿನ ಸಂಕಷ್ಟಗಳಿಗೆ ಎದೆಯೊಡ್ಡಿ ನಿಲ್ಲುತ್ತಾರೆ. ಮನೆಯಲ್ಲಿ ಆಚರಿಸುವ ಹಬ್ಬ, ಮದುವೆ ಆಚರಣೆಗಳಿರಲಿ, ಖಾಯಿಲೆ, ಸಾವು, ನೋವುಗಳಿರಲಿ, ದುಡಿವ ಗಂಡಸರು ಮೂಲೆ ಹಿಡಿದಿರಲಿ, ಕುಡಿದು ಗಲಾಟೆ ಮಾಡುವವರಿರಲಿ, ಬಿಟ್ಟು ಹೋಗಿರಲಿ, ತೀರಿಹೋಗಿರಲಿ ಯಾವುದಕ್ಕೂ ಅಂಜದೆ ಮನೆ ಮತ್ತು ಮಕ್ಕಳನ್ನು ನಿಭಾಯಿಸಿಕೊಂಡು ಹೋಗುವ ಈ ಮಹಿಳೆಯರ ಸ್ಥೆöÊರ್ಯ ಮತ್ತು ಚೈತನ್ಯ ದೊಡ್ಡದು. ಕೇವಲ ತಮ್ಮ ಖಾಸಗಿ ಬದುಕಿನ ಆಗುಹೋಗುಗಳಿಗಷ್ಟೇ ಸೀಮಿತವಾಗದೆ ಕಾರ್ಮಿಕರಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ಸಲುವಾಗಿ ಹೋರಾಡಲು ಈ ಮಹಿಳೆಯರು ಹಿಂದೆ ಬಿದ್ದಿಲ್ಲ. ಅಂತಹ ಕೆಲವು ಹೋರಾಟಗಳನ್ನು ಇಲ್ಲಿ ದಾಖಲಿಸಲಾಗಿದೆ.ಕಾರ್ಮಿಕ ಸಂಘಟನೆಯ ಹುಟ್ಟಿಗೆ ಕಾರಣವಾದ …
ಸಫಾಯಿ ಕರ್ಮಚಾರಿಗಳ ಹೋರಾಟದಲ್ಲಿ ನಾಗರಿಕ ಸಂಘಟನೆಗಳ ಪಾತ್ರ:ಗುತ್ತಿಗೆ ಪೌರಕಾರ್ಮಿಕರ ಬೆಂಬಲ ಗುಂಪು
ಇದೇ ಸಂದರ್ಭದಲ್ಲಿ ಪೌರಕಾರ್ಮಿಕರ ಹೋರಾಟವನ್ನು ಬೆಂಬಲಿಸುವ ಉದ್ದೇಶದೊಂದಿಗೆ ‘ಗುತ್ತಿಗೆ ಪೌರಕಾರ್ಮಿಕರ ಬೆಂಬಲ ಗುಂಪು’ ಆರಂಭವಾಯಿತು. ‘ಮಾನಸ ಸ್ವಾಯತ್ತ ಮಹಿಳಾ ಸಂಘಟನೆ’, ‘ಪೀಪಲ್ಸ್ ಯೂನಿಟಿ ಫಾರ್ ಸಿವಿಲ್ ಲಿರ‍್ಟೀಸ್’ (ಪಿಯುಸಿಎಲ್), ‘ಆಲ್ಟರ್‌ನೆಟಿವ್ ಲಾ ಫೋರಂ’ (ಎಎಲ್‌ಎಫ್), ‘ವಿಮೋಚನಾ ಮಹಿಳಾ ಹಕ್ಕುಗಳ ವೇದಿಕೆ’ ಮತ್ತು ಲಿಂಗತ್ವ ಅಲ್ಪಸಖ್ಯಾಂತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ‘ಸಂಗಮ’ ಸಂಸ್ಥೆಗಳು ಒಗ್ಗೂಡಿ ಬೆಂಬಲ ಗುಂಪನ್ನು ಆರಂಭಿಸಿದವು. ಡಾ.ವಿಜಯಾ, ಹೆಚ್.ಎಸ್.ದೊರೆಸ್ವಾಮಿಯವರಂತಹ ಗಣ್ಯರು ಬೆಂಬಲ ನೀಡಿದರು. ಬೆಂಬಲ, ಲಾಬಿ ಮತ್ತು ಪ್ರಚಾರದ ಮೂಲಕ ಬೆಂಬಲ ಗುಂಪು ಗುತ್ತಿಗೆ ಕಾರ್ಮಿಕರ ಕನಿಷ್ಠ ವೇತನದ ಹೋರಾಟದಲ್ಲಿ ನಿರ್ಣಾಯಕ ಪಾತ್ರವಹಿಸಿತು.-ಪೌರಕಾರ್ಮಿಕರ ಹಕ್ಕುಗಳನ್ನು ಗುರುತಿಸಿ ಜಾರಿಗೊಳಿಸಲು ಸರ್ಕಾರದೊಂದಿಗೆ ಲಾಬಿ ಮಾಡುವುದು-ಪೌರಕಾರ್ಮಿಕರ ಕೆಲಸದ ಪರಿಸ್ಥಿತಿ ಕುರಿತು ಪ್ರಚಾರ ಮಾಡುವುದು-ಪೌರಕಾರ್ಮಿಕರನ್ನು ಕಾರ್ಮಿಕ ಸಂಘಟನೆಯ ಸದಸ್ಯರನ್ನಾಗಿಸುವುದು ಮತ್ತು ಅವರ …
ಸಫಾಯಿ ಕರ್ಮಚಾರಿಗಳ ಹೋರಾಟದಲ್ಲಿ ನಾಗರಿಕ ಸಂಘಟನೆಗಳ ಪಾತ್ರ: ಪಿಯುಸಿಎಲ್ (ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿರ‍್ಟೀಸ್) ಕರ್ನಾಟಕ
ಪೌರಕಾರ್ಮಿಕರು ಉತ್ತಮ ಕೆಲಸದ ವಾತಾವರಣಕ್ಕಾಗಿ ನಡೆಸುತ್ತಿದ್ದ ಹೋರಾಟವು ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿರ‍್ಟೀಸ್-ಕರ್ನಾಟಕವು ಪೌರಕಾರ್ಮಿಕರ ವಿಷಯ ಕುರಿತು ಕೆಲಸ ಮಾಡಲಾರಂಭಿಸಿತು. ಪ್ರೊ. ಹಸನ್ ಮನ್ಸುರ್ ಮತ್ತು ಪ್ರೊ. ರಾಜೇಂದ್ರ ಅವರ ನೇತೃತ್ವದಲ್ಲಿ ಬೆಂಗಳೂರಿನ ಸ್ಲಂ ನಿವಾಸಿಗಳ ಹಕ್ಕುಗಳಿಗಾಗಿ ಸ್ಲಂ ಜಾಯಿಂಟ್ ಆಕ್ಷನ್ ಕಮಿಟಿಯನ್ನು ಆರಂಭಿಸಲಾಯಿತು. ಈ ವೇದಿಕೆಯ ಭಾಗವಾಗಿ ಮಲಬಾಚುವ ಕಾರ್ಮಿಕರ ವಿಷಯವನ್ನು ಕೈಗೆತ್ತಿಕೊಳ್ಳಲು ಪಿಯುಸಿಎಲ್‌ನಲ್ಲಿ ತೀರ್ಮಾನಿಸಲಾಯಿತು. ಈ ಸಮಿತಿಯು ಪೌರಕಾರ್ಮಿಕರ ಮೇಲಾಗುತ್ತಿದ್ದ ಅನ್ಯಾಯಗಳನ್ನು ತಡೆಯಲು ವಿಫಲವಾದ ಬಿಬಿಎಂಪಿ ವಿರುದ್ಧ ಫೆಬ್ರವರಿ ೨೦೦೨ರಲ್ಲಿ ಬೃಹತ್ ರ‍್ಯಾಲಿಯನ್ನು ಆಯೋಜಿಸಿತು. ಪಿಯುಸಿಎಲ್, ಸ್ಲಂ ಫೆಡರೇಷನ್ ಹಾಗೂ ಪ್ರೊ.ಬಾಬು ಮ್ಯಾಥ್ಯೂಸ್, ಡಾ.ಜಿ.ರಾಮಕೃಷ್ಣರಂತಹ ಹಲವಾರು ಗಣ್ಯರು ರ‍್ಯಾಲಿಯನ್ನು ಬೆಂಬಲಿಸಿದರು. ಪೌರಕಾರ್ಮಿಕರ ನ್ಯಾಯಕ್ಕಾಗಿ ಹುಟ್ಟಿಕೊಂಡ ಈ ಹೋರಾಟದ ಭಾಗವಾಗಿ …
ಮೃತ್ಯು ಕೂಪಗಳಾಗಿರುವ ಒಳಚರಂಡಿಗಳ ಸ್ವಚ್ಛ ಮಾಡುವ ಕಾರ್ಮಿಕರು
‘ಸ್ಲಂಜಾಯಿಂಟ್ ಆಕ್ಷನ್ ಕಮಿಟಿ’ಯು ಮಲಬಾಚುವ ವಿಷಯವನ್ನು ಹೋರಾಟದ ಆದ್ಯತೆಯಾಗಿ ಪರಿಗಣಿಸಿದ್ದ ಸಂದರ್ಭದಲ್ಲಿಯೇ ಸವಣೂರು ಘಟನೆ ನಡೆದು ವಿಷಯದ ತುರ್ತನ್ನು ಮನವರಿಕೆ ಮಾಡಿಸಿತು. ೨೦೧೦ರಲ್ಲಿ ತಮ್ಮ ಮನೆ ಎತ್ತಂಗಡಿಯಾಗಲಿರುವುದರಿಂದ ಹತಾಶರಾದ ದಲಿತ ಕುಟುಂಬಗಳು ಸರ್ಕಾರ ಮತ್ತು ಮಾಧ್ಯಮದವರ ಗಮನ ಸೆಳೆಯಲು ಮಲದ ನೀರನ್ನು ಮೈಮೇಲೆ ಸುರಿದುಕೊಂಡು ಪ್ರತಿಭಟಿಸಿದರು. ಈ ಘಟನೆ ಪಿಯುಸಿಎಲ್-ಕ ಮಧ್ಯಂತರ ಸತ್ಯಶೋಧನ ವರದಿ ತಯಾರಿಸಲು ಕಾರಣವಾಯಿತಲ್ಲದೆ ಮ್ಯಾನ್ಯುವಲ್ ಸ್ಕಾö್ಯವೆಂಜಿಂಗ್ ಕುರಿತ ಕೆಲಸವನ್ನು ತುರ್ತಾಗಿ ಮುಂದುವರೆಸುವಂತೆ ಮಾಡಿತು.ಪೌರಕಾರ್ಮಿಕ ಚಳುವಳಿಯಲ್ಲಿ ಮ್ಯಾನ್‌ಹೋಲ್ ಕಾರ್ಮಿಕರ ಸಾವುಗಳ ಕುರಿತು ನಿರ್ದಿಷ್ಟ ಕ್ರಮಗಳನ್ನು ಕೈಗೊಂಡಿರÀಲಿಲ್ಲ. ಪಿಯುಸಿಎಲ್ ೨೦೦೯ರಲ್ಲಿ ಕರ್ನಾಟಕ ಹೈಕೋರ್ಟಿನಲ್ಲಿ ಮ್ಯಾನ್ ಹೋಲ್ ಕಾರ್ಮಿಕರ ಸಾವುಗಳು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿವೆ ಎಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಿದಾಗ ಈ ವಿಷಯವು …
ಬಡಾವಣೆಯ ನಿವಾಸಿಗಳಿಗೆ ಅರಿವು ಮೂಡಿಸುವ ಸಂವಾದ
ನಿತ್ಯವೂ ತಾವು ಸ್ವಚ್ಛ ಮಾಡುವ ಬಡಾವಣೆಗಳ ನಿವಾಸಿಗಳಿಗೆ ತಮ್ಮ ಕೆಲಸದ ಪರಿಸ್ಥಿತಿಯನ್ನು ಮನವರಿಕೆ ಮಾಡುವ ಸಲುವಾಗಿ ಕೆಲವೆಡೆ ನಿವಾಸಿಗಳೊಂದಿಗೆ ಸಭೆಗಳನ್ನು ನಡೆಸುವ ಪ್ರಯತ್ನವನ್ನು ಮಾಡಲಾಗಿತ್ತು. ಅಂತಹ ಒಂದು ಸಭೆಯ ವರದಿಗೆ ಸ್ವಲ್ಪ ನಾಟಕೀಯ ಸ್ವರೂಪ ಕೊಟ್ಟು ಇಲ್ಲಿ ನೀಡಲಾಗಿದೆ.ಮತ್ತಿಕೆರೆ ವಾರ್ಡಿನಲ್ಲಿ ಕೆಲಸ ಮಾಡುವ ಪೌರಕಾರ್ಮಿಕರೆಲ್ಲ ಕೆಲಸ ಮಾಡಿ ಮುಗಿಸಿ ಪಾರ್ಕಿನಲ್ಲಿ ಸೇರಿದ್ದರು. ಎಲ್ಲರಲ್ಲೂ ಏನೋ ಸಡಗರ, ಆತಂಕ. ಅವರೆಲ್ಲರೂ ಗುತ್ತಿಗೆ ಪೌರಕಾರ್ಮಿಕರ ಸಂಘದ ಸದಸ್ಯರಾಗಿದ್ದರು. ಸಂಘಕ್ಕೆ ಸೇರಿದಾಗಿನಿಂದಲೂ ಹೋರಾಟ ನಡೆಸಿದ್ದಕ್ಕೆ ಕನಿಷ್ಠ ವೇತನ ಪಡೆದುಕೊಂಡಿದ್ದರು. ಇನ್ನು ಹತ್ತು ಹಲವಾರು ಹಕ್ಕುಗಳಿಗಾಗಿ ಹೋರಾಡಿಕೊಂಡೇ ಬಂದಿದ್ದರು. ಸಂಘವೆಂದರೆ ಹೋರಾಟ ಎನ್ನುವಂತಾಗಿದ್ದರೂ ಸಂಘಕ್ಕೆ ಸೇರಿದ ಮೇಲೆ ನಾವೂ ಎಲ್ಲರಂತೆ ಮನುಷ್ಯರು, ನಮ್ಮನ್ನು ಮನುಷ್ಯರಂತೆ ಘನತೆಯಿಂದ ನಡೆಸಿಕೊಳ್ಳಬೇಕು, ಗೌರವದಿಂದ ನಡೆಸಿಕೊಳ್ಳಬೇಕು ಎಂದವರಿಗೆ …
ಸಾಂಸ್ಥಿಕ ಚೌಕಟ್ಟು ಮತ್ತು ಕಾನೂನಿನ ಚೌಕಟ್ಟು
ಪೌರಕಾರ್ಮಿಕರು ಪದದ ಅರ್ಥ ವಿವರಣೆ: ಫೆಬ್ರವರಿ ೨೨, ೧೯೭೩ರಲ್ಲಿ ಕರ್ನಾಟಕ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದ ಬಿ. ಬಸವಲಿಂಗಪ್ಪ ಅವರು ಕಸ ಗುಡಿಸುವವರು ಮತ್ತು ಮಲ ಬಾಚುವವರನ್ನು “ಪೌರಕಾರ್ಮಿಕರು” ಎಂದು ಕರೆಯಬೇಕೆಂದು ಘೋಷಿಸಿದರು. ಕರ್ನಾಟಕ ಸರ್ಕಾರವು ಹೊರಡಿಸಿದ ಸುತ್ತೋಲೆ (ಅiಡಿಛಿuಟಚಿಡಿ ಓo. ಊಒಂ ೨೨೯, ಉಉಐ ೭೨, ಃಚಿಟಿgಚಿಟoಡಿe ಜಚಿಣeಜ ೩೦ಣh ಒಚಿಡಿಛಿh ೧೯೭೩)ಯಲ್ಲಿ “…ಗುಡಿಸುವವರು ಮತ್ತು ಮಲ ಬಾಚುವವರನ್ನು ಆ ಹೆಸರಿನಿಂದ ಕರೆಯುವುದನ್ನು ಕೈಬಿಡಲಾಗಿದೆ… ಈ ನಿಟ್ಟಿನಲ್ಲಿ ಪೌರಾಡಳಿತ ಸಚಿವರು ದೆಹಲಿಯಿಂದ ಹಿಂತಿರುಗಿದ ನಂತರ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ಗುಡಿಸುವವರ ಮತ್ತು ಮಲಬಾಚುವವರ ಹೆಸರನ್ನು “ಪೌರಕಾರ್ಮಿಕರು” ಎಂದು ಬದಲಾಯಿಸಲಾಗಿದೆ” ಎಂದು ಹೇಳಲಾಗಿದೆ. ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಆಕ್ಟ್ನ ಸೆಕ್ಷನ್ ೨(೨೭) ಪ್ರಕಾರ “ಪೌರಕಾರ್ಮಿಕರು ಎಂದರೆ ಕಸವನ್ನು …

ಸಫಾಯಿ ಕರ್ಮಚಾರಿಗಳಿಗೆ, ವರ್ಷಗಳ ಹೋರಾಟದ ಹೊರತಾಗಿಯೂ, ಕ್ಷೇತ್ರ ಸಿಬ್ಬಂದಿಗೆ ಕೆಲಸದ ಪರಿಸ್ಥಿತಿಗಳ ವಿಷಯದಲ್ಲಿ ಅತ್ಯಲ್ಪ ಪ್ರಗತಿಯಾಗಿದೆ. ಯಾವುದೇ ಸುರಕ್ಷತಾ ನಿರ್ವಹಣಾ ಸಾಧನಗಳಿಲ್ಲ, ಯಾವುದೇ ಯಂತ್ರೋಪಕರಣಗಳಿಲ್ಲ, ಆರೋಗ್ಯ ರಕ್ಷಣೆಯಿಲ್ಲ, ತೀವ್ರ ಔದ್ಯೋಗಿಕ ಅಪಾಯಗಳು ಮತ್ತು ಸಾವುನೋವುಗಳು…

ಅಭಿವೃದ್ಧಿ ಹೊಂದುತ್ತಿರುವ ನಗರ ಸಮಾಜದ ಸಾಮಾಜಿಕ-ಆರ್ಥಿಕ ಪ್ರಯೋಜನಗಳು ಈ ಅಗತ್ಯ ಸೇವಾ ಪೂರೈಕೆದಾರರನ್ನು ಪರಿಗಣಿಸುವುದಿಲ್ಲ