ಸೋಲದ ಚೈತನ್ಯ: ಮಹಿಳಾ ನಾಯಕತ್ವ

ಜಾತಿ, ವರ್ಗ ಮತ್ತು ಲಿಂಗ ಮೂರೂ ತಾರತಮ್ಯಗಳನ್ನು ಅನುಭವಿಸುತ್ತ, ದಮನಕ್ಕೆ ಒಳಗಾಗಿ ಕಷ್ಟದ ಬದುಕನ್ನು ನಡೆಸುತ್ತಿರುವ ಈ ಮಹಿಳೆಯರು ಸುಲಭವಾಗಿ ಧೈರ್ಯಗೆಡದೆ ಬದುಕಿನ ಸಂಕಷ್ಟಗಳಿಗೆ ಎದೆಯೊಡ್ಡಿ ನಿಲ್ಲುತ್ತಾರೆ. ಮನೆಯಲ್ಲಿ ಆಚರಿಸುವ ಹಬ್ಬ, ಮದುವೆ ಆಚರಣೆಗಳಿರಲಿ, ಖಾಯಿಲೆ, ಸಾವು, ನೋವುಗಳಿರಲಿ, ದುಡಿವ ಗಂಡಸರು ಮೂಲೆ ಹಿಡಿದಿರಲಿ, ಕುಡಿದು ಗಲಾಟೆ ಮಾಡುವವರಿರಲಿ, ಬಿಟ್ಟು ಹೋಗಿರಲಿ, ತೀರಿಹೋಗಿರಲಿ ಯಾವುದಕ್ಕೂ ಅಂಜದೆ ಮನೆ ಮತ್ತು ಮಕ್ಕಳನ್ನು ನಿಭಾಯಿಸಿಕೊಂಡು ಹೋಗುವ ಈ ಮಹಿಳೆಯರ ಸ್ಥೆöÊರ್ಯ ಮತ್ತು ಚೈತನ್ಯ ದೊಡ್ಡದು. ಕೇವಲ ತಮ್ಮ ಖಾಸಗಿ ಬದುಕಿನ ಆಗುಹೋಗುಗಳಿಗಷ್ಟೇ ಸೀಮಿತವಾಗದೆ ಕಾರ್ಮಿಕರಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ಸಲುವಾಗಿ ಹೋರಾಡಲು ಈ ಮಹಿಳೆಯರು ಹಿಂದೆ ಬಿದ್ದಿಲ್ಲ. ಅಂತಹ ಕೆಲವು ಹೋರಾಟಗಳನ್ನು ಇಲ್ಲಿ ದಾಖಲಿಸಲಾಗಿದೆ.
ಕಾರ್ಮಿಕ ಸಂಘಟನೆಯ ಹುಟ್ಟಿಗೆ ಕಾರಣವಾದ ಬಳ್ಳಾರಿ ಸಫಾಯಿ ಕರ್ಮಚಾರಿ ಮಹಿಳೆಯರ ಹೋರಾಟ
ಬಳ್ಳಾರಿಯಲ್ಲಿ ಗುತ್ತಿಗೆ ಪೌರಕಾರ್ಮಿಕರ ಸಂಘವನ್ನು ಕಟ್ಟುವುದಕ್ಕೆ ನಾಂದಿ ಹಾಡಿದವರು ಅಲ್ಲಿನ ಮಹಿಳಾ ಕಾರ್ಮಿಕರು. ಖಾಸಗಿ ಅನುಭವದ ಆಧಾರದ ಮೇಲೆ ರಾಜಕಾರಣವನ್ನು ಕಟ್ಟಬೇಕೆಂಬ ಮಹಿಳಾ ಚಳವಳಿಯ ಧ್ಯೇಯವನ್ನು ಅವರು ಸಾಬೀತುಪಡಿಸಿದ್ದಾರೆ ಎಂದರೆ ತಪ್ಪಾಗಲಾರದು. ಬಳ್ಳಾರಿಯ ಮೊದಲನೇ ಡಿವಿಷನ್‌ನ ವಾರ್ಡ್ ೩೨ರಲ್ಲಿ ಕನಿಷ್ಠ ವೇತನವನ್ನು ಎಲ್ಲರಿಗೂ ಕೊಡಬೇಕೆಂಬ ಕಾರಣಕ್ಕೆ ಅಲ್ಲಿನ ಗುತ್ತಿಗೆದಾರರು ಸುಮಾರು ೨೩ ಜನರನ್ನು ಕೆಲಸದಿಂದ ತೆಗೆದು ಹಾಕಿದರು. ಕೆಲಸದಿಂದ ತೆಗೆದುಹಾಕಿದವರಲ್ಲಿ ಎಂಟು ಜನ ಮಹಿಳೆಯರು ಪಾಲಿಕೆಯ ಕಚೇರಿಯ ಮುಂದೆ ಹೋಗಿ ಸೀಮೆಎಣ್ಣೆ ಸುರಿದುಕೊಂಡು ಕೆಲಸಕ್ಕೆ ತೆಗೆದುಕೊಳ್ಳದಿದ್ದರೆ ಬೆಂಕಿ ಹಚ್ಚಿಕೊಂಡು ಸಾಯುವುದಾಗಿ ಹೇಳಿದರು. ವಿಷಯ ತಿಳಿದ ಕೆಲವು ಕಾರ್ಯಕರ್ತರು ಬಂದು ಆ ಮಹಿಳೆಯರನ್ನು ಆಸ್ಪತ್ರೆಗೆ ಸೇರಿಸಿದರು. ಆ ನಂತರ ಕಾರ್ಮಿಕರೆಲ್ಲರೂ ಒಗ್ಗೂಡಿ ಕೆಲಸ ಮತ್ತೆ ಕೊಡುವವರೆಗೂ ಏಳುವುದಿಲ್ಲವೆಂದು ಧರಣಿ ಸತ್ಯಾಗ್ರಹ ಮಾಡಿ ಮತ್ತೆ ಕೆಲಸ ಪಡೆದುಕೊಂಡರು. ಹೋರಾಟವೇನೂ ಸುಲಭವಾಗಿರಲಿಲ್ಲ. ರಸ್ತೆಯಲ್ಲಿಯೇ ಧರಣಿ ಕೂತರು. ಯಾವ ಬೆದರಿಕೆಗೂ ಅಂಜಲಿಲ್ಲ, ಆಮಿಷಕ್ಕೆ ಒಳಗಾಗಲಿಲ್ಲ. ಉದ್ದೇಶ ಈಡೇರುವವರೆಗೂ ವಿಚಲಿತರಾಗದೆ ಹೋರಾಟ ಮಾಡಿದರು. ಈ ಹೋರಾಟದ ಮೂಲಕವೇ ಅಲ್ಲಿ ಯೂನಿಯನ್ ಹುಟ್ಟಿಕೊಂಡಿತು. ಆ ಯೂನಿಯನ್‌ಗೆ ಅವರು ಇಟ್ಟಿರುವ ಹೆಸರು ‘ಸಮಾನತಾ ಯೂನಿಯನ್’. ಈಗ ಈ ಯೂನಿಯನ್ ಅವರಿಗೆ ಆತ್ಮವಿಶ್ವಾಸವನ್ನು ತುಂಬಿದೆ. ತೊಂದರೆ ಆದರೆ ಹೆದರದೆ ಹೋರಾಡುವುದನ್ನು ಕಲಿಯುತ್ತಿದ್ದಾರೆ. ಇನ್ನಿತರ ಸಂಘಟನೆಗಳೊಂದಿಗೆ ಸಂಪರ್ಕವಿಟ್ಟುಕೊಂಡಿದ್ದಾರೆ. ಹೆಮ್ಮೆಯಿಂದ ಅಂಬೇಡ್ಕರ್ ದಿನಾಚರಣೆಯನ್ನು, ಸಾವಿತ್ರಿ ಬಾಯಿ ಫುಲೆ ದಿನಾಚರಣೆಯನ್ನು ಆಚರಿಸುತ್ತಾರೆ. ಮಹಿಳೆಯರಿಗಾಗಿ ಹಗ್ಗ ಜಗ್ಗಾಟ ಸ್ಪರ್ಧೆ, ಮ್ಯೂಸಿಕಲ್ ಚೇರ್, ರಂಗೋಲಿ ಇತ್ಯಾದಿ ಸ್ಪರ್ಧೆಗಳನ್ನು ಒಳಗೊಂಡ ಕ್ರೀಡಾ ದಿನಾಚರಣೆಯನ್ನು ಆಚರಿಸುತ್ತಾರೆ. ಬಹುಮಾನ ವಿತರಿಸುತ್ತಾರೆ. ತಮ್ಮ ಹೋರಾಟವನ್ನು ಬೆಂಗಳೂರಿನ ವಿಧಾನಸೌಧದವರೆಗೂ ಒಯ್ದಿದ್ದಾರೆ.

ಕಲ್ಬುರ್ಗಿ ಸಫಾಯಿ ಕರ್ಮಚಾರಿ ಮಹಿಳೆಯರ ಸುದೀರ್ಘ ಹೋರಾಟ
ಕಲ್ಬುರ್ಗಿಯಲ್ಲಿ ನಗರ ಪಾಲಿಕೆಯಲ್ಲಿ ೧೦ ರಿಂದ ೨೦ ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪರಿಶಿಷ್ಟ ಜಾತಿಯ ಸಫಾಯಿ ಕರ್ಮಚಾರಿ ಮಹಿಳೆಯರು ಕೆಲಸದಿಂದ ತೆಗೆದುಹಾಕಿದ್ದರ ವಿರುದ್ಧ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಸುದೀರ್ಘ ಹೋರಾಟ ಮಾಡಿ ಯಶಸ್ವಿಯಾದದ್ದು ಸಫಾಯಿ ಕರ್ಮಚಾರಿಗಳ ಹೋರಾಟದಲ್ಲಿ ಒಂದು ಮೈಲಿಗಲ್ಲಾಗಿದೆ.
ಧರ್ಮ್ಸಿಂಗ್ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ೪೭೦ ಜನರನ್ನು ಗುತ್ತಿಗೆ ಪೌರಕಾರ್ಮಿಕರಾಗಿ ತೆಗೆದುಕೊಳ್ಳಲಾಗಿತ್ತು. ಗುತ್ತಿಗೆ ಅವಧಿ ಮುಗಿದ ಮೇಲೆ ಅಷ್ಟು ಜನ ಕಾರ್ಮಿಕರನ್ನು ತೆಗೆದು ಹಾಕಲಾಯಿತು. ಬಹಳ ವರ್ಷಗಳ ಹಿಂದಿನಿಂದಲೂ ಇದೇ ಕೆಲಸ ಮಾಡಿಕೊಂಡು ಬಂದಿದ್ದ ಇವರಿಗೆ ಇದೊಂದೇ ಜೀವನೋಪಾಯವಾಗಿತ್ತು. ಹಾಗಾಗಿ ಎಲ್ಲಾ ಕಾರ್ಮಿಕರೂ ಒಟ್ಟಾಗಿ ಕಾರ್ಮಿಕ ಮುಖಂಡರು ಹಾಗೂ ಮಾಜಿ ಕಾರ್ಮಿಕ ಸಚಿವರಾದ ಶ್ರೀ ಎಸ್.ಕೆ.ಕಾಂತಾ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದರಿಂದ ಎರಡು ತಿಂಗಳ ಕಾಲ ನಗರವೇ ಕಸದ ತಿಪ್ಪೆಯಾಯಿತು. ಮತ್ತೆ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಯಿತು. ವಾಪಸ್ಸು ಹೋದ ನಂತರ ಕಾರ್ಮಿಕರು ೨೪೦ ದಿನಗಳ ಕಾಲ ವೇತನವೇ ಇಲ್ಲದೆ ಕೆಲಸ ಮಾಡಿದರು. ವೇತನಕ್ಕಾಗಿ ಕಾರ್ಮಿಕ ನ್ಯಾಯಲಯಕ್ಕೆ ಹೋದರು. ಕಾರ್ಮಿಕ ನ್ಯಾಯಾಲಯವು ೨೪೦ ದಿನಗಳ ಕಾಲ ಕೆಲಸ ಮಾಡಿದ್ದರಿಂದ ಅವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಆದೇಶ ನೀಡಿತು. ಈ ಆದೇಶವನ್ನು ಪ್ರಶ್ನಿಸಿ ಪಾಲಿಕೆಯು ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ ಹೈಕೋರ್ಟಿನವರೆಗೂ ಹೋಯಿತು. ವೇತನವು ಬ್ಯಾಂಕಿಗೆ ಜಮಾ ಆಗಿದ್ದ ದಾಖಲೆಯ ಮೂಲಕ ಅವರೆಲ್ಲರೂ ಪಾಲಿಕೆಯ ಕಾರ್ಮಿಕರು ಎಂಬುದು ಸಾಬೀತಾದ ಮೇಲೆ ಕೋರ್ಟು ಕಾರ್ಮಿಕರ ಪರವಾಗಿ ತೀರ್ಪು ನೀಡಿತು. ಇದೇ ಸಂದರ್ಭದಲ್ಲಿ ನಿರ್ಮಲ್ ನಗರ ಯೋಜನೆಯನ್ನು ಜಾರಿಗೊಳಿಸಿ ೭೩೦ ಜನರನ್ನು ಹೊಸದಾಗಿ ಗುತ್ತಿಗೆ ಕೆಲಸಗಾರರನ್ನಾಗಿ ನೇಮಕ ಮಾಡಿಕೊಳ್ಳಲಾಯಿತು. ೪೭೦ ಜನರಲ್ಲಿ ೪೩ ಜನ ಕಾರ್ಮಿಕರಿಗೆ ಆಮೀಷ ತೋರಿಸಿ ಅವರ ಕೈಲಿ ಸ್ವಸಹಾಯ ಸಂಘ ಮಾಡಿಸಿ ಗುತ್ತಿಗೆ ತೆಗೆದುಕೊಳ್ಳುವಂತೆ ಮಾಡುವ ಮೂಲಕ ಕಾರ್ಮಿಕರ ಒಗ್ಗಟ್ಟನ್ನು ಒಡೆಯುವ ಪ್ರಯತ್ನ ಮಾಡಲಾಯಿತು. ಧರಣಿ ಕುಳಿತ ಕಾರ್ಮಿಕರನ್ನು ಹತ್ತಿಕ್ಕುವ ಪ್ರಯತ್ನಗಳನ್ನೂ ಮಾಡಲಾಯಿತು.
ಈ ಕೆಲಸವನ್ನು ಬಿಟ್ಟರೆ ಇನ್ಯಾವ ಜೀವನಾಧಾರವೂ ಇಲ್ಲದ ಈ ಕಾರ್ಮಿಕರು ಹಗಲು-ರಾತ್ರಿ ಎನ್ನದೆ ಪಾಲಿಕೆಯ ಕಚೇರಿ ಮುಂದೆ ಸತತ ನಾಲ್ಕು ವರ್ಷಗಳ ಕಾಲ ಧರಣಿ ಮಾಡಿದ್ದಾರೆ. ಈ ನಾಲ್ಕು ವರ್ಷದ ಅವಧಿಯಲ್ಲಿ ೨೯ ಕಾರ್ಮಿಕರು ತೀರಿಹೋಗಿದ್ದಾರೆ. ನಾಲ್ಕು ಜನ ಕಾರ್ಮಿಕರು ಧರಣಿ ಕುಳಿತ ಟೆಂಟಿನಲ್ಲಿಯೇ ತೀರಿಹೋಗಿದ್ದಾರೆ. ನೀರಿಲ್ಲದೆ, ಶೌಚಾಲಯದ ವ್ಯವಸ್ಥೆ ಇಲ್ಲದೆ, ಸೊಳ್ಳೆಗಳ ಕಡಿತವನ್ನು ಸಹಿಸಿಕೊಂಡು, ಮಳೆ, ಗಾಳಿ, ಬಿಸಿಲು, ಧೂಳು ಎನ್ನದೆ ಕಾರ್ಮಿಕರು ಹೋರಾಡಿದ್ದಾರೆ. ಈ ಹೋರಾಟದ ಯಶಸ್ಸಿನ ಹಿಂದೆ ಕೆಲಸ ಮಾಡಿರುವುದು ಯಾವ ಬೆದರಿಕೆಗೂ, ಆಮಿಷಕ್ಕೂ ಮಣಿಯದ ಮಹಿಳಾ ಚೈತನ್ಯ. ಮಳೆ, ಗಾಳಿ, ಬಿಸಿಲು, ಪೊಲೀಸರ ಲಾಠಿಗೂ ಅಂಜದ ಈ ಮಹಿಳೆಯರ ಉತ್ಸಾಹಕ್ಕೆ ಎಣೆಯಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಜನಪದ ಶೈಲಿಯ ಲಾವಣಿಗಳನ್ನು, ಹೋರಾಟದ ಹಾಡುಗಳನ್ನು ಹಾಡುವ ಇವರ ಉತ್ಸಾಹ ಯಾರಿಗಾದರೂ ಸ್ಪೂರ್ತಿಯಾಗಬಲ್ಲದು. ಆ ಮಹಿಳೆಯರ ಬದ್ಧತೆ, ಕಷ್ಟವನ್ನು ಸಹಿಸಿ ನಿಲ್ಲುವ ಛಲದಿಂದಾಗಿ ಅವರ ಹೋರಾಟ ಯಶಸ್ವಿಯಾಗಿದೆ. ಅವರ ನಿರಂತರ ಹೋರಾಟದ ಫಲವಾಗಿ ೨೦೧೭ರಲ್ಲಿ ಮತ್ತೆ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ.

ಸಮಾನ ಕೆಲಸಕ್ಕೆ ಸಮಾನ ವೇತನ ಬೇಕೆಂದು ಧರಣಿ ಮಾಡಿದ್ದಕ್ಕೆ ಹಲವಾರು ಮಹಿಳೆಯರನ್ನು ಜೈಲಿಗೆ ಹಾಕಲಾಯಿತು. ಬಳ್ಳಾರಿ, ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಬೆಳಗಾವಿ, ಬಿಜಾಪುರ ಹೀಗೆ ದೂರದ ಜೈಲುಗಳಿಗೆ ಹಾಕಲಾಯಿತು. ಕೆಲವರನ್ನು ಎಂಟು ತಿಂಗಳ ಕಾಲ, ಕೆಲವರನ್ನು ಐದು ತಿಂಗಳ ಕಾಲ, ಕೆಲವರನ್ನು ಒಂದೂವರೆ ತಿಂಗಳ ಕಾಲ ಜೈಲಿನಲ್ಲಿಟ್ಟಿದ್ದರು. ಈಗಲೂ ಕೇಸುಗಳು ಆಯಾ ಊರಿನಲ್ಲಿಯೇ ನಡೆಯುತ್ತವೆ. ಕೇಸು ಬಂದಾಗಲೆಲ್ಲ ತಮ್ಮದೇ ಚಾರ್ಜಿನಲ್ಲಿ ಆ ಊರುಗಳಿಗೆ ಕಾರ್ಮಿಕರು ಹೋಗಬೇಕಾಗಿದೆ.
‘ನಾವು ಧರಣಿ ಕೂತಾಗ ನಾವಿಟ್ಟಿದ್ದ ಅಂಬೇಡ್ಕರ್ ಮತ್ತು ಗಾಂಧಿ ಫೋಟೋ ಗಟರ‍್ದಾಗೆ ಹಾಕಿರು. ಟೆಂಟು ಸುಟ್ರು, ಲಾಠಿ ಚಾರ್ಜ್ ಮಾಡಿದ್ರು, ನಮ್ ಚೀಲಗಳಿಗೆ ಬೆಂಕಿ ಹಾಕಿದ್ರು, ನಮ್ ಜತೆ ಕುಂತಿದ್ದ ತಿಪ್ಪಮ್ಮ ಚಳಿ ಉರಿಗೆ (ಜ್ವರ) ೨೦೧೪ರ ಸಂಕ್ರಾತಿ ದಿನ ಸತ್ಲು. ಎಣ ಎತ್ತುದಿಲ್ಲ ಅಂತ ಕುಂತ್ವಿ, ನಮ್‌ನೆಲ್ಲ ಯೂನಿವರ್ಸಿಟಿಗೆ ಹಾಕಿ ಜೆಸಿಬಿ ರ‍್ಸಿ ಎಣ ಮಣ್ ಮಾಡಿದ್ರು. ಆಮ್ಯಾಲೆ ಇಲ್ಲಿಗ್ ತಂದ್ ಹಾಕಿದ್ರು. ಸಾಬ್ರು (ಎಸ್.ಕೆ.ಕಾಂತ ಅವರು) ಇರೊದ್ಕೆ ನಮ್ನ ಜಿಂದಾ ಬಿಟ್ಟಾರೆ’ ಎಂದು ಧರಣಿ ಮಾಡುತ್ತಿದ್ದ ಮಹಿಳೆ ಹೇಳಿದಳು.

ಬೆಂಗಳೂರಿನ ಗುತ್ತಿಗೆ ಸಫಾಯಿ ಕರ್ಮಚಾರಿಗಳ ಹೋರಾಟ
ಬೃ.ಬೆಂ.ಮ.ನ.ಪಾ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಗುತ್ತಿಗೆ ಪೌರಕಾರ್ಮಿಕರ ಸಂಘವು ಶೋಷಣೆಗೆ ಕಾರಣವಾಗಿರುವ ಗುತ್ತಿಗೆ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುತ್ತ ಬಂದಿದೆ.ಏಐಸಿಸಿಟಿಯು (ಆಲ್ ಇಂಡಿಯಾ ಸೆಂಟರ್ ಫಾರ್ ಟ್ರೇಡ್ ಯೂನಿಯನ್ಸ್)ಗೆ ಅಫಿಲಿಯೇಟ್ ಆಗಿರುವ ಈ ಸಂಘವು ೪೦೦೦ ಸದಸ್ಯತ್ವ ಹೊಂದಿದ್ದು ೨೦೦೭-೨೦೦೮ರಿಂದ ಗುತ್ತಿಗೆ ಪೌರಕಾರ್ಮಿಕರನ್ನು ಸಂಘಟಿಸುತ್ತಿದೆ. ಈ ಸಂಘಕ್ಕೆ ರತ್ನಮ್ಮ ಅವರು ಮಹಾಕಾರ್ಯದರ್ಶಿಯಾಗಿ, ನಿರ್ಮಲ ಅವರು ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಂಘವು ಶೋಷಣೆಗೆ ಕಾರಣವಾಗಿರುವ ಗುತ್ತಿಗೆ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುತ್ತ ಬಂದಿದೆ. ಹಾಗೂ ಲೈಂಗಿಕ ಕಿರುಕುಳದ ವಿರುದ್ಧ ನಡೆದ ಆಂದೋಲನದ ನೇತೃತ್ವವಹಿಸಿದೆ. ರಾಜ್ಯಾದ್ಯಂತ ಪೌರಕಾರ್ಮಿಕರ ನಿರಂತರ ಹೋರಾಟದ ಫಲವಾಗಿ ಕರ್ನಾಟಕ ಸರ್ಕಾರವು ಜೂನ್ ೨೦೧೭ರಲ್ಲಿ ಗುತ್ತಿಗೆ ಪದ್ಧತಿಯನ್ನು ನಿಷೇಧಿಸಿ, ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಮಾಡುವ ನಿರ್ಧಾರವನ್ನು ತೆಗೆದುಕೊಂಡಿತು. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಸರ್ಕಾರದ ನಿರ್ಧಾರವನ್ನು ಜಾರಿಗೊಳಿಸಲು ವಿಳಂಬ ಮಾಡುತ್ತಿರುವುದರ ಪರಿಣಾಮವಾಗಿ ಪೌರಕಾರ್ಮಿಕರು ನಿತ್ಯವೂ ಗುತ್ತಿಗೆದಾರರಿಂದ ಹಿಂಸೆಯನ್ನು ಅನುಭವಿಸುವಂತಾಯಿತು. ಅಕ್ಟೋಬರ್ ೧೨ರಂದು ಕೆ.ಆರ್.ಪುರಂನ ವಾರ್ಡ್ ನಂ. ೫೫ರಲ್ಲಿ ಮೂರು ತಿಂಗಳಿನಿಂದ ಸಂಬಳ ದೊರೆಯದ ಕಾರ್ಮಿಕರು ಸಂಬಳಬೇಕೆಂದು ಕೇಳಿದಾಗ ಗುತ್ತಿಗೆದಾರ ಅಶ್ಲೀಲವಾಗಿ ವರ್ತಿಸಿ, ಅತ್ಯಾಚಾರ ಮಾಡುವುದಾಗಿ ಬೆದರಿಸಿದ್ದಾನೆ. ಈ ಬಗ್ಗೆ ಬೃ.ಬೆಂ.ಮ.ನ.ಪಾಲಿಕೆಯ ಲೈಂಗಿಕ ಕಿರುಕುಳ ಸಮಿತಿಯಲ್ಲಿ ದೂರು ದಾಖಲಿಸಿದರೂ ಸಮಿತಿಯು ಯಾವ ಕ್ರಮವನ್ನೂ ಜರುಗಿಸಲಿಲ್ಲ.ದೂರು ಕೊಟ್ಟಿದ್ದಕ್ಕೆ ಸಿಟ್ಟಿಗೆದ್ದು ಗುತ್ತಿಗೆದಾರನು ಅಕ್ಟೋಬರ್ ೧೯ರಂದು ೩೭ಜನ ಮಹಿಳಾ ಪೌರಕಾರ್ಮಿಕರನ್ನು ಸುತ್ತುವರೆದು, ಇಬ್ಬರ ಮೇಲೆ ಕಬ್ಬಿಣದ ರಾಡಿನಿಂದ ಥಳಿಸಿ ಗಾಯಗೊಳಿಸಿದ್ದಲ್ಲದೆ ಅಶ್ಲೀಲ ಮಾತುಗಳನ್ನಾಡಿ ಜಾತಿನಿಂದನೆ ಮಾಡಿ, ಸಾರ್ವಜನಿಕವಾಗಿ ಬಟ್ಟೆ ಹರಿದುಹಾಕಿದ್ದಾನೆ. ಕಾರ್ಮಿಕರಿಗೆ ಅರ್ಧ ಸಂಬಳವನ್ನಷ್ಟೇ ನೀಡುತ್ತಿದ್ದ ಈತ ಕಾರ್ಮಿಕರ ಪಾಸ್‌ಬುಕ್ ಮತ್ತು ಎಟಿಎಂ ಕಾರ್ಡುಗಳನ್ನು ಕಿತ್ತಿಟ್ಟುಕೊಂಡಿದ್ದಾನೆ. ಕಾರ್ಮಿಕರು ತಮ್ಮ ಸಂಘಟನೆಯ ಮೂಲಕ ನಿರಂತರ ಒತ್ತಡ ಹಾಕಿದ್ದರಿಂದ ಕೆ.ಆರ್.ಪುರಂ ಪೊಲೀಸರು ಗುತ್ತಿಗೆದಾರನ ವಿರುದ್ಧ ಲೈಂಗಿಕ ಹಲ್ಲೆ ಮತ್ತು ಪರಿಶಿಷ್ಟ ಜಾತಿ/ಪಂಗಡ (ದೌರ್ಜನ್ಯ ತಡೆ) ಕಾಯ್ದೆ ೧೯೮೯ರ ಉಲ್ಲಂಘನೆ ಮತ್ತು ಮಲಬಾಚಲು ನೇಮಿಸಿಕೊಳ್ಳುವುದರ ನಿಷೇಧ ಮತ್ತು ಪುನರ್ವಸತಿ ಕಾಯ್ದೆ ೨೦೧೩ರ ಅನ್ವಯ ಹಾಗೂ ಕಾರ್ಮಿಕರ ಎಟಿಎಂ ಕಿತ್ತಿಟ್ಟುಕೊಂಡು ವಂಚನೆಮಾಡಿರುವುದರ ಬಗ್ಗೆ ದೂರು ದಾಖಲಿಸಿಕೊಂಡಿದ್ದಾರೆ. ಆದರೂ ಗುತ್ತಿಗೆದಾರನನ್ನು ಬಂಧಿಸಲಿಲ್ಲ; ಆತ ತಲೆಮರೆಸಿಕೊಂಡಿದ್ದಾನೆ.
ಏಪ್ರಿಲ್ ೨೦೧೭ರಲ್ಲಿ ವೇತನ ಕೇಳಿದರೆಂಬ ಕಾರಣಕ್ಕೆ ಪೀಣ್ಯದಲ್ಲಿ ಇಬ್ಬರು ಕಾರ್ಮಿಕರ ಮೇಲೆ ಗುತ್ತಿಗೆದಾರನು ಥಳಿಸಿದ್ದನು. ಥಳಿಸಿದ್ದರಿಂದ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದರು. ಬೃ.ಬೆಂ.ಮ.ನ.ಪಾಲಿಕೆ ಗುತ್ತಿಗೆ ಕಾರ್ಮಿಕರ ಸಂಘದವತಿಯಿಂದ ದೂರು ನೀಡಿದಾಗ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಆದರೆ ಇಲ್ಲಿಯವರೆಗೂ ಆರೋಪ ಪಟ್ಟಿಯನ್ನು ಸಲ್ಲಿಸಿಲ್ಲ. ಪಾಲಿಕೆಯೂ ಸಹ ಗುತ್ತಿಗೆದಾರನ ಮೇಲೆ ಯಾವ ಕ್ರಮವನ್ನೂ ಕೈಗೊಂಡಿಲ್ಲ.
ಸಂಘವು ಶೋಷಣೆಗೆ ಕಾರಣವಾಗಿರುವ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಎಲ್ಲ ಪೌರಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಬೇಕು. ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ (ತಡೆ, ರದ್ದತಿ, ಪರಿಹಾರ) ಕಾಯ್ದೆ, ೨೦೧೩ನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಹೋರಾಟವನ್ನು ಮುಂದುವರೆಸಿದೆ.

ಮೂರು ದಶಕಗಳ ಹೋರಾಟದ ಪರಿಣಾಮವಾಗಿ…

ಪದೇ ಪದೇ ಹಿನ್ನಡೆಯುಂಟಾದರೂ ಕನಿಷ್ಠ ವೇತನಕ್ಕಾಗಿ ಪೌರಕಾರ್ಮಿಕರು ನಡೆಸಿದ ಹೋರಾಟ ಕಳೆದ ದಶಕದಲ್ಲಿ ತೀವ್ರತೆಯನ್ನು ಪಡೆದುಕೊಂಡು ಬೆಂಗಳೂರಿನಲ್ಲಿ ಮಹತ್ವ ಬೆಳವಣಿಗೆಯನ್ನು ಕಂಡಿದೆ. ಈ ಹಂತದ ಹೋರಾಟದಲ್ಲಿ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ ಪುರಸಭೆಗಳ ಪೌರಕಾರ್ಮಿಕರ ಮಹಾಸಂಘ ಹಾಗೂ ಏಐಸಿಸಿಟಿಯು (ಆಲ್ ಇಂಡಿಯಾ ಸೆಂಟರ್ ಫಾರ್ ಟ್ರೇಡ್ ಯೂನಿಯನ್ಸ್)ಗೆ ಅಫಿಲಿಯೇಟ್ ಆಗಿರುವ ಬಿಬಿಎಂಪಿ ಪೌರಕಾರ್ಮಿಕರ ಸಂಘವು ಪ್ರಮುಖ ಪಾತ್ರವಹಿಸಿದವು. ಬೆಂಗಳೂರು ಜಲಮಂಡಳಿಯಲ್ಲಿ ಮ್ಯಾನ್ಯುವಲ್ ಸ್ಕಾö್ಯವೆಂಜಿಂಗ್ ಕೆಲಸ ಮಾಡುತ್ತಿರುವ ಕಾರ್ಮಿಕರು, ಹೆಚ್.ಎ.ಎಲ್, ಬಿ.ಹೆಚ್.ಇ.ಎಲ್, ಬಿ.ಇ.ಎಂಎಲ್, ಬಿ.ಬಿ.ಎಂ.ಪಿ ಲೈಬ್ರರಿಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ನಿಮ್ಹಾನ್ಸ್ ಹಾಗೂ ಇತರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಶಾಪಿಂಗ್ ಮಾಲ್‌ಗಳು, ಹೋಟೆಲುಗಳು, ಬಸ್‌ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಸಹ ಹೋರಾಟ ಒಳಗೊಳ್ಳುತ್ತಿದೆ. ಇವರೆಲ್ಲರೂ ಗುತ್ತಿಗೆ ಕಾರ್ಮಿಕರೇ ಅಗಿದ್ದು ಬದುಕುವ ವೇತನವಾಗಲಿ, ಉತ್ತಮ ಕೆಲಸದ ವಾತಾವರಣವಾಗಲಿ ಇಲ್ಲದೆ ದುಡಿಯುತ್ತಿದ್ದಾರೆ. ಬಹುಪಾಲು ಕಾರ್ಮಿಕರು ದಲಿತ ಸಮುದಾಯಕ್ಕೆ ಸೇರಿದವರು.
ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಹೋರಾಟದ ಜೊತೆಗೆ ಜೂನ್ ೧೨-೧೩, ೨೦೧೭ರಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಮಣಿದ ಸರ್ಕಾರವು ಜುಲೈ ೧೨, ೨೦೧೭ರಂದು ಭ್ರಷ್ಟ ಮತ್ತು ಶೋಷಣಾತ್ಮಕ ಗುತ್ತಿಗೆ ಪದ್ಧತಿಯನ್ನು ಕೂಡಲೇ ನಿಷೇಧಿಸಲು, ಎಲ್ಲಾ ಗುತ್ತಿಗೆಗಳನ್ನು ವಜಾ ಮಾಡಲು, ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಮಾಡಲು ಮತ್ತು ಎಲ್ಲ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಕ್ಯಾಬಿನೆಟ್ ನಿರ್ಧಾರವನ್ನು ತೆಗೆದುಕೊಂಡಿತು. ನಂತರ ಕರ್ನಾಟಕ ಸರ್ಕಾರ ಆದೇಶ ಓಚಿಂಚಿ ೧೨೬ ಖಿಒS೨೦೧೬, ಜಚಿಣeಜ ೦೭.೦೮.೨೦೧೭ ನೀಡಿ ಕೂಡಲೇ ಗುತ್ತಿಗೆ ವ್ಯವಸ್ಥೆಯನ್ನು ರದ್ದುಪಡಿಸಿ,ಸ್ಥಳೀಯ ಸಂಸ್ಥೆಗಳೇ ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಮಾಡಬೇಕೆಂದು ಹೇಳಿತು. ಬಿ.ಬಿ.ಎಂ.ಪಿಯು ಸಹ ಆದೇಶ ಓo. ಂ.ಂ.Shಚಿ/PSಖ/೨೨೫೦/೨೦೧೭-೧೮, ಜಚಿಣeಜ ೨೬.೧೦.೨೦೧೭ ಚಿಟಿಜ ೨೨.೧೨.೨೦೧೭ ನೀಡಿತು.
ಗುತ್ತಿಗೆ ವ್ಯವಸ್ಥೆಯನ್ನು ರದ್ದುಪಡಿಸುವ ಸರ್ಕಾರದ ನಿರ್ಧಾರವು ಪೌರಕಾರ್ಮಿಕರಿಗೆ ಸಂದ ಬಹುದೊಡ್ಡ ವಿಜಯವಾಗಿದೆ. ಸರ್ಕಾರವು ೧೧೦೦೦ ಪೌರಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ಆದೇಶಿಸಿದೆ. ಖಾಯಮಾತಿಗಾಗಿ ಕಾರ್ಮಿಕರನ್ನು ಗುರುತಿಸುವ ಯಾವ ಪ್ರಕ್ರಿಯೆಯೂ ಆರಂಭವಾಗಿಲ್ಲ. ಬೆಂಗಳೂರು ನಗರ ಒಂದರಲ್ಲೇ ೧೮೦೦೦ದಷ್ಟು ಪೌರಕಾರ್ಮಿಕರು ಕೆಲಸಮಾಡುತ್ತಿದ್ದಾರೆ. ಅವರಲ್ಲಿ ೪೦೦೦ ಪೌರಕಾರ್ಮಿಕರನ್ನು ಮಾತ್ರ ಖಾಯಂ ಮಾಡುವುದಾಗಿ ಹೇಳಿದೆ. ಗುಡಿಸುವ ಕೆಲಸ ಮಾಡುವವರಿಗೆ ಮಾತ್ರ ಬಿ.ಬಿ.ಎಂ.ಪಿ.ಯಿಂದ ನೇರ ಪಾವತಿ ಸಿಗುತ್ತಿದೆ. ಕಸ ಸಾಗಿಸುವ ಆಟೋರಿಕ್ಷಾ, ಲಾರಿ ಚಾಲಕರು, ಸಹಾಯಕರು, ಕಸ ತುಂಬುವ, ತೆರವು ಮಾಡುವ ಕೆಲಸಗಾರರು ಗುತ್ತಿಗೆ ವ್ಯವಸ್ಥೆಯಲ್ಲಿ ಕೆಲಸಮಾಡುತ್ತಿದ್ದು ಅವರ ಬಗ್ಗೆ ಏನೂ ಹೇಳಿಲ್ಲ. ಎಲ್ಲ ಕಾರ್ಮಿಕರನ್ನು ನೇರಪಾವತಿಯಲ್ಲಿ ಒಳಗೊಳ್ಳುವುದಕ್ಕಾಗಿ ಹಾಗೂ ಸುರಕ್ಷಾ ಸಲಕರಣೆಗಳಿರುವ ಉತ್ತಮ ಕೆಲಸದ ವಾತಾವರಣಕ್ಕಾಗಿ, ಘನತೆಯ ಬದುಕಿಗಾಗಿ ಪೌರಕಾರ್ಮಿಕರ ಹೋರಾಟ ಮುಂದುವರೆದಿದೆ.
ಗುತ್ತಿಗೆ ಪದ್ಧತಿಯನ್ನು ನಿಷೇಧಿಸುವ ಆದೇಶದೊಂದಿಗೆ ನೇರಪಾವತಿಗಾಗಿ ‘ನಿಜವಾದ’ ಪೌರಕಾರ್ಮಿಕರನ್ನು ಗುರುತಿಸಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೊಳಿಸಿರುವುದು ಕಾರ್ಮಿಕರಿಗೆ ಹಾನಿಕರವಾಗಿ ಪರಿಣಮಿಸಿದೆ. ಕಾರಣ ಹಲವಾರು ವರ್ಷಗಳಿಂದ ಗುತ್ತಿಗೆದಾರರಿಂದ ನೇಮಕಗೊಂಡು ಕೆಲಸ ಮಾಡುತ್ತ, ನಗದಿನಲ್ಲಿ ವೇತನ ಪಡೆಯುತ್ತಿದ್ದ ಹಲವಾರು ಕಾರ್ಮಿಕರು ಸೂಕ್ತ ದಾಖಲೆಗಳಿಲ್ಲವೆಂಬ ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದಾರೆ. ಈ ಬಯೋಮೆಟ್ರಿಕ್ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲವಾದ್ದರಿಂದ ಪಾಲಿಕೆಯಿಂದಲೇ ವೇತನ ಪಾವತಿಯಾಗುತ್ತಿದ್ದರೂ ಮೊದಲಿಗಿಂತ ಕಡಿಮೆ ವೇತನ ಸಿಗುತ್ತಿದೆ. ಇಲ್ಲಿಯೂ ಸಹ ಹೊಸ ವ್ಯವಸ್ಥೆಯನ್ನು ವಿಫಲಗೊಳಿಸಿ ಮತ್ತೆ ಗುತ್ತಿಗೆ ವ್ಯವಸ್ಥೆ ತರುವ ಗುತ್ತಿಗೆದಾರರ ಹುನ್ನಾರವಿದೆ.
ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘವು ಲೈಂಗಿಕ ಕಿರುಕುಳದ ವಿರುದ್ಧವೂ ಹೋರಾಟ ನಡೆಸಿದ್ದರ ಫಲವಾಗಿ ಮೊತ್ತಮೊದಲ ಬಾರಿಗೆ ಬಿಬಿಎಂಪಿಯು ಆಂತರಿಕ ದೂರು ಸಮಿತಿಯನ್ನು ನೇಮಿಸಿದ್ದು ಐತಿಹಾಸಿಕ ಹೆಜ್ಜೆಯಾಗಿದೆ. ಈಗದೂರು ಸಮಿತಿಯು ಕಿರುಕುಳ ಅನುಭವಿಸುತ್ತಿರುವ ಕಾರ್ಮಿಕರಿಂದ ದೂರುಗಳನ್ನು ಸ್ವೀಕರಿಸುತ್ತಿದೆ.

ತೊಂಬತ್ತರ ದಶಕದಲ್ಲಿ ಸಫಾಯಿ ಕರ್ಮಚಾರಿ ಚಳುವಳಿಯ ಮೈಲಿಗಲ್ಲುಗಳು

ಕರ್ನಾಟಕದಲ್ಲಿ ೧೯೯೦ರ ದಶಕದ ಅವಧಿಯು ನವ-ಉದಾರವಾದಿ ಕಾರ್ಮಿಕ ಸುಧಾರಣೆಗಳು ಮತ್ತು ಮುನಿಸಿಪಲ್ ಸೇವಾ ಕ್ಷೇತ್ರಕ್ಕೆ ಗುತ್ತಿಗೆ ವ್ಯವಸ್ಥೆಯು ಜಾರಿಗೊಂಡ ಸಂದರ್ಭವಾಗಿತ್ತು. ಈ ಹಿಂದೆ ಬೆಂಗಳೂರು ಮಹಾನಗರ ಪಾಲಿಕೆಯು ಘನ ತ್ಯಾಜ್ಯ ನಿರ್ವಹಣೆಯ ಕೆಲಸಕ್ಕೆ ಖಾಯಂ ನೌಕರರನ್ನು ನೇಮಕಮಾಡಿಕೊಳ್ಳುತ್ತಿತ್ತು. ಸ್ವಚ್ಛತೆಯ ಕೆಲಸಕ್ಕೆ ಮುನಿಸಿಪಲ್ ಬಜೆಟ್‌ನ ಶೇ.೪೦-೫೦ರಷ್ಟು ವ್ಯಯವಾಗುತ್ತಿರುವುದು ದುಬಾರಿ ಎಂಬ ಕಾರಣಕ್ಕೆ ಸರ್ಕಾರವು ತ್ಯಾಜ್ಯನಿರ್ವಹಣೆಯ ಕೆಲಸವನ್ನು ೧೯೯೫ರಲ್ಲಿ ಖಾಸಗಿಗೊಳಿಸಿ ಗುತ್ತಿಗೆಗೆ ನೀಡಿತು. ಬೆಂಗಳೂರಿನ ಬಹುಪಾಲು ವಾರ್ಡುಗಳ ಗುತ್ತಿಗೆ ಹಿಡಿದವರು ರೆಡ್ಡಿ ಸಮುದಾಯಕ್ಕೆ ಸೇರಿದವರಾಗಿದ್ದರೆ, ಕೆಲಸಗಾರರು ಶೇ.೮೦ಕ್ಕಿಂತ ಹೆಚ್ಚಿನವರು ದಲಿತ ಮಹಿಳೆಯರು. ಅತ್ಯಂತ ಕೆಟ್ಟ ಕೆಲಸದ ಪರಿಸ್ಥಿತಿಯಲ್ಲಿ ಈ ಮಹಿಳೆಯರು ಕೆಲಸ ಮಾಡುತ್ತಿದ್ದರು. ೧೯೯೨ರಲ್ಲಿ ಅವರಿಗೆ ಸಿಗುತ್ತಿದ್ದ ವೇತನ ರೂ.೫೦೦-೬೦೦. ೨೦೦೩ರವರೆಗೂ ಅವರಿಗೆ ಸಿಗುತ್ತಿದ್ದ ವೇತನ ೯೦೦-೧೦೦೦ರೂ. ಮಾತ್ರ.

ಗುತ್ತಿಗೆ ವ್ಯವಸ್ಥೆಯಡಿ ಅವಶ್ಯಕ ಸೇವೆ
ತ್ಯಾಜ್ಯ ನಿರ್ವಹಣೆಯ ಕೆಲಸವನ್ನು ಗುತ್ತಿಗೆಗೆ ನೀಡುವುದು ಗುತ್ತಿಗೆ ಕಾರ್ಮಿಕ ಕಾಯ್ದೆ, ೧೯೭೦ರ ಉಲ್ಲಂಘನೆಯಾಗಿದೆ. ಕಾಯ್ದೆ ಪ್ರಕಾರ ಯಾವ ಕೆಲಸವು ನಿರಂತರವಾಗಿ ನಡೆಯಬೇಕಾಗಿದೆಯೊ ಮತ್ತು ಅವಶ್ಯಕ ಕೆಲಸವಾಗಿದೆಯೊ ಆ ಕೆಲಸವನ್ನು ಮಾಲೀಕರು ಗುತ್ತಿಗೆಗೆ ನಿಡುವಂತಿಲ್ಲ. ನಗರ ಸ್ವಚ್ಛತೆಯು ಮುನಿಸಿಪಾಲಿಟಿಯು ನಿರ್ವಹಿಸಬೇಕಾದ ನಿರಂತರವಾದ ಮುಖ್ಯ ಕೆಲಸವೂ ಆಗಿದೆ. “ಎಸೆನ್ಶಿಯಲ್ ಸರ್ವಿಸಸ್ ಮೇನ್‌ಟೆನೆನ್ಸ್ ಆಕ್ಟ್ ೨೦೧೩”(ಅಗತ್ಯ ಸೇವಾ ನಿರ್ವಹಣಾ ಕಾಯ್ದೆ)ಜಾರಿಗೊಳಿಸಿದಾಗಿನಿಂದ ಒಳಚರಂಡಿ ಮತ್ತು ತ್ಯಾಜ್ಯ ನಿರ್ವಹಣೆಯನ್ನು “ಅಗತ್ಯ ಸೇವೆ” ಎಂದು ಪರಿಗಣಿಸಲಾಗಿದೆಯಲ್ಲದೆ ನೈರ್ಮಲ್ಯ ಕೆಲಸಗಾರರು ಮುಷ್ಕರ ಹೂಡುವುದನ್ನು ನಿಷೇಧಿಸಲಾಗಿದೆ. ಆದರೆ ನೈರ್ಮಲ್ಯ ಕೆಲಸವನ್ನು “ಅಗತ್ಯ”ವೆಂದು ಪರಿಗಣಿಸುವ ಸರ್ಕಾರ ಆ ಕೆಲಸವನ್ನು ಗುತ್ತಿಗೆಗೆ ನೀಡಿದೆ.
ಗುತ್ತಿಗೆ ಕಾಯ್ದೆ ವ್ಯಾಪ್ತಿಯೊಳಗಡೆಯೂ ಪದೇ ಪದೇ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ. ಗುತ್ತಿಗೆ ಕಾಯ್ದೆಯು, ಮಾಡುವ ಕೆಲಸವು ಒಂದೇ ರೀತಿಯದಾಗಿದ್ದರೆ ವೇತನವು ಒಂದೇ ಆಗಿರಬೇಕೆಂದು ಹೇಳುತ್ತದೆ. ಆದರೆ ಈ ಅವಧಿಯಲ್ಲಿ ಕೆಲಸ ಮಾಡುತ್ತಿದ್ದ ೫೦೦೦ಖಾಯಂ ಕಾರ್ಮಿಕರಿಗೆ ಆರೋಗ್ಯ ಸೇವೆ, ರಜೆ ಮತ್ತು ನಿವೃತ್ತಿ ಸೌಲಭ್ಯದೊಂದಿಗೆ ೫೦೦೦-೬೦೦೦ರೂ. ವೇತನ ಸಿಗುತ್ತಿದ್ದರೆ, ೮೦೦೦ ಗುತ್ತಿಗೆ ಕಾರ್ಮಿಕರಿಗೆ ರಜೆಯೂ ಸೇರಿದಂತೆ ಯಾವ ಸೌಲಭ್ಯವೂ ಇಲ್ಲದೆ ಸಿಗುತ್ತಿದ್ದ ವೇತನ ೫೦೦-೬೦೦ರೂ. ಮಾತ್ರ. ಅಂದಿನಿಂದಲೂ ಈ ತಾರತಮ್ಯ ಹೆಚ್ಚುತ್ತಲೇ ಇದೆ. ಇಂತಹ ತಾರತಮ್ಯದ ವಿರುದ್ಧ ಸಫಾಯಿ ಕರ್ಮಚಾರಿಗಳ ಹಕ್ಕು ಮತ್ತು ಘನತೆಗಾಗಿ ತೊಂಬತ್ತರ ದಶಕದಿಂದಲೂ ಹೋರಾಟ ಮಾಡುತ್ತಿರುವ ಸಂಘಟನೆಗಳ ಪರಿಚಯವನ್ನು ಇಲ್ಲಿ ನೀಡಲಾಗಿದೆ.

ಗುತ್ತಿಗೆ ಕೊನೆಗೊಳಿಸಲು ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘವು ನಡೆಸಿದ ಹೋರಾಟ
ಗುತ್ತಿಗೆ ವ್ಯವಸ್ಥೆಯ ಅನ್ಯಾಯವನ್ನು ವಿರೋಧಿಸಲು ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಗುತ್ತಿಗೆ ಪೌರಕಾರ್ಮಿಕರ ಸಂಘವು ೨೦೦೧ರಲ್ಲಿ ಆರಂಭವಾಯಿತು. ಎನ್.ಆಂಜನೇಯಲು, ಕಾಮ್ರೇಡ್ ಬಾಲಕೃಷ್ಣನ್ ಮತ್ತು ಬಿ.ಎ. ಕೇಶವಮೂರ್ತಿಯವರು ಪದಾಧಿಕಾರಿಗಳಾಗಿದ್ದರು. ಜಯಮ್ಮ, ವೆಂಕಟಮ್ಮ, ಕಸ್ತೂರಿ, ಶಾರದಮ್ಮ, ರವಿ, ಕೃಷ್ಣ, ಪೆದ್ದಣ್ಣ ಹಾಗೂ ಇನ್ನು ಹಲವಾರು ಕಾರ್ಮಿಕರು ಸಕ್ರಿಯರಾಗಿ ತೊಡಗಿಕೊಂಡರು. ಕಾರ್ಮಿಕ ಹಕ್ಕುಗಳ ಹೋರಾಟಗಾರರಾದ ಬಾಬು ಮ್ಯಾಥ್ಯೂಸ್, ಮೋಹನ ಮಾಣಿಯವರು ಪ್ರಮುಖ ಪಾತ್ರವಹಿಸಿದರು. ಕಾರ್ಮಿಕರನ್ನು ಸಂಘಟಿಸುತ್ತಿದ್ದಾರೆಂಬ ಕಾರಣಕ್ಕಾಗಿ ಜುಲೈ ೨೦೦೧ರಲ್ಲಿ ಶಿವನಹಳ್ಳಿ ವಾರ್ಡಿನಲ್ಲಿ ೫೮ಕಾರ್ಮಿಕರನ್ನು ವಜಾಮಾಡಲಾಯಿತು. ಸಂಘವು ಪಾಲಿಕೆ ಅಧಿಕಾರಿಗಳೊಂದಿಗೆ, ಕಾರ್ಮಿಕ ಆಯುಕ್ತರೊಂದಿಗೆ, ಕಾರ್ಮಿಕ ಇಲಾಖೆಯೊಂದಿಗೆ ಚರ್ಚೆ ನಡೆಸಿತು. ಹಲವಾರು ಪ್ರತಿಭಟನಾ ಧರಣಿಗಳನ್ನು, ಸಾರ್ವಜನಿಕ ಸಭೆಗಳನ್ನು, ಪತ್ರಿಕಾ ಗೋಷ್ಟಿಗಳನ್ನು ಹಾಗೂ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಮಿಕರ ಸಮಸ್ಯೆಗಳತ್ತ ಗಮನ ಸೆಳೆಯಿತು. ಕನಿಷ್ಠ ವೇತನ ಕುರಿತು ಚರ್ಚೆನಡೆಸಲು ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ ಸಂಘದ ಸದಸ್ಯರು ಮತ್ತು ಗುತ್ತಿಗೆದಾರರ ಸಂಘದವರೊಂದಿಗೆ ಸಂಧಾನ ಸಭೆ ನಡೆಸಲಾಯಿತು. “ನಾವು ನಿಮ್ಮ ನಗರವನ್ನು ಸ್ವಚ್ಛಮಾಡುತ್ತೇವೆ ನೀವು ನಿಮ್ಮ ಆಡಳಿತವನ್ನು ಸ್ವಚ್ಛಗೊಳಿಸಿ” ಎಂಬ ಘೋಷವಾಕ್ಯವನ್ನಿಟ್ಟುಕೊಂಡು ಪ್ರತಿಭಟನಾ ಆಂದೋಲನವನ್ನು ನಡೆಸಲಾಯಿತು. ಆಂದೋಲನವು ಈ ಕೆಳಗಿನ ಬೇಡಿಕೆಗಳನ್ನಿಟ್ಟುಕೊಂಡು ಹೋರಾಟ ನಡೆಸಿತು:
೧. ೧೪.೦೮.೨೦೦೧ರ ಕಾರ್ಮಿಕ ಆಯುಕ್ತರ ಆದೇಶವನ್ನು ಜಾರಿಗೊಳಿಸಿ ಕನಿಷ್ಠ ವೇತನ ರೂ.೨೧೪೬ನ್ನು
ನಿಗದಿಮಾಡಬೇಕು.
೨. ಮಹಿಳೆ ಮತ್ತು ಪುರುಷರಿಬ್ಬರಿಗೂ ಸಮಾನ ವೇತನ ನೀಡಬೇಕು
೩. ಗುತ್ತಿಗೆ ಕಾರ್ಮಿಕ ಕಾಯ್ದೆ ಉಲ್ಲಂಘಿಸುವ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕು.
೪. ಯೂನಿಫಾರಂ, ಗಂಬೂಟ್ಸ್, ಗ್ಲೋವ್ಸ್ ಮತ್ತು ಬ್ಯಾಡ್ಜುಗಳನ್ನು ಕಾರ್ಮಿಕರಿಗೆ ನೀಡಬೇಕು.
೫.ಕಾರ್ಮಿಕ ಸಂಘಟನೆಯಲ್ಲಿ ಸಕ್ರಿಯರಾಗಿರುವ ಕಾರಣಕ್ಕೆ ವಜಾ ಮಾಡಿರುವ ಕಾರ್ಮಿಕರನ್ನು ಹಿಂತೆಗೆದುಕೊಳ್ಳಬೇಕು.
ವಜಾ ಮಾಡಿರುವ ಕೆಲಸಗಾರರನ್ನು ಹಿಂದೆ ತೆಗೆದುಕೊಳ್ಳದಿದ್ದರೆ ಕಾರ್ಪೊರೇಷನ್ ಕಚೇರಿ ಮುಂದೆ ಮುಷ್ಕರ ಹೂಡುವುದಾಗಿ ಸಂಘ ಹೇಳಿತು.
ವಜಾಮಾಡಲಾಗಿದ್ದ ೫೮ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವುದರೊಂದಿಗೆ ಆಂದೋಲನವು ಯಶಸ್ವಿಯಾಗಿ ಕೊನೆಗೊಂಡಿತು. ಆದರೆ ಪಾಲಿಕೆಯು ಗುತ್ತಿಗೆದಾರರಿಗೆ ಹಣ ನೀಡುತ್ತಿದ್ದರೂ ಅವರು ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಹಾಗೂ ಉಳಿದ ಸೌಲಭ್ಯಗಳನ್ನು ನೀಡದಿದ್ದುರಿಂದಾಗಿ ಹೋರಾಟ ಮುಂದುವರೆಯಿತು. ಅಂತಿಮವಾಗಿ ಹೋರಾಟಕ್ಕೆ ಫಲ ದೊರೆಯಿತು. ಆಗಸ್ಟ್ ೨೦೦೨ರಲ್ಲಿ ಕರ್ನಾಟಕ ಸರ್ಕಾರವು ಕನಿಷ್ಠ ವೇತನವನ್ನು ಘೋಷಿಸಿ ಗೆಜೆಟ್ ನೋಟಿಫಿಕೇಷನ್ ನೀಡಿತು. ಗುತ್ತಿಗೆದಾರರು ಗೆಜೆಟ್ ನೊಟಿಫಿಕೇಶನ್ ಪ್ರಶ್ನಿಸಿ ಕೋರ್ಟಿಗೆ ಹೋದಾಗ, ಕೋರ್ಟು ನೋಟಿಫಿಕೇಶನನ್ನು ಎತ್ತಿ ಹಿಡಿಯಿತು. ಆ ಪ್ರಕಾರ ಕನಿಷ್ಠ ವೇತನ ಕಾಯ್ದೆ ೧೯೪೮ರ ಅನ್ವಯ ಸರ್ಕಾರ ಕನಿಷ್ಠ ವೇತನ ನಿಗದಿ ಮಾಡುವವರೆಗೂ ರೂ.೧೮೦೦ರನ್ನು ಕನಿಷ್ಠ ವೇತನವಾಗಿ ನೀಡಬೇಕೆಂದು ಆದೇಶಿಸಲಾಯಿತು.
ನೋಟಿಫಿಕೇಷನ್‌ಗೆ ಅನುಗುಣವಾಗಿ ಬೃಹತ್ ಬೆಂಗಳೂರು ನಗರ ಪಾಲಿಕೆಯು ಜಾರಿಯಲ್ಲಿದ್ದ ಗುತ್ತಿಗೆಯನ್ನು ತೆಗೆದು ಹೊಸ ಟೆಂಡರ್‌ಗಳಿಗೆ ಆಹ್ವಾನ ನೀಡಿತು. ಜೂನ್ ೨೦೦೩ರಲ್ಲಿ ಟೆಂಡರ್‌ಗಳು ಜಾರಿಗೊಂಡವು. ಹೊಸ ಟೆಂಡರ್‌ನಲ್ಲಿ ನೀಡಲಾದ ಸೌಲಭ್ಯಗಳೆಂದರೆ: ಕೆಲಸದ ಒಳಗೆ ಮತ್ತು ಹೊರಗೆ ದೈಹಿಕ ಅಪಘಾತಗಳಾದರೆ ವರ್ಕ್ಮೆನ್ ಕಾಂಪೆನ್‌ಸೇಷನ್ ಆಕ್ಟ್ ಪ್ರಕಾರ ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕು; ಗ್ಲೋವ್ಸ್, ಗಂಬೂಟ್ಸ್, ಮಾಸ್ಕ್ ಇತ್ಯಾದಿ ಸುರಕ್ಷಾ ಸಲಕರಣೆಗಳನ್ನು ನೀಡಬೇಕು;ಶೌಚಾಲಯ, ಕಚೇರಿ ಮತ್ತು ಸಮವಸ್ತ್ರದ ಸೌಲಭ್ಯಗಳನ್ನು ನೀಡಬೇಕು.
ನೋಟಿಫಿಕೇಷನ್‌ಗೆ ಗುತ್ತಿಗೆದಾರರ ಪ್ರತಿಕ್ರಿಯೆ ವ್ಯತಿರಿಕ್ತವಾಗಿತ್ತು. ೧೦೦೦೦ ಕಾರ್ಮಿಕರಿಗೆ ವೇತನವನ್ನು ಪಡೆದುಕೊಂಡು ೭೦೦೦ ಕಾರ್ಮಿಕರನ್ನು ನೇಮಕಮಾಡಿಕೊಂಡು ೧೭೫ಲಕ್ಷ ರೂಪಾಯಿಗಳ ಲಾಭವನ್ನು ಗುತ್ತಿಗೆದಾರರು ದೋಚಿದ್ದರು. ಇದು, ಸಂಘಟಿತರಾಗಿದ್ದ ಕಾರ್ಮಿಕರನ್ನು ತೆಗೆದುಹಾಕಿ ಕಾರ್ಮಿಕರ ಕಾಯ್ದೆ ಮತ್ತು ಹಕ್ಕುಗಳ ಅರಿವಿಲ್ಲದ ಹೊಸ ಕಾರ್ಮಿಕರನ್ನು ನೇಮಿಸಿಕೊಳ್ಳುವ ಪ್ರಯತ್ನವಾಗಿತ್ತು. ಬಹಳಷ್ಟು ಪೌರಕಾರ್ಮಿಕರಿಗೆ ೧೮೦೦ ರೂ.ಕ್ಕಿಂತಲೂ ಕಡಿಮೆ ವೇತನ ದೊರಕುತ್ತಿತ್ತು. ಹಾಗೂ ಯಾವ ಸೌಲಭ್ಯಗಳೂ ದೊರೆತಿರಲಿಲ್ಲ. ಎಲ್ಲಿ ಕಾರ್ಮಿಕ ಸಂಘಟನೆ ಬಲವಾಗಿತ್ತೊ ಅಂತಹ ಸ್ಥಳಗಳಲ್ಲಿ ಸುಮಾರು ೧೦೦೦ಜನ ಪೌರಕಾರ್ಮಿಕರನ್ನು ಕೆಲಸದಿಂದ ವಜಾಮಾಡಲಾಗಿತ್ತು. ಇಷ್ಟೆಲ್ಲ ಸಾಧ್ಯವಾದದ್ದು ಗುತ್ತಿಗೆದಾರರ, ಕಾರ್ಪೊರೇಟರುಗಳ ಮತ್ತು ಅಧಿಕಾರಶಾಹಿ ಕೂಟದಿಂದಾಗಿ.
ಸಂಘವು ಜನತಾ ನ್ಯಾಯಾಲಯವನ್ನು ಆಯೋಜಿಸಿತು. ಅದರ ಪರಿಣಾಮವಾಗಿ ಸರ್ಕಾರ ಕೂಡಲೇ ಕನಿಷ್ಠ ವೇತನ ಕೊಡುವುದಾಗಿ ಘೋಷಿಸಿತು. ಇದು ಬಹುದೊಡ್ಡ ವಿಜಯವೇ ಆದರೂ ಗುತ್ತಿಗೆದಾರರು ವೇತನ ನೀಡಿದ ಮರುದಿನ ರೂ.೨೦೦-೪೦೦ನ್ನು ಹಿಂತಿರುಗಿಸಬೇಕು. ಇಲ್ಲವಾದರೆ ಕೆಲಸದಿಂದ ತೆಗೆದುಹಾಕುವುದಾಗಿ ಕಾರ್ಮಿಕರನ್ನು ಬೆದರಿಸಿದ್ದರು. ಬೆಂಗಳೂರಿನಿಂದ ಹೊರಗಡೆ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಅಲ್ಲಿ ಮಹಿಳೆಯರಿಗೆ ೧೦೦೦ರೂ. ವೇತನ ದೊರೆತರೆ ಪುರುಷರಿಗೆ ೧೦೦೦-೧೨೦೦ರೂ. ವೇತನ ಸಿಗುತ್ತಿದೆ.
ಪೌರಕಾರ್ಮಿಕರ ದಶಕದ ಹೋರಾಟದ ಫಲವಾಗಿ ಆಗಸ್ಟ್ ೨೦೧೬ರಲ್ಲಿ ಸರ್ಕಾರವು ರೂ.೧೪,೪೦೦ಕನಿಷ್ಠ ವೇತನವನ್ನು ಪಾಲಿಕೆಯಿಂದಲೇ ನೇರವಾಗಿ ಪಾವತಿಸುವಂತೆ ನಿಗದಿಪಡಿಸಿತಲ್ಲದೆ ಇಎಸ್‌ಐ, ಪಿಎಫ್, ಕುಡಿಯುವ ನೀರು, ಶೌಚಾಲಯ, ಉಪಾಹಾರ ಮತ್ತು ಸುರಕ್ಷಾ ಸಲಕರಣೆಗಳ ಸೌಲಭ್ಯಗಳನ್ನು ನೀಡಲು ಆದೇಶಿಸಿತು. ಇದಿನ್ನೂ ಸಂಪೂರ್ಣವಾಗಿ ಜಾರಿಯಾಗಬೇಕಾಗಿದೆ.

ಹೋರಾಟದ ಇತಿಹಾಸ: ಐ.ಪಿ.ಡಿ ಸಾಲಪ್ಪ ವರದಿ

ಕರ್ನಾಟಕದಲ್ಲಿ ಘನತೆಗಾಗಿ ಮತ್ತು ಕಾರ್ಮಿಕರಾಗಿ ತಮ್ಮ ಹಕ್ಕುಗಳಿಗಾಗಿ ನಡೆಸಿರುವ ಹೋರಾಟದ ಮೂಲವಿರುವುದು ಸ್ವಾತಂತ್ರö್ಯ ಬಂದ ಮೂರನೇ ದಶಕದಲ್ಲಿ ಬಂದ ಮಹತ್ವದ ವರದಿಯಲ್ಲಿ.

ಕರ್ನಾಟಕದ ಪೌರಕಾರ್ಮಿಕರ ಹೋರಾಟ ಇತಿಹಾಸದಲ್ಲಿನ ಹೆಗ್ಗುರುತು ಐ.ಪಿ.ಡಿ ಸಾಲಪ್ಪ ವರದಿ
ಕರ್ನಾಟಕ ಸರ್ಕಾರವು ಸೆಪ್ಟಂಬರ್ ೨೩, ೧೯೭೨ರಲ್ಲಿ ಗುಡಿಸುವ ಹಾಗೂ ಮಲಬಾಚುವವರ ಬದುಕುವ ಮತ್ತು ಕೆಲಸದ ಪರಿಸ್ಥಿತಿ ಕುರಿತು ಅಧ್ಯಯನ ಮಾಡಲು ನೇಮಿಸಿದ ಸಮಿತಿಗೆ ಶ್ರೀ ಐ.ಪಿ.ಡಿ.ಸಾಲಪ್ಪ ಅವರನ್ನು ಅಧ್ಯಕ್ಷ್ಯರನ್ನಾಗಿ ನೇಮಿಸಿತು. ಮಾರ್ಚ್ ೩, ೧೯೭೩ರಲ್ಲಿ ಸಾಲಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ಮೊದಲ ಸಭೆಗೆ ಮುಖ್ಯಮಂತ್ರಿಗಳಾಗಿದ್ದ ಶ್ರೀ ದೇವರಾಜ ಅರಸು ಮತ್ತು ಪೌರಾಡಳಿತ ಸಚಿವರಾಗಿದ್ದ ಶ್ರೀ ಬಿ.ಬಸವಲಿಂಗಪ್ಪನವರು ಭಾಗವಹಿಸಿದ್ದರು.

ಹೋರಾಟವೇ ಆದ ಸಮಿತಿಯ ಕೆಲಸ
ಸಮಿತಿ ರಚನೆ ೧೯೭೨ರಲ್ಲೇ ಆದರೂ ಸಮಿತಿಯ ಕೆಲಸ ಆರಂಭವಾದದ್ದು ಜನವರಿ, ೧೯೭೪ರಲ್ಲಿ. ಹಲವಾರು ತೊಡಕುಗಳು ಸಮಿತಿಗೆ ಎದುರಾದವು. ಯಾವ ಅಧಿಕಾರಿಯೂ ಬರಲು ಸಿದ್ಧವಿರದ ಕಾರಣಕ್ಕೆ ಕಾರ್ಯದರ್ಶಿಯ ಹುದ್ದೆ ಖಾಲಿ ಉಳಿದಿತ್ತು. ನಿವೃತ್ತ ಅಧಿಕಾರಿಯೊಬ್ಬರು ಒಪ್ಪಿಕೊಂಡರಾದರೂ ಐದು ತಿಂಗಳ ನಂತರ ರಾಜೀನಾಮೆ ನೀಡಿದರು. ನಂತರ ನವೆಂಬರ್‌ನಲ್ಲಿ ನೇಮಕವಾದ ಅಧಿಕಾರಿಯನ್ನು ವರ್ಗಮಾಡಲಾಯಿತು. ಕಚೇರಿ, ಸಿಬ್ಬಂದಿಯಂತಹ ಸೌಲಭ್ಯಗಳು ಸಹ ಸಿಗಲಿಲ್ಲ. ಅಗತ್ಯವಾದ ಹಣಕಾಸನ್ನು ಮಂಜೂರು ಮಾಡಲಿಲ್ಲ. ಸಿಬ್ಬಂದಿಯನ್ನು ನೇಮಕ ಮಾಡಲು ಸಮಿತಿಗೇ ಸೂಚಿಸಿದ್ದರಿಂದ ಆರು ಜನ ಸಿಬ್ಬಂದಿಗಳನ್ನು ನೇಮಕಮಾಡಲಾಯಿತು. ಆದರೆ ಹಣಕಾಸು ಮಂಜೂರಾಗದ ಕಾರಣ ಅವರೆಲ್ಲ ಐದು ತಿಂಗಳಕಾಲ ಸಂಬಳವಿಲ್ಲದೆ ದುಡಿದರು. ಕಚೇರಿಗೆ ಸ್ಥಳವಿಲ್ಲದೆೆ, ಯಾವುದೋ ಕಚೇರಿಯ ಒಂದು ಮೂಲೆಯಲ್ಲಿ ಮೇಜು, ಕುರ್ಚಿಗಳನ್ನು ಬಾಡಿಗೆಗೆ ಪಡೆದುಕೊಂಡು ಸಮಿತಿಯು ತನ್ನ ಮಹತ್ವದ ಕೆಲಸವನ್ನು ಆರಂಭಿಸಿತು.
ಪ್ರಯಾಣ ಭತ್ಯೆ ಮಂಜೂರಾಗದೆ ಜನವರಿ ೧೯೭೪ರವರೆಗೂ ಸದಸ್ಯರು ಪ್ರಯಾಣ ಮಾಡಲಾಗಲಿಲ್ಲ. ಮುಂದೆ ಸಮಿತಿ ಸದಸ್ಯರು ರಾಜ್ಯದ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿದರು. ತುಲನಾತ್ಮಕ ಅಧ್ಯಯನದ ದೃಷ್ಟಿಯಿಂದ ಬಾಂಬೆ, ಡೆಲ್ಲಿ, ಕಲ್ಕತ್ತ ಮತ್ತು ಭುವನೇಶ್ವರಗಳಿಗೆ ಭೇಟಿ ನೀಡಲಾಯಿತು.
ವಿವರವಾದ ಪ್ರಶ್ನಾವಳಿಯನ್ನು ಜುಲೈ ೨೫, ೧೯೭೩ರಲ್ಲಿ ಸಿದ್ಧಪಡಿಸಿ ಎಲ್ಲಾ ಸ್ಥಳೀಯ ಸಂಸ್ಥೆಗಳು, ಸಾರ್ವಜನಿಕ ಸಂಸ್ಥೆಗಳು, ಸಮಾಜೋ-ಆರ್ಥಿಕ ಸಂಸ್ಥೆಗಳಿಗೆ, ಶಾಸಕರುಗಳಿಗೆ ಕಳುಹಿಸಲಾಯಿತು. ಡಿಸೆಂಬರ್‌ನಲ್ಲಿ ಪ್ರಶ್ನಾವಳಿಗಳು ಬಂದವಾದರೂ ಒಂದೇ ಒಂದನ್ನು ಸಹ ಪೂರ್ತಿವಾಗಿ ಭರ್ತಿಮಾಡಿರಲಿಲ್ಲ. ಜೊತೆಗೆ ಹಲವಾರು ತಪ್ಪುಗಳಿದ್ದವು. ಪಿ. ಕೋದಂಡರಾಮ್ ಅವರು ಮಾತ್ರ ನಿಗದಿತ ಸಮಯದೊಳಗೆ ಮತ್ತು ಉತ್ತಮ ಸಲಹೆಗಳೊಂದಿಗೆ ಕಳುಹಿಸಿದ್ದರು.
ಸಮಿತಿಯು ಬಹಳ ಪ್ರಯತ್ನಪಟ್ಟು ಮೊದಲ ಬಾರಿಗೆ ಪೌರಕಾರ್ಮಿಕರ ಜನಗಣತಿಯನ್ನು ಮಾಡಿತು. ರಾಜ್ಯದ ವಿವಿಧ ಮುನಿಸಿಪಾಲಿಟಿಗಳು ಮತ್ತು ಕಾರ್ಪೊರೇಷನ್‌ಗಳಲ್ಲಿ ಒಟ್ಟು ೧೨೩೫೧ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರಲ್ಲಿ ೭೦೮೮ ಪುರುಷರು ಮತ್ತು ೫೨೬೩ ಮಹಿಳೆಯರು. ಫ್ಯಾಕ್ಟರಿಗಳಲ್ಲಿ, ರೈಲ್ವೆಯಲ್ಲಿ, ಪೊಲೀಸ್ ಇಲಾಖೆಯಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಕೆಲಸಮಾಡುವ ಕಾರ್ಮಿಕರನ್ನು ಒಳಗೊಂಡಿರಲಿಲ್ಲ. ಹಣಕಾಸಿನ ತೊಂದರೆಯ ನಡುವೆಯೂ ಸಾಮಾಜಿಕ, ಆರ್ಥಿಕ ಅಂಶಗಳ ಕುರಿತು ಮೌಲ್ಯಯುತ ಮಾಹಿತಿಯನ್ನು ಸಮಿತಿ ಕಲೆಹಾಕಿತು. ಮೇಲ್ವಿಚಾರಣೆ ಸಿಬ್ಬಂದಿಗಳು ಮಾಡುವ ಮೌಖಿಕ ನಿಂದನೆ, ಅವಮಾನ, ಸಾರ್ವಜನಿಕರು ಮಾಡುವ ಅವಮಾನ, ವಸತಿಗೆ ಸಂಬಂಧಿಸಿದ ನಿರ್ಬಂಧಗಳು ಹಾಗೂ ಇನ್ನಿತರ ತಾರತಮ್ಯಗಳನ್ನು ವಿವರವಾಗಿ ದಾಖಲಿಸಲಾಯಿತು. ಮಂಡ್ಯದ ಬೆಳ್ಳೂರಿನಲ್ಲಿ ಪೌರಕಾರ್ಮಿಕರ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡಿರಲಿಲ್ಲ. ಸ್ಮಶಾನದಲ್ಲಿ ಹೆಣ ಹೂಳಲು ಅಥವಾ ಹೆಣ ಸಾಗಿಸಲು ವಾಹನ ನೀಡುವುದಕ್ಕೂ ನಿರ್ಬಂಧ ಹೇರÀಲಾಗಿತ್ತು. ಸರ್ಕಾರದ ವೈಫಲ್ಯಗಳನ್ನು ಸಹ ಗುರುತಿಸಲಾಗಿತ್ತು. ಒಟ್ಟು ೩೨ ಸಭೆಗಳನ್ನು ನಡೆಸಲಾಗಿತ್ತು.
ಸರ್ಕಾರವೇ ನೇಮಿಸಿದ ಸಮಿತಿಯಾಗಿದ್ದರೂ ಸಹ ಸರ್ಕಾರದ ವರದಿಯ ಪರಿಧಿಯನ್ನು ದಾಟಿ, ಸಾಮಾಜಿಕ-ಆರ್ಥಿಕ ಶ್ರೇಣಿಯ ಕಟ್ಟಕಡೆಯಲ್ಲಿರುವವರ ಮೂಲಭೂತ ಹಕ್ಕುಗಳನ್ನು ಖಾತ್ರಿ ಮಾಡುವಲ್ಲಿ ಸರ್ಕಾರ ವಿಫಲವಾಗಿರುವುದನ್ನು ವರದಿಯು ಟೀಕಿಸುತ್ತದೆಯಲ್ಲದೆ ಆಳುವ ವರ್ಗದ ಹಿತಾಸಕ್ತಿಗಿಂತ ಭಿನ್ನವಾದ ದನಿಯನ್ನು ದಾಖಲಿಸುತ್ತದೆ. ಮಾರ್ಕ್ಸ್ವಾದಿ ಚಿಂತಕ ಗ್ರಾಮ್ಶಿಯವರ ಮಾತಿನಲ್ಲಿ ಹೇಳುವುದಾದರೆ ಅಂತಹ ಟೀಕೆಗಳು ‘ಪ್ರತಿ-ಯಾಜಮಾನ್ಯ ಶಕ್ತಿಯನ್ನು ಮತ್ತು ಸಮಾಜದ ಪ್ರಜಾಸತ್ತಾತ್ಮಕ ಪರಿವರ್ತನೆಯ ಬೀಜಗಳನ್ನು ಹೊಂದಿರುತ್ತವೆ’.

ಭಾರತ ಸ್ವಾತಂತ್ರ್ಯದ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಕರೆ

ಜವರಹರಲಾಲ್ ನೆಹರು ಅವರಿಗೆ ಅಂಬೇಡ್ಕರ್ ಅವರು ೧೮ ಡಿಸೆಂಬರ್ ೧೯೪೭ರಲ್ಲಿ ಬರೆದ ಪತ್ರದಲ್ಲಿ, ಪಾಕಿಸ್ತಾನವು ನರ‍್ಮಲ್ಯ ಕೆಲಸದಲ್ಲಿ ತೊಡಗಿರುವವರನ್ನು ಭಾರತಕ್ಕೆ ಹೋಗಲು ಬಿಡುತ್ತಿಲ್ಲ ಎಂಬ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆ ಕುರಿತು ಅಂಬೇಡ್ಕರ್ ಹೀಗೆ ಉಲ್ಲೇಖಿಸಿದ್ದಾರೆ:

“ಪಾಕಿಸ್ತಾನ ರ‍್ಕಾರವು ತಮ್ಮ ಪ್ರದೇಶದಿಂದ ಪರಿಶಿಷ್ಟ ಜಾತಿಗಳ ಒಕ್ಕುಲೆಬ್ಬಿಸುವುದನ್ನು ತಡೆಯಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ನನಗನಿಸುವ ಪ್ರಕಾರ ಇದರ ಹಿಂದಿರುವ ಕಾರಣ, ಭೂಒಡೆತನ ಹೊಂದಿರುವ ಜನರಿಗೆ ಕೀಳು ಕೆಲಸ ಮಾಡಿಕೊಂಡು ಭೂಹೀನ ಕೂಲಿಗಳಾಗಿ ಸೇವೆ ಸಲ್ಲಿಸುವ ಸಲುವಾಗಿ ಪರಿಶಿಷ್ಟ ಜಾತಿಗಳು ಪಾಕಿಸ್ತಾನದಲ್ಲಿ ಉಳಿದುಕೊಳ್ಳಬೇಕು ಎಂಬುದಾಗಿದೆ. ಗುಡಿಸುವವರನ್ನು ಅಗತ್ಯ ಸೇವೆಗಳಿಗೆ ಸೇರಿದವರೆಂದು ಮತ್ತು ಒಂದು ತಿಂಗಳ ನೋಟೀಸ್ ನೀಡದೆ ಬಿಡುಗಡೆ ಮಾಡಲಾಗದೆಂದು ಘೋಷಿಸುವ ಮೂಲಕ ಅವರನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವ ಬಗ್ಗೆ ರ‍್ಕಾರ ಚಿಂತಿಸುತ್ತದೆ.”

ಹೋರಾಟದ ಬದುಕು

ಪೌರಕಾರ್ಮಿಕರ ಬದುಕಿನ ಮೂಲ ಸತ್ವದಂತಿರುವ ಅವರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬದುಕಿನೊಳಗೊಂದು ಕಣ್ಣಾಡಿಸಿ ಬಂದೆವು. ಈ ಸತ್ವವೇ ಅಮಾನವೀಯವಾದ, ಅನಾರೋಗ್ಯಕರವಾದ ಅವರ ಕೆಲಸದ ಪರಿಸ್ಥಿತಿಯ ವಿರುದ್ಧ ಹೋರಾಡಲು ಅವರಿಗೆ ಶಕ್ತಿ ನೀಡಿದೆ. ಈ ಭಾಗದಲ್ಲಿ ಅವರು ನಡೆಸಿರುವ ಹೋರಾಟದ ಬದುಕಿನೊಳಗೆ ಹೆಜ್ಜೆ ಹಾಕೋಣ ಬನ್ನಿ. ಅಸಮಾನತೆ ತಾರತಮ್ಯ ಯಾವ ರೀತಿಯಲ್ಲೇ ಇರಲಿ, ಯಾರೇ ಅದಕ್ಕೆ ಒಳಗಾಗಿರಲಿ ಅದೊಂದು ಒಟ್ಟು ಸಮಾಜದ ಸಮಸ್ಯೆಯೇ ಹೌದು. ಒಟ್ಟು ಸಮಾಜದ ಸ್ಪಂದನೆಯೊಂದಿಗೆ ತುಳಿತಕ್ಕೆ ಒಳಗಾದ ಸಮುದಾಯ ಎಚ್ಚೆತ್ತಾಗಲೇ ಸಮಾನತೆಯ ಸಮಾಜದತ್ತ ಹೆಜ್ಜೆ ಹಾಕಲು ಸಾಧ್ಯ. ಸಫಾಯಿ ಕರ್ಮಚಾರಿಗಳನ್ನು ಮತ್ತು ಅವರು ಮಾಡುವ ಸ್ವಚ್ಛತೆಯ ಕೆಲಸವನ್ನು ಕಾನೂನಿನ ಚೌಕಟ್ಟಿನಲ್ಲಿ ಗುರುತಿಸಲಾಗಿದೆ ಮತ್ತು ಈ ದೇಶದ ಪ್ರಜೆಗಳಾಗಿ ಅವರಿಗಿರುವ ಹಕ್ಕುಗಳನ್ನು ಮಾನ್ಯಮಾಡಲಾಗಿದೆಯಾದರೂ ಅದ್ಯಾವುದೂ ಅವರ ನಿತ್ಯ ಬದುಕಿನ ವಾಸ್ತವವಾಗಿ ಪರಿಣಮಿಸಿಲ್ಲ. ಆ ಸಮುದಾಯವೇ ಎಚ್ಚೆತ್ತುಕೊಂಡಾಗ ಪರಿಣಾಮಗಳು ಉಂಟಾಗುತ್ತವೆ ಎಂಬುದನ್ನು ಅವರ ಹೋರಾಟದ ಇತಿಹಾಸದಲ್ಲಿ ಸ್ಪಷ್ಟವಾಗಿ ಕಾಣಬಹುದು.
ಪ್ರಸ್ತುತ ಭಾರತದ ಸಂದರ್ಭದಲ್ಲಿ, ಪೌರಕಾರ್ಮಿಕರ ನಿತ್ಯ ಬದುಕಿನ ಸಂಯೋಜನೆಯ ಬೀಜಗಳು ಅವರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬದುಕಿನೊಳಗೆ ಅಡಗಿವೆ ಎಂಬುದನ್ನು ಅರಿತಾಗ ಪೌರಕಾರ್ಮಿಕರು ಪಡೆದುಕೊಂಡಿರುವ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬದುಕು ಆಳವಾದ ರಾಜಕೀಯ ಇತಿಹಾಸವೇ ಆಗಿದೆ ಎನ್ನುವುದನ್ನು ಕಂಡುಕೊಳ್ಳಬಹುದು. ಅಂತಹ ರಾಜಕೀಯದ ಸ್ವರೂಪ ಮತ್ತು ಸತ್ವವನ್ನು ನಗಣ್ಯ ಮಾಡಲಾಗಿದೆ. ಈ ಸ್ವಚ್ಛತೆಯ ಕೆಲಸಕ್ಕೇ ಅರ್ಹರಾದವರು ಎಂದು ಅದನ್ನು ಅವರ ಮೇಲೆ ಹೇರುವ ಅಸೂಕ್ಷö್ಮತೆಯನ್ನು ಜಾತಿವ್ಯವಸ್ಥೆಯ ಸಮಾಜವು ತೋರಿದೆ ಎಂಬುದು ನಮಗೆ ತಿಳಿದಿರುವ ವಿಷಯ. ಆದರೆ ಪರರ ತ್ಯಾಜ್ಯವನ್ನು ಸ್ವಚ್ಛಮಾಡುವಂತಹ ಕಠಿಣವಾದ, ಅಮಾನವೀಯವಾದ ಶ್ರಮದ ಬದುಕಿನ ಹೋರಾಟದಲ್ಲಿ ಇವರ ಸುಖದುಃಖಗಳು ಅತ್ಯಂತ ಸೂಕ್ಷö್ಮ ಹೆಣಿಗೆಯಲ್ಲಿ ನೇಯ್ದುಕೊಂಡಿವೆ ಎಂಬುದನ್ನು ಇವರ ಹೋರಾಟದ ಪ್ರಜ್ಞೆಯಲ್ಲಿ ನಾವು ಗುರುತಿಸಬಹುದು. ಕರ್ನಾಟಕದ ಪೌರಕಾರ್ಮಿಕರ ರಾಜಕೀಯ ಇತಿಹಾಸವನ್ನು ಸೂಕ್ಷö್ಮವಾಗಿ ಓದಿಕೊಂಡಾಗ ಘನತೆಯ ಬದುಕಿಗಾಗಿ ಅವರು ನಡೆಸಿರುವ ಹೋರಾಟಕ್ಕೆ ಆಳವಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆ ಆಧಾರಸ್ತಂಭವಾಗಿದೆ ಎಂಬುದು ತಿಳಿಯುತ್ತದೆ. ಈ ಆಧಾರಸ್ತಂಭವೇ ಅವರ ಧೈರ್ಯ ಮತ್ತು ಕಲ್ಪನೆಯ ಪ್ರಜ್ಞೆಯನ್ನು ರೂಪಿಸಿದೆ. ಹಾಗಾಗಿ ಇವರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ನಾವು ಆದ್ಯತೆ ನೀಡಿದ್ದೇವೆ. ಸ್ವತಂತ್ರ ಭಾರತದ ಆಧುನಿಕ ಕರ್ನಾಟಕದಲ್ಲಿ ರಾಜಕೀಕರಣದತ್ತ ಗಮನಹರಿಸಿದಾಗ ಪೌರಕಾರ್ಮಿಕ ಚಳವಳಿಯ ರಾಜಕೀಯ ವ್ಯಾಕರಣದಲ್ಲಿ ಜಾತಿ ಹಿಂಸೆ ಮತ್ತು ಅವಮಾನವನ್ನು ಕ್ರಾಂತಿಕಾರಕವಾಗಿ ತೊಡೆದುಹಾಕುವ ಪ್ರಕ್ರಿಯೆಯನ್ನು ವಿಶಿಷ್ಟವೂ ಮತ್ತು ಮಾಮೂಲಿಯೂಆದ ಸ್ವರೂಪದಲ್ಲಿ ನಾವು ಕಾಣಬಹುದು. ಇನ್ನೂ ಹುಟ್ಟಲಿರುವ ರಾಜಕೀಯ ಪ್ರಜ್ಞೆಯ ಜಗತ್ತು ಮತ್ತು ಸುರಕ್ಷಿತ ಸವಲತ್ತಿನ ಮೂಲೆಗಳನ್ನೂ ಕೊಳೆಸುವ ಆಳವಾದ ಸಾಮಾಜಿಕ ಅಸ್ವಸ್ಥತೆಯನ್ನು ಬಡಿದು ಹುಟ್ಟುವ ಘನತೆ ಮತ್ತು ನ್ಯಾಯದ ಹೊಸ ಅಭಿವ್ಯಕ್ತಿಗಳನ್ನೂ ಸಹ ಗುರುತಿಸಬಹುದು. ನಿರಂತರ ಹೋರಾಟದ ಫಲವಾಗಿ ತಮ್ಮ ಕೆಲಸಕ್ಕೆ ಕಾನೂನುಬದ್ಧ ಹಕ್ಕುಗಳನ್ನು ಮತ್ತು ಜಾತಿ ತಾರತಮ್ಯದ ವಿರುದ್ಧ ಪ್ರಭುತ್ವದ ರಕ್ಷಣೆಗಳನ್ನು ಅವರು ಪಡೆದುಕೊಂಡಿದ್ದಾರೆ. ಆದರೆ ಕಾಗದದ ಮೇಲಿನ ಕಾನೂನುಗಳು ಅವರ ನಿತ್ಯ ಜೀವನದಲ್ಲಿ ಸಾಕಾರವಾಗಿ ಅವರ ಬದುಕಿನ ಸ್ಥಿತಿಯಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿಲ್ಲ ಎಂಬುದು ಕಟು ವಾಸ್ತವವಾಗಿದೆ. ಈ ಕಾರಣಕ್ಕಾಗಿಯೇ ಪೌರಕಾರ್ಮಿಕರು ತಮ್ಮ ಕಸುವನ್ನು ಬಳಸಿಕೊಂಡು ಸರ್ಕಾರಿ ಯಂತ್ರವನ್ನು ಕಾರ್ಯೋನ್ಮುಖವಾಗಿಸುವ ಮತ್ತು ನಾಗರಿಕ ಸಮಾಜವನ್ನು ಬದಲಾವಣೆಯ ದಿಕ್ಕಿನತ್ತ ದೂಡುವ ಕೆಲಸ ಮಾಡಿದ್ದಾರೆ. ಇದೊಂದು ತನ್ನದೇ ವಿಶಿಷ್ಟ ಪ್ರಜ್ಞೆಯನ್ನು ಹೊಂದಿರುವ ಸಾವಯವ ಮತ್ತು ಜನಪ್ರಿಯ ಚಳುವಳಿಯಾಗಿದೆ. ಪ್ರಭುತ್ವದ ಆಡಳಿತಶಾಹಿ ಯಂತ್ರದ ಗುರಿಗಳನ್ನು ಜಾತಿವ್ಯವಸ್ಥೆಯ ಸಮಾಜವು ಸದಾ ಹತ್ತಿಕ್ಕುತ್ತಲೇ ಇರುತ್ತದೆ. ಇಂತಹ ಆಡಳಿತಶಾಹಿಯಿಂದ ಈ ವಿಶಿಷ್ಟ ಪ್ರಜ್ಞೆಯು ಪ್ರತ್ಯೇಕವಾಗಿದ್ದರೂ ಅದರೊಂದಿಗೆ ಆಪ್ತ ಸಂವಾದವನ್ನು ಹೊಂದಿದೆ. ಕಾರ್ಮಿಕರ, ವಿದ್ಯಾರ್ಥಿಗಳ, ಬುದ್ಧಿಜೀವಿಗಳ, ಕಾನೂನು ಕಾರ್ಯಕರ್ತರ, ನಾಗರಿಕ ಹಕ್ಕುಗಳ ಗುಂಪುಗಳು ಮತ್ತು ತಳಮಟ್ಟದಲ್ಲಿ ಕೆಲಸ ಮಾಡುವ ಕಾರ್ಯಕರ್ತರನ್ನು ಒಳಗೊಂಡಿರುವ ವಿಸ್ತಾರವಾದ ಮತ್ತು ವೈವಿಧ್ಯಮಯವಾದ ಮೈತ್ರಿಕೂಟವಾಗಿ ರೂಪುಗೊಂಡಿದೆ. ಇವರೆಲ್ಲರೂ ದುಡಿಯುವ ಕಾರ್ಮಿಕರು ಎದುರಿಸುವ ಹಲವಾರು ರೀತಿಯ ಅನ್ಯಾಯಗಳ ವಿರುದ್ಧ ಹೋರಾಟವನ್ನು ರೂಪಿಸುವ ಮತ್ತು ದಾಖಲಿಸುವ ಗುಂಪುಗಳಾಗಿ ಕೆಲಸಮಾಡಿದ್ದಾರೆ.
ವಿಭಿನ್ನ ಆಚರಣೆಗಳು ಕಲೆಯುವಂತೆ ಮಾಡಿರುವ ಈ ಚಳುವಳಿಯು, ಸಮಕಾಲೀನ ಸಾಮಾಜಿಕ ಸಂರಚನೆಯಲ್ಲಿ ಜಾತಿ ಮತ್ತು ಲಿಂಗಾಧಾರಿತ ದಮನದ ಸ್ವರೂಪಗಳು ಮಾಮೂಲಿಯಾಗಿರುವುದನ್ನು ಪ್ರಶ್ನಿಸುತ್ತವೆ; ಜಾತಿ-ಅಧಿಕಾರಶಾಹಿ-ಗುತ್ತಿಗೆ ಪದ್ಧತಿಯ ಕಾನೂನುಬಾಹಿರ ಸಂಚುಕೂಟದ ಭ್ರÀಷ್ಟತೆಯನ್ನು ಬಹಿರಂಗಗೊಳಿಸುತ್ತವೆ; ಅಪಾಯಕಾರಿ ಮತ್ತು ಕಠಿಣ ಕೆಲಸದ ಪರಿಸ್ಥಿತಿಯನ್ನು ತೋರಿಸಿಕೊಟ್ಟಿವೆ; ಕೆಲಸದ ಸ್ಥಳದಲ್ಲಿ ಸಂಭವಿಸಿರುವ ಸಾವಿನ ಪ್ರಕರಣಗಳಿಗೆ ಸಂಬಂಧಪಟ್ಟವರನ್ನು ಜವಾಬ್ದಾರರನ್ನಾಗಿಸುವ ಮತ್ತು ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡಿವೆ. ವಿಸ್ತಾರವಾದ ಅಧ್ಯಯನ ನಡೆಸಿ ಎಚ್ಚರದಿಂದ ವರದಿಗಳನ್ನು ತಯಾರಿಸಿ ತಳಮಟ್ಟದ ಪರಿಣಿತಿಯನ್ನು ಬೆಳಸಲು ಸಹಾಯಮಾಡಿವೆ. ಮೌಖಿಕ ಇತಿಹಾಸಗಳನ್ನು ದಾಖಲಿಸಿವೆ. ಜೊತೆಗೆ ಶಾಲಾ ಶಿಕ್ಷಣ, ಉನ್ನತ ಶಿಕ್ಷಣ ಹಾಗೂ ಪರ್ಯಾಯ ಜೀವನಾಧಾರಗಳಂತಹ ಸಮುದಾಯದ ಆಂತರಿಕ ವಿಷಯಗಳನ್ನು ಸಹ ಕೈಗೆತ್ತಿಕೊಂಡಿವೆ. ಸಂಬಂಧಪಟ್ಟ ಸಂಸ್ಥೆಗಳು, ಇಲಾಖೆಗಳಿಗೆ ಅಸಂಖ್ಯ ಮನವಿಗಳನ್ನು ಸಮುದಾಯದ ಪರವಾಗಿ ಸಲ್ಲಿಸಿದ ಮೇಲೆ ಅಪಾಯಕಾರಿ ಕೆಲಸದಲ್ಲಿ ತೊಡಗಿರುವಾಗ ಮೃತಪಟ್ಟವರ ಕುಟುಂಬಗಳಿಗೆ ನ್ಯಾಯ ಮತ್ತು ಪರಿಹಾರ ಸ್ವಲ್ಪಮಟ್ಟಿಗೆ ದೊರೆತಿದೆ. ಕೊಂಚವೇ ಕೊಂಚಮಟ್ಟಿಗೆ ಕೆಲಸದ ಪರಿಸ್ಥಿತಿಯಲ್ಲಿ ಸುಧಾರಣೆಗಳು ಕಂಡಿವೆ. ಪ್ರಕಟಣೆಗೊಂಡ ಸತ್ಯಶೋಧನಾ ವರದಿಗಳು ನ್ಯಾಯಾಲಯಗಳಲ್ಲಿನ ಹೋರಾಟದಲ್ಲಿ ಪ್ರಮುಖ ಅಸ್ತ್ರಗಳಾಗಿ ಕೆಲಸ ಮಾಡಿವೆ. ಕಾರ್ಮಿಕರಲ್ಲಿ ಅವರ ನ್ಯಾಯಿಕ ಮತ್ತು ಆರ್ಥಿಕ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಪಠ್ಯಗಳಾಗಿಯೂ ಕೆಲಸ ಮಾಡಿವೆ. ಇಂತಹ ಕಾರ್ಯಗಳು ಸಾಧ್ಯವಾಗಿರುವುದು ದಶಕಗಳ ಕಾಲ ನಡೆಸಿದ ಕೆಲಸ ಮತ್ತು ತೀವ್ರವಾದ ಹೋರಾಟದಿಂದಾಗಿ.
ಶ್ರಮದ ಫಲವು ತ್ವರಿತವಾಗಿಯೂ ಸಿಕ್ಕಿದೆ, ತಡವಾಗಿಯೂ ಸಿಕ್ಕಿದೆ. ಈ ವಿಷಯವನ್ನು ಒಂದು ಸಣ್ಣ ಉದಾಹರಣೆಯಾಗಿ ನೋಡಬಹುದು. ಒಳಚರಂಡಿ ಕೆಲಸವು ಒಳಗೊಂಡಿರುವ ಜಾತಿ ದೌರ್ಜನ್ಯ ಕುರಿತಂತೆ ಸಾಟಿ ಇಲ್ಲದಂತಹ ನ್ಯಾಯಿಕ, ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಹೋರಾಟ ನಡೆಸಿದ್ದರೂ ಸಹ ಇಲ್ಲಿಯವರೆಗೂ ನಿಷೇಧಿತ ಮಲಬಾಚುವ ಕೆಲಸ ಮಾಡಿಸಿದ್ದವರ ವಿರುದ್ಧ ಒಂದೇ ಒಂದು ಪ್ರಕರಣವೂ ಮಲಬಾಚುವ ಪದ್ಧತಿ ನಿಷೇಧ ಕಾಯ್ದೆ ೨೦೧೩ರಡಿ ಅಪರಾಧವಾಗಿ ಇಡಿ ದೇಶದಲ್ಲೇ ದಾಖಲಾಗಿಲ್ಲ. ಪೌರಕಾರ್ಮಿಕರ ಚಳುವಳಿಗೆ ಸಾಮಾಜಿಕ ಪರಿವರ್ತನೆಯ ವೈರುಧ್ಯತೆಯ ಅರಿವಿದೆ. ವರ್ಗ ಮತ್ತು ಜಾತಿ ವೈರುಧö್ಯ ತೀವ್ರತೆಯು ಸಿಡಿಸಿದ ಕ್ರಾಂತಿಕಾರಿ ಬದಲಾವಣೆಯು ಸಾಧ್ಯವಾಗಿರುವುದು ನಿಧಾನವಾಗಿ ತೆರೆದುಕೊಂಡ ಹಕ್ಕುಗಳಿಂದಾಗಿ ಅಲ್ಲ. ಪೌರಕಾರ್ಮಿಕರಿಗೆ ತಮ್ಮ ಅಧಿಕಾರ ಕುರಿತ ಪ್ರಜ್ಞೆ ಮತ್ತು ಜಾತೀಯತೆಯ ಸಮಾಜಕ್ಕೆ ತನ್ನದೇ ಕೊಳೆತ ಅಡಿಪಾಯದ ಕುರಿತು ಇರುವ ಅಜ್ಞಾನದ ನಡುವೆ ಅಜಗಜಾಂತರ ಅಂತರವಿದೆ. ತುಂಬಿ ಚೆಲ್ಲಾಡುವ ಕಸದ ಗುಡ್ಡಗಳು ಮತ್ತು ಚರಂಡಿಗಳು ಈ ವೈರುಧö್ಯದ ಭೌತಿಕ ಸ್ವರೂಪದ ಅಭಿವ್ಯಕ್ತಿಗಳೇ ಆಗಿವೆ.
ಸಂಕ್ಷಿಪ್ತವಾಗಿ ಹೇಳುವುದಾದರೆ ನೈರ್ಮಲ್ಯ ಕೆಲಸಗಾರರ ಹೋರಾಟವು ಶತಮಾನದಷ್ಟು ಹಳೆಯದು. ಭಾರತದಲ್ಲಿ ನೈರ್ಮಲ್ಯ ಕಾರ್ಮಿಕರು ಸಂಘಟಿತರಾಗಿ ತಮ್ಮ ಕೆಲಸದ ಪರಿಸ್ಥಿತಿಯನ್ನು ಉತ್ತಮಪಡಿಸುವ ಬೇಡಿಕೆಯನ್ನು ೧೯೨೮ರಿಂದಲೇ ಮುಂದಿಡುತ್ತಾ ಬಂದಿದ್ದಾರೆ. ಕಲ್ಕತ್ತೆಯ ನೈರ್ಮಲ್ಯ ಕೆಲಸಗಾರರು ತಮ್ಮ ಕೆಲಸದ ಪರಿಸ್ಥಿತಿಯನ್ನು ಉತ್ತಮಪಡಿಸಲು ೧೯೨೮ರಲ್ಲಿ ಸಂಘಟಿತರಾಗಿ ಮುಷ್ಕರ ಹೂಡಿದ್ದರು. ದೆಹಲಿಯಲ್ಲಿ ವಸಾಹತುಶಾಹಿ ಕಾಲಘಟ್ಟದಿಂದಲೇ (ಸರ್ಕಾರ್, ೨೦೧೭) ನೈರ್ಮಲ್ಯ ಕೆಲಸಗಾರರು ಹೋರಾಟಮಾಡಿದ್ದರು. ಕರ್ನಾಟಕದಲ್ಲಿ ಹೋರಾಟಗಳನ್ನು ಸಂಘಟಿಸಿದ, ಸಂಘಟಿಸಲು ಸಹಕರಿಸಿದ ವ್ಯಕ್ತಿಗಳು ಮತ್ತು ಸಂಘಟನೆಗಳ ಕುರಿತು ಈ ಭಾಗದಲ್ಲಿ ಪರಿಚಯಿಸಲಾಗಿದೆ.

ಒಂದು ಅವಲೋಕನ

ಹಿಮಾಲಯ ಪರ್ವತ ಪ್ರದೇಶವು ಅತ್ಯಂತ ಸೂಕ್ಷö್ಮಭೂವಿಜ್ಞಾನ ಮತ್ತು ಪರಿಸರ ಪ್ರದೇಶವಾಗಿರುವ ಕಾರಣಕ್ಕಾಗಿಯೇ ಅದನ್ನು ಭೂಮಿಯ ನಾಭಿ ಎನ್ನುತ್ತಾರೆ. ಅಂತಹ ಪ್ರದೇಶದಲ್ಲಿ ಅಭಿವೃದ್ದಿ ಹೆಸರಿನಲ್ಲಿ ರಸ್ತೆ, ಅಣೆಕಟ್ಟು ನಿರ್ಮಾಣ ಮಾಡಲಾಗುತ್ತಿದೆ.
೨೦೨೨-೨೦೨೩ರಲ್ಲಿ ಜಗದ ದೊಡ್ಡಣ್ಣನೆನಿಸಿಕೊಂಡಿರುವ ಅಮೆರಿಕಾದ ಒಂದು ಭಾಗ ಕಾಳ್ಗಿಚ್ಚಿನಲ್ಲಿ ಬೆಂದರೆ, ಮತ್ತೊಂದು ಭಾಗ ಪ್ರವಾಹದಲ್ಲಿ ಮುಳುಗಿತು. ಇಂತಹ ಪ್ರಕೃತಿಯ ಪಾಠಗಳಿಂದ ನಾವು ಪಾಠ ಕಲಿಯದಿದ್ದರೆ ನಮ್ಮ ಮುಂದಿನ ಪೀಳಿಗೆಗಳುನೆಮ್ಮದಿಯಿಂದ ಬದುಕಲು ಸಾಧ್ಯವೇ? ನಾವು ಬದುಕಿರುವ ಭೂಮಿಯನ್ನೇ ನಾಶ ಮಾಡಹೊರಟಿರುವ ಜಗತ್ತಿನ ಹಿರಿಯ ಗಣ್ಯಾತಿಗಣ್ಯರಿಗೆ ಭೂಮಿಯ, ಪ್ರಕೃತಿಯ ನಾಡಿಮಿಡಿತ ಅರಿತಿರುವ ಎಳೆಯರು ತಿದ್ದಿ ಬುದ್ಧಿ ಹೇಳುವಗುರುಗಳಾಗಬೇಕೆ?
ಅಭಿವೃದ್ಧಿ ಎಂಬ ಹೆಸರಿನಲ್ಲಿ ಸರ್ವರನ್ನೂ ನಾಶಪಡಿಸಲು ಪರಿಸರವನ್ನು ಹಾಳುಗೆಡವುತ್ತಿರುವುದನ್ನು ಪಣತೊಟ್ಟಂತೆ ತಡೆಯದಿದ್ದರೆ ಇನ್ನು ೪೦-೫೦ವರ್ಷಗಳಲ್ಲಿ ನಾಶವಾಗುವುದು ಖಂಡಿತ. ನಾಶದ ಬಗ್ಗೆ ಪದೇ ಪದೇ ವಿಜ್ಞಾನಿಗಳು ಎಚ್ಚರಿಸುತ್ತಲೇ ಬಂದಿದ್ದಾರೆ. ತಡೆಯುವುದಾದರೂ ಹೇಗೆ? ಎಂಬ ದಾರಿಗಳನ್ನು ಹುಡುಕುವಾಗ ನಾವು ಕಟ್ಟಿಕೊಂಡ ಸಮಾಜ, ನಾವು ಬದುಕುವ ಶೈಲಿಯನ್ನು ಹಿಂತಿರುಗಿ ನೋಡಿಕೊಳ್ಳುವ ಅಗತ್ಯವಿದೆ. ಎಲ್ಲರೂ ಹೊಟ್ಟೆತುಂಬಾ ಉಂಡು, ಕಣ್ತುಂಬ ನಿದ್ದೆ ಮಾಡಿ ಕೈ ತುಂಬಾ ದುಡಿದು, ನೆಮ್ಮದಿಯ ಆಸರೆಗಳು ಕಂಡುಕೊಂಡಿರುವ ಸ್ಥಿತಿ ಇದೆಯಾ? ಖಂಡಿತವಾಗಿಯೂ ಇಲ್ಲ. ಹಲವರು ದುಡಿದು, ಕೆಲವರು ಶ್ರೀಮಂತವಾಗಿರುವ ಮಾರ್ಗಗಳನ್ನೇ ನಾವು ಎಷ್ಟೋ ಕಾಲದಿಂದ ಅನುಸರಿಸುತ್ತಿದ್ದೆವೆ. ಇಂಥ ಅಸಮಾನತೆಗೂ ಪರಿಸರ ನಾಶಕ್ಕೂ ಸಂಬಂಧವಿದೆಯೇ? ಖಂಡಿತವಾಗಿಯೂ ಇದೆ. ಅಭಿವೃದ್ಧಿ ಕನ್ನಡಕ ತೊಟ್ಟರೆ ಅದು ಕಾಣುವುದಿಲ್ಲ. ಕೂಡಿ ದುಡಿಯುವ, ಹಂಚಿ ಉಣ್ಣುವ ಸಹಬಾಳ್ವೆಯ ಒಳಗಣ್ಣಿಗೆ ಅದು ಕಾಣುತ್ತದೆ, ಕೇಳುತ್ತದೆ. ಹಾಗೆ ಬದುಕುತ್ತ್ತಿದ್ದ, ಈಗಲೂ ಬದುಕುತ್ತಿರುವ ಸಮುದಾಯಗಳು ಇವೆ. ಆದರೆ ಅಂತಹ ಸಮುದಾಯಗಳನ್ನು ಶುದ್ಧ ಅನಾಗರಿಕವೆಂದು ಅಂಚಿಗೆ ತಳ್ಳಿದ್ದೇವೆ, ಅಮಾನ್ಯ ಮಾಡಿದ್ದೇವೆ. ಅವು ತಮ್ಮ ಶ್ರಮಶಕ್ತಿಯಿಂದ ಮಣ್ಣಿಗೆ ಮತ್ತು ಪರಿಸರದೊಂದಿಗಿನ ನಿಕಟವಾದ ಒಡನಾಟದೊಂದಿಗೆ ಪಡೆದುಕೊಂಡ ಅರಿವು, ಲೋಕದೃಷ್ಟಿಗಳನ್ನು ಜ್ಞಾನಲೋಕದಿಂದ ಹೊರಗಟ್ಟಿದ್ದೇವೆ. ‘ಕೈ ಕೆಸರಾದರೆ ಬಾಯಿ ತುಂಬಾ ಮೊಸರು’ ಎಂಬ ದುಡಿಯುವುದರ ಪ್ರಯೋಜನ ಹೇಳುವ ಗಾದೆಮಾತು ಜನಪ್ರಿಯ. ಈ ಗಾದೆಯ ಅರ್ಥವೆಂದರೆ ದುಡಿದು ಸುಖಪಡು ಎಂದು. ಆದರೆ ಮಣ್ಣಿಗೆ ಕೈ ಇಡದೇ ಸುಖಪಡುವ ವಿಧಾನ ಕಂಡುಕೊಳ್ಳುವುದು ಈಗ ಜಾಣತನವಾಗಿದೆ. ಇಂತಹ ಜಾಣತನಗಳು ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸಿವೆ ಎಂಬುದನ್ನು ಜ್ಞಾನಿಗಳು ಹೇಳುತ್ತಲೇ ಇದ್ದಾರೆ. ವಿವೇಕವಂತರು ಪರಿಹಾರದ ಮಾರ್ಗಗಳ ಜಾಡು ಹಿಡಿಯುತ್ತಿದ್ದಾರೆ. ಪರಿಹಾರದ ಮಾರ್ಗವೆಂದರೆ ‘ಶುದ್ಧ’ವಾಗಿರುವ ಕೈಗಳನ್ನು ಮಣ್ಣು ಮಾಡಿಕೊಳ್ಳುವ ಮಾರ್ಗ, ಮಣ್ಣಿನೊಂದಿಗೆ ದುಡಿಯುತ್ತಿರುವವರ ಮಾರ್ಗ. ಕಸವನ್ನು ಗೊಬ್ಬರವಾಗಿಸಿ ಮಣ್ಣಿಗೆ ಸತ್ವ ನೀಡುವ ಸಫಾಯಿ ಕರ್ಮಚಾರಿಗಳ ಬದುಕು ಮತ್ತು ಅರಿವು ಸಹ ಪರಿಹಾರ ಮಾರ್ಗವಾಗಿದೆ. ಅಂತಹವರಿಂದ ದೂರ ಬಂದು ಹಾದಿ ತಪ್ಪಿರುವುದರಿಂದ ಜಾಡುಗಳನ್ನು ಕಂಡುಕೊಂಡು ಪಯಣಿಸಬೇಕಾಗಿದೆ. ಅಸಮಾನತೆ, ತಾರತಮ್ಯದ ಕಸವನ್ನು ಗೊಬ್ಬರವಾಗಿಸಿ ಸರ್ವರಿಗೂ ಸಮಬಾಳು, ಸಮಪಾಲಿನ ಬದುಕಿನ ಬೆಳೆ ಬೆಳೆಯುವ ಸಲುವಾಗಿ. ಅಂತಹ ಬೆಳೆಯಿಂದ ಸತ್ವ ಪಡೆದುಕೊಂಡು ಜಗತ್ತನ್ನು ವಿನಾಶದಿಂದ ಬಿಡುಗಡೆಗೊಳಿಸುವ ಸಲುವಾಗಿ.
ಕೃಪೆ:ದು.ಸರಸ್ವತಿಯವರ ಮಹಾಪ್ರಬಂಧ “ಕಮ್ಯುನಿಟಿ ಅಂಡರ್ ಸೀಜ್: ಸೋಷಿಯೋ ಕಲ್ಚರಲ್ ಸ್ಟಡಿ ಆಫ್ ಸಫಾಯಿ ಕರ್ಮಚಾರೀಸ್ ಇನ್ ಕರ್ನಾಟಕ ಫ್ರಂ ಫೆಮಿನಿಸ್ಟ್ ಪರಸ್ಪೆಕ್ಟಿವ್”.
ಡಾ. ಕೆ.ವಿ.ನೇತ್ರಾವತಿಯವರ “ಕೋಲಾರದ ಸಾಂಸ್ಕೃತಿಕ ಅಧ್ಯಯನ”ದ ಟಿಪ್ಪಣಿಗಳು.

ಸಾವು ಮತ್ತು ತಿಥಿಗೆ ಸಂಬಂಧಿಸಿದ ಆಚರಣೆಗಳು


ಮೃತರಾದವರಿಗೆ ಗೌರವಪೂರ್ವಕವಾಗಿ ವಿದಾಯ ಹೇಳುವುದರ ಜೊತೆಗೆ ಮರಣಾನಂತರವೂ ಅವರಿಗೆ ಒಳ್ಳೆಯದಾಗಲಿ ಎಂಬ ನಂಬಿಕೆಯಿಂದ ಹಲವಾರು ಆಚರಣೆಗಳನ್ನು ತೀರಿಕೊಂಡಾಗ ಮತ್ತು ತೀರಿಕೊಂಡ ನಂತರದ ದಿನಗಳಲ್ಲಿ ಆಚರಿಸಲಾಗುತ್ತದೆ. ಮಾದಿಗರಲ್ಲಿ ಹೆಣವನ್ನು ಸುಡುವುದಿಲ್ಲ; ಮಣ್ಣುಮಾಡುವ ಸಂಪ್ರದಾಯವಿದೆ. ಯಾರಾದರೂ ತೀರಿಕೊಂಡಾಗ ಗಳಿಗೆ ನೋಡುತ್ತಾರೆ. ಹೆಣದ ಹಿಂದೆ ಸೇರಿನ ಮೇಲೆ ದೀಪವಿಡುತ್ತಾರೆ. ಮನೆಯ ಮುಂದೆ ಸೌದೆಯ ಸಣ್ಣದ ಚೂರುಗಳನ್ನಿಟ್ಟು ಬೆಂಕಿ ಹಾಕುತ್ತಾರೆ. ಮನೆಯ ಮುಂದೆ ಹಾಕಿದ ಬೆಂಕಿಯಲ್ಲಿ ಹೊಸಮಡಕೆಯಲ್ಲಿ ನೀರು, ಅಕ್ಕಿ ಹಾಕಿ ಬೇಯಿಸುವುದನ್ನು ಕೂಳು ಎನ್ನುತ್ತಾರೆ.

ಮಣ್ಣು ಮಾಡಲು ಹೆಣವನ್ನು (ಪುರುಷನಾಗಿರಲಿ, ಸ್ತ್ರೀಯಾಗಿರಲಿ)ಒಯ್ಯುವ ಮೊದಲು ಚೆನ್ನಾಗಿ ಸ್ನಾನ ಮಾಡಿಸುತ್ತಾರೆ. ಹೊಸ ಬಟ್ಟೆ ಹಾಕಿ, ಅರಶಿಣ-ಕುಂಕುಮ, ವಿಭೂತಿ ಹಚ್ಚುತ್ತಾರೆ. ದೊಡ್ಡವರು ಸೇರಿ ಒಟ್ಟು ಹತ್ತು ಜನ ಹೋಗಿ ಚಟ್ಟಕ್ಕೆ ಬೇಕಾದ ಬೊಂಬು, ಹೊಸ ಬಟ್ಟೆ, ಎಲೆ ಅಡಿಕೆ, ಕಳ್ಳೆಪುರಿ, ಕೂಳು ಬೇಯಿಸುವ ಮಡಕೆ ಮತ್ತು ಅಕ್ಕಿಯನ್ನು ತರುತ್ತಾರೆ.ಬೊಂಬಿನಲ್ಲಿ ಬಹಳ ಸುಂದರವಾಗಿ ಚಟ್ಟಕಟ್ಟಿ ಹೂವಿನ ಅಲಂಕಾರ ಮಾಡುತ್ತಾರೆ.ಭತ್ತದ ಹುಲ್ಲು, ಬಿದಿರು ಬೊಂಬುಗಳನ್ನು ಚಟ್ಟ ಕಟ್ಟಲು ಬಳಸುತ್ತಾರೆ.
ಚಟ್ಟದಲ್ಲಿ ಸತ್ತ ವ್ಯಕ್ತಿಯನ್ನು ಮಲಗಿಸುತ್ತಾರೆ. ತೀರಿಹೋದ ವ್ಯಕ್ತಿಯ ಸಂಬಂಧಿಕರಲ್ಲೇ ನಾಲ್ವರು ಚಟ್ಟವನ್ನು ಹೊತ್ತುಕೊಂಡು ಸ್ಮಶಾನಕ್ಕೆ ಒಯ್ಯುತ್ತಾರೆ. ಸ್ಮಶಾನಕ್ಕೆ ಒಯ್ಯುವಾಗ ಹೆಣದ ಮುಂದೆ ಸತ್ತ ವ್ಯಕ್ತಿಯ ಹಿರಿಯ ಮಗನು ಕೂಳಿನ ಮಡಕೆಯನ್ನು ಹಿಡಿದುಕೊಂಡು ಹೋಗಬೇಕು.ಅರ್ಧದಾರಿಯಲ್ಲಿ ಹೆಣವನ್ನು ಇಳಿಸಿ, ಪೂಜೆ ಮಾಡಿ ಕೂಳಿನ ಮಡಕೆಯನ್ನು ಒಡೆದು ಹೆಣವನ್ನು ಸ್ಮಶಾನಕ್ಕೆ ಒಯ್ಯುತ್ತಾರೆ.

ಅಲ್ಲಿ ತೋಡಿದ ಗುಂಡಿಯೊಳಗೆ ಗಳಿಗೆ ನೋಡಿ ಮಣ್ಣುಮಾಡುತ್ತಾರೆ. ಮಣ್ಣು ತೋಡಿ ಗುಂಡಿ ಅಗೆಯುವ ಕೆಲಸವನ್ನು ಸತ್ತವರ ಮನೆಯವರಲ್ಲದೆ ಅವರದೇ ಜಾತಿಯ ಬೇರೆಯವರು ಮಾಡುತ್ತಾರೆ. ಗುಂಡಿ ತೊಡುವವರಿಗೆ ಹಣ ನೀಡಬೇಕು. ತೀರಿಹೋದ ವ್ಯಕ್ತಿ ಇಷ್ಟಪಡುತ್ತಿದ್ದರೆ ಎಲೆ-ಅಡಿಕೆ-ಸುಣ್ಣವನ್ನು ಕುಟ್ಟಿ ಹೆಣದ ಬಾಯಿಗೆ ಇಡುತ್ತಾರೆ. ಹೂತು ಬರುವಾಗ ಹಸು ಸಗಣಿ ತುಳಿದುಕೊಂಡು ಬಂದು ದೀಪ ನೋಡುತ್ತಾರೆ.
ಮಣ್ಣು ಮಾಡಿದ ಗುಂಡಿಯ ಹತ್ತಿರ ಮೂರನೇ ದಿವಸ ಹಾಲು-ತುಪ್ಪ ಹಾಕಿ ಎಡೆ ಇಟ್ಟು ಸ್ಮಶಾನದಲ್ಲಿ ಪೂಜೆ ಮಾಡುತ್ತಾರೆ. ತೀರಿಹೋದ ವ್ಯಕ್ತಿಯ ಹಿರಿಯ ಮಗನು ತಲೆ ಬೋಳಿಸಿಕೊಳ್ಳಬೇಕು. ಹದಿನಾರನೆಯ ದಿವಸ ಸುಣ್ಣಬಣ್ಣ ಮಾಡಿ, ಗಂಗೆಯನ್ನು ತಂದು ಪೂಜೆಮಾಡಿ, ದಾಸಯ್ಯನನ್ನು ಕರೆಸಿ ಸೂತಕ ತೆಗೆಸುತ್ತಾರೆ. ಮಾಂಸದ ಅಡುಗೆ ಮಾಡಿಸಿ ಊಟಹಾಕಿಸುತ್ತಾರೆ. ತಿಥಿಯನ್ನು ಗಂಡುಮಕ್ಕಳೇ ಮಾಡುತ್ತಾರೆ. ತಿಥಿಯಲ್ಲಿ ಸತ್ತ ವ್ಯಕ್ತಿಯು ಇಷ್ಟಪಡುತ್ತಿದ್ದ ತಿನಿಸುಗಳ ಜೊತೆಗೆ ಬೀಡಿ, ಬೆಂಕಿಪೊಟ್ಟಣ, ತಂಬಾಕು, ಹೆಂಡವನ್ನು ಎಡೆ ಇರಿಸುತ್ತಾರೆ. ಕೆಲವರು ಹನ್ನೊಂದನೆಯ ದಿನ ಸೂತಕ ತೆಗೆದು ತಿಥಿ ಮಾಡುತ್ತಾರೆ.

ತೀರಿಕೊಂಡ ವ್ಯಕ್ತಿ ಗಂಡಸಾಗಿದ್ದರೆ ಆತನ ಹೆಂಡತಿಗೆ ತವರು ಮನೆಯವರು ಬಳೆ, ಅರಶಿಣ-ಕುಂಕುಮ, ಹೂ ಮತ್ತು ಸೀರೆಯನ್ನು ತಂದುಕೊಡುತ್ತಾರೆ. ಹೊಸ ಸೀರೆ ಉಡಿಸಿ, ಕುಂಕುಮ-ಅರಿಶಣವಿಟ್ಟು, ಮಡಿಲಕ್ಕಿಕಟ್ಟಿ ಸ್ಮಶಾನಕ್ಕೆ ಕರೆದುಕೊಂಡು ಹೋಗುತ್ತಾರೆ. ಶವವನ್ನು ಗುಂಡಿಗೆ ಹಾಕಿದಮೇಲೆ ಹೆಂಡತಿಯ ಐದು ಬಳೆ ಮತ್ತು ಮಡಿಲಕ್ಕಿಯನ್ನು ಗುಂಡಿಗೆ ಹಾಕುತ್ತಾರೆ. ಹದಿನಾರನೆಯ ದಿನದವರೆಗೂ ಹೆಂಡತಿಯು ಬಳೆಯನ್ನು ತೊಡುತ್ತಾಳೆ. ಹದಿನಾರನೆಯ ದಿನ ಹೊಸ ಸೀರೆ ಉಡಿಸಿ, ಕೈಯಲ್ಲಿರುವ ಬಳೆಗಳನ್ನು ಗಂಗೆಗೆ (ನೀರಿಗೆ) ಹಾಕಿಸುತ್ತಾರೆ; ಒಡೆಸುವುದಿಲ್ಲ. ಮಾಂಗಲ್ಯ ಮತ್ತು ಕುಂಕುಮ ತೆಗೆಸುತ್ತಾರೆ. ವಿಧವೆಯರನ್ನು ಅಮಂಗಳವೆಂದು ಭಾವಿಸುವುದಿಲ್ಲ. ಮದುವೆಯ ಕೆಲವು ಆಚರಣೆಯನ್ನು ಆಕೆಯ ಕೈಲೇ ಮಾಡಿಸುತ್ತಾರೆ.

ಕ್ರೆöÊಸ್ತ ಧರ್ಮಕ್ಕೆ ಮತಾಂತರವಾಗಿರುವವರು ಸಹ ಸತ್ತ ಮೂರನೇ ದಿನ ಹಾಲು-ತುಪ್ಪ ಮಾಡಿದರೆ, ಹನ್ನೊಂದನೆಯ ದಿನ ಪಾದ್ರಿಯನ್ನು ಮನೆಗೆ ಕರೆಸಿ ಪ್ರಾರ್ಥನೆ ಮಾಡಿ ಮಣ್ಣು ಮಾಡುತ್ತಾರೆ. ಗಂಡ ತೀರಿಕೊಂಡರೆ ಹೆಂಡತಿಯ ತೌರು ಮನೆಯವರು ಬಳೆ, ಅರಿಶಿಣ-ಕುಂಕುಮ, ಹೂ ತರುವ ಆಚರಣೆಯನ್ನೂ ಮಾಡುತ್ತಾರೆ. ಹೆಣಕ್ಕೆ ಸ್ನಾನ ಮಾಡಿಸಿದ ಮೇಲೆ ಆತ ಎಲೆ-ಅಡಿಕೆ ತಿನ್ನುತ್ತಿದ್ದರೆ, ಎಲೆ-ಅಡಿಕೆಯನ್ನು ಕುಟ್ಟಿ ಅವರ ಬಾಯಿಗೆ ಇರಿಸುತ್ತಾರೆ. ಬಿಳಿಯ ಬಟ್ಟೆಯನ್ನು ಬಾಕ್ಸ್ನ ಸುತ್ತ ಇರಿಸುತ್ತಾರೆ. ಹೆಣವನ್ನು ಬಾಕ್ಸಿನಲ್ಲಿಟ್ಟು ಬಾಕ್ಸಿನ ಸಮೇತ ಗುಂಡಿಯಲ್ಲಿಟ್ಟು ಮುಚ್ಚುತ್ತಾರೆ. ನಲವತ್ತೆರಡನೇ ದಿನ ತೀರಿಕೊಂಡ ವ್ಯಕ್ತಿಯ ಪೋಟೋ ಇಟ್ಟು ಪಾದ್ರಿಯನ್ನು ಕರೆಯಿಸಿ ಪ್ರೇಯರ್ ಮಾಡಿಸಿ, ಬಂದ ನೆಂಟರಿಗೆಲ್ಲಾ ಸಿಹಿ ಮತ್ತು ಖಾರದ ಊಟ ಹಾಕಿಸುತ್ತಾರೆ.
ಬಳ್ಳಾರಿಯಲ್ಲಿ ನಾಮಧಾರಿ ಸಮುದಾಯದಲ್ಲಿ ಸಾವಾಗಿರುವ ಮನೆಯಲ್ಲಿ ಅಡುಗೆ ಮಾಡಿ, ಸತ್ತ ವ್ಯಕ್ತಿಯ ಕೈಯನ್ನು ಮುಟ್ಟಿಸಿ, ಉಂಡ ಮೇಲೆ ಹೆಣವನ್ನು ಮಣ್ಣು ಮಾಡಲು ತೆಗೆದುಕೊಂಡು ಹೋಗುತ್ತಾರೆ. ಸಾವಾದ ಐದನೆಯ ದಿನದಲ್ಲಿ ಕುರಿ ಕಡಿದು ಮಾಂಸದ ಅಡುಗೆ ಮಾಡಿ ರಕ್ತ ಸಂಬಂಧಿಗಳನ್ನು ಮಾತ್ರ ಕರೆದು ಊಟಹಾಕಿಸುತ್ತಾರೆ. ಹನ್ನೊಂದನೇ ದಿನದಲ್ಲಿ ಸತ್ತುಹೋದ ವ್ಯಕ್ತಿಗೆ ಇಷ್ಟವಾದ ಅಡುಗೆಯನ್ನು ಮಾಡಿ, ಕುರಿ ಕಡಿದು, ಮಾಂಸದ ಅಡುಗೆ ಮಾಡಿ ಎಡೆ ಹಾಕಿ ಪೂಜೆ ಮಾಡುತ್ತಾರೆ. ಆ ದಿವಸ ಸ್ಮಶಾನದಲ್ಲಿ ರಕ್ತಸಂಬಂಧಿಕರೆಲ್ಲಾ ಸೇರಿ ಅಯ್ನೋರು ಗುಡ್ಡೆ ಮಾಡಿ ಅದಕ್ಕೆ ಪೂಜೆ ಮಾಡಿ ಅದರ ಮೇಲೆ ಕೂತು ಊಟಮಾಡುತ್ತಾರೆ.ಈ ಆಚರಣೆಯನ್ನು ಕಡ್ಡಾಯವಾಗಿ ರಕ್ತ ಸಂಬಂಧಿಗಳು ಮಾತ್ರ ಮಾಡುತ್ತಾರೆ.
ಕೆಲವು ಕಡೆ ತಿಥಿಯ ದಿನ ಮೇಕೆ ಕಡಿಯುತ್ತಾರೆ. ಕಡಿದಾಗ ಹೊರಬಂದು ಹೆಪ್ಪುಗಟ್ಟುವ ರಕ್ತವನ್ನು ಹುರಿದು ಮನೆಯವರೆಲ್ಲಾ ತಿನ್ನುತ್ತಾರೆ. ನೆಂಟರಿಗೆಲ್ಲಾ ಮೊದಲನೆ ದಿನ ಸಿಹಿ ಊಟವನ್ನು ಎರಡನೇ ದಿನ ಖಾರದ ಊಟ ಹಾಕಿಸುತ್ತಾರೆ. ಸಾವಾಗಿ ಒಂದು ತಿಂಗಳವರೆಗೂ ಯಾವ ದೇವರಿಗೂ ಪೂಜೆ ಮಾಡುವುದಿಲ್ಲ.
ಗುಲ್ಬರ್ಗದಲ್ಲಿ ಮಾದಿಗ ಜಾತಿಯವರು ಸಾವಾದ ಐದನೇ ದಿನ ‘ದಿನ’ ಮಾಡಿ ಸತ್ತವರ ವಯಸ್ಸಿನಷ್ಟೇ ಇರುವವರನ್ನು ಕರೆದು ಅವರಿಗೆ ಊಟ ಹಾಕಿಸುತ್ತಾರೆ.
ಸಾವಿನ ಆಚರಣೆಯು ವ್ಯಕ್ತಿಯನ್ನು ಘನತೆಯಿಂದ ಬೀಳ್ಕೊಡುವುದಾಗಿದೆ. ಹೆಣಕ್ಕೆ ಅಚ್ಚುಕಟ್ಟಾಗಿ ಸ್ನಾನಮಾಡಿಸುತ್ತಾರೆ. ಬಿದಿರು ಬೊಂಬುಗಳಿಂದ ಚಟ್ಟವನ್ನು ಕಟ್ಟಿ ಹೂಗಳಿಂದ ಸುಂದರವಾಗಿ ಅಲಂಕರಿಸುತ್ತಾರೆ. ಸಾವಿನ ಸಂದರ್ಭವನ್ನು ಸೂತಕವಾಗಿ ಪರಿಗಣಿಸುತ್ತಾರಾದರೂ ಸ್ಪರ್ಶವನ್ನು ಮೈಲಿಗೆ ಎಂದು ಪರಿಗಣಿಸುವುದಿಲ್ಲ. ವೈದಿಕರಂತೆ ತಿಥಿಯ ಆಚರಣೆಗೆಂದೇ ನಿರ್ದಿಷ್ಟವಾದ ಅಡುಗೆಗಳನ್ನು ಮಾಡದೆ ತೀರಿಹೋದ ವ್ಯಕ್ತಿಯು ಇಷ್ಟಪಡುವ ಅಡುಗೆಗಳನ್ನು ಇಷ್ಟಪಡುತ್ತಿದ್ದ ವಸ್ತುಗಳನ್ನು(ಹೆಂಡ, ಬೀಡಿಯೂ ಸೇರಿ) ಎಡೆಗೆ ಇಡುತ್ತಾರೆ. ವೈದಿಕರಲ್ಲಿ ಹೆಣ್ಣುಮಕ್ಕಳು ಸ್ಮಶಾನಕ್ಕೆ ಹೋಗುವುದು ನಿಷಿದ್ಧ. ಮಾದಿಗ ಜಾತಿಯವರೂ ಸೇರಿದಂತೆ ಅನೇಕ ಅವೈದಿಕ ಜಾತಿಗಳಲ್ಲಿ ಹೆಣ್ಣುಮಕ್ಕಳು ಸ್ಮಶಾನಕ್ಕೆ ಹೋಗುತ್ತಾರೆ; ಹೆಣವನ್ನು ಮಣ್ಣುಮಾಡುವ ಎಲ್ಲ ಕ್ರಿಯೆಗಳಲ್ಲೂ ಪಾಲ್ಗೊಳ್ಳುತ್ತಾರೆ. ಆದರೆ ತಿಥಿಯನ್ನು ಗಂಡುಮಕ್ಕಳೇ ಮಾಡುತ್ತಾರೆ.

ಹಬ್ಬಗಳು – ಜಾತ್ರೆಗಳು

ಆಚರಿಸುವ ಹಬ್ಬಗಳು
ಸಂಕ್ರಾಂತಿ, ದಸರಾ, ಅಮವಾಸ್ಯೆ, ಶಿವರಾತ್ರಿ, ಯುಗಾದಿ, ದೀಪಾವಳಿ,ನಾಗರಪಂಚಮಿ, ಎಳ್ಳಮವಾಸ್ಯೆ, ಕಾರಹುಣ್ಣಿಮೆ, ಮಣ್ಣೆತ್ತಿನ ಅಮವಾಸ್ಯೆ, ಗುಡ್ ಫ್ರೆöÊಡೆ, ಕ್ರಿಸ್ಮಸ್, ಹೊಸವರ್ಷವನ್ನು, ಮುಸ್ಲಿಮರ ಪರ‍್ಲ ಹಬ್ಬ ಮತ್ತು ಮೊಹರಂ ಹಬ್ಬ ಆಚರಿಸುತ್ತಾರೆ. ಮೊಹರಂನಂದು ಗೂಗುಡುಗೆ ಹೋಗಿ ಅಲ್ಲಿನ ದೇವರು ಕುಳ್ಳಾಯಿಸ್ವಾಮಿಯನ್ನು ಹೊತ್ತುಕೊಂಡು ಬೆಂಕಿ ತುಳಿಯುತ್ತಾರೆ.
ತೀರಿಹೋಗಿರುವ ಹಿರಿಯರಿಗೆ ಮತ್ತು ಪೂರ್ವಿಕರಿಗೆ ಇಷ್ಟವಾದ ಅಡುಗೆ ಮಾಡಿ ಎಡೆ ಹಾಕಿ ಪೂಜಿಸುವುದನ್ನು ಹಿರಿಯರ ಹಬ್ಬ ಅಥವಾ ಪಿತೃಪಕ್ಷ ಎಂದು ಆಚರಿಸುತ್ತಾರೆ. ಇಟ್ಟ ಎಡೆಯನ್ನು ಬಂದು ಮುಟ್ಟಿವ ಕಾಗೆಗಳನ್ನು ಸತ್ತ ಹಿರಿಯರು ಎಂದು ನಂಬುತ್ತಾರೆ. ಕೆಲವೆಡೆ ದಸರಾದಲ್ಲಿ ಮಾಡುವ ಆಯುಧ ಪೂಜೆಯಲ್ಲಿ ಹಿರೀಕರಿಗೆ ಉಡುದಾರ, ಪುಟುಗೂಸಿ, ಬೀಡಿ, ಸಿಗರೇಟು, ಸಾರಾಯಿ, ಕಾಫಿ, ಬನ್ನು, ಮಾಂಸದ ಅಡುಗೆ ಮಾಡಿ ಎಡೆ ಹಾಕಿ ಪೂಜೆ ಮಾಡುತ್ತಾರೆ. ಕೆಲವರು ಮಹಾಲಯ ಅಮಾವಾಸ್ಯೆಯಂದು ತೀರಿಕೊಂಡವರಿಗೆ ಎಡೆ ಇಟ್ಟು ಪೂಜಿಸಿದರೆ, ಕೆಲವರು ಸಂಕಾಂ್ರತಿ ಹಬ್ಬದಲ್ಲಿ ತೀರಿಹೋದವರಿಗೆ ಎಡೆ ಇಡುತ್ತಾರೆ.
ಕೆಲವರ ಮನೆಯಲ್ಲಿ ಯುಗಾದಿ ಹಬ್ಬವನ್ನು ಆಚರಿಸುವುದಿಲ್ಲ. ಹಬ್ಬ ಮಾಡಲು ಬೇವು ತರಲು ಹೋದವರು ಬರಲಿಲ್ಲ ಎಂಬ ಕಾರಣಕ್ಕೆ ಇವತ್ತಿಗೂ ಹಬ್ಬಮಾಡುವುದಿಲ್ಲ.
ಗುಲ್ಬರ್ಗದಲ್ಲಿ ಮಾದಿಗರು ಸಂಕ್ರಾಂತಿ, ದೀಪಾವಳಿ, ದಸರಾ ಜೊತೆಗೆ ಹುಣ್ಣಿಮೆ, ಅಮಾವಾಸ್ಯೆ, ನಾಗ ಪಂಚಮಿ, ಯುಗಾದಿ, ಎಳ್ಳಮಾವಾಸ್ಯೆ, ಕಾರಹುಣ್ಣಿಮೆ, ಮಣ್ಣೆತ್ತಿನ ಅಮಾವಾಸ್ಯೆಗಳನ್ನು ಆಚರಿಸುತ್ತಾರೆ. ಅಲ್ಲದೆ ದಲಿತ ಚಳುವಳಿಯ ಪ್ರಭಾವದಿಂದಾಗಿ ಅಂಬೇಡ್ಕರ್ ದಿನಾಚರಣೆಯನ್ನು ವಿಜೃಂಭಣೆಯಿಂದ ಜಾತ್ರೆ/ಪರಿಷೆಯಷ್ಟೇ ಸಂಭ್ರಮದಿಂದ ಮನೆಯಲ್ಲಿ ಮತ್ತು ಸಾರ್ವಜನಿಕವಾಗಿ ಆಚರಿಸುತ್ತಾರೆ. ಹೊಸಬಟ್ಟೆ ತೊಟ್ಟು, ಸಿಹಿ ಅಡುಗೆ ಮಾಡಿ ಉಣ್ಣುತ್ತಾರೆ. ಮತ್ತು ಸಾರ್ವಜನಿಕವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮೈಸೂರಿನಲ್ಲಿ ಮಾಮೂಲಿ ದೊಡ್ಡ ಹಬ್ಬಗಳಲ್ಲದೆ ಸಂಕಷ್ಟಿ, ರಾಮನವಮಿ, ಕಾಮನ ಹಬ್ಬಗಳನ್ನು ಆಚರಿಸುತ್ತಾರೆ. ಚಿತ್ರದುರ್ಗದಲ್ಲಿ ಕಾರ್ತೀಕದಲ್ಲಿ ನೆಂಟರನ್ನು ಕರೆದು ಸಂಭ್ರಮದಿಂದ ಆಚರಿಸಲಾಗುತ್ತದೆ. ಮತ್ತು ಬಸವ ಜಯಂತಿ ಹಬ್ಬಗಳನ್ನು ವಿಶೇಷವಾಗಿ ಆಚರಿಸುತ್ತಾರೆ. ದಸರಾ ಹಬ್ಬದಲ್ಲಿ ಬನ್ನಿಪೂಜೆ ಮಾಡುತ್ತಾರೆ. ಹೋಳಿಗೆಮ್ಮನ ಹಬ್ಬ (ಅಜ್ಜಿ ಹಬ್ಬ) ಇಲ್ಲಿನ ವಿಶೇಷವಾಗಿದೆ. ಅಜ್ಜಿಹಬ್ಬವೆಂದೂ ಕರೆಯುವ ಹೋಳಿಗೆಮ್ಮನ ಹಬ್ಬವನ್ನು ಮಾಡಿದರೆ ಮಳೆ ಬರುತ್ತೆ ಎಂಬ ನಂಬಿಕೆಯಿದೆ. ಈ ದೇವತೆಯು ಒಂದು ರೀತಿ ಮಾರಮ್ಮನ ಥÀರವೆಂದು ಹೇಳಿದರು. ಎಲ್ಲರ ಮನೆಯಲ್ಲಿ ಹೋಳಿಗೆ ಮಾಡಿ, ಎಲ್ಲರ ಮನೆಯಿಂದ ಎಡೆತೆಗೆದುಕೊಂಡು ಊರಾಚೆಯ ಮರದ ಬಳಿಗೆ ಹೋಗಿ ಇಟ್ಟುಬರುತ್ತಾರೆ.
ಮೈಲಾರಲಿಂಗನ ಜಾತ್ರೆಗೆ ಹೋಳಿಗೆ, ಕಡುಬು, ಅನ್ನ ಸಾರು, ಪಲ್ಯೆ, ಕೋಸಂಬರಿ, ವಡೆ, ಹಪ್ಪಳಮಾಡಿ ದೇವರಿಗೆ ಎಡೆ ಹಾಕುತ್ತಾರೆ.ಇನ್ನೊಂದು ಕಂಚಿನ ದೋಣಿಲಿ ಬಾಳೆಹಣ್ಣು, ಸಕ್ಕರೆ, ತುಪ್ಪ, ಹಾಲು, ಮೊಸರು, ಇಟ್ಟು ಪೂಜೆ ಮಾಡುತ್ತಾರೆ. ಮುದ್ರೆ ಮಾಡಿಸಿಕೊಂಡ ಗ್ವಾರಪ್ಪಗಳು ತ್ರಿಶೂಲ ತೆಗೆದುಕೊಂಡು ಮೂಸಿ ಮುಕ್ಕಾಗಿದೆಯೇ(ಎಂಜಲು)ಅಂತ ನೋಡಿ, ಊಟ ಮಾಡುತ್ತಾರೆ. ಅವರು ಹೋದ ನಂತರ ಮನೆಯವರು ಊಟ ಮಾಡುತ್ತಾರೆ.
ಹೊಸ ವರ್ಷವಾಗಿ ಆಚರಿಸುವ ಯುಗಾದಿ ಹಬ್ಬ ಎಲ್ಲೆಡೆ ಆಚರಿಸುವ ದೊಡ್ಡ ಹಬ್ಬವಾಗಿದೆ. ಅರಳೆಣ್ಣೆ ಹಚ್ಚಿಕೊಂಡು ಸ್ನಾನ ಮಾಡಿ ಪೂಜೆ ಮಾಡಿದ ಮೇಲೆ ಬೇವು ಬೆಲ್ಲವನ್ನು ಒಟ್ಟಿಗೆ ಸೇವಿಸುತ್ತಾರೆ. ನಿಸರ್ಗದಂತೆ ನಮ್ಮ ಬದುಕುಗಳು ಕೂಡ ಹಳೆಯದನ್ನೆಲ್ಲ ಕಳೆದು ಹೊಸವರ್ಷಕ್ಕೆಸಿಹಿ-ಕಹಿಗಳನ್ನು ಸಮವಾಗಿ ಸ್ವೀಕರಿಸಿಕಾಲಿಡುವುದಾಗಿದೆ. ಹೊಸವರ್ಷ ಆರಂಭವಾದ ಮರುದಿನ ಮುಂದೆ ಯಾವ ತೊಡಕು ಬಾರದಂತೆ ಮಾಡುವ ಆಚರಣೆಯೇ ಹೊಸ ತಡುಕು. ಆ ದಿನ ಮಾಂಸದಡುಗೆ ಮಾಡಿ ನೆಂಟರನ್ನು ಕರೆದು ಉಣಬಡಿಸುತ್ತಾರೆ.
ಸಫಾಯಿ ಕರ್ಮಚಾರಿಗಳ ಸಂಸ್ಕöÈತಿಯಲ್ಲಿ ಅನ್ಯಧರ್ಮದ ದೇವರು, ಸಂತರುಗಳಿಗೆ ಶ್ರದ್ಧೆಯಿಂದ ನಡೆದುಕೊಳ್ಳುವುದು ಒಳಗೊಳ್ಳುವ ಪರಂಪರೆಯ ಮತ್ತು ಬಹುತ್ವದ ಸಂಕೇತವೇ ಆಗಿದೆಯಲ್ಲದೇ ಭಾರತದ ಸಂವಿಧಾನದ ಧರ್ಮ ಸಹಿಷ್ಣುತೆಯೇ ಆಗಿದೆ.
ಹಲವೆಡೆ ಸಫಾಯಿ ಕರ್ಮಚಾರಿಗಳು ಮೊಹರಂನಂತಹ ಮುಸ್ಲಿಂ ಹಬ್ಬಗಳನ್ನು ಆಚರಿಸುತ್ತಾರಲ್ಲದೆ ಮುಸ್ಲಿಂ ಸಂತರುಗಳಿಗೆ ನಡೆದುಕೊಳ್ಳುವುದು ವಿಶೇಷವಾದುದು. ಬಕ್ರಿದ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಮರು ಮಾಂಸ ದಾನ ಮಾಡುವುದರಲ್ಲಿ ಅಡುಗೆ ಮಾಡಿ ಉಣ್ಣುತ್ತಾರೆ. ಅದು ಯಮನೂರಿನ ಮುಸ್ಲಿಂ ಸಂತನೊಬ್ಬನ ಹೆಸರು. ವಿಜಯಪುರದ ತೊರವಿಯಲ್ಲಿ ಲಾಲ್ ಸಾಬ್ ಎಂಬ ಮುಸ್ಲಿಂ ಸಂತನೊಬ್ಬನ ಜಾತ್ರೆಯನ್ನು ನಡೆಸುವವರು ಅಲ್ಲಿನ ಪರಿಶಿಷ್ಟ ಜಾತಿಯವರಾದ ಮಾದಿಗರು.
ಬಳ್ಳಾರಿಯಲ್ಲಿ ಮಾದಿಗರ ಹಲವಾರು ಮನೆಗಳಲ್ಲಿ, ಮನೆಯ ಆವರಣದಲ್ಲಿ ಮುಸ್ಲಿಂ ದೇವರಾದ ಪೀರ್ಲ ದೇವರನ್ನು ಪೂಜಿಸುತ್ತಾರೆ. ಅವರ ದೇವರುಗಳು ವಾಸ್ತವ ಲೋಕದಲ್ಲಿ ಅವರ ಕಷ್ಟ ಸುಖ ಕೇಳಿಸಿಕೊಳ್ಳುವಷ್ಟು ಹತ್ತಿರದವರಾಗಿದ್ದಾರೆ.
ಒಟ್ಟೊಟ್ಟಿಗೆ ಕ್ರಿಸ್ತನಿಗೂ, ಮೇರಿಯಮ್ಮನಿಗೂ, ಪೀರ್ಲನಿಗೂ, ಗಂಗಮ್ಮನಿಗೂ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ.ಗಂಗಾವತಿ, ಬಳ್ಳಾರಿ ಇನ್ನೂ ಹಲವೆಡೆ ಇರುವ ಸಫಾಯಿ ಕರ್ಮಚಾರಿಗಳು ಇಟ್ಟುಕೊಳ್ಳುವ ಹೆಸರುಗಳು ಧಾರ್ಮಿಕ ಭಾವೈಕ್ಯತೆಯೇ ಆಗಿದೆ.ಪೀರ್ಲಪ್ಪ-ಪೀರ್ಲಮ್ಮ, ಹುಸೇನಪ್ಪ-ಹುಸೇನಮ್ಮ, ಸಾಬಪ್ಪ-ಸಾಬಮ್ಮ,ಸಾರಮ್ಮ- ಸಾರಪ್ಪ, ಮೇರಿಯಮ್ಮ-ಮೇರಿಯಪ್ಪ, ಹುಚ್ಚಮ್ಮ-ಹುಚ್ಚಪ್ಪ, ಸಂಕ್ಲಮ್ಮ-ಸಂಕ್ಲಪ್ಪ, ಯಮನೂರಪ್ಪ-ಯಮನೂರಮ್ಮ (ಯಮನೂರಿನಲ್ಲೆ ನೆಲೆಸಿದ್ದ ಮುಸ್ಲಿಂ ಸಂತ) ಹುಸೇನ್ ಬಸವ, ಅಲೈಕ್ಯ, ಮೆರೂನಾ ಹೀಗೆ…
ಕಾಯಿಲೆ ಬಂದಾಗ ಕಣಿಕೇಳಿ ಮುನೇಶ್ವರನಿಗೆ ಪಚ್ಚೆ ಇಡುವಷ್ಟೇ ಶಿಸ್ತಿನಿಂದ, ದರ್ಗಾಗೂ ಹೋಗಿ ಸಕ್ಕರೆ ಮಂತ್ರಿಸಿಕೊಂಡು ಬಂದು ತಿನ್ನುತ್ತಾರೆ. ದರ್ಗಾದ ಸಾಬರಿಂದ ತಾಯತವನ್ನು ಕಟ್ಟಿಸಿಕೊಳ್ಳುತ್ತಾರೆ.
ಹಬ್ಬಗಳು ಭಕ್ತಿ, ಶ್ರದ್ಧೆಗೆ ಕಾರಣವಾಗಿರುವಂತೆಯೇ ನಿತ್ಯದ ಜಂಜಾಟವನ್ನು ಮೀರಿಕೊಂಡು ಸಂಭ್ರಮಿಸುವುದಕ್ಕೂ ಕಾರಣವಾಗಿವೆ. ಕೆಲವರು ನೆಂಟರಿಷ್ಟರನ್ನು ಕರೆಸಿ ವಿಶೇಷ ಅಡುಗೆಗಳನ್ನು ಮಾಡಿ ಉಂಡು ಹೊಸ ಬಟ್ಟೆಗಳನ್ನು ತೊಟ್ಟು ಸಂಭ್ರಮಿಸಿದರೆ, ಇನ್ನು ಕೆಲವರ ಮನೆಯಲ್ಲಿ ದೇವರಿಗೊಂದು ಕಡ್ಡಿ ಹಚ್ಚಿ ಇರುವುದನ್ನೇ ಮಾಡಿ ಉಣ್ಣುವುದರೊಂದಿಗೆ ಸಂಭ್ರಮ ಮುಗಿಯುತ್ತದೆ. ಬಡತನವು ಹಬ್ಬವೆಂಬ ಸಂಭ್ರಮಕ್ಕೆ ಧಕ್ಕೆ ತರದು ಎಂಬುದಕ್ಕೆ ಈ ಪ್ರತೀತಿ ಸಾಕ್ಷಿಯಾಗಿದೆ.
ಒಮ್ಮೆ ಬಡವರಾದ ಗಂಗೆ-ಗೌರಿಯರು ದೀವಳಿಗೆ (ಶಿಷ್ಟ ಭಾಷೆಯಲ್ಲಿ ದೀಪಾವಳಿ) ಮಾಡಲು ಸಾಧ್ಯವಾಗದೇ ಇದ್ದುದರಿಂದ ತಿಪ್ಪೆ ಮೇಲಿನ ಬೆರಣಿಯನ್ನು ತಂದು ಅದನ್ನೇ ಕಜ್ಜಾಯದಂತೆ (ಕಜ್ಜಾಯ ದೀಪಾವಳಿಗೆ ಮಾಡುವ ವಿಶೇಷ ತಿನಿಸು)ಇಟ್ಟು, ಆಲದ ಮರದ ಎಲೆಯನ್ನು ವೀಳ್ಯವಾಗಿ, ಆಲದ ಮರದ ಕಾಯಿಯನ್ನು ತೆಂಗಿನಕಾಯಿಯಾಗಿ, ರಾಗಿತೆನೆಯನ್ನು ಊದುಬತ್ತಿಯಾಗಿ, ಅಲದ ಮರದ ತೊಗಟೆಯನ್ನು ನೋಮುದಾರವಾಗಿ (ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಟ್ಟಿಕೊಳ್ಳುವ ಅರಿಶಿನ ಹಚ್ಚಿದ ದಾರ) ಇರಿಸಿ ದೀವಳಿಗೆ ಮಾಡಿದರು ಎಂಬುದು ಕಾಲದಿಂದಲೂ ಬಂದಿರುವ ಕತೆ. ಈ ಕತೆ ಅವರ ಕಡುಬಡತನದ ವಾಸ್ತವವನ್ನು ಮನಗಾಣಿಸುವುದರ ಜೊತೆಯಲ್ಲೇ ಕಷ್ಟದ ಪರಿಸ್ಥಿತಿಯನ್ನು ಮೀರಿಕೊಳ್ಳಲು ದೇವಿಯರಿಗೇ ಬಡತನ ತಪ್ಪಿದ್ದಲ್ಲವೆಂದು ಭಾವಿಸಿಕೊಂಡು ಕಷ್ಟವನ್ನು ಸವಾಲಿನಂತೆ ಸ್ವೀಕರಿಸುವ ಸಂಭ್ರಮಿಸುವ ಚೈತನ್ಯವನ್ನೂ ಮನಗಾಣಿಸುತ್ತದೆ.


ಜಾತ್ರೆಗಳು


ಜಾತ್ರೆಗಳನ್ನು ಊರಬ್ಬಗಳಂತೆ ಆಚರಿಸಲಾಗುತ್ತದೆ. ಊರಿನ ಸಕಲ ಜಾತಿಗಳೂ ಪಾಲ್ಗೊಳ್ಳುವ ಜಾತ್ರೆಯಲ್ಲಿ ಎಲ್ಲ ಜಾತಿಯವರಿಗೂ ಒಂದಲ್ಲ ಒಂದು ಪಾತ್ರವಿರುತ್ತದೆ. ಕೆಲವೆಡೆ ಜಾತ್ರೆಯಲ್ಲಿ ನಡೆಯುವ ದೇವರ ಉತ್ಸವ/ಮೆರವಣಿಗೆಯಲ್ಲಿ ಪರಿಶಿಷ್ಟ ಜಾತಿಯವರು ದೇವರ ಮುಂದೆ ಗರುಡುಗಂಭ ಹಿಡಿದು ನಿಲ್ಲುವುದು, ಶಹನಾಯಿ ಊದುವ ಪರಿಪಾಠವಿದೆ. ಅನಂತಪುರದ ಒಂದು ದೇವರಿಗೆ ಇಲ್ಲಿನ ಪರಿಶಿಷ್ಟ ಜನರು ಬಹಳ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ. ಆ ಊರಿನಲ್ಲಿ ನಡೆಯುವ ಜಾತ್ರೆಯಂದು ಅಲ್ಲಿನ ಮಾದಿಗ ಜಾತಿಗೆ ಸೇರಿದ ವ್ಯಕ್ತಿಯೊಬ್ಬ ಕೈಲಿ ದೀಪ ಹಿಡಿದು ದೇವರ ಮುಂದೆ ಸಾಗುತ್ತಾನೆ. ಆತ ಸಾಗುವ ದಾರಿಯಲ್ಲಿ ನಡೆಮುಡಿ ಹಾಸಿ ಕರೆದುಕೊಳ್ಳುವುದಲ್ಲದೆ, ಕೈಮುಗಿದು ವಂದಿಸುತ್ತಾರೆ. ಆ ದೀಪವನ್ನು ಮೆರವಣಿಗೆಯ ನಂತರ ದೇವಸ್ಥಾನದ ಮುಂದೆ ಇರುವ ಕಂಭದ ಮೇಲೆ ಇರಿಸಲಾಗುತ್ತದೆ.
ಬೆಂಗಳೂರಿನ ಅಣ್ಣಮ್ಮ ಜಾತ್ರೆ, ಬಳ್ಳಾರಿ ದುರ್ಗಮ್ಮನ ಜಾತ್ರೆ, ಕೋಟೆ ಮಲ್ಲೇಶ್ವರ ಜಾತ್ರೆ, ಸಿಡಿಬಂಡೆ ಜಾತ್ರೆ, ಪೆನ್ನೋಬಳೇಶಸ್ವಾಮಿ ಜಾತ್ರೆ, ವರಬಸಪ್ಪ ಜಾತ್ರೆ, ಗೂಗುಡು ಕುಳ್ಳಾಯಿಸ್ವಾಮಿ ಜಾತ್ರೆ, ಹುಲಿಗೆಮ್ಮ ಜಾತ್ರೆ, ಆಂಧ್ರದ ನರಸಿಂಹಸ್ವಾಮಿ ಜಾತ್ರೆ, ಮುತ್ಯಾಲಮ್ಮನ ಜಾತ್ರೆ, ಹಿಂದೂಪುರ ಚೌಡಮ್ಮನ ಪರಿಷೆ, ಸಿಕೆಪಲ್ಲಿಯಲ್ಲಿಯ ಓಬಳೇಶಸ್ವಾಮಿ ಜಾತ್ರೆ, ಬೆಳಗೊಂಬದ ಮಾರಮ್ಮ, ಪಡಲಮ್ಮ, ನರಸಿಂಹಸ್ವಾಮಿ ಪರಿಷೆ, ನಲ್ಲಮ್ಮ, ವೆಂಕಟರಮಣಸ್ವಾಮಿ ಪರಿಷೆ, ಅನಂತಪುರದ ಚಿತ್ತಲಪಲ್ಲಿಯಲ್ಲಿ ನಡೆಯುವ ಪೆದ್ದಮ್ಮ ಪರಿಷೆ, ದಾದಲೂರು ವಾರದಯ್ಯ ಜಾತ್ರೆ, ಕುಳ್ಳಾಯಿ ಮುತ್ಯಾಲಮ್ಮ ಜಾತ್ರೆ, ಬಂಡ್ಲಪಲ್ಲಿ ದೀಪಾವಳಿ ನಿಡಮಾಡಮ್ಮ, ಆಡುಗೋಡಿ ಜಾತ್ರೆ, ಅನಂತಪುರದ ದಾದಲೂರು ಪೋಪಲಪ್ಪಸ್ವಾಮಿ ಜಾತ್ರೆ, ನಾಗಸಮುದ್ರದ ನಲ್ಲಮ್ಮ, ನರಸಿಂಹಸ್ವಾಮಿ, ರುದ್ದಮಂಡಲ ಗಂಗಮ್ಮ, ಅರೆನ್ ಸೆರುವಿನ ಓಬಳೇಶಸ್ವಾಮಿ ಜಾತ್ರೆ, ಕದ್ರಿ ಜಾತ್ರೆ, ಪೆನುಗೊಂಡದ ಆಂಜನೇಯಸ್ವಾಮಿ ಜಾತ್ರೆ, ಘಾಟಿ ಸುಬ್ಬರಾಯನ ಪರಿಷೆ, ಯುಗಾದಿ ಮುಗಿದು ಒಂಬತ್ತು ದಿನಕ್ಕೆ ನಡೆಯುವ ಸೋಲೂರು ಬಳಿಯ ತಟ್ಟೆಕೆರೆ ಹತ್ತಿರದ ಮಾರಮ್ಮಜಾತ್ರೆ, ಪಾವಗಡದ ಸುಬ್ರಾಯ ಷಷ್ಠಿ, ಪಾವಗಡ ಮದಗಲಮ್ಮ, ಮಾರಮ್ಮನ ಜಾತ್ರೆ, ಹೂಡಿಗಡರೆ ನರಸಿಂಹಸ್ವಾಮಿ, ಕಗ್ಗೆರೆ ಸಿದ್ದಲಿಂಗೇಶ್ವರ, ಮೈಲಾರಲಿಂಗ ಜಾತ್ರೆ, ಬೆಂಗಳೂರು ಕರಗ, ಅಣ್ಣಮ್ಮದೇವಿ, ದೊಡ್ಡಮ್ಮದೇವಿ, ದಾದಲೂರು ಪೋತ್ಲಮ್ಮ, ಹಳವೂರಮ್ಮ ಜಾತ್ರೆ, ದೇವರಸನಹಳ್ಳಿಯ ವೀರಭಧ್ರೇಶ್ವರ, ವನ್ನಾರನಹಳ್ಳಿಯ ಹೊಳೆಚೌಡೇಶ್ವರಿ ಜಾತ್ರೆ, ಕಲಬುರ್ಗಿಯ ಶರಣ ಬಸವ ಜಾತ್ರೆ(ಅಪ್ಪನ ಜಾತ್ರೆ), ಖಾಜಾ ಬಂದೇ ನವಾಜ ದರ್ಗಾ ಜಾತ್ರೆ, ಕೌಟಗಿ ಮರಗಮ್ಮ, ತುಳಜಾಪುರ ಅಂಭಾಭವಾನಿ, ಕಾಳಗಿ ಎಲ್ಲಮ್ಮ ಜಾತ್ರೆ, ಕೋಲಾರದ ವಾನರಾಸಿ ಗಂಗಮ್ಮನಿಗೆ ಮಾಡುವ ದೀಪಗಳ ಜಾತ್ರೆ, ಆವನಿ ಸೀತಮ್ಮ ಜಾತ್ರೆ, ಅಣ್ಣಮ್ಮ ಜಾತ್ರೆ, ಹೊಸಕೋಟೆ ದೀಪೋತ್ಸವ, ಚಿತ್ತೂರಿನ ಗಣೇಶ ಜಾತ್ರೆ, ಮುತ್ಯಾಲಮ್ಮ ಜಾತ್ರೆ, ವೆಂಕಟೇಶ್ವರಲು ಜಾತ್ರೆ, ತಮಿಳುನಾಡಿನ ಸತ್ಯಮಂಗಲದ ಬನ್ನೇರಮ್ಮನ ಜಾತ್ರೆ, ಚಾಮುಂಡಿ ಅಮ್ಮ, ಮಾದೇಶ್ವರ ಜಾತ್ರೆ, ನಂಜನಗೂಡಿನ ಜಾತ್ರೆ, ದೊಡ್ಡಮ್ಮತಾಯಿ ಜಾತ್ರೆ, ಆಂಧÀ್ರದ ನಲ್ಲೂರಿನ ಪೆಂಚಲತಿರುನಾಳ ಜಾತ್ರೆ, ಪಾಂಡುಪುರದ ದೊಡ್ಡಮ್ಮ ಜಾತ್ರೆ. ಚಿತ್ರದುರ್ಗದ ನಾಯಕನಹಟ್ಟಿ ತಿಪ್ಪೆಸ್ವಾಮಿ ಜಾತ್ರೆ, ಗೌರಸಮುದ್ರ/ಗೌಡಸಂದ್ರ ಮಾರಮ್ಮನ ಜಾತ್ರೆ, ದಾವಣಗೆರೆ ದುರ್ಗಮ್ಮದೇವಿ ಜಾತ್ರೆ, ಗಂಗಮ್ಮ ದೇವರ ಜಾತ್ರೆ, ಗಾನಗಟ್ಟೆ ಮಾಯಮ್ಮ, ಏಕನಾಥೇಶ್ವರಿ, ಸಿಡಿ ಜಾತ್ರೆ, ಕಣಿವೆ ಮಾರಮ್ಮನ ಜಾತ್ರೆ, ಮೈಲಾರ ಲಿಂಗೇಶ್ವರ ಜಾತ್ರೆ/ಹಡಗಲಿ,ರಾಣೆಬೆನ್ನೂರು, ಹರ‍್ಕೆ ರಂಗಪ್ಪನ ಜಾತ್ರ/ನಂದನ ಹೊಸೂರು, ಹೊಳಲ್ಕೆರೆ, ಗೋಚಂದ್ರ ಮಾರಮ್ಮನ ಜಾತ್ರೆ/ಚಳ್ಳಕೆರೆ, ಗುಡ್ಡದ ಹುಚ್ಛೆಂಗಮ್ಮನ ಜಾತ್ರೆ, ಬಸವಪಟ್ಣ ದುರುಗಮ್ಮ, ಕುಕ್ಕಡದಮ್ಮನ ಜಾತ್ರೆ, ಪರ‍್ಲಬ್ಬ, ಮಾರಮ್ಮನ ಜಾತ್ರೆ, ದೋನೋರು ತಿಪ್ಪೆಸ್ವಾಮಿ ಜಾತ್ರೆ, ಏಕನಾಥೇಶ್ವರ ಜಾತ್ರೆ, ಸಿಡಿ ಜಾತ್ರೆಗಳಲ್ಲಿ ಸಫಾಯಿಕರ್ಮಚಾರಿಗಳು ಶ್ರದ್ಧೆಯಿಂದ ಪಾಲ್ಗೊಳ್ಳುತ್ತಾರೆ.
ಸಫಾಯಿಕರ್ಮಚಾರಿಗಳ ಜೀವನಕ್ರಮವು ಲೋಕದೃಷ್ಟಿ ಸಮಷ್ಟಿಪ್ರಜ್ಞೆಯ ನೆಲೆಯಿಂದ ಕೂಡಿದೆ. ಯಾವುದೇ ತಾರತಮ್ಯವಿಲ್ಲದೆ ಎಲ್ಲವನ್ನೂ ಇವರು ಒಳಗೊಳ್ಳುತ್ತಾರೆ. ಯಾವುದನ್ನೂ ಬಿಡಿ ಬಿಡಿಯಾಗಿ ನೋಡುವ ಕ್ರಮ ಇವರಲ್ಲಿ ಇಲ್ಲ.
ಸರ್ವರ ಹಿತ ಕಾಪಾಡುವ, ಕಾಯಿಲೆ, ಕಷ್ಟಗಳಿಂದ ಪಾರುಮಾಡುವ, ಊರು ಕಾಯುವ,ಕೆಟ್ಟ ಶಕ್ತಿಗಳಿಂದ ಕಾಪಾಡುವ, ಮಕ್ಕಳು, ರಾಸುಗಳನ್ನು ರಕ್ಷಿಸುವ, ಮಳೆ ಬೆಳೆ ನೀಡುವ ಶಕ್ತಿ ದೇವತೆಯರಾದÀ ಎಲ್ಲಮ್ಮ, ಹುಲಿಗೆಮ್ಮ, ಸಂಕ್ಲಮ್ಮ, ಗಾಳೆಮ್ಮ, ಮುತ್ಯಾಲಮ್ಮರನ್ನು, ಪಡಸಲಮ್ಮ, ದೊಡ್ಡಮ್ಮ, ಅಣ್ಣಮ್ಮನನ್ನು ಇತ್ಯಾದಿ ದೇವತೆಗಳು ಇವರು ಪೂಜಿಸುವ ಅಮ್ಮಂದಿರು.ಈ ದೇವರುಗಳು ಒಂದು ಸ್ಪಷ್ಟ ರೂಪವಿಲ್ಲದ ಒಂದು ರೀತಿಯಲ್ಲಿ ಲಿಂಗಾತೀತರೇ ಆಗಿದ್ದಾರೆ. ಅವರು ನಡೆದುಕೊಳ್ಳುವ ಸಾಂಸ್ಕöÈತಿಕ ನಾಯಕ ನಾಯಕಿಯರು ಲೌಕಿಕದಲ್ಲಿಜನಪರ ಕೆಲಸವನ್ನು ತಮ್ಮ ಬದುಕಿನ ಭಾಗವಾಗಿಸಿಕೊಂಡಂತಹವರು.
ಒಟ್ಟಾರೆಯಾಗಿ ನೋಡುವಾಗ ಯಾವ ಜನಸಮುದಾಯವೇ ಆಗಲಿ ಹೊಂದಿರುವಂತಹ ಜ್ಞಾನ ಪರಂಪರೆಯನ್ನು ಮತ್ತು ಸಾಂಸ್ಕೃತಿಕ ಆಚರಣೆಗಳು ಮತ್ತು ನಂಬಿಕೆಗಳನ್ನು ಸಫಾಯಿ ಕರ್ಮಚಾರಿಗಳು ಕಾಲದಿಂದಲೂ ಹೊಂದಿದ್ದಾರೆ. ಅಲ್ಲದೆ ಅವು ಶ್ರಮ ಮತ್ತು ಪ್ರಕೃತಿಯೊಂದಿಗಿನ ನಿಕಟ ಒಡನಾಟದಿಂದ ಪಡೆದುಕೊಂಡ ಪರಿಸರ ಪ್ರಜ್ಞೆ, ಸಮಷ್ಟಿ ಪ್ರಜ್ಞೆ, ಜೀವಪರ ಪ್ರಜ್ಞೆಯ ಸಂಕೇತಗಳಾಗಿವೆ ಎಂಬುದು ಅರಿವಾಗುತ್ತದೆ.

ಮಡಿಲು ತುಂಬುವ ಶಾಸ್ತ್ರ:


ಗರ್ಭಿಣಿ ಹೆಣ್ಣುಮಗಳಿಗೆ ಐದನೇ ತಿಂಗಳಿನಲ್ಲಿಮಾಡುವ ಆಚರಣೆಯನ್ನು ‘ಮಡಿಲು ತುಂಬುವ ಶಾಸ್ತ್ರ’ ಅಥವಾ ‘ಕುಬಸ’ ಎಂದು ಕರೆಯುತ್ತಾರೆ.ಇದು ಫಲವತ್ತತೆಯನ್ನು ಪೂಜಿಸುವ ಸಂಕೇತವಾಗಿದೆ. ಹೆಣ್ಣುಮಗಳು ಐದು ತಿಂಗಳ ಗರ್ಭಿಣಿಯಿರುವಾಗ ತಾಯಿಯ ಮನೆಯವರು ಮಗಳ ಮನೆಗೆ ಬಂದು ಬಸುರಿಗೆ ಅರಿಶಿಣ ಹಚ್ಚಿ ಸ್ನಾನ ಮಾಡಿಸುತ್ತಾರೆ. ಒಸಗೆ ಹಾಕಿ ಬಸುರಿಯನ್ನು ಕೂಡಿಸಿ ಹಸಿರುಬಳೆ ತೊಡಿಸಿ, ಬೆಲ್ಲ, ಬಾಳೆಹಣ್ಣು, ಎಲೆ ಅಡಿಕೆಯ ಮಡಿಲಕ್ಕಿ ನೀಡಿ ಐದು, ಒಂಬತ್ತು ಅಥವಾ ಹನ್ನೊಂದು ತಟ್ಟೆಗಳಲ್ಲಿ ಎಲ್ಲಾ ಥÀರದ ಹಣ್ಣುಗಳು, ಎಲೆ ಅಡಿಕೆ, ವಿವಿಧ ರೀತಿಯ ಉಂಡೆ/ತಿಂಡಿಗಳು, ಹೊಸ ಸೀರೆ, ಜಾಕೀಟು ಇಟ್ಟು ಆರತಿ ಬೆಳಗುತ್ತಾರೆ. ಈ ಆಚರಣೆಯನ್ನು ಕುಬಸ ಎಂದೂ ಕರೆಯುತ್ತಾರೆ. ಗರ್ಭಿಣಿಗೆ ಇಷ್ಟವಾದ ಅಡುಗೆಗಳನ್ನು ಮಾಡಿ ಬಡಿಸುತ್ತಾರೆ. ಒಂಬತ್ತು ರೀತಿಯ ಅಡುಗೆ ಮಾಡಿ, ಒಂಬತ್ತು ರೀತಿಯ ಹಣ್ಣು ತಂದು ಆರತಿ ಮಾಡುವ ಆಚರಣೆ ಇದೆ. ನೆಂಟರಿಷ್ಟರನ್ನು ಕರೆಸಿ ಸಿಹಿ ಊಟವನ್ನು ಹಾಕಿಸುತ್ತಾರೆ. ಸೀಮಂತದಲ್ಲಿ ಮುತ್ತೆöÊದೆಯರಿಗೆ ಊಟ ಹಾಕಿಸುವ ಆಚರಣೆಯೂ ಜಾರಿಯಲ್ಲಿದೆ. ಒಂಬತ್ತನೆ ತಿಂಗಳಲ್ಲಿ ಅತ್ತೆಯ ಮನೆಯವರು ಸೀಮಂತ ಮಾಡಿ ಮಡಿಲು ತುಂಬುತ್ತಾರೆ. ಕ್ರೆöÊಸ್ತ ಧರ್ಮಕ್ಕೆ ಮತಾಂತರವಾದವರು ಗರ್ಭಿಣಿಗೆ ಒಂಬತ್ತು ತಿಂಗಳು ಇದ್ದಾಗ ಪಾದ್ರಿಯವರನ್ನು ಕರೆಸಿ ಪ್ರೇಯರ್ ಮಾಡಿಸುತ್ತಾರೆ. ಒಸಗೆ ಹಾಕಿ ಮುತ್ತೆöÊದೆಯರು ಮಡಿಲು ತುಂಬುತ್ತಾರೆ. ಬಂದವರಿಗೆ ಸಿಹಿ ಊಟ ಮಾಡಿ ಬಡಿಸುತ್ತಾರೆ.
ಗರ್ಭಿಣಿ ಹೆಣ್ಣು ಮಗಳಿಂದ ಗುಬ್ಬಿ-ಕಾಗೆಗಳಿಗೆ ಅನ್ನ, ಕಾಳುಗಳನ್ನು ಹಾಗೂ ಇರುವೆ ಗೂಡಿಗೆ ಸಕ್ಕರೆ ಹಾಕಿಸುವ ಪದ್ಧತಿ ಜಾರಿಯಲ್ಲಿದೆ.