ಸಾಧನೆ

ಅಂಚಿನಲ್ಲೂ ಮಿಣುಕುವ ಇತಿಹಾಸ
ಅವಮಾನ ಮತ್ತು ಸಂಕಟವನ್ನೇ ಉಣಿಸಿ, ದುಡಿಮೆಗೆ ಬಿಡಿಗಾಸು ನೀಡಿ ಅಂಚಿಗೆ ತಳ್ಳಿ ಮುಂಬರದಂತೆ ಭದ್ರ ಬೇಲಿ ಬಿಗಿದರೂ ಮಿಂಚುಳಗಳಂತೆ ಪುಟಿದು ಸಾಧನೆಯ ದಾರಿಯಲ್ಲಿ ಮೈಲಿಗಲ್ಲಾದವರ ನೆನೆಯುವ ಭಾಗವಿದು. ಸಂಪತ್ತು, ಹೆಸರು, ಅಧಿಕಾರವೇ ಮಾನದಂಡವಾಗಿರುವ ಸಾಧನೆಯ ಇತಿಹಾಸವಲ್ಲ ಇದು. ಯಾರ ಮನುಷ್ಯ ಘನತೆಯನ್ನು ತುಳಿದು ಮಣ್ಣುಮಾಡಲಾಗಿದೆಯೋ ಅವರ ಮನುಷ್ಯ ಘನತೆಯನ್ನು ಎತ್ತಿ ಹಿಡಿಯಲು ನಡೆಸಿದ ಸತತ ಪ್ರಯತ್ನ …
ಬೌದ್ಧಗುರು ಸುನೀತ
ಗಂಗಾನದಿ ತವ ವಂದಪ ಬುದ್ದ ಸಿಸ್ಯರೊಂದ್ಗೆ ಬಿಕ್ಸೆಗೆ ವೋಗಿದ್ದ. ದಾರಿನಾಗ ವೋಯ್ತ ಇದ್ದ ಮಲ ಹೊರೊ ಸುನೀತ ಬುದ್ದನ್ನ ಕಂಡು ಅಂಗೆ ಇಂದ್ಕೆ ರ‍್ಕಂಡ. ಆದ್ರೂ ಬುದ್ದ ಅವನ್ತಕೆ ವೋದ. ಮೈಯಿ, ಬಟ್ಟೆ ಎಲ್ಲ ನರ‍್ತ ಇದ್ದ ಸುನೀತ ಗಾಬ್ರಿ ಬಿದ್ದು ನೀರೊಳ್ಗೆ ವೋಗಿ ಕುತ್ಕಂಡ.ಬುದ್ದ: ಬಾಸಾಮಿ ನಿಂತಾವಸಿ ಮಾತಾಡ್ಬೇಕು.ಸುನೀತ: ಅಯ್ಯೊ ದೂರ ವೊಗಿ ಸಾಮಿ …
ಸಫಾಯಿ ಕರ್ಮಚಾರಿಗಳ ಭರವಸೆ: ಐ.ಪಿ.ಡಿ ಸಾಲಪ್ಪ
ಗುಡಿಸುವವರ, ನೈರ್ಮಲ್ಯ ಕೆಲಸಗಾರರ ವಿಷಯ ಬಂದಾಗಲೆಲ್ಲ ಮರೆಯದೇ ಪ್ರಸ್ತಾಪವಾಗುವ ವ್ಯಕ್ತಿಯ ಹೆಸರೆಂದರೆ ಐ.ಪಿ.ಡಿ ಸಾಲಪ್ಪ ಎಂದೆ ಖ್ಯಾತರಾದ ಐವಾರಪಲ್ಲಿ ಪೆದ್ದಯ್ಯ ದೊಡ್ಡ ಸಾಲಪ್ಪ. ಪೌರಕಾರ್ಮಿಕರ ಸಲುವಾಗಿ ದನಿ ಎತ್ತಿದ, ಅವರಿಗೆ ದನಿಯಾದ ಸಾಲಪ್ಪನವರು ಬೆಂಗಳೂರಿನ ಗೌರಿಪುರದಲ್ಲಿ ೧೧.೧೨.೧೯೨೯ರಲ್ಲಿ ಮಾದಿಗ ಕುಟುಂಬದಲ್ಲಿ ಜನಿಸಿದರು. ಅವರ ತಾಯಿ ಶ್ರೀಮತಿ ಕುಳ್ಳಾಯಮ್ಮ. ತಂದೆ ಶ್ರೀ ಪೆದ್ದಯ್ಯ. ಪೆದ್ದಯ್ಯನವರ ಪೂರ್ವಿಕರು ೧೯೧೦ರಲ್ಲಿ …
ಶ್ರೀ ಬಿ. ಬಸವಲಿಂಗಪ್ಪ
ಶ್ರೀ ಬಿ. ಬಸವಲಿಂಗಪ್ಪನವರು ಜನಿಸಿದ್ದು ೧೯೨೯ ಏಪ್ರಿಲ್ ೨೧ರಂದು. ಇವರು ಮೂಲತಃ ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ನಾಗರಬೆಟ್ಟ ಗ್ರಾಮದವರು. ಇವರ ತಂದೆ ಶ್ರೀ ಬಸಪ್ಪನವರು ಊರೂರು ತಿರುಗುತ್ತ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ತಾಯಿ ಶ್ರೀಮತಿ. ಸಿದ್ಧಲಿಂಗಮ್ಮ. ಬಟ್ಟೆ ವ್ಯಾಪಾರ ಚೆನ್ನಾಗಿ ನಡೆಯದ ಕಾರಣ ಕುಟುಂಬವು ಬಳ್ಳಾರಿ ಜಿಲ್ಲೆಯ ಕೊಟ್ಟೂರಿಗೆ, ನಂತರ ಹರಿಹರಕ್ಕೆ ವಲಸೆ ಹೋಗಿ …
ಶ್ರೀ ಡಿ. ದೇವರಾಜ ಅರಸ್
ಕರ್ನಾಟಕ ಸರ್ಕಾರದ ಇತಿಹಾಸದಲ್ಲಿ ಶ್ರೀ ಡಿ.ದೇವರಾಜ ಅರಸು ಅವರ ಅವಧಿಯು ಹಲವಾರು ಕ್ರಾಂತಿಕಾರಕ ಹೆಜ್ಜೆಗಳಿಗೆ ಸಾಕ್ಷಿಯಾಯಿತು. ಮಲಬಾಚುವ ಪದ್ಧತಿ ನಿಷೇಧ, ಉಳುವವರನ್ನೇ ಹೊಲದೊಡೆಯರನ್ನಾಗಿಸಿದ ಭೂ ಸುಧಾರಣಾ ಕಾಯ್ದೆ, ಪೌರಕಾರ್ಮಿಕರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಐ.ಪಿ.ಡಿ. ಸಾಲಪ್ಪ ನೇತ್ರತ್ವದಲ್ಲಿ ಸಮಿತಿ ರಚನೆ, ಎಲ್.ಜಿ.ಹಾವನೂರ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಅಧ್ಯಯನ ಹೀಗೆ ಹಲವಾರು ಕಾರ್ಯಗಳ ಮೂಲಕ ಕರ್ನಾಟಕದ ದಲಿತರ …
ಮಹಿಳಾ ನಾಯಕತ್ವ: ಸೋಲದ ಚೈತನ್ಯ
ಜಾತಿ, ವರ್ಗ ಮತ್ತು ಲಿಂಗ ಮೂರೂ ತಾರತಮ್ಯ ಅನುಭವಿಸಿಕೊಂಡು ಬದುಕಿನ ಸಂಕಷ್ಟಗಳಿಗೆ ಎದೆಯೊಡ್ಡಿ ನಿಲ್ಲುವ ಸಫಾಯಿ ಕರ್ಮಚಾರಿ ಮಹಿಳೆಯರ ಬದುಕು ಮತ್ತು ಅನುಭವ ಸ್ತ್ರೀವಾದಿ ಚಿಂತನೆಯ ಆಳ-ಅಗಲಗಳನ್ನು ವಿಸ್ತರಿಸುವುದರಲ್ಲಿ ಸಂಶಯವಿಲ್ಲ. ಮನೆಯಲ್ಲಿ ಆಚರಿಸುವ ಹಬ್ಬ, ಮದುವೆ ಆಚರಣೆಗಳಿರಲಿ, ಖಾಯಿಲೆ, ಸಾವು, ನೋವುಗಳಿರಲಿ, ದುಡಿವ ಗಂಡಸರು ಮೂಲೆ ಹಿಡಿದಿರಲಿ, ಕುಡಿದು ಗಲಾಟೆ ಮಾಡುವವರಿರಲಿ, ಬಿಟ್ಟು ಹೋಗಿರಲಿ, ತೀರಿಹೋಗಿರಲಿ …
ತಮಟೆ ಟ್ರಸ್ಟ್ ಮತ್ತು ಸಫಾಯಿ ಕರ್ಮಚಾರಿ ಕಾವಲು ಸಮಿತಿ
ಸಫಾಯಿ ಕರ್ಮಚಾರಿಗಳÀ ಏಳಿಗೆಯನ್ನೇ ಪ್ರಮುಖ ಉದ್ದೇಶವಾಗಿಟ್ಟುಕೊಂಡಿರುವ ತಮಟೆ ಟ್ರಸ್ಟ್ ೨೦೦೬ರಲ್ಲಿ ಆರಂಭವಾಯಿತು. ಕರ್ನಾಟಕದ ೨೨ ಜಿಲ್ಲೆಗಳಲ್ಲಿ ಪೌರಕಾರ್ಮಿಕರ ವೇದಿಕೆಯನ್ನು ತಮಟೆ ಟ್ರಸ್ಟ್ ಆರಂಭಿಸಿದೆ. ಅವುಗಳಲ್ಲಿ ೭ ಜಿಲ್ಲೆಗಳಲ್ಲಿ ಅತ್ಯಂತ ಕ್ರಿಯಾಶಾಲಿಯಾಗಿ ಕೆಲಸ ಮಾಡುತ್ತಿದೆ. ಆ ಜಿಲ್ಲೆಗಳೆಂದರೆ ತುಮಕೂರು, ಚಿತ್ರದುರ್ಗ, ಹಾವೇರಿ, ದಾವಣಗೆರೆ, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆಗಳು. ಪೌರಕಾರ್ಮಿಕರು ಮತ್ತು ಮ್ಯಾನ್ಯುವಲ್ ಸ್ಕಾö್ಯವೆಂಜರ್‌ಗಳಿಗಾಗಿ …
ಸಫಾಯಿ ಕರ್ಮಚಾರಿ ಕಾವಲು ಸಮಿತಿ ಸ್ಥಾಪಕ ಸದಸ್ಯರಾದ ಪದ್ಮ ಅವರ ಸಂದರ್ಶನ
ಪದ್ಮ ಅವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರದವರು. ಅವರು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮ್ಯಾನ್ಯುವಲ್ ಸ್ಕಾö್ಯವೆಂರ‍್ಸ್ಗಳನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದರು. ವಿದ್ಯಾರ್ಥಿ ದೆಸೆಯಿಂದಲೇ ದಲಿತ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿಕೊಂಡು ಬಂದಿರುವ ಅವರು ಕಳೆದ ಹತ್ತು ವರ್ಷಗಳಿಂದ ‘ಸಫಾಯಿ ಕರ್ಮಚಾರಿ ಕಾವಲು ಸಮಿತಿ’ಯ ಮೂಲಕ ಮ್ಯಾನ್ಯುವಲ್ ಸ್ಕಾö್ಯವೆಂರ‍್ಸ್ಗಳನ್ನು ಸಂಘಟಿಸುತ್ತಿದ್ದಾರೆ. ಮಲಬಾಚುವ ಪದ್ಧತಿ ತಡೆಗಟ್ಟಲು ಕರ್ನಾಟಕ ಸರ್ಕಾರದ ಸಮಾಜ …
ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ಪದಾಧಿಕಾರಿಗಳಾದ ಕೆ.ಬಿ. ಓಬಳೇಶ್ ಅವರ ಸಂದರ್ಶನ
ಕೌಟುಂಬಿಕ ಹಿನ್ನೆಲೆಕನ್ನಮಡಿ ಭೀಮಪ್ಪ ಓಬಳೇಶ್ ಅವರು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನವರು. ಮಾದಿಗ ಜಾತಿಗೆ ಸೇರಿದವರು. ತಂದೆ ಭೀಮಪ್ಪ ಮತ್ತು ತಾಯಿ ನರಸಮ್ಮ. ಇಬ್ಬರೂ ಅನಕ್ಷರಸ್ಥರು. ಹಳ್ಳಿಯಲ್ಲಿ ದನ ಸತ್ತರೆ ಎತ್ತುವ, ಯಾರಾದರೂ ತೀರಿಕೊಂಡಾಗ ತಮಟೆ ಬಾರಿಸುವಂತಹ ಬಿಟ್ಟಿ ಚಾಕರಿ ಮಾಡುತ್ತಿದ್ದವರು. ಇವರು ಮಾದಿಗರಲ್ಲೇ ದೊಡ್ಡ ಮಣೆಗಾರರು. ಹಾಗಾಗಿ ಇವರ ತಂದೆ ಹಟ್ಟಿಯಲ್ಲಿ ಜರುಗುವ ಎಲ್ಲಾ …
ಮಲಬಾಚುವುದರಿಂದ ಹಿಡಿದು ಮೇಯರ್ ಹುದ್ದೆಯವರೆಗು: ಮೈಸೂರು ನಗರದ ಮಾಜಿ ಮೇಯರ್ ನಾರಾಯಣ್ ಅವರ ಸಂದರ್ಶನ
ಕೌಟುಂಬಿಕ ಹಿನ್ನೆಲೆ ನಾರಾಯಣ್ ಅವರ ಪೂರ್ವಿಕರು ಆಂಧ್ರದ ನೆಲ್ಲೂರಿನವರು. ತಾಯಿ ಈರಮ್ಮ, ತಂದೆ ಚಿನ್ನರಾಮು. ಇವರ ತಾಯಿ ಖಾಯಂ ಸಫಾಯಿ ಕರ್ಮಚಾರಿಯಾಗಿ ಕೆಲಸ ಮಾಡುತ್ತಿದ್ದರು. ತಂದೆಯವರು ಆಸ್ಪತ್ರೆಯಲ್ಲಿ ಸ್ವಚ್ಛತೆಯ ಕೆಲಸ ಮಾಡುತ್ತಿದ್ದರು. ಮುಂದೆ ಅಟೆಂಡರ್ ಆಗಿ ಕೆಲಸ ಮಾಡಿದರು. ಸ್ವತಃ ಸಫಾಯಿ ಕರ್ಮಚಾರಿಯಾಗಿ ಕೆಲಸ ಮಾಡಿದ ನಾರಾಯಣ್ ಅವರು ಮೈಸೂರು ನಗರದ ಮೇಯರ್ ಆಗಿದ್ದರು. ಸಫಾಯಿ …
ಅಂತಾರಾಷ್ಟ್ರೀಯ ಮನ್ನಣೆ: ಬೆಜವಾಡ ವಿಲ್ಸನ್ ಅವರ ಚಿತ್ರಣ
ಭಾರತೀಯ ಸಮಾಜದ ಕಪ್ಪುಚುಕ್ಕೆ ಎನ್ನಬಹುದಾದ ಮಲಬಾಚುವ ಪದ್ಧತಿಯನ್ನು ನಿಲ್ಲಿಸಬೇಕೆಂದು ದಶಕಗಳಿಂದ ಹೊರಾಟ ನಿರತರಾಗಿರುವವರು ಬೆಜûವಾಡ ವಿಲ್ಸನ್. ಸಫಾಯಿ ಕರ್ಮಚಾರಿ ಆಂದೋಲನದ ಸ್ಥಾಪಕರಲ್ಲೊಬ್ಬರು. ಅದರ ರಾಷ್ಟ್ರೀಯ ಸಂಚಾಲಕರೂ ಆದ ಅವರು ತಮ್ಮ ಮಾನವ ಹಕ್ಕು ಹೋರಾಟದ ದೆಸೆಯಿಂದ ವಿಶ್ವದ ಗಮನವನ್ನೇ ಆ ಅನಿಷ್ಟ ಪದ್ಧತಿಯ ಕಡೆಗೆ ಸೆಳೆದವರು.ಕೋಲಾರದ ಕೆ.ಜಿ.ಎಫ್.ನ ಚಿನ್ನದ ಗಣಿ ಪ್ರದೇಶದ ಬೆಜûವಾಡ ರಾಚೇಲ್ ಮತ್ತು …
ಕಬ್ಬಡಿ ಆಟದಲ್ಲಿ ಸಫಾಯಿ ಕರ್ಮಚಾರಿಗಳ ಸಾಧನೆ
ಜ್ಞಾನ, ಕೌಶಲ್ಯದಲ್ಲಿ ಸಫಾಯಿ ಕರ್ಮಚಾರಿಗಳು ಮಾಡಿರುವ ಸಾಧನೆಗಳನ್ನು ದಾಖಲಿಸಿ, ಪರಿಚಯಿಸುವ ಮೂಲಕ ಜಾತಿಯೊಂದಿಗೆ ತಳುಕು ಹಾಕಿಕೊಂಡಿರುವ ಪ್ರತಿಭೆ, ಅರ್ಹತೆ ಇತ್ಯಾದಿ ಮಿಥ್‌ಗಳನ್ನು ಒಡೆಯುವ ಅಗತ್ಯವಿದೆ.ಉದಾಹರಣೆಗೆ ಹರಿಹರದಲ್ಲಿರುವ ಸಫಾಯಿ ಕರ್ಮಚಾರಿಗಳ ಮಕ್ಕಳು ಕಬ್ಬಡಿ ಆಟದಲ್ಲಿ ಆಸಕ್ತಿ ಹೊಂದಿದ್ದಾರೆ. ಅಲ್ಲದೆ ಹಲವಾರು ಟೀಮ್‌ನ ಭಾಗವಾಗಿ ಹಲವಾರು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ಅದು ಅಲ್ಲಿನ ವಿಶೇಷವೇ ಆಗಿದೆ. ಮಂಡ್ಯದಲ್ಲಿರುವ …
ರಂಗಭೂಮಿ ಕಲಾವಿದ ಎನ್. ಲೋಕೇಶ್
ಎನ್. ಲೋಕೇಶ್ ಅವರು ಮೈಸೂರಿನಲ್ಲಿ ಕಳೆದ ಮೂರು ವರ್ಷದಿಂದ ಮ್ಯಾನ್‌ಹೋಲ್ ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದಾರೆ. ಎಸ್.ಎಸ್.ಎಲ್.ಸಿ. ಫೇಲಾಗಿರುವ ಇವರು ಉತ್ತಮ ರಂಗಭೂಮಿ ಕಲಾವಿದರು ಮತ್ತು ಹಾಡುಗಾರರು. ದಸರಾ ಉತ್ಸವದಂತಹ ಕಾರ್ಯಕ್ರಮಗಳಲ್ಲಿ ಹಲವಾರು ಪ್ರದರ್ಶನ ನೀಡಿದ್ದಾರೆ. ಹಲವು ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಸಮಾಜ ಸೇವೆಯಲ್ಲೂ ನಿರತರಾಗಿದ್ದಾರೆ. ‘ನಮ್ಮ ತಂದೆ ರೈಲ್ವೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅಮ್ಮ …
ಮೆಹ್ತರ್ ಮಹಲ್
‘ಮೆಹ್ತರ್ ಮಹಲ್’ ಎಂದರೆ ‘ಗುಡಿಸುವವನ ಅರಮನೆ’ಯನ್ನು ಕ್ರಿ.ಶ. ೧೬೨೦ರಲ್ಲಿ ಕಟ್ಟಲಾಯಿತು. ಮೆಹ್ತರ್ ಮಸೀದಿಗೆ ದ್ವಾರವಾಗಿರುವ ಈ ಮೂರು ಅಂತಸ್ತಿನ ಸುಂದರ ಕಟ್ಟಡವು ಸರಸೆನಿಕ್ ಶೈಲಿಯಲ್ಲಿದೆ. ಈ ಕಟ್ಟಡಕ್ಕೆ ಎರಡು ಮಿನಾರುಗಳಿದ್ದು ಅವುಗಳ ಮೇಲೆ ಪಕ್ಷಿಗಳ, ಸಾಲು ಹಂಸಗಳ ಸೂಕ್ಷö್ಮ ಕೆತ್ತನೆಗಳಿವೆ. ಆನೆ ಮತ್ತು ಸಿಂಹದ ಕೆತ್ತನೆಗಳು ವಿಶಿಷ್ಟವಾಗಿವೆ. ಈ ಮಹಲನ್ನು ಕಟ್ಟಿಸಿದವ ಒಬ್ಬ ಸಫಾಯಿ ಕರ್ಮಚಾರಿ. …